Home
ಸುದ್ದಿಜಾಲ

Motorola: ಮೊಟೊರೊಲಾದ ಬಜೆಟ್‌ ಬೆಲೆಯ ಈ ಫೋನ್‌ಗೆ ಭರ್ಜರಿ ಬೆಲೆ ಇಳಿಕೆ! 12 GB RAM, 50MP ಕ್ಯಾಮೆರಾ

ಮೊಟೊರೊಲಾದ (Motorola) ಫೋನ್‌ಗಳು ಭಾರತದಲ್ಲಿ ಭಾರೀ ಸೇಲ್‌ ಆಗುತ್ತವೆ. ಅದರಲ್ಲೂ ಮೊಟೊ ಕಂಪೆನಿ ಸುಧಾರಿತ ಫೀಚರ್ಸ್‌ ಆಯ್ಕೆಯೊಂದಿಗೆ ಹೊಸ ಹೊಸ ಫೋನ್‌ಗಳನ್ನು ಅನಾವರಣ ಮಾಡಿಕೊಂಡು ಬರುತ್ತಿದ್ದು, ಅದರಂತೆ ಇತ್ತೀಚೆಗಷ್ಟೇ ಲಾಂಚ್‌ ಆಗಿರುವ ಮೊಟೊದ ಈ ಫೋನ್‌ ಬೆಲೆ ಈಗ ಇಳಿಕೆ ಆಗಿದೆ.

ಹೌದು, ಮೊಟೊರೊಲಾ ಮೊಟೊ G84 (Motorola Moto G84) ಸ್ಮಾರ್ಟ್‌ಫೋನ್‌ಗೆ ಇದೀಗ ಬಂಫರ್ ಆಫರ್ ನೀಡಲಾಗಿದೆ. ಈ ಫೋನ್ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾದೊಂದಿಗೆ 12 GB RAM ಸಾಮರ್ಥ್ಯದಲ್ಲಿ ಕಾಣಿಸಿಕೊಂಡಿದೆ. ಇದರೊಂದಿಗೆ ಈ ಫೋನ್ ಅತ್ಯುತ್ತಮ ಪ್ರೊಸೆಸರ್‌ ಆಯ್ಕೆಯನ್ನೂ ಪಡೆದುಕೊಂಡಿದೆ. ಹಾಗಿದ್ರೆ, ಈ ಸ್ಮಾರ್ಟ್‌ಫೋನ್‌ನ ಪ್ರಮುಖ ಫೀಚರ್ಸ್‌ ಹಾಗೂ ಇದರ ಆಫರ್ ಬೆಲೆ ಎಷ್ಟು ಅನ್ನೋದನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಮೊಟೊರೊಲಾದ ಬಜೆಟ್‌ ಬೆಲೆಯ ಈ ಫೋನ್‌ಗೆ ಭರ್ಜರಿ ಬೆಲೆ ಇಳಿಕೆ! 12 GB RAM...

ಮೊಟೊರೊಲಾ ಮೊಟೊ G84 ಡಿಸ್‌ಪ್ಲೇ ಮಾಹಿತಿ: ಈ ಸ್ಮಾರ್ಟ್‌ಫೋನ್‌ ಅನ್ನು ಖರೀದಿ ಮಾಡುವ ಮುನ್ನ ಇದರ ಫೀಚರ್ಸ್‌ ಕಡೆ ಕಣ್ಣಾಯಿಸೋಣ. ಅದರಂತೆ ಈ ಸ್ಮಾರ್ಟ್‌ಫೋನ್ 6.5 ಇಂಚಿನ P-OLED ಡಿಸ್‌ಪ್ಲೇ ಹೊಂದಿದ್ದು, ಇದು 120Hz ರಿಫ್ರೆಶ್‌ ರೇಟ್‌ ಹಾಗೂ 1300 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್ ಆಯ್ಕೆ ಪಡೆದುಕೊಂಡಿದೆ. ಇದರೊಂದಿಗೆ 1080 x 2400 ಪಿಕ್ಸೆಲ್‌ ಸ್ಕ್ರೀನ್ ರೆಸಲ್ಯೂಶನ್‌ ಸಾಮರ್ಥ್ಯ ಹಾಗೂ 405 ಪಿಪಿಐ ಸಾಂದ್ರತೆ ಪಡೆದಿದೆ.

