Home
ಸುದ್ದಿಜಾಲ

ಸದ್ಯದಲ್ಲೇ ಬಿಡುಗಡೆ ಆಗಲಿದೆ ಮೊಟೊರೊಲಾ ಕಂಪೆನಿಯ ಹೊಸ ಸ್ಮಾರ್ಟ್‌ಫೋನ್‌!

ಮೊಟೊರೊಲಾ ಕಂಪೆನಿ ತನ್ನ ಭಿನ್ನ ಮಾದರಿಯ ಸ್ಮಾರ್ಟ್‌ಫೋನ್‌ಗಳಿಗೆ ಹೆಸರುವಾಸಿಯಾಗಿದೆ. ಬಜೆಟ್‌ ಬೆಲೆಯ ಸ್ಮಾರ್ಟ್‌ಫೊನ್‌ಗಳಿಂದ ಸೈ ಎನಿಸಿಕೊಂಡಿರುವ ಮೊಟೊರೊಲಾ ಇದೀಗ ತನ್ನ ಮತ್ತೊಂದು ಹೊಸ ಸ್ಮಾರ್ಟ್‌ಫೋನ್‌ ಬಿಡುಗಡೆಗೆ ಸಿದ್ದತೆ ನಡೆಸಿದೆ. ಭಾರತದ ಮಾರುಕಟ್ಟೆಯಲ್ಲಿ ತನ್ನ ಹೊಸ ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಲು ವೇದಿಕೆ ಸಿದ್ದಪಡಿಸಿಕೊಂಡಿದೆ. ಸದ್ಯ ಈ ಸ್ಮಾರ್ಟ್‌ಫೋನ್‌ ಬಿಡುಗಡೆಗೆ ಸಂಬಂಧಿಸಿದಂತೆ ಮೊಟೊರೊಲಾ ಕಂಪನಿಯು ಟ್ವಿಟರ್‌ನಲ್ಲಿ ಟೀಸರ್‌ ಅನ್ನು ಬಿಡುಗಡೆ ಮಾಡಿದೆ.

ಮೊಟೊರೊಲಾ

ಹೌದು, ಮೊಟೊರೊಲಾ ಕಂಪೆನಿ ತನ್ನ ಹೊಸ ಸ್ಮಾರ್ಟ್‌ಫೋನ್‌ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲಿದೆ. ಸ್ಮಾರ್ಟ್‌ಫೋನ್‌ಗೆ ಸಂಬಂದಿಸಿದ ಮಾಹಿತಿಯನ್ನು ನೀಡುವುದಕ್ಕೆ ಟ್ವಿಟರ್‌ನಲ್ಲಿ ಟೀಸರ್‌ ಅನ್ನು ಬಿಡುಗಡೆ ಮಾಡಿದೆ. ಈ ಟೀಸರ್‌ನಲ್ಲಿ ಈ ಸ್ಮಾರ್ಟ್‌ಫೋನ್‌ ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಾಗಲಿದೆ ಎಂಬ ಸುಳಿವನ್ನು ನೀಡಿದೆ. ಸದ್ಯ ಕಂಪನಿಯು ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸದಿದ್ದರೂ, ಹೊಸ ಸ್ಮಾರ್ಟ್‌ಫೋನ್ ಆಗಸ್ಟ್ 24 ರಂದು ಬರಲಿದೆ ಎಂದು ಫ್ಲಿಪ್‌ಕಾರ್ಟ್ ಹೇಳಿದೆ. ಸದ್ಯ ಟೀಸರ್‌ನಲ್ಲಿ ಲಬ್ಯವಾಗಿರುವ ಮಾಹಿತಿ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿರಿ.

