Home
ಸುದ್ದಿಜಾಲ

WaterProof smartphones: ಈ ಸ್ಮಾರ್ಟ್‌ಫೋನ್‌ಗಳು ನೀರಿಗೆ ಬಿದ್ರೂ ಏನೂ ಆಗೋಲ್ಲ! 15 ಸಾವಿರದೊಳಗೆ ಲಭ್ಯ

ಸ್ಮಾರ್ಟ್‌ಫೋನ್‌ (smartphones) ಖರೀದಿ ಮಾಡುವಾಗ ವಿವಿಧ ಮಾನದಂಡಗಳನ್ನು ನೋಡುವುದುಂಟು. ಅದರಲ್ಲಿ ಬ್ಯಾಟರಿ, ಪ್ರೊಸೆಸರ್, ಕ್ಯಾಮೆರಾ ಹಾಗೂ ಇನ್ನಿತರೆ ಫೀಚರ್ಸ್‌ ಅನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಆದರೂ ಇತ್ತೀಚಿನ ದಿನಗಳಲ್ಲಿ ವಾಟರ್‌ ಪ್ರೂಫ್‌ ಫೋನ್‌ಗಳು (Waterproof smartphones) ಸಹ ಬಹಳ ಸದ್ದು ಮಾಡುತ್ತಿವೆ.

ಹೌದು, ಸ್ಮಾರ್ಟ್‌ಫೋನ್‌ಗಳ ವಿಭಾಗದಲ್ಲಿ ವಾಟರ್‌ ಪ್ರೂಫ್ ಫೋನ್‌ಗಳಿಗೆ ದೊಡ್ಡ ಬೇಡಿಕೆ ಇದೆ. ಸಾಮಾನ್ಯವಾಗಿ ಈ ಫೀಚರ್ಸ್‌ ಇರುವ ಸ್ಮಾರ್ಟ್‌ಫೋನ್‌ಗಳು ಸೀಮಿತ ಸಂಖ್ಯೆಯಲ್ಲಿ ಮಾತ್ರ ಲಭ್ಯ ಇದ್ದು, ಈ ಫೋನ್‌ಗಳು ನೀರಿನಲ್ಲಿ ಮುಳುಗಿದ್ರು ಸಹ ಯಾವುದೇ ಸಮಸ್ಯೆ ಆಗುವುದಿಲ್ಲ. ಈ ಸೌಲಭ್ಯ ಸಾಮಾನ್ಯವಾಗಿ ಟಾಪ್‌ಎಂಡ್ ಫೋನ್‌ಗಳಲ್ಲಿ ಲಭ್ಯ ಇರುತ್ತದೆ. ಆದರೆ ನಾವಿಲ್ಲಿ ತಿಳಿಸಿಕೊಡುತ್ತಿರುವ ಫೋನ್‌ಗಳು 15 ಸಾವಿರದ ಒಳಗೆ ಲಭ್ಯ ಇವೆ. ಹಾಗಿದ್ರೆ, ಬನ್ನಿ ಯಾವೆಲ್ಲಾ ಫೋನ್‌ಗಳು ಈ ಸೌಲಭ್ಯ ಪಡೆದಿವೆ ನೋಡೋಣ.