ಮೊಟೊರೊಲಾ ಮೊಟೊ G84 ಪ್ರೊಸೆಸರ್‌ ವಿವರ: ಇನ್ನು ಈ ಫೋನ್ ಕ್ವಾಲ್ಕಾಮ್ SM6375 ಸ್ನಾಪ್ಡ್ರಾಗನ್ 695 5G (6 nm) ಪ್ರೊಸೆಸರ್‌ ಬಲ ಪಡೆದಿದ್ದು, ಆಂಡ್ರಾಯ್ಡ್ 13 ಓಎಸ್‌ ಅನ್ನು ರನ್‌ ಮಾಡಲಿದೆ. ಇದರೊಂದಿಗೆ ಅಡ್ರಿನೊ 619 ಗ್ರಾಫಿಕ್ಸ್‌ ಆಯ್ಕೆ ಪಡೆದುಕೊಂಡಿದ್ದು, 256GB ಇಂಟರ್‌ ಸ್ಟೋರೇಜ್‌ ಹಾಗೂ 12GB RAM ಸ್ಟೋರೇಜ್‌ ಬಲದೊಂದಿಗೆ ಉತ್ತಮವಾಗಿ ಕಾರ್ಯನಿರ್ವಹಿಸಲಿದೆ. ಜೊತೆಗೆ ಎಸ್‌ ಡಿ ಕಾರ್ಡ್‌ ಬಳಕೆ ಮಾಡಿಕೊಂಡು ಇನ್ನೂ ಹೆಚ್ಚಿನ ಸ್ಟೋರೇಜ್ ಸೌಲಭ್ಯ ಪಡೆಯಬಹುದು.

ಮೊಟೊರೊಲಾದ ಬಜೆಟ್‌ ಬೆಲೆಯ ಈ ಫೋನ್‌ಗೆ ಭರ್ಜರಿ ಬೆಲೆ ಇಳಿಕೆ! 12 GB RAM...

ಮೊಟೊರೊಲಾ ಮೊಟೊ G84 ಕ್ಯಾಮೆರಾ ರಚನೆ: ಈ ಫೋನ್ ಡ್ಯುಯಲ್ ರಿಯರ್‌ ಕ್ಯಾಮೆರಾ ಆಯ್ಕೆ ಪಡೆದಿದ್ದು, 50 ಮೆಗಾಪಿಕ್ಸೆಲ್‌ ಮುಖ್ಯ ಕ್ಯಾಮೆರಾ, 8 ಮೆಗಾಪಿಕ್ಸೆಲ್‌ ಅಲ್ಟ್ರಾವೈಡ್ ಕ್ಯಾಮೆರಾ ಪಡೆದಿದೆ. ಈ ಸೆನ್ಸರ್‌ಗಳು ಎಲ್‌ಇಡಿ ಫ್ಲ್ಯಾಶ್, ಹೆಚ್‌ಡಿಆರ್‌, ಪನೋರಮಾ ಸೌಲಭ್ಯ ಪಡೆದುಕೊಂಡಿವೆ. ಜೊತೆಗೆ ಈ ಕ್ಯಾಮೆರಾ ಮೂಲಕ ಬಳಕೆದಾರರು 1080p@30/60fps ನಲ್ಲಿ ವಿಡಿಯೋ ಮಾಡಬಹುದಾಗಿದೆ. ಉಳಿದಂತೆ ಸೆಲ್ಫಿಗಾಗಿ 16 ಮೆಗಾಪಿಕ್ಸೆಲ್‌ ಕ್ಯಾಮೆರಾ ಆಯ್ಕೆ ನೀಡಲಾಗಿದೆ.

