Motorola: ಮೋಟೋ ವಾಚ್ 40 ಸ್ಮಾರ್ಟ್‌ವಾಚ್ ಲಾಂಚ್!10 ದಿನದ ಬ್ಯಾಟರಿ ಬ್ಯಾಕಪ್, ಬೆಲೆ ಎಷ್ಟು?
ಮೊಟೊರೊಲಾ (Motorola) ಈವರೆಗೂ ಭಿನ್ನ ಫೀಚರ್ಸ್ ಆಯ್ಕೆಯ ಸ್ಮಾರ್ಟ್‌ಫೋನ್‌ಗಳ ಮೂಲಕ ಜಾಗತಿಕವಾಗಿ ಸದ್ದು ಮಾಡುತ್ತಿತ್ತು. ಆದರೆ, ಈಗ ಸ್ಮಾರ್ಟ್‌ವಾಚ್ ಮೂಲವೂ ಜಾಗತಿಕವಾಗಿ ಸೌಂಡ್ ಮಾಡಲು ಮುಂದಾಗಿದ್ದು, ಇದರ ಭಾಗವಾಗಿಯೇ ಮೋಟೋ ವಾಚ್ 40 ಸ್ಮಾರ್ಟ್‌ವಾಚ್ (Moto Watch 40 smartwatch) ಅನ್ನು ಲಾಂಚ್ ಮಾಡಲಾಗಿದೆ.
ಹೌದು, ಮೋಟೋ ವಾಚ್ 40 ಸ್ಮಾರ್ಟ್‌ವಾಚ್ ಅನ್ನು ಅನಾವರಣ ಮಾಡಲಾಗಿದ್ದು, ಈ ಸ್ಮಾರ್ಟ್‌ವಾಚ್ ಬರೋಬ್ಬರಿ 85 ಕ್ಕೂ ಹೆಚ್ಚು ವಾಚ್ ಫೇಸ್ ಆಯ್ಕೆಗಳನ್ನು ನೀಡುತ್ತದೆ. ಜೊತೆಗೆ IP67 ರೇಟಿಂಗ್ ಅನ್ನು ಸಹ ಹೊಂದಿದ್ದು, ಈ ಮೂಲಕ ಪ್ರೀಮಿಯಂ ಅನುಭವ ನೀಡಲಿದೆ. ಹಾಗಿದ್ರೆ, ಈ ಸ್ಮಾರ್ಟ್‌ವಾಚ್‌ನ ಪ್ರಮುಖ ಫೀಚರ್ಸ್ ಹಾಗೂ ಭಾರತದಲ್ಲಿ ಇದರ ಬೆಲೆ ಎಷ್ಟು ಅನ್ನೋ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಮೋಟೋ ವಾಚ್ 40 ಸ್ಮಾರ್ಟ್‌ವಾಚ್: ಕಳೆದ ವರ್ಷ ಮೋಟೋ ವಾಚ್ 70 ಮತ್ತು ಮೋಟೋ ವಾಚ್ 200 ಅನ್ನು ಅನಾವರಣ ಮಾಡುವ ಮೂಲಕ ಮೊಟೊರೊಲಾ ಸ್ಮಾರ್ಟ್ ಫೋನ್‌ಗಳಷ್ಟೇ ಈ ವಾಚ್‌ಗಳಿಗೂ ಬೇಡಿಕೆ ಪಡೆದಿಕೊಂಡಿತ್ತು. ಅದರಂತೆ ಈಗ ಈ ವಾಚ್‌ಗಳ ವಿಭಾಗದಲ್ಲಿ ಯುಎಸ್‌ನಲ್ಲಿ ಮೋಟೋ ವಾಚ್ 40 ಸೇರಿಕೊಂಡಿದೆ. ಈ ಸ್ಮಾರ್ಟ್‌ವಾಚ್ 1.57 ಇಂಚಿನ ಎಲ್‌ಸಿಡಿ ಕರ್ವ್ಡ್ ಡಿಸ್‌ಪ್ಲೇ ಆಯ್ಕೆ ಪಡೆದಿದೆ. ಜೊತೆಗೆ 85 ಕ್ಕೂ ಹೆಚ್ಚು ವಾಚ್ ಫೇಸ್ ಸೌಲಭ್ಯ ಸಹ ಇದ್ದು, ಉತ್ತಮವಾಗಿ ಕಾರ್ಯನಿರ್ವಹಿಸಲಿದೆ.
ಮೋಟೋ ವಾಚ್ 40 ಸ್ಮಾರ್ಟ್‌ವಾಚ್: ಈ ವಾಚ್ ಹೃದಯ ಬಡಿತ ಮತ್ತು SpO2 ಮಾನಿಟರಿಂಗ್, ನಿದ್ರೆ ಮತ್ತು ಒತ್ತಡದ ಟ್ರ್ಯಾಕಿಂಗ್ ಸೇರಿದಂತೆ ಹಲವಾರು ಆರೋಗ್ಯ ಮತ್ತು ಫಿಟ್ನೆಸ್ ಟ್ರ್ಯಾಕಿಂಗ್ ಫೀಚರ್ಸ್ ನೊಂದಿಗೆ ಕಾಣಿಸಿಕೊಂಡಿದೆ. ಅಲ್ಲದೆ ಇದು ಮೋಟೋ ವಾಚ್ ಓಎಸ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಉತ್ತಮ ಅನುಭವ ನೀಡಲಿದೆ. ಇದರೊಂದಿಗೆ ನೋಟಿಫಿಕೇಶನ್ ಅನ್ನು ಬೆಂಬಲಿಸಲಿದೆಯಾದರೂ ಮೆಸೆಜ್‌ಗಳಿಗೆ ಪ್ರತಿಕ್ರಿಯಿಸುವ ಅಥವಾ ನೇರವಾಗಿ ಕರೆಗಳನ್ನು ಮಾಡುವ ಸಾಮರ್ಥ್ಯವನ್ನು ಇದು ಪಡೆದಿಲ್ಲ.

