Home
ಸುದ್ದಿಜಾಲ

ಮೊಟೊ ಪ್ರಿಯರಿಗೆ ಗುಡ್‌ ನ್ಯೂಸ್: ಈ ಫೋಲ್ಡಬಲ್‌ ಫೋನ್‌ ಕೆಲವೇ ದಿನಗಳಲ್ಲಿ ಲಭ್ಯ!

ಮೊಟೊರೊಲಾ ಸಂಸ್ಥೆಯು ಭಾರತದಲ್ಲಿ ವಿಶಿಷ್ಟ 5G ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್‌ ಮಾಡುತ್ತಿದೆ. ಅದರಲ್ಲೂ ಈ ಸಂಸ್ಥೆಯ ಫೋನ್‌ಗಳು ಇತರೆ ಫೋನ್‌ಗಳಿಗಿಂತ ವಿನ್ಯಾಸದಲ್ಲಿ ಹಾಗೂ ಕಾರ್ಯಕ್ಷಮತೆಯಲ್ಲಿ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದ್ದು, ಈ ನಡುವೆ ಮೊಟೊರೊಲಾ ಕಂಪನಿ ಪರಿಚಯಿಸುತ್ತಿರುವ ಈ ಫೋನ್‌ ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡುತ್ತಿದೆ.

ಹೌದು, ಮೊಟೊರೊಲಾ ಭಾರತದಲ್ಲಿ ಮೊಟೊರೊಲಾ ರೇಜರ್‌ 40 ಅಲ್ಟ್ರಾ ಫೋಲ್ಡಬಲ್(Motorola Razr 40 Ultra Foldable ) ಫೋನ್ ಅನ್ನು ಸೇಲ್‌ ಮಾಡಲು ಸಿದ್ಧತೆ ನಡೆಸಿದ್ದು, ಇದನ್ನು ನೀವು ಅಮೆಜಾನ್‌ನಲ್ಲಿ ಖರೀದಿ ಮಾಡಬಹುದಾಗಿದೆ. ಹಾಗಿದ್ರೆ, ಈ ವಿಶೇಷ ಫೋಲ್ಡಬಲ್‌ ಫೋನ್‌ನ ಪ್ರಮುಖ ಫೀಚರ್ಸ್‌ ಹಾಗೂ ಇದರ ಬೆಲೆ ವಿವರವನ್ನು ಗಮನಿಸೋಣ ಬನ್ನಿ.

ಮೊಟೊ ಪ್ರಿಯರಿಗೆ ಗುಡ್‌ ನ್ಯೂಸ್: ಈ ಫೋಲ್ಡಬಲ್‌ ಫೋನ್‌ ಕೆಲವೇ ದಿನಗಳಲ್ಲಿ ಲಭ್ಯ!

ಆಶ್ಚರ್ಯಚಕಿತಗೊಳಿಸುವ ಫೋನ್‌: ಈ ಮೊಟೊರೊಲಾ ರೇಜರ್‌ 40 ಅಲ್ಟ್ರಾ ಫೋಲ್ಡಬಲ್ ಸ್ಮಾರ್ಟ್‌ಫೋನ್‌ ಅಮೆಜಾನ್‌ ಸೈಟ್‌ನಲ್ಲಿ ಕಾಣಿಸಿಕೊಂಡಿದ್ದು, ಈ ಮೂಲಕ ಖರೀದಿ ಮಾಡುವವರಿಗೆ ಸಂತಸದ ಸುದ್ದಿ ನೀಡಿದೆ. ಈ ಫೋನ್ ಅನ್ನು ಈಗಾಗಲೇ ಚೀನಾದಲ್ಲಿ ಬಿಡುಗಡೆ ಮಾಡಲಾಗಿದ್ದು, ಕೆಲವೇ ದಿನಗಳಲ್ಲಿ ಭಾರತದಲ್ಲೂ ಲಾಂಚ್‌ ಆಗಲಿದೆ. ಈ ಮೂಲಕ ಭಾರತದ ಮೊಟೊ ಪ್ರಿಯರಿಗೆ ಹೆಚ್ಚಿನ ನಿರೀಕ್ಷೆ ಮೂಡಿಸಿದೆ.