ಈ ಸ್ಮಾರ್ಟ್‌ಫೋನ್‌ಗಳು ನೀರಿಗೆ ಬಿದ್ರೂ ಏನೂ ಆಗೋಲ್ಲ! 15 ಸಾವಿರದೊಳಗೆ ಲಭ್ಯ

ಮೊಟೊರೊಲಾ ಮೊಟೊ E13: ಈ ಸ್ಮಾರ್ಟ್‌ಫೋನ್ (Motorola Moto E13) ಅನ್ನು ನೀವು ಕೇವಲ 7,499ರೂ.ಗಳ ಬೆಲೆ ಹೊಂದಿದೆ. ಈ ಸ್ಮಾರ್ಟ್‌ಫೋನ್ 6.5 ಇಂಚಿನ ಡಿಸ್‌ಪ್ಲೇ ಹೊಂದಿದ್ದು, 720 x 1600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯ ಪಡೆದಿದ್ದು, ಟೈಗರ್ T606 ಪ್ರೊಸೆಸರ್‌ ಬಲ ಪಡೆದುಕೊಂಡಿದೆ. ಹಾಗೆಯೇ 8 GB RAM, 128 GB ಇಂಟರ್‌ ಸ್ಟೋರೇಜ್‌ ಆಯ್ಕೆ ಪಡೆದಿದೆ. ಇದರೊಂದಿಗೆ 13 MP ರಿಯರ್‌ ಮತ್ತು 5 MP ಸೆಲ್ಫಿ ಕ್ಯಾಮರಾ ಆಯ್ಕೆ ಪಡೆದಿದೆ. ಜೊತೆಗೆ 5000 mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿದೆ.

ಮೊಟೊರೊಲಾ ಮೊಟೊ G14: ಈ ಫೋನ್‌ (Motorola Moto G14) ಅನ್ನು ನೀವು 8,499ರೂ.ಗಳಲ್ಲಿ ಖರೀದಿ ಮಾಡಬಹುದಾಗಿದೆ. ಇದು 6.5 ಇಂಚಿನ ಪಂಚ್ ಹೋಲ್ ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, ಟೈಗರ್ T616 ಪ್ರೊಸೆಸರ್‌ ಬಲ ಪಡೆದುಕೊಂಡಿದೆ. ಹಾಗೆಯೇ 4 GB RAM, 128 GB ಇಂಟರ್‌ ಸ್ಟೋರೇಜ್‌ ಆಯ್ಕೆ ಪಡೆದಿದೆ. ಇದರೊಂದಿಗೆ 50 MP + 2 MP ಡ್ಯುಯಲ್ ರಿಯರ್ ಕ್ಯಾಮೆರಾ ಹಾಗೂ 8 MP ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದಿದೆ. ಇದರೊಂದಿಗೆ 5000 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಹೊಂದಿದೆ.

ಈ ಸ್ಮಾರ್ಟ್‌ಫೋನ್‌ಗಳು ನೀರಿಗೆ ಬಿದ್ರೂ ಏನೂ ಆಗೋಲ್ಲ! 15 ಸಾವಿರದೊಳಗೆ ಲಭ್ಯ

ಶಿಯೋಮಿ ರೆಡ್ಮಿ ನೋಟ್ 11SE: ಈ ಸ್ಮಾರ್ಟ್‌ಫೋನ್‌ (Xiaomi Redmi Note 11SE) 13,470 ರೂ.ಗಳ ಆಫರ್ ಬೆಲೆ ಹೊಂದಿದ್ದು. 6.43 ಇಂಚಿನ 1080 x 2400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯ ಪಡೆದುಕೊಂಡಿದ್ದು, ಹಿಲಿಯೊ G95 ಪ್ರೊಸೆಸರ್‌ನೊಂದಿಗೆ ಕಾರ್ಯನಿರ್ವಹಿಸಲಿದೆ. ಈ ಫೋನ್‌ 6 GB RAM, 64 GB ಇಂಟರ್‌ ಸ್ಟೋರೇಜ್‌ ಆಯ್ಕೆ ಪಡೆದಿದೆ. ಹಾಗೆಯೇ 64 MP ಮುಖ್ಯ ಕ್ಯಾಮೆರಾದೊಂದಿಗೆ ಕ್ವಾಡ್ ರಿಯರ್ ಹಾಗೂ 13 MP ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದಿದೆ. ಉಳಿದಂತೆ 5000 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದೆ.