ಮೊಟೊರೊಲಾ

ಮೊಟೊರೊಲಾ ಕಂಪೆನಿ ತನ್ನ ಹೊಸ ಸ್ಮಾರ್ಟ್‌ಫೋನ್‌ ಹೆಸರನ್ನು ಎಲ್ಲಿಯೂ ಸಹ ಬಹಿರಂಗ ಪಡಿಸಿಲ್ಲ. ಅಲ್ಲದೆ ಬಿಡುಗಡೆಯ ದಿನಾಂಕವನ್ನೂ ಸಹ ಪ್ರಕಟಿಸಿಲ್ಲ. ಆದರೆ ಟೀಸರ್‌ನಲ್ಲಿರುವ ಮಾಹಿತಿಯಂತೆ ಈ ಸ್ಮಾರ್ಟ್‌ಫೋನ್‌ ಫ್ಲಿಪ್‌ಕಾರ್ಟ್‌ನ್ಲಿ ಲಭ್ಯವಾಗಲಿದೆ. ಇನ್ನು ಫ್ಲಿಪ್‌ಕಾರ್ಟ್‌ನಲ್ಲಿ ಲಬ್ಯವಿರುವ ಮಾಹಿತಿ ಮೊಟೊರೊಲಾ ಕಂಪೆನಿಯ ಹೊಸ ಸ್ಮಾರ್ಟ್‌ಫೋನ್‌ ಆಗಸ್ಟ್‌ 24ರಂದು ಭಾರತದಲ್ಲಿ ಬಿಡುಗಡೆ ಆಗಲಿದೆ. ಇನ್ನು ಟ್ವಿಟರ್‌ನಲ್ಲಿ ಬಿಡುಗಡೆ ಆಗಿರುವ ಟೀಸರ್‌ನಲ್ಲಿ ಹೊಸ ಫೋನ್‌ನ ಕ್ಯಾಮೆರಾ ಮತ್ತು ಕಾರ್ಯಕ್ಷಮತೆಯನ್ನು ವ್ಯಕ್ತಪಡಿಸುವ ವೀಡಿಯೊವನ್ನು ಹಂಚಿಕೊಂಡಿದೆ.

ಸ್ಮಾರ್ಟ್‌ಫೋನ್‌

ಇನ್ನು ಈ ಸ್ಮಾರ್ಟ್‌ಫೋನ್‌ ರಿಯರ್‌ ಫಿಂಗರ್‌ ಪ್ರಿಂಟ್‌ ಸೆನ್ಸಾರ್‌ ಅನ್ನು ಹೊಂದಿರಲಿದೆ ಅನ್ನೊ ಸುಳಿವು ಈ ಟೀಸರ್‌ನಲ್ಲಿ ದೊರೆತಿದೆ. ಅಲ್ಲದೆ ಮೊಟೊರೊಲಾ logoವನ್ನು ಉಬ್ಬಿದ ಮಾದರಿಯಲ್ಲಿ ಫೋನಿನ ಬದಿಗಳಲ್ಲಿ ಇರಿಸಲಾಗಿದೆ. ಅಲ್ಲದೆ ಇದು ಯುಎಸ್‌ಬಿ ಟೈಪ್-ಸಿ ಪೋರ್ಟ್ ಮತ್ತು ಸ್ಪೀಕರ್ ಗ್ರಿಲ್‌ನ ವ್ಯೂವ್‌ ಅನ್ನು ಸಹ ಟೀಸರ್‌ನಲ್ಲಿ ನೋಡಬಹುದಾಗಿದೆ. ಇದಲ್ಲದೆ ಫ್ಲಿಪ್‌ಕಾರ್ಟ್ ತನ್ನ ಅಪ್ಲಿಕೇಶನ್‌ನಲ್ಲಿ ಹೊಸ ಮೊಟೊರೊಲಾ ಫೋನ್‌ ಬಿಡುಗಡೆ ಬಗ್ಗೆ ಮಾಹಿತಿ ನೀಡಿದೆ.

ಟೀಸರ್

ಅಲ್ಲದೆ ಈ ಫೋನ್‌ನ ಔಟ್‌ಲೈನ್‌ ಸ್ಲಿಮ್ ಅಂಚುಗಳನ್ನು ಹೊಂದಿದೆ ಅನ್ನೊದು ಟೀಸರ್‌ನಲ್ಲಿ ತಿಳಿಯಬಹುದಾಗಿದೆ. ಫೋನ್‌ನ ಬಲಭಾಗದಲ್ಲಿ ಭೌತಿಕ ಗುಂಡಿಗಳಿವೆ. ಫ್ಲಿಪ್‌ಕಾರ್ಟ್ ಇದನ್ನು ‘ಬಿಗ್' ವಂಡರ್‌ ಎಂದು ವರ್ಣನೆ ಮಾಡಿದೆ. ಇದರಿಂದ ಈ ಸ್ಮಾರ್ಟ್‌ಫೋನ್‌ ದೊಡ್ಡ ಗಾತ್ರದ ಡಿಸ್‌ಪ್ಲೇ ಹೊಂದಿರುವುದರ ಸುಳಿವು ನೀಡಿದೆ. ಇದು ದೊಡ್ಡ ಗಾತ್ರದ ಡಿಸ್‌ಪ್ಲೇ, ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ ಪ್ರೊಸೆಸರ್ ಮತ್ತು ಹೊಸ ಮಾದರಿಯ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿರುವುದರ ಬಗ್ಗೆ ಟೀಸರ್‌ನಲ್ಲಿ ಸುಳಿವು ದೊರೆತಿದೆ.

Best Mobiles in India

English summary
The upcoming Motorola phone is teased to offer good ‘performance and camera.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+