ಮೊಟೊರೊಲಾ ರೇಜರ್‌ 40 ಅಲ್ಟ್ರಾ ಫೋಲ್ಡಬಲ್ ಡಿಸ್‌ಪ್ಲೇ ವಿವರ: ಈ ಫೋನ್ 6.9 ಇಂಚಿನ ಫುಲ್‌ ಹೆಚ್‌ಡಿ ಡಿಸ್‌ಪ್ಲೇ ಹೊಂದಿದ್ದು, ಇದರೊಂದಿಗೆ 3.6 ಇಂಚಿನ ಬಾಹ್ಯ ಡಿಸ್‌ಪ್ಲೇ ಆಯ್ಕೆ ಇದೆ. ಇದರೊಂದಿಗೆ 144 Hz ರಿಫ್ರೆಶ್ ರೇಟ್ ಇದ್ದು, ಫೋನ್ ಗೋರಿಲ್ಲಾ ಗ್ಲಾಸ್ ವಿಕ್ಟಸ್ ರಕ್ಷಣೆ ಪಡೆದುಕೊಂಡಿದೆ.

ಮೊಟೊರೊಲಾ ರೇಜರ್‌ 40 ಅಲ್ಟ್ರಾ ಫೋಲ್ಡಬಲ್‌ ಫೋನ್‌ನ ಪ್ರೊಸೆಸರ್‌ ವಿವರ: ಈ ಫೋನ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 8 ಪ್ಲಸ್‌ ಜನ್‌ 1 ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದ್ದು, ಈ ಪ್ರೊಸೆಸರ್ ಸುಧಾರಿತ ಕಾರ್ಯಕ್ಷಮತೆಯನ್ನು ನೀಡುತ್ತದೆ. ಇದರೊಂದಿಗೆ ಮೊಟೊ ಮೈ ಎಕ್ಸ್‌ ಆಂಡ್ರಾಯ್ಡ್‌ 13 ನಲ್ಲಿ ರನ್‌ ಆಗಲಿದೆ. ಜೊತೆಗೆ ಈ ಫೋನ್ 8GB/12GB RAM ಮತ್ತು 256GB/512GB ಇಂಟರ್‌ ಸ್ಟೋರೇಜ್ ಆಯ್ಕೆ ಪಡೆದುಕೊಂಡಿದೆ.

ಮೊಟೊರೊಲಾ ರೇಜರ್‌ 40 ಅಲ್ಟ್ರಾ ಫೋಲ್ಡಬಲ್‌ ಫೋನ್‌ ಕ್ಯಾಮೆರಾ ರಚನೆ: ಈ ಫೋನ್‌ ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ ಇದು 12MP ಪ್ರಾಥಮಿಕ ಕ್ಯಾಮೆರಾ ಹಾಗೂ13MP ಅಲ್ಟ್ರಾ ವೈಡ್ ಕ್ಯಾಮೆರಾ ಹೊಂದಿದ್ದು, ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 32MP ಕ್ಯಾಮೆರಾ ಆಯ್ಕೆ ನೀಡಲಾಗಿದೆ. ಈ ಮೂಲಕ ಬಳಕೆದಾರರು ಈ ಫೋನ್‌ ಮೂಲಕ ಉತ್ತಮವಾದ ಫೋಟೋಗಳನ್ನು ತೆಗೆಯಬಹುದು.

ಮೊಟೊ ಪ್ರಿಯರಿಗೆ ಗುಡ್‌ ನ್ಯೂಸ್: ಈ ಫೋಲ್ಡಬಲ್‌ ಫೋನ್‌ ಕೆಲವೇ ದಿನಗಳಲ್ಲಿ ಲಭ್ಯ!
ಮೊಟೊ ಪ್ರಿಯರಿಗೆ ಗುಡ್‌ ನ್ಯೂಸ್: ಈ ಫೋಲ್ಡಬಲ್‌ ಫೋನ್‌ ಕೆಲವೇ ದಿನಗಳಲ್ಲಿ ಲಭ್ಯ!