ಒಪ್ಪೋ A77: ಈ ಸ್ಮಾರ್ಟ್‌ಫೋನ್ (OPPO A77) ಅನ್ನು 12,331 ರೂ.ಗಳ ಆಫರ್ ಬೆಲೆ ಹೊಂದಿದ್ದು, 6.56 ಇಂಚಿನ 720 x 1600 px ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯ ಹಾಗೂ ಹಿಲಿಯೊ G35 ಪ್ರೊಸೆಸರ್‌ ಬಲ ಪಡೆದಿದೆ. ಇದರೊಂದಿಗೆ 4 GB RAM, 64 GB ಇಂಟರ್‌ ಸ್ಟೋರೇಜ್‌ ಆಯ್ಕೆ ಪಡೆದಿದೆ. ಹಾಗೆಯೇ 50 MP ಡ್ಯುಯಲ್ ರಿಯರ್ ಕ್ಯಾಮೆರಾ ಹಾಗೂ 8 MP ಸೆಲ್ಫಿ ಕ್ಯಾಮೆರಾ ಹೊಂದಿದೆ. ಜೊತೆಗೆ 5000 mAh ಸಾಮರ್ಥ್ಯದ ಬ್ಯಾಟರಿಯನ್ನು ಪಡೆದಿದೆ.

ಮೊಟೊರೊಲಾ ಮೊಟೊ G32: ಈ ಸ್ಮಾರ್ಟ್‌ಫೋನ್ (Motorola Moto G32) 11,790 ರೂ.ಗಳ ಬೆಲೆಯಲ್ಲಿ ಲಭ್ಯ ಇದೆ. ಇದು 6.55 ಇಂಚಿನ 1080 x 2400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯ ಹಾಗೂ 90 Hz ರಿಫ್ರೆಶ್‌ ರೇಟ್‌ ಆಯ್ಕೆ ಪಡೆದಿದೆ. ಇದರೊಂದಿಗೆ ಸ್ನಾಪ್‌ಡ್ರಾಗನ್ 680 ಪ್ರೊಸೆಸರ್‌ ಬಲ ಪಡೆದುಕೊಂಡಿದ್ದು, 4 GB RAM, 64 GB ಇಂಟರ್‌ ಸ್ಟೋರೇಜ್‌ ಆಯ್ಕೆ ಹೊಂದಿದೆ. ಇದರೊಂದಿಗೆ 50 MP + 8 MP + 2 MP ಟ್ರಿಪಲ್ ರಿಯರ್ ಕ್ಯಾಮೆರಾ ಹಾಗೂ 16 MP ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದಿದೆ.

ಈ ಸ್ಮಾರ್ಟ್‌ಫೋನ್‌ಗಳು ನೀರಿಗೆ ಬಿದ್ರೂ ಏನೂ ಆಗೋಲ್ಲ! 15 ಸಾವಿರದೊಳಗೆ ಲಭ್ಯ

ಮೊಟೊರೊಲಾ ಮೊಟೊ G54 5G: ಈ ಸ್ಮಾರ್ಟ್‌ಫೋನ್‌ (Motorola Moto G54 5G) ಅನ್ನು ನೀವು ಆನ್‌ಲೈನ್‌ ಮೂಲಕ 14,999ರೂ.ಗಳ ಆಫರ್ ಬೆಲೆಗೆ ಖರೀದಿ ಮಾಡಬಹುದು. ಇದು 6.5 ಇಂಚಿನ 1080 x 2400 ಪಿಕ್ಸೆಲ್‌ ಸ್ಕ್ರೀನ್ ರೆಸಲ್ಯೂಶನ್‌ ಸಾಮರ್ಥ್ಯದೊಂದಿಗೆ ಡೈಮೆನ್ಸಿಟಿ 7020 ಪ್ರೊಸೆಸರ್‌ ಮೂಲಕ ಕಾರ್ಯನಿರ್ವಹಿಸಲಿದೆ. ಹಾಗೆಯೇ 8 GB RAM, 128 GB ಇಂಟರ್‌ ಸ್ಟೋರೇಜ್‌ ಆಯ್ಕೆ ಪಡೆದಿದೆ. ಜೊತೆಗೆ 50 MP + 8 MP ಡ್ಯುಯಲ್ ರಿಯರ್ ಕ್ಯಾಮೆರಾ ಹಾಗೂ 16 MP ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ.

Best Mobiles in India

English summary
Motorola Moto E13, Motorola Moto G14, Xiaomi Redmi Note 11SE, Oppo A77, Motorola Moto G32 waterproof smartphones are available under 15 thousand.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+