ಮೊಟೊರೊಲಾ ಮೊಟೊ G84 ಬ್ಯಾಟರಿ ಹಾಗೂ ಇತರೆ: ಈ ಫೋನ್ 5000 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಹೊಂದಿದ್ದು, 30W ವೈರ್ಡ್ ಚಾರ್ಜಿಂಗ್ ಮೂಲಕ ಉತ್ತಮ ಎನಿಸಿದೆ. ಜೊತೆಗೆ ವೈ ಫೈ 802.11 a/b/g/n/ac, ಡ್ಯುಯಲ್ ಬ್ಯಾಂಡ್, ವೈ ಫೈ ಡೈರೆಕ್ಟ್, ಬ್ಲೂಟೂತ್ ಆವೃತ್ತಿ 5.1, A2DP, LE, ಜಿಪಿಎಸ್, ಗ್ಲೋನಾಸ್, ಗೆಲಿಲಿಯೋ ಸ್ಥಾನೀಕರಣ, ಎಫ್‌ಎಮ್ ರೇಡಿಯೋ, ಯುಎಸ್‌ಬಿ ಟೈಪ್‌ - ಸಿ 2.0 ಪೋರ್ಸ್‌ ಆಯ್ಕೆಯನ್ನು ಇದರಲ್ಲಿ ಕಾಣಬಹುದಾಗಿದೆ.

ಮೊಟೊರೊಲಾ ಮೊಟೊ G84 ಬೆಲೆ ಹಾಗೂ ಆಫರ್ ಮಾಹಿತಿ: ಈಗ ಪ್ರಮುಖ ವಿಚಾರಕ್ಕೆ ಬರೋದಾದ್ರೆ ಈ ಫೋನ್ ಸಾಮಾನ್ಯ ದರ 22,999 ರೂ.ಗಳಾಗಿದೆ. ಆದರೆ ನೀವು ಇದನ್ನು ಈಗ 18,999 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಇದರೊಂದಿಗೆ 4000 ರಿಯಾಯಿತಿ ನಿಮಗೆ ಸಿಗಲಿದೆ. ಅಷ್ಟೇ ಅಲ್ಲದೆ ಬ್ಯಾಂಕ್‌ ಆಫರ್ ಬಳಕೆ ಮಾಡಿಕೊಳ್ಳುವ ಮೂಲಕ ಇನ್ನೂ ಕಡಿಮೆ ಬೆಲೆಗೆ ಇದನ್ನು ಖರೀದಿ ಮಾಡಬಹುದು.

ಮೊಟೊರೊಲಾದ ಬಜೆಟ್‌ ಬೆಲೆಯ ಈ ಫೋನ್‌ಗೆ ಭರ್ಜರಿ ಬೆಲೆ ಇಳಿಕೆ! 12 GB RAM...

ಈ ಫೋನ್ ಖರೀದಿ ವೇಳೆ ನೀವು ಫ್ಲಿಪ್‌ಕಾರ್ಟ್‌ ಆಕ್ಸಿಸ್‌ ಬ್ಯಾಂಕ್‌ ಕ್ರೆಡಿಟ್‌ ಕಾರ್ಡ್ (Flipkart Axis Bank Credit Card) ಬಳಕೆ ಮಾಡಿದರೆ 5% ಕ್ಯಾಶ್‌ಬ್ಯಾಕ್ ಹಾಗೂ ಡೆಬಿಟ್ ಕಾರ್ಡ್ ಇಎಮ್‌ಐ ಸೌಲಭ್ಯ ಸಹ ಇದೆ. ಇದರಲ್ಲಿ ತಿಂಗಳಿಗೆ 1,177ರೂ.ಗಳನ್ನು ಪಾವತಿ ಮಾಡಿದ್ರೆ ಸಾಕು. ಇದರೊಂದಿಗೆ 699 ರೂ. ಮೌಲ್ಯದ FreebieSpotify ಪ್ರೀಮಿಯಂ ಸೌಲಭ್ಯ ಸಹ ಸಿಗಲಿದೆ. ಇನ್ನು ದಿನನಿತ್ಯದ ಸಾಮಾನ್ಯ ಬಳಕೆಗೆ ಉತ್ತಮ ಫೋನ್‌ ಬೇಕು ಅನಿಸಿದರೆ ಈ ಫೋನ್‌ ಅನ್ನು ಪರಿಗಣಿಸಬಹುದಾಗಿದೆ.

Best Mobiles in India

English summary
Motorola Moto G84 smartphone has now received a bumper offer. This phone is featured in 12 GB RAM capacity with 50 megapixel main camera.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+