ಇದೇ ಜೂನ್ 20ರಂದು 'ಮೊಟೊರೊಲಾ ಒನ್ ವಿಷನ್' ಬಿಡುಗಡೆ ಖಚಿತ!
ಮೊಟೊರೊಲಾ ಸಂಸ್ಥೆಯು ಕಳೆದ ತಿಂಗಳು ಬ್ರೆಜಿಲ್‌ನಲ್ಲಿ ಲಾಂಚ್ ಮಾಡಿದ್ದ 'ಮೊಟೊರೊಲಾ ಒನ್ ವಿಷನ್' ಸ್ಮಾರ್ಟ್‌ಫೋನ್ ಅನ್ನು ಇದೀಗ ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಜ್ಜಾಗಿದ್ದು, ಇದೇ ಜೂನ್ 20 ರಂದು ರೀಲಿಸ್ ಆಗುವುದು ಅಧಿಕೃತವಾಗಿ ಖಚಿತವಾಗಿದೆ. ಸಂಪೂರ್ಣ ಹೈ ಎಂಡ್ ಮಾದರಿಯ ಫೀಚರ್ಸ್‌ಗಳಿಂದ ಈಗಾಗಲೇ ಗಮನ ಸೆಳೆದಿರುವ ಈ ಸ್ಮಾರ್ಟ್‌ಪೋನ್ ಸಂಚಲನ ಮೂಡಿಸಲಿದೆ.

ಹೌದು, ಮೊಟೊರೊಲಾ ಕಂಪನಿಯ ಬಹುನಿರೀಕ್ಷಿತ 'ಒನ್ ವಿಷನ್' ಸ್ಮಾರ್ಟ್‌ಫೋನ್ ಇದೇ ಜೂನ್ 20 ರಂದು ದೇಶಿಯ ಮಾರುಕಟ್ಟೆಗೆ ಬಿಡುಗಡೆ ಆಗಲಿದ್ದು, ಈ ಸ್ಮಾರ್ಟ್‌ಫೋನ್ 48ಎಂಪಿ ಕ್ಯಾಮೆರಾ, ಪವರ್‌ಫುಲ್ ಪ್ರೊಸೆಸರ್, ಬಿಗ್ ಬ್ಯಾಟರಿ ಲೈಫ್ ಫೀಚರ್ಸ್‌ಗಳನ್ನು ಒಳಗೊಂಡಿದೆ. ಬ್ಲೂ ಮತ್ತು ಬ್ರೌನ್ ಕಲರ್ ವೇರಿಯಂಟ್ ಆಯ್ಕೆ ಹೊಂದಿರುವ ಈ ಫೋನ್ ಪ್ರೈಸ್‌ಟ್ಯಾಗ್ ಸಹ 25,000ರೂ.ಗಳ ಆಸುಪಾಸಿನಲ್ಲಿರಲಿದೆ.

ಪ್ಯಾನಲ್‌ನಲ್ಲಿ ಫಿಂಗರ್‌ಪ್ರಿಂಟ್ ಸೆನ್ಸಾರ್, ಆಂಬಿಯಂಟ್ ಲೈಟ್ ಸೆನ್ಸಾರ್, ಡಿಜಿಟಲ್ ಕಂಪಾಸ್ ಸೇರಿದಂತೆ ಹಲವು ಆಯ್ಕೆಗಳನ್ನು ಹೊಂದಿರುವ ಮೊಟೊ ಒನ್ ವಿಷನ್ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 9 ಪೈ ಓಎಸ್ ಅನ್ನು ಒಳಗೊಂಡಿದೆ. ಹಾಗಾದರೇ ಮೊಟೊರೊಲಾ 'ಒನ್ ವಿಷನ್' ಸ್ಮಾರ್ಟ್‌ಫೋನ್ ಇತರೆ ಯಾವೆಲ್ಲಾ ವಿಶೇಷ ಫೀಚರ್ಸ್‌ಗಳನ್ನು ಒಳಗೊಂಡಿರಲಿದೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಡಿಸ್‌ಪ್ಲೇ ಹೇಗಿದೆ
ಮೊಟೊರೊಲಾ ಒನ್ ವಿಷನ್ ಸ್ಮಾರ್ಟ್‌ಫೋನ್ 1080 x 2520 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.3 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದೆ. ಹಾಗೆಯೇ ಡಿಸ್‌ಪ್ಲೇ ಅನುಪಾತವು 21:9 ಅನುಪಾತದಲ್ಲಿದ್ದು, ಸೋನಿಯ ಸಿನಿಮಾವಿಷನ್ ಮಾದರಿಯ ಡಿಸ್‌ಪ್ಲೇ ಇದಾಗಿರಲಿದೆ. ಜತೆಗೆ ಪಂಚ್‌ಹೋಲ್ ಮಾದರಿಯ ಡಿಸ್‌ಪ್ಲೇ ಇರಲಿದೆ ಎನ್ನುತ್ತಿವೆ ಲೀಕ್ ಮಾಹಿತಿಗಳು.

