Home
ಸುದ್ದಿಜಾಲ

Motorola: ಮೊಟೊದ ಈ ಫೋಲ್ಡಬಲ್ ಫೋನ್‌ ಬೆಲೆ ಇಳಿಕೆ! ಹಾಗಿದ್ರೆ ಹೊಸ ದರ ಎಷ್ಟು? ಆಫರ್ ಇದೆಯಾ?

ಮೊಟೊರೊಲಾ ಫೋನ್‌ಗಳು (Motorola phone) ಸಹ ಫೋಲ್ಡಬಲ್‌ (Foldable) ಫೋನ್‌ಗಳ ವಿಭಾಗದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿವೆ. ಈ ಫೋನ್‌ಗಳಲ್ಲಿ ಮೊಟೊ ರೇಜರ್‌ 40 ಸರಣಿ ಫೋನ್‌ಗಳು (Moto Razr 40 series) ಭಾರೀ ಸೇಲ್‌ ಆಗುತ್ತಿದ್ದು, ಮೊಟೊ ರೇಜರ್‌ 40 ಸರಣಿ ಇದೀಗ ಈ ಫೋನ್‌ನ ಸಾಮಾನ್ಯ ವೇರಿಯಂಟ್‌ನ ಬೆಲೆಯಲ್ಲಿ ಅಧಿಕೃತವಾಗಿ ಕಡಿಮೆ ಮಾಡಲಾಗಿದೆ.

ಹೌದು, ನೀವು ಏನಾದರೂ ಈಗ 50,000 ರೂ.ಗಳ ಒಳಗೆ ಉತ್ತಮ ಫೋಲ್ಡ್‌ಬಲ್‌ ಫೋನ್‌ ಖರೀದಿ ಮಾಡಲು ಮುಂದಾಗಿದ್ದರೆ ಮೊಟೊ ರೇಜರ್‌ 40 ಸ್ಮಾರ್ಟ್‌ಫೋನ್‌ (Moto Razr 40 smartphone) ಅನ್ನು ಖರೀದಿ ಮಾಡಬಹುದಾಗಿದೆ. ಈ ಫೋನ್‌ ಬೆಲೆಯನ್ನು ಇಳಿಕೆ ಮಾಡಲಾಗಿದ್ದು, ಈ ಮೂಲಕ ಭಾರೀ ಹಣ ಉಳಿತಾಯ ಮಾಡಬಹುದು. ಹಾಗಿದ್ರೆ, ಈ ಫೋನ್‌ನ ಪರಿಷ್ಕೃತ ದರ ಎಷ್ಟು?, ಇದರ ಫೀಚರ್ಸ್‌ ಏನು ಅನ್ನೋದನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಮೊಟೊದ ಈ ಫೋಲ್ಡಬಲ್ ಫೋನ್‌ ಬೆಲೆ ಇಳಿಕೆ! ಹಾಗಿದ್ರೆ ಹೊಸ ದರ ಎಷ್ಟು? ಆಫರ್ ಇದೆಯಾ?

ಮೊಟೊ ರೇಜರ್‌ 40 ಸ್ಮಾರ್ಟ್‌ಫೋನ್‌ ಬೆಲೆ ಇಳಿಕೆ: ಮೊಟೊ ರೇಜರ್‌ 40 ಸ್ಮಾರ್ಟ್‌ಫೋನ್‌ ಬೆಲೆಯನ್ನು ಇದೀಗ ಬರೋಬ್ಬರಿ 10,000 ರೂ.ವರೆಗೆ ಕಡಿಮೆ ಮಾಡಲಾಗಿದೆ. ಈ ಸ್ಮಾರ್ಟ್‌ಫೋನ್‌ ಸಾಮಾನ್ಯ ದರ 59,999 ರೂ.ಗಳು. ಹೀಗಾಗಿ ಗ್ರಾಹಕರು ಈ ಫೋನ್‌ ಅನ್ನು 49,999 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಅದಾಗ್ಯೂ ಬರೋಡಾ ಕ್ರೆಡಿಟ್ ಕಾರ್ಡ್‌ನಲ್ಲಿ ಕಂಪನಿಯು 10% ತ್ವರಿತ ರಿಯಾಯಿತಿಯನ್ನು ಸಹ ನೀಡುತ್ತಿದ್ದು, ಇನ್ನೂ ಕಡಿಮೆ ಬೆಲೆಗೆ ಈ ಫೋನ್‌ ಅನ್ನು ನಿಮ್ಮದಾಗಿಸಿಕೊಳ್ಳಬಹುದು.

ಮೊಟೊ ರೇಜರ್‌ 40 ಸ್ಮಾರ್ಟ್‌ಫೋನ್‌ ಫೀಚರ್‌: ಈ ಸ್ಮಾರ್ಟ್‌ಫೋನ್ ಬೆಲೆ ಕಡಿಮೆ ಆಗಿರುವ ಖುಷಿಗೆ ಇದರ ಬಗ್ಗೆ ತಿಳಿಯದೇ ಖರೀದಿ ಮಾಡಲು ಮುಂದಾಗಬೇಡಿ. ಅದರಂತೆ ಈ ಫೋನ್ 6.9 ಇಂಚಿನ ಫ್ಲೆಕ್ಸ್ ವ್ಯೂ FHD+ ಡಿಸ್‌ಪ್ಲೇ ಹೊಂದಿದ್ದು, ಇದು 1080x2640 ಪಿಕ್ಸೆಲ್ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯ ಪಡೆದಿದೆ. ಮುಖ್ಯ ಡಿಸ್‌ಪ್ಲೇ 144Hz ರಿಫ್ರೆಶ್ ರೇಟ್‌ನೊಂದಿಗೆ 1400 ನಿಟ್ಸ್‌ನ ಗರಿಷ್ಠ ಬ್ರೈಟ್‌ನೆಸ್‌ ಆಯ್ಕೆಯನ್ನು ಪಡೆದಿದೆ.

