'ಮೊಟೊರೊಲಾ ಒನ್‌ ಜೂಮ್' ಫೋನ್ ಬಿಡುಗಡೆ!.48ಎಂಪಿ ಕ್ಯಾಮೆರಾ ಸ್ಪೆಷಲ್!

|

ಇತ್ತೀಚಿಗೆ ಮೊಟೊರೊಲಾ ಕಂಪನಿಯು 'ಮೊಟೊರೊಲಾ ಒನ್' ಸರಣಿಯಲ್ಲಿ ಕೆಲವು ಬಜೆಟ್‌ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿದ್ದು, ಈಗ ಮತ್ತೆ ಅದೇ ಸರಣಿಯಲ್ಲಿ 'ಮೊಟೊರೊಲಾ ಒನ್ ಜೂಮ್' ಸ್ಮಾರ್ಟ್‌ಫೋನ್‌ ಅನ್ನು ಲಾಂಚ್ ಮಾಡಿದೆ. ಈ ಸ್ಮಾರ್ಟ್‌ಫೋನ್ ಮೂಲಕ ಮೊಟೊ ಮೊದಲ ಬಾರಿಗೆ 48ಎಂಪಿಯ ಕ್ವಾಡ್‌ ಕ್ಯಾಮೆರಾ ನೀಡುತ್ತಿದ್ದು, ಇದರೊಂದಿಗೆ ಹಲವು ಹೈ ಎಂಡ್ ಫೀಚರ್ಸ್‌ಗಳನ್ನು ಒಳಗೊಂಡಿದೆ.

ಮೊಟೊರೊಲಾ

ಹೌದು, ಮೊಟೊರೊಲಾ ಸಂಸ್ಥೆಯು ಬರ್ಲಿನ್‌ನಲ್ಲಿ ನಡೆಯುತ್ತಿರುವ IFA-2019 ಟೆಕ್ ಕಾರ್ಯಕ್ರಮದಲ್ಲಿ 'ಮೊಟೊರೊಲಾ ಒನ್ ಜೂಮ್' ಸ್ಮಾರ್ಟ್‌ಫೋನ್‌ ಅನ್ನು ಅನಾವರಣ ಮಾಡಿದೆ. ಈ ಸ್ಮಾರ್ಟ್‌ಫೋನ್ ಸ್ನ್ಯಾಪಡ್ರಾಗನ್ 675 ಪ್ರೊಸೆಸರ್‌ ಚಿಪಸೆಟ್‌ ಜೊತೆಗೆ 4000mAh ಬ್ಯಾಟರಿ ಶಕ್ತಿಯನ್ನು ಪಡೆದುಕೊಂಡಿದೆ. ಹಿಂಬದಿಯಲ್ಲಿ ನಾಲ್ಕು ಕ್ಯಾಮೆರಗಳನ್ನು ಹೊಂದಿರುವುದು ಗ್ರಾಹಕರ ಆಕರ್ಷಣೆಗೆ ಕಾರಣವಾಗಿದೆ. ಹಾಗಾದರೇ ಮೊಟೊರೊಲಾ ಒನ್ ಜೂಮ್ ಸ್ಮಾರ್ಟ್‌ಫೋನ್ ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಎಂಬುದನ್ನು ಮುಂದೆ ಓದಿರಿ.

ಓದಿರಿ : 'ನೋಕಿಯಾ 6.2' ಮತ್ತು 'ನೋಕಿಯಾ 7.2' ಲಾಂಚ್!..ಬೆಲೆ?ಓದಿರಿ : 'ನೋಕಿಯಾ 6.2' ಮತ್ತು 'ನೋಕಿಯಾ 7.2' ಲಾಂಚ್!..ಬೆಲೆ?

ಡಿಸ್‌ಪ್ಲೇ ರಚನೆ

ಈ ಸ್ಮಾರ್ಟ್‌ಫೋನ್ 1080×2340 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.4 ಇಂಚಿನ ಪೂರ್ಣ ಹೆಚ್‌ಡಿ OLED ಮ್ಯಾಕ್ಸ್ ವಿಶನ್ ಡಿಸ್‌ಪ್ಲೇ ಹೊಂದಿದೆ. ಡಿಸ್‌ಪ್ಲೇಯ ಅನುಪಾತವು 19:9 ಆಗಿದ್ದು, ಡಿಸ್‌ಪ್ಲೇಯ ಪ್ರತಿ ಇಂಚಿನ ಪಿಕ್ಸಲ್ ಅನುಪಾತವು 403 ppi ಆಗಿದೆ. ಡಿಸ್‌ಪ್ಲೇಯ ಸುತ್ತಳತೆಯು 158 x 75 x 8.8 mm ಆಗಿದ್ದು, ಅಲ್ಯುಮಿನಿಯಮ್ ಫ್ರೆಮ್ ರಚನೆಯನ್ನು ಪಡೆದಿದೆ.

ಪ್ರೊಸೆಸರ್‌ ಶಕ್ತಿ

ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 675 ಪ್ರೊಸೆಸರ್‌ ಸಾಮರ್ಥ್ಯವನ್ನು ಒಳಗೊಂಡಿದ್ದು, ಆಂಡ್ರಾಯ್ಡ್ 9 ಪೈ ಓಎಸ್‌ ಬೆಂಬಲವನ್ನು ಪಡೆದಿದೆ. ಇದರೊಂದಿಗೆ 4GB of RAM ಮತ್ತು 128GB ಸ್ಟೋರೆಜ್‌ನ ಒಂದೇ ವೇರಿಯಂಟ್‌ ಆಯ್ಕೆಯನ್ನು ಹೊಂದಿದ್ದು, ಎಸ್‌ಡಿ ಕಾರ್ಡ್‌ ಮೂಲಕ ಬಾಹ್ಯ ಮೆಮೊರಿಯನ್ನು 512GB ವರೆಗೂ ವಿಸ್ತರಿಸಿಕೊಳ್ಳುವ ಅವಕಾಶ ನೀಡಲಾಗಿದೆ.