ಪ್ರೊಸೆಸರ್ ಶಕ್ತಿ ಏನು
ಸ್ಯಾಮ್‌ಸಂಗ್ Exynos 9609 ಪ್ರೊಸೆಸರ್ ಅನ್ನು ಹೊಂದಿರುವ ಈ ಸ್ಮಾರ್ಟ್‌ಫೋನ್ 2.2GHz ಗಿಗಾಹರ್ಡ್ಜ ವೇಗವನ್ನು ಕಾರ್ಯನಿರ್ವಹಿಸಲಿದೆ. 4GB RAM ಶಕ್ತಿಯೊಂದಿಗೆ 128GB ಆಂತರಿಕ ಸ್ಟೋರೇಜ್ ಸಾಮರ್ಥ್ಯವನ್ನು ಒಳಗೊಂಡಿದ್ದು, ಹಾಗೆಯೇ ಎಸ್‌ಡಿ ಕಾರ್ಡ್ ಮೂಲಕ ಬಾಹ್ಯ ಸಂಗ್ರಹವನ್ನು 512GB ವರೆಗೂ ವಿಸ್ತರಿಸುವ ಆಯ್ಕೆಯನ್ನು ಹೊಂದಿರಲಿದೆ.

ಕ್ಯಾಮೆರಾ ವಿಶೇಷ ಏನು
ಮೊಟೊ ಸಂಸ್ಥೆಯ ಈ ಸ್ಮಾರ್ಟ್‌ಫೋನ್ ಪ್ರಾಥಮಿಕ ಕ್ಯಾಮೆರಾವು 48ಎಂಪಿ ಸಾಮರ್ಥ್ಯದಲ್ಲಿದ್ದು, (ಅಪರ್ಚರ್ f/1.7) ಕ್ವಾಡ್ ಪಿಕ್ಸಲ್ ಮಾದರಿಯಲ್ಲಿದೆ. ಹಾಗೆಯೇ ಸೆಕೆಂಡರಿ ಕ್ಯಾಮೆರಾವು f/2.2 ಅಪರ್ಚರ್ನೊಂದಿಗೆ 5ಎಂಪಿ ಸಾಮರ್ಥ್ಯದಲ್ಲಿದ್ದು, ಡೆಪ್ತ ಸೆನ್ಸಾರ್ ಹೊಂದಿದೆ. 8x ಡಿಜಿಟಲ್ ಝೂಮ್ ಆಯ್ಕೆ, ಯೂಬ್ಯೂಬ್ ಲೈವ್ ಮೋಡ್, ಸಿನಿಮಾಗ್ರಫ್ ಮೋಡ್ ಆಯ್ಕೆಗಳಿರಲಿವೆ.

ಸೆಲ್ಫಿ ಕ್ಯಾಮೆರಾ
ಮೊಟೊ ಒನ್ ವಿಷನ್‌ನಲ್ಲಿ ಸೆಲ್ಫಿಗಾಗಿ ಕ್ವಾಡ್ ಪಿಕ್ಸಲ್ ಕ್ಯಾಮೆರಾವನ್ನು ನೀಡಲಾಗಿದ್ದು, ಇದು 25ಎಂಪಿ ಸಾಮರ್ಥ್ಯವನ್ನು ಹೊಂದಿದೆ ಇದರ ಅಪಾರ್ಚರ್ f/2.0 ಆಗಿದೆ. 8x ಡಿಜಿಟಲ್ ಝೂಮ್ ಆಯ್ಕೆ, HDR, ಮ್ಯಾನುವಲ್ ಮೋಡ್, ಸಿನಿಮಾಗ್ರಫ್ ಮೋಡ್, ಮತ್ತು ಯೂಬ್ಯೂಬ್ ಲೈವ್ ಮೋಡ್ ಆಯ್ಕೆಗಳನ್ನು ಒಳಗೊಂಡಿದೆ.

ಬ್ಯಾಟರಿ ಬಲ ಎಷ್ಟು
ಮೊಟೊ ಒನ್ ವಿಷನ್ ಸ್ಮಾರ್ಟ್‌ಫೋನ್ 3,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಟರ್ಬೊ ಚಾರ್ಜಿಂಗ್ ಸೌಲಭ್ಯವನ್ನು ಒಳಗೊಂಡಿದೆ. ಇದರ ನೆರವಿನಿಂದ ಸ್ಮಾರ್ಟ್‌ಫೋನ್ ವೇಗವಾಗಿ ಚಾರ್ಜ್ ಪಡೆದುಕೊಳ್ಳಲಿದೆ. 3.5mm ಆಡಿಯೊ ಜಾಕ್, USB Type-C ಪೋರ್ಟ್, ರೇರ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಸೌಲಭ್ಯಗಳನ್ನು ಸಹ ಪಡೆದುಕೊಂಡಿದೆ.


Click it and Unblock the Notifications