ಮೋಟೋ ವಾಚ್ 40 ಬ್ಯಾಟರಿ ಹಾಗೂ ಇತರೆ: ಈ ವಾಚ್ 240mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಒಂದೇ ಚಾರ್ಜ್‌ನಲ್ಲಿ 10 ದಿನಗಳ ಬ್ಯಾಕಪ್ ನೀಡಲಿದೆ. ಇದರೊಂದಿಗೆ IP67 ರೇಟಿಂಗ್ ಆಯ್ಕೆ ಪಡೆದಿದ್ದು, ಈ ಡಿವೈಸ್ ಡಿವೈಸ್ ಧೂಳು ಮತ್ತು ನೀರಿನಿಂದ ರಕ್ಷಿಸಲ್ಪಟ್ಟಿದೆ. ಇದರಿಂದಾಗಿ ದೈನಂದಿನ ಉಡುಗೆಗೆ ಉತ್ತಮವಾದ ಸ್ಮಾರ್ಟ್‌ಫೋನ್ ಆಗಿರಲಿದೆ.
ಮೋಟೋ ವಾಚ್ 40 ಬೆಲೆ ಹಾಗೂ ಲಭ್ಯತೆ: ಈ ಸ್ಮಾರ್ಟ್‌ವಾಚ್ ಸದ್ಯಕ್ಕೆ ಯುಎಸ್‌ನಲ್ಲಿ ಮಾತ್ರ ಖರೀದಿಗೆ ಲಭ್ಯ ಇದ್ದು, ಇದಕ್ಕೆ $64.99 ಬೆಲೆ ನಿಗದಿ ಮಾಡಲಾಗಿದೆ. ಅದರೆ ಸುಮಾರು 5,393 ರೂ.ಗಳು. ಅಂತೆಯೇ ಈ ಸ್ಮಾರ್ಟ್‌ವಾಚ್ ರೋಸ್ ಗೋಲ್ಡ್ ಮತ್ತು ಫ್ಯಾಂಟಮ್ ಬ್ಲ್ಯಾಕ್ ಎಂಬ ಎರಡು ಬಣ್ಣದ ಆಯ್ಕೆಯಲ್ಲಿ ಕಾಣಿಸಿಕೊಂಡಿದೆ. ಆದಾಗ್ಯೂ, ಕಂಪನಿಯು ಸದ್ಯಕ್ಕೆ ಭಾರತ ಸೇರಿದಂತೆ ಇತರ ದೇಶಗಳಲ್ಲಿ ಇದರ ಬೆಲೆ ಅಥವಾ ಲಭ್ಯತೆಯ ಬಗ್ಗೆ ಮಾಹಿತಿ ಬಹಿರಂಗಪಡಿಸಿಲ್ಲ.

ಈ ನಡುವೆ ಭಾರತದಲ್ಲಿ ಮೊಟೊರೊಲಾ ಇತ್ತೀಚೆಗೆ ಇತ್ತೀಚಿನ ಮೊಟೊ G24 ಪವರ್ ಸ್ಮಾರ್ಟ್‌ಫೋನ್ ಅನ್ನು ಪರಿಚಯಿಸಿದೆ. ಈ ಸ್ಮಾರ್ಟ್‌ವಾಚ್ 8,999 ರೂ.ಗಳಿಂದ ಪ್ರಾರಂಭವಾಗುತ್ತದೆ. ಇದು 6.56 ಇಂಚಿನ ಹೆಚ್‌ಡಿ+ ಐಪಿಎಸ್ ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, 50 ಮೆಗಾಪಿಕ್ಸೆಲ್ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಹಾಗೂ 30W ಟರ್ಬೋಚಾರ್ಜಿಂಗ್ ಅನ್ನು ಬೆಂಬಲಿಸುವ 6,000mAh ಸಾಮರ್ಥ್ಯದ ಬ್ಯಾಟರಿಯನ್ನು ಪಡೆದಿದೆ. ಉಳಿದಂತೆ ಈ ಫೋನ್ 8GB RAM ಮತ್ತು 128GB ಇಂಟರ್ ಸ್ಟೋರೇಜ್ ಆಯ್ಕೆ ಪಡೆದಿದೆ.


Click it and Unblock the Notifications








