Motorola: ಹೊಸ ಕಲರ್‌ನಲ್ಲಿ ಲಾಂಚ್ ಆಗಿದ್ದ ಮೊಟೊರೊಲಾ ರೇಜರ್ 40 ಅಲ್ಟ್ರಾ ಇಂದಿನಿಂದ ಲಭ್ಯ! ಆಫರ್ ಕೂಡ ಇದೆ..
ಮೊಟೊರೊಲಾ ಫೋನ್‌ಗಳು (Motorola phone) ಭಿನ್ನ ಫೀಚರ್ಸ್ ಆಯ್ಕೆಯೊಂದಿಗೆ ಬಳಕೆದಾರರಿಗೆ ವಿವಿಧ ರೀತಿಯಲ್ಲಿ ಪ್ರಯೋಜನ ನೀಡುವ ಕೆಲಸ ಮಾಡುತ್ತವೆ. ಅದರಲ್ಲೂ ಕಡಿಮೆ ಬೆಲೆಗೆ ಹೆಚ್ಚಿನ ಸೌಲಭ್ಯ ಫೋನ್‌ಗಳಾಗಿ ಇವು ಗುರುತಿಸಿಕೊಂಡಿದೆ. ಈ ನಡುವೆ ಹೊಸ ಬಣ್ಣದಲ್ಲಿ ಮೊಟೊರೊಲಾ ರೇಜರ್ 40 ಅಲ್ಟ್ರಾ ಫೋಲ್ಡಬಲ್ ಸ್ಮಾರ್ಟ್‌ಫೋನ್ (Motorola Razr 40 Ultra foldable smartphone) ಇಂದಿನಿಂದ ಲಭ್ಯ ಇದೆ.
ಹೌದು, ಮೊಟೊರೊಲಾದ ವಿಭಿನ್ನ ಸ್ಮಾರ್ಟ್‌ಫೋನ್‌ಗಳ ಆಯ್ಕೆಯಲ್ಲಿ ಮೊಟೊರೊಲಾ ರೇಜರ್ 40 ಅಲ್ಟ್ರಾ ಫೋಲ್ಡಬಲ್ ಸ್ಮಾರ್ಟ್‌ಫೋನ್ ಭಾರೀ ಸದ್ದು ಮಾಡುತ್ತಿವೆ. ಅದರಂತೆ ರೇಜರ್ 40 ಅಲ್ಟ್ರಾ ಗಾಗಿ ಮತ್ತೊಂದು ಬಣ್ಣದ ಆಯ್ಕೆಯನ್ನು ನೀಡಿದೆ. ಈ ಫೋನ್ ಇದೀಗ ಅಮೆಜಾನ್‌ನಲ್ಲಿ ಆಫರ್ ಬೆಲೆಗೆ ಲಭ್ಯ ಇ್ದು, ಈ ಫೋನ್‌ನ ಬೆಲೆ ಎಷ್ಟು?, ಇದರ ಫೀಚರ್ಸ್ ಏನು ಎತ್ತ ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಮೊಟೊರೊಲಾ ರೇಜರ್ 40 ಅಲ್ಟ್ರಾ: ಮೊಟೊರೊಲಾ ಕಳೆದ ಜುಲೈನಲ್ಲಿ ಭಾರತದಲ್ಲಿ ರೇಜರ್ 40 ಸರಣಿಯನ್ನು (Razor 40 series) ಲಾಂಚ್ ಮಾಡಿತ್ತು. ಈ ಫೋನ್ ಆಗ ವಿವಾ ಮೆಜೆಂಟಾ ಮತ್ತು ಇನ್ಫೈನೈಟ್ ಬ್ಲ್ಯಾಕ್, ಗ್ಲೇಸಿಯರ್ ಬ್ಲೂ ನಲ್ಲಿ ಕಾಣಿಸಿಕೊಂಡಿತ್ತು. ಆದರೆ ಈಗ ಪ್ಯಾಂಟೋನ್ ಕಲರ್ ಇನ್‌ಸ್ಟಿಟ್ಯೂಟ್ ಪ್ರಕಟಿಸಿದ ಪೀಚ್ ಫಝ್ ಬಣ್ಣದಲ್ಲಿ ಲಭ್ಯ ಇದೆ.
ಮೊಟೊರೊಲಾ ರೇಜರ್ 40 ಅಲ್ಟ್ರಾ ಬೆಲೆ, ಆಫರ್ ವಿವರ: ಅಮೆಜಾನ್‌ನಲ್ಲಿ ಈ ಫೋನ್ ಲಭ್ಯ ಇದ್ದು, ಹೊಸ ಶೇಡ್‌ನ ಫೋನ್‌ನ ಬೆಲೆ 79,999 ರೂ. ಗಳಾಗಿದೆ. ಈ ಫೋನ್ 8GB + 256GB ಇಂಟರ್ ಸ್ಟೋರೇಜ್‌ನ ಒಂದೇ ವೇರಿಯಂಟ್‌ನಲ್ಲಿ ಲಭ್ಯ ಇದೆ. ಇದನ್ನು ಅಮೆಜಾನ್ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳ ಮೂಲಕ ಖರೀದಿ ಮಾಡಿದ್ರೆ 7,000 ತ್ವರಿತ ರಿಯಾಯಿತಿ ಸಹ ಸಿಗಲಿದೆ. ಅಲ್ಲದೆ ಆಯ್ದ ಜೆ ಆಂಡ್ ಕೆ ಬ್ಯಾಂಕ್ ಕಾರ್ಡ್‌ಗಳನ್ನು ಬಳಕೆ ಮಾಡಿಕೊಂಡು ಖರೀದಿ ಮಾಡಿದ್ರೆ 1,000 ರೂ.ಗಳ ವರೆಗೆ ಆಫರ್ ಪಡೆದುಕೊಳ್ಳಬಹುದಾಗಿದೆ. ಇದರೊಂದಿಗೆ ನೋ ಕಾಸ್ಟ್ ಇಎಮ್‌ಐ ಆಯ್ಕೆ ಸಹ ಲಭ್ಯ ಇದೆ.

