Motorola: ಹೊಸ ಬಣ್ಣದ ಆಯ್ಕೆಯಲ್ಲಿ ಈ ಮೊಟೊರೊಲಾ ಸ್ಮಾರ್ಟ್‌ಫೋನ್‌ಗಳು: ಬೆಲೆ ಬದಲಾಯ್ತಾ? ಯಾವಾಗ ಲಭ್ಯ?
ಮೊಟೊರೊಲಾ (Motorola) ಎಂದಾಕ್ಷಣ ಗ್ರಾಹಕರ ಮನಸ್ಸಿನಲ್ಲಿ ಹೊಳೆಯುವುದು ಏನೆಂದರೆ ಕಡಿಮೆ ದರದಲ್ಲಿ ಅತ್ಯುತ್ತಮ ಫೀಚರ್ಸ್ ನೀಡುವ ಬ್ರ್ಯಾಂಡ್ ಎಂದು. ಅದರಂತೆ ಈಗಾಗಲೇ ಸಾಕಷ್ಟು ಆಕರ್ಷಕ ಹಾಗೂ ಭಿನ್ನ ಫೀಚರ್ಸ್ ಆಯ್ಕೆಯ ಫೋನ್‌ಗಳನ್ನು ಅನಾವರಣ ಮಾಡಿದ್ದು, ಇದರೊಂದಿಗೆ ಈಗ ಮತ್ತೆ ಹೊಸ ಬಣ್ಣದ ಆಯ್ಕೆಯಲ್ಲಿ ಈ ಫೋನ್‌ಗಳನ್ನು ಘೋಷಣೆ ಮಾಡಿದೆ.
ಹೌದು, ಮೊಟೊರೊಲಾ ಈಗಾಗಲೇ ಮೊಟೊರೊಲಾ ರೇಜರ್ 40 ಅಲ್ಟ್ರಾ ಮತ್ತು ಮೊಟೊ ಎಡ್ಜ್ 40 ನಿಯೋ ಸ್ಮಾರ್ಟ್‌ಫೋನ್‌ಗಳನ್ನು (Motorola Razr 40 Ultra, Moto Edge 40 Neo smartphones) ಭಾರತದಲ್ಲಿ ಲಾಂಚ್ ಮಾಡುವ ಮೂಲಕ ಸುಂಟರಗಾಳಿಯನ್ನೇ ಎಬ್ಬಿಸಿತ್ತು. ಈ ಫೋನ್‌ಗಳಿಗೆ ಸಾಕಷ್ಟು ಗ್ರಾಹಕರು ಮಾರುಹೋಗಿದ್ದು, ಈಗ ಮಗದೊಮ್ಮೆ ವಿಶೇಷ ರೀತಿಯಲ್ಲಿ ಮಾರುಕಟ್ಟೆಯಲ್ಲಿ ಅಲೆ ಎಬ್ಬಿಸಲು ಮೊಟೊರೊಲಾ ಮುಂದಾಗಿದೆ. ಹಾಗಿದ್ರೆ, ಈ ಹೊಸ ಕಲರ್‌ನ ಫೋನ್‌ಗಳು ಯಾವಾಗ ಲಭ್ಯ?, ಬೆಲೆಯಲ್ಲಿ ಬದಲಾವಣೆ ಆಗಿದೆಯಾ ಎಂಬ ಮಾಹಿತಿ ಇಲ್ಲಿದೆ ನೋಡಿ.