ಕ್ವಾಡ್‌ ಕ್ಯಾಮೆರಾ

ಫೋನ್ ಹಿಂಬದಿಯಲ್ಲಿ ನಾಲ್ಕು ಕ್ಯಾಮೆರಾ ಸೆಟ್‌ಅಪ್ ನೀಡಲಾಗಿದ್ದು, ಮುಖ್ಯ ಕ್ಯಾಮೆರಾವು f/1.7 ಅಪರ್ಚರ್‌ನೊಂದಿಗೆ 48ಎಂಪಿ ಸೆನ್ಸಾರ್‌ನಲ್ಲಿದೆ. ದ್ವಿತೀಯ ಕ್ಯಾಮೆರಾವು 16ಎಂಪಿಯ ವೈಲ್ಡ್‌ ಆಂಗಲ್ ಸೆನ್ಸಾರ್‌ನಲ್ಲಿದ್ದು, ಮೂರನೇ ಕ್ಯಾಮೆರಾವು 8ಎಂಪಿಯ ಟೆಲಿಫೋಟೊ ಲೆನ್ಸ್‌ ಪಡೆದಿದೆ. ಹಾಗೂ ಕೊನೆಯ ಕ್ಯಾಮೆರಾವು 5ಎಂಪಿಯ ಡೆಪ್ತ್ ಸೆನ್ಸರಾ ಸಾಮರ್ಥ್ಯದಲ್ಲಿದೆ. ಇನ್ನು ಸೆಲ್ಫಿಗಾಗಿ 25ಎಂಪಿ ಸೆನ್ಸಾರ್‌ ಕ್ಯಾಮೆರಾ ನೀಡಲಾಗಿದೆ.

ಬ್ಯಾಟರಿ ಮತ್ತು ಸೌಲಭ್ಯಗಳು

ಮೊಟೊರೊಲಾ ಒನ್ ಜೂಮ್ ಸ್ಮಾರ್ಟ್‌ಫೋನ್ 4000mAh ಸಾಮರ್ಥ್ಯದ ಬ್ಯಾಟರಿ ಬಲವನ್ನು ಪಡೆದಿದ್ದು, 15w ಸಾಮರ್ಥ್ಯ ಚಾರ್ಜಿಂಗ್ ಸೌಲಭ್ಯವನ್ನು ಹೊಂದಿದೆ. ಇದರೊಂದಿಗೆ ಬ್ಲೂಟೂತ್ 5.೦, ಜಿಪಿಎಸ್‌, ಯುಎಸ್‌ಬಿ ಟೈಪ್‌-ಸಿ ಪೋರ್ಟ್‌, ವೈಫೈ 802.11 b/g/n/ac, ಫಿಂಗರ್‌ಪ್ರಿಂಟ್ ಸೆನ್ಸಾರ್‌ ಸೇರಿದಂತೆ ಇತ್ತೀಚಿನ ಅಗತ್ಯ ಸೌಲಭ್ಯಗಳನ್ನು ಸಹ ಒಳಗೊಂಡಿದೆ.

ಬೆಲೆ ಮತ್ತು ಲಭ್ಯತೆ

ಬರ್ಲಿನ್‌ನಲ್ಲಿ ನಡೆಯುತ್ತಿರುವ IFA-2019 ಟೆಕ್ ಕಾರ್ಯಕ್ರಮದಲ್ಲಿ ಲಾಂಚ್ ಆಗಿರುವ 'ಮೊಟೊರೊಲಾ ಒನ್ ಜೂಮ್' ಸ್ಮಾರ್ಟ್‌ಫೋನ್ ಬೆಲೆಯು EUR 429 ಆಗಿದೆ. (ಭಾರತದಲ್ಲಿ ಅಂದಾಜು. 34,500ರೂ). ಬ್ರಶಡ್‌ ಬ್ರೌಂಜ್‌, ಕಾಸ್ಮಿಕ್ ಪರ್ಪಲ್ ಮತ್ತು ಎಲೆಕ್ಟ್ರಿಕ್ ಗ್ರೇ ಬಣ್ಣಗಳ ಆಯ್ಕೆಯನ್ನು ಪಡೆದಿದ್ದು, ಭಾರತೀಯ ಮಾರುಕಟ್ಟೆಗೆ ಯಾವಾಗ ಎಂಟ್ರಿ ಕೊಡಲಿದೆ ಎನ್ನುವ ಖಚಿತ ಮಾಹಿತಿ ಇಲ್ಲ.

ಓದಿರಿ : ನಾಲ್ಕು ಕ್ಯಾಮೆರಾವುಳ್ಳ 'ಒಪ್ಪೊ ರೆನೋ 2' ಸೇಲ್ ಆರಂಭ!..ಭಾರೀ ಆಫರ್!ಓದಿರಿ : ನಾಲ್ಕು ಕ್ಯಾಮೆರಾವುಳ್ಳ 'ಒಪ್ಪೊ ರೆನೋ 2' ಸೇಲ್ ಆರಂಭ!..ಭಾರೀ ಆಫರ್!

Best Mobiles in India

English summary
Motorola One Zoom smartphone with quad cameras and Snapdragon 675 chipset. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X