ಮೊಟೊರೊಲಾ ರೇಜರ್‌ 40 ಅಲ್ಟ್ರಾ ಫೋಲ್ಡಬಲ್‌ ಫೋನ್‌ ಬ್ಯಾಟರಿ ಸಾಮರ್ಥ್ಯ: ಈ ಎಲ್ಲಾ ಫೀಚರ್ಸ್‌ನೊಂದಿಗೆ ಈ ಫೋನ್ 3800 mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, ಈ ಮೂಲಕ ದೀರ್ಘ ಬ್ಯಾಟರಿ ಬ್ಯಾಕಪ್ ನೀಡಲಿದೆ. ಜೊತೆಗೆ 33 W ಟರ್ಬೋ ಪವರ್‌ ಫಾಸ್ಟ್ ಚಾರ್ಜಿಂಗ್ ಮತ್ತು 5 W ವಾಯರ್‌ಲೆಸ್‌ ಚಾರ್ಜಿಂಗ್‌ ಸೌಲಭ್ಯವನ್ನು ಈ ಫೋನ್ ಪಡೆದುಕೊಂಡಿದೆ.

ಮೊಟೊರೊಲಾ ರೇಜರ್‌ 40 ಅಲ್ಟ್ರಾ ಫೋಲ್ಡಬಲ್‌ ಫೋನ್‌ ಡಾಲ್ಬಿ ಅಟ್ಮಾಸ್ ಬೆಂಬಲದೊಂದಿಗೆ ಸ್ಟೀರಿಯೋ ಸ್ಪೀಕರ್‌ ಹೊಂದಿದ್ದು, ಈ ಮೂಲಕ ಉತ್ತಮ ಆಡಿಯೋ ಅನುಭವ ಪಡೆದುಕೊಳ್ಳಬಹುದು. ಜೊತೆಗೆ ಈ ಫೋಲ್ಡಬಲ್ ಫೋನ್ 5G, ಡ್ಯುಯಲ್ 4G, ವೈ ಫೈ 6E, ಬ್ಲೂಟೂತ್‌ 5.3, ಯುಎಸ್‌ಬಿ ಟೈಪ್‌ ಸಿ ಪೋರ್ಟ್‌ , ಎನ್‌ಎಫ್‌ಸಿ ಸೇರಿದಂತೆ ಹಲವು ಕನೆಕ್ಟಿವಿಟಿ ಆಯ್ಕೆ ಹೊಂದಿದೆ.

ಮೊಟೊರೊಲಾ ರೇಜರ್‌ 40 ಅಲ್ಟ್ರಾ ಫೋಲ್ಡಬಲ್‌ ಫೋನ್‌ ಬೆಲೆ ಹಾಗೂ ಲಭ್ಯತೆ: ಈ ವಿಶೇಷವಾದ ಫೋನ್ ಭಾರತದಲ್ಲಿ 80,000 ದೊಳಗೆ ಲಭ್ಯ ಇರಲಿದೆ ಎನ್ನಲಾಗಿದ್ದು, ಈ ಬೆಲೆಗೆ ತಕ್ಕ ಯೋಗ್ಯ ಫೀಚರ್ಸ್‌ ಅನ್ನು ಇದು ಹೊಂದಿದೆ ಎಂದು ಹೇಳಿದರೆ ತಪ್ಪಾಗಲಾರದು. ಅದರಂತೆ ಈ ಫೋನ್‌ ಖರೀದಿ ಮಾಡಬೇಕು ಎನ್ನುವವರು ಪ್ರಮುಖ ಇ ಕಾಮರ್ಸ್‌ ಸೈಟ್‌ ಆಗಿರುವ ಅಮೆಜಾನ್‌ನಲ್ಲಿ ಖರೀದಿ ಮಾಡಬಹುದಾಗಿದೆ. ಇದು ಎಂದಿನಿಂದ ಲಭ್ಯ ಎಂದು ಮಾಹಿತಿ ನೀಡಿಲ್ಲ.

Best Mobiles in India

English summary
Motorola is all set to launch the Motorola Razr 40 Ultra foldable phone in India, which you can buy on Amazon.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+