ಮೊಟೊರೊಲಾದ ಈ ಫೋನ್‌ಗಳು ಹೊಸ ಕಲರ್‌ನಲ್ಲಿ: ಮೊಟೊರೊಲಾ ರೇಜರ್ 40 ಅಲ್ಟ್ರಾ ಮತ್ತು ಮೊಟೊ ಎಡ್ಜ್ 40 ನಿಯೋ ಫೋನ್‌ಗಳನ್ನು ಈಗ ಹೊಸ ಬಣ್ಣಗಳಲ್ಲಿ ಪರಿಚಯಿಸಲಾಗಿದೆ. ಅಂದರೆ ಪೀಚ್ ಫಜ್ (Peach Fuzz Colour) ಬಣ್ಣದ ಆಯ್ಕೆಯಲ್ಲಿ ಲಭ್ಯವಿರುತ್ತವೆ ಎಂದು ಕಂಪನಿ ಮಾಹಿತಿ ನೀಡಿದೆ. ಇದು ಪ್ಯಾಂಟೋನ್‌ನ 2024 ರ ವರ್ಷದ ಬಣ್ಣವಾಗಿದೆ. ಈ ಹೊಸ ಬಣ್ಣ ವಿಶಿಷ್ಟ ಅನುಭವ ನೀಡಲಿದ್ದು, ಈ ಹೊಸ ಬಣ್ಣದ ಫೋನ್‌ಗಳು ಡಿಸೆಂಬರ್ 12 ರಿಂದ ಮಾರಾಟಕ್ಕೆ ಲಭ್ಯ ಆಗಲಿದೆ ಎಂದು ತಿಳಿದುಬಂದಿದೆ.
ಇನ್ನು ಈ ಫೋನ್‌ಗಳು ಹೊಸ ಬಣ್ಣಗಳಲ್ಲಿ ಲಾಂಚ್ ಆಗಿವೆಯಾದರೂ ಸಹ ಬೆಲೆಯಲ್ಲಿ ಯಾವ ವ್ಯತ್ಯಾಸವೂ ಇಲ್ಲ. ಅಂದರೆ ಹಳೆಯ ಬೆಲೆಯಲ್ಲೇ ಇವುಗಳನ್ನು ಖರೀದಿ ಮಾಡಬಹುದು. ಮೊಟೊರೊಲಾ ರೇಜರ್ 40 ಅಲ್ಟ್ರಾ ಫೋನ್‌ನ ಬೆಲೆ 89,999ರೂ.ಗಳಿದ್ದರೆ ಮೊಟೊ ಎಡ್ಜ್ 40 ನಿಯೋ ಬೆಲೆ 23,999ರೂ.ಗಳಾಗಿದೆ. ಹಾಗಿದ್ರೆ, ಬನ್ನಿ ಮೊಟೊರೊಲಾ ಎಡ್ಜ್ 40 ನಿಯೋ ಪ್ರಮುಖ ಫೀಚರ್ಸ್ ಏನು ಅನ್ನೋದನ್ನು ನೋಡೋಣ.

ಮೊಟೊರೊಲಾ ಎಡ್ಜ್ 40 ನಿಯೋ ಫೀಚರ್ಸ್: ಈ ಸ್ಮಾರ್ಟ್‌ಫೋನ್ 6.55 ಇಂಚಿನ ಫುಲ್ ಹೆಚ್‌ಡಿ + ಪೋಲೆಡ್ ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, 2400×1080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 144 Hz ರಿಫ್ರೆಶ್ ರೇಟ್, 1300 ನಿಟ್ಸ್ ಬ್ರೈಟ್‌ನೆಸ್ ಆಯ್ಕೆ ಪಡೆದಿದೆ. ಇದರೊಂದಿಗೆ 240 Hz ಟಚ್ ಸ್ಯಾಂಪ್ಲಿಂಗ್ ರೇಟ್ ಮೂಲಕ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಲಿದೆ.
ಇದರೊಂದಿಗೆ ಈ ಫೋನ್ ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 7030 6nm ಪ್ರೊಸೆಸೆರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು. ಮಾಲಿ G610 MC3 ಜಿಪಿಯು ಬಲ ಪಡೆದಿದೆ. ಇದರೊಂದಿಗೆ ಆಂಡ್ರಾಯ್ಡ್ 13 ಓಎಸ್ ಅನ್ನು ರನ್ ಮಾಡಲಿದೆ. ಜೊತೆಗೆ ಇದು ಅಪ್‌ಡೇಟ್ ಮತ್ತು ಭದ್ರತಾ ನವೀಕರಣಗಳನ್ನು ಪಡೆದಿದೆ. ಹಾಗೆಯೇ ಈ ಫೋನ್ 50 MP ಮುಖ್ಯ ಕ್ಯಾಮೆರಾ, 13 MP ಅಲ್ಟ್ರಾ ವೈಡ್ ಆಟೋಫೋಕಸ್ ಕ್ಯಾಮೆರಾದ ಜೊತೆಗೆ 32 MP ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದಿದೆ.

ಮೊಟೊರೊಲಾ ಎಡ್ಜ್ 40 ನಿಯೋ ಸ್ಮಾರ್ಟ್‌ಫೋನ್ 68W ಟರ್ಬೋ ಪವರ್ ಚಾರ್ಜಿಂಗ್ ಬೆಂಬಲದೊಂದಿಗೆ 5000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, ವೈ-ಫೈ 6E, ಬ್ಲೂಟೂತ್ ಆವೃತ್ತಿ 5.2, ಜಿಪಿಎಸ್, ಎನ್‌ಎಫ್‌ಸಿ ಕನೆಕ್ಟಿವಿಟಿ ಬೆಂಬಲ ಪಡೆದಿದೆ. ಇದರೊಂದಿಗೆ ಸ್ಟಿರಿಯೊ ಸ್ಪೀಕರ್‌ಗಳು, ಡಾಲ್ಬಿ ಅಟ್ಮಾಸ್, IP68 ನೀರು ಮತ್ತು ಧೂಳು ನಿರೋಧಕ ಸೇರಿದಂತೆ ಅತ್ಯುತ್ತಮ ಫೀಚರ್ಸ್ ಅನ್ನು ಈ ಫೋನ್ ಹೊಂದಿದೆ.


Click it and Unblock the Notifications