ಮೊಟೊರೊಲಾ ರೇಜರ್ 40 ಅಲ್ಟ್ರಾ ಫೀಚರ್ಸ್: ಈ ಸ್ಮಾರ್ಟ್‌ಫೋನ್ 6.9 ಇಂಚಿನ FHD+ ಪೋಲ್ಡ್ ಡಿಸ್‌ಪ್ಲೇ ಮತ್ತು 3.6 ಇಂಚಿನ pOLED ಕವರ್ ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, 4nm ಸ್ನಾಪ್‌ಡ್ರಾಗನ್ 8+ ಜನ್ 1 ಪ್ರೊಸೆಸರ್ (Snapdragon 8+ Gen 1 processor) ಮೂಲಕ ಕಾರ್ಯನಿರ್ವಹಿಸಲಿದೆ. ಇದರೊಂದಿಗೆ 8GB RAM ಮತ್ತು 256GB ಇಂಟರ್ ಸ್ಟೋರೇಜ್ ಆಯ್ಕೆ ಇದ್ದು, ಈ ಫೋನ್ ಆಂಡ್ರಾಯ್ಡ್ 13 ಆಧಾರಿತ MyUX ಅನ್ನು ರನ್ ಮಾಡಲಿದೆ.
ಅಲ್ಲದೆ ಈ ವಿಶೇಷ ಫೋನ್ IP52 ರೇಟಿಂಗ್ ಆಯ್ಕೆ ಪಡೆದಿದ್ದು, 30W ವೈರ್ಡ್ ಮತ್ತು 5W ವೈರ್‌ಲೆಸ್ ಚಾರ್ಜಿಂಗ್‌ನೊಂದಿಗೆ 3,800mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಇದರೊಂದಿಗೆ 12 ಮೆಗಾಪಿಕ್ಸೆಲ್ OIS ಮತ್ತು 13 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಸೆನ್ಸರ್ ಆಯ್ಕೆ ಪಡೆದಿದ್ದು, ಮುಂಭಾಗದಲ್ಲಿ 32 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಕಾಣಬಹುದಾಗಿದೆ. ಉಳಿದಂತೆ ಈ ಫೋನ್ ವೈ-ಫೈ 6, ಬ್ಲೂಟೂತ್ ಆವೃತ್ತಿ 5.3, ಎನ್‌ಎಫ್‌ಸಿ ಡೇಟಾ ವರ್ಗಾವಣೆಗಾಗಿ ಟೈಪ್-ಸಿ ಯುಎಸ್‌ಬಿ 2.0 ಪೋರ್ಟ್ ಅನ್ನು ಹೊಂದಿದೆ.

ಈ ಫೋಲ್ಡಬಲ್ ಫೋನ್‌ನೊಂದಿಗೆ ಮೊಟೊರೊಲಾ ಎಡ್ಜ್ 40 ನಿಯೋ ಸಹ ಇದೇ ಕಲರ್‌ನಲ್ಲಿ ಲಭ್ಯ ಇದೆ. ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7030 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಆಂಡ್ರಾಯ್ಡ್ 13 ಆವೃತ್ತಿಯಲ್ಲಿ ಕಾರ್ಯನಿರ್ವಹಿಸುತ್ತವೆ. ಇದರೊಂದಿಗೆ ಈ ಫೋನ್ 8GB RAM ಜೊತೆಗೆ 128GB ಸ್ಟೋರೇಜ್‌ನಲ್ಲಿ ಲಭ್ಯ ಇದ್ದು, 22,999 ರೂ.ಗಳಿಗೆ ಇದನ್ನು ಖರೀದಿ ಮಾಡಬಹುದಾಗಿದೆ.


Click it and Unblock the Notifications