ಮೊಟೊದ ಈ ಫೋಲ್ಡಬಲ್ ಫೋನ್‌ ಬೆಲೆ ಇಳಿಕೆ! ಹಾಗಿದ್ರೆ ಹೊಸ ದರ ಎಷ್ಟು? ಆಫರ್ ಇದೆಯಾ?

ಇದರೊಂದಿಗೆ ಈ ಫೋನ್ 368x194 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಹೊಂದಿರುವ 1.47 ಇಂಚಿನ ಬಾಹ್ಯ ಡಿಸ್‌ಪ್ಲೇಯನ್ನು ಸಹ ಹೊಂದಿದೆ. ಈ ಡಿಸ್‌ಪ್ಲೇ 60Hz ರಿಫ್ರೆಶ್ ರೇಟ್‌ ಆಯ್ಕೆ ಪಡೆದಿದ್ದು, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ಲೇಯರ್‌ನಿಂದ ರಕ್ಷಣೆ ಪಡೆದಿದೆ.

ಮೊಟೊ ರೇಜರ್‌ 40 ಸ್ಮಾರ್ಟ್‌ಫೋನ್‌ ಪ್ರೊಸೆಸರ್‌ ವಿವರ: ಈ ಫೋನ್ 8GB RAM ಬೆಂಬಲದೊಂದಿಗೆ ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 7 ಜನ್ 1 ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸಲಿದೆ. ಜೊತೆಗೆ 256GB ಇಂಟರ್‌ ಸ್ಟೋರೇಜ್‌ ಆಯ್ಕೆ ಪಡೆದಿದ್ದು, ಎಲ್ಲಾ ರೀತಿಯ ಕಾರ್ಯಗಳು ಸರಳವಾಗಿ ಜರುಗಲಿವೆ. ಇನ್ನು ಈ ಫೋನ್‌ ಆಂಡ್ರಾಯ್ಡ್ 13 ಆಪರೇಟಿಂಗ್ ಸಿಸ್ಟಮ್ ಅನ್ನು ರನ್ ಮಾಡುತ್ತದೆ.

ಮೊಟೊದ ಈ ಫೋಲ್ಡಬಲ್ ಫೋನ್‌ ಬೆಲೆ ಇಳಿಕೆ! ಹಾಗಿದ್ರೆ ಹೊಸ ದರ ಎಷ್ಟು? ಆಫರ್ ಇದೆಯಾ?

ಮೊಟೊ ರೇಜರ್‌ 40 ಸ್ಮಾರ್ಟ್‌ಫೋನ್‌ ಕ್ಯಾಮೆರಾ: ಈ ಫೋನ್ ಡ್ಯುಯಲ್ ರಿಯರ್‌ ಕ್ಯಾಮೆರಾ ಸೌಲಭ್ಯ ಪಡೆದಿದ್ದು, ಅದರಲ್ಲಿ 64 ಮೆಗಾಪಿಕ್ಸೆಲ್‌ ಮುಖ್ಯ ಸೆನ್ಸರ್‌ ಆಯ್ಕೆ ಪಡೆದಿದೆ. ಇದು f/1.7 ಅಪರ್ಚರ್ ಸಾಮರ್ಥ್ಯ ಪಡೆದಿದೆ. ಜೊತೆಗೆ 13 ಮೆಗಾಪಿಕ್ಸೆಲ್‌ ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ ಆಯ್ಕೆ ಪಡೆದಿದ್ದು, ಈ ಮೂಲಕ ಉತ್ತಮ ಫೋಟೋಗಳನ್ನು ಸೆರೆಹಿಡಿಯಬಹುದಾಗಿದೆ. ಇದರೊಂದಿಗೆ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ 32 ಮೆಗಾಪಿಕ್ಸೆಲ್‌ ಕ್ಯಾಮೆರಾ ಹೊಂದಿದೆ.

ಮೊಟೊ ರೇಜರ್‌ 40 ಸ್ಮಾರ್ಟ್‌ಫೋನ್‌ ಬ್ಯಾಟರಿ ಹಾಗೂ ಇತರೆ: ಈ ಫೋನ್ 4,200 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, ಇದು 33W ವೇಗದ ಚಾರ್ಜಿಂಗ್ ಮತ್ತು 5W ವೈರ್‌ಲೆಸ್ ಚಾರ್ಜಿಂಗ್ ಬೆಂಬಲ ಪಡೆದಿದೆ. ಇದರೊಂದಿಗೆ ಯುಎಸ್‌ಬಿ ಟೈಪ್-ಸಿ ಮತ್ತು ಡಾಲ್ಬಿ ಅಟ್ಮಾಸ್‌ನಿಂದ ಟ್ಯೂನ್ ಮಾಡಲಾದ ಸ್ಟಿರಿಯೊ ಸ್ಪೀಕರ್‌ಗಳೊಂದಿಗೆ ಪ್ಯಾಕ್‌ ಆಗಿದೆ. ಈ ಫೋನ್ ಸೇಜ್ ಗ್ರೀನ್, ಸಮ್ಮರ್ ಲಿಲಾಕ್ ಮತ್ತು ವೆನಿಲ್ಲಾ ಕ್ರೀಮ್ ಎಂಬ ಮೂರು ಬಣ್ಣದ ಆಯ್ಕೆಯಲ್ಲಿ ಲಭ್ಯ.

Best Mobiles in India

English summary
Motorola Moto Razr 40 smartphone price has been reduced now. By this you can save tens of thousands of money.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+