Home
ಸುದ್ದಿಜಾಲ

Motorola: ಮೊಟೊರೊಲಾ ರೇಜರ್‌ 50 5G, ರೇಜರ್‌ 50 ಅಲ್ಟ್ರಾ 5G ವಿನ್ಯಾಸ, ಫೀಚರ್ಸ್‌ ಲೀಕ್‌!

ಮೊಟೊರೊಲಾ (Motorola) ವಿಶೇಷ ಹಾಗೂ ಹೊಸ ಹೊಸ ಫೀಚರ್ಸ್‌ಗೆ ಹೆಸರುವಾಸಿಯಾದ ಕಂಪೆನಿಯಾಗಿದೆ. ಈಗಾಗಲೇ ಭಿನ್ನ ಫೀಚರ್ಸ್‌ ಆಯ್ಕೆ ಇರುವ ಡಿವೈಸ್‌ಗಳನ್ನು ಅನಾವರಣ ಮಾಡಿದ್ದು, ಈ ನಡುವೆ ಮುಂಬರುವ ಮೊಟೊರೊಲಾ ರೇಜರ್‌ 50 5G, ರೇಜರ್‌ 50 ಅಲ್ಟ್ರಾ 5G (Motorola Razr 50 5G, Razr 50 Ultra 5G) ವಿನ್ಯಾಸ ಹಾಗೂ ಫೀಚರ್ಸ್‌ ಮಾಹಿತಿ ಲೀಕ್‌ ಆಗಿದೆ.

ಹೌದು, ಮೊಟೊರೊಲಾ ರೇಜರ್‌ 50 5G, ರೇಜರ್‌ 50 ಅಲ್ಟ್ರಾ 5G ಸ್ಮಾರ್ಟ್‌ಫೋನ್‌ಗಳು ಬರುವ ದಿನಗಳಲ್ಲಿ ಮಾರುಕಟ್ಟೆಯಲ್ಲಿ ದೊಡ್ಡ ಅಲೆಯನ್ನೇ ಉಂಟು ಮಾಡಲಿವೆ. ಮೊಟೊರೊಲಾ ರೇಜರ್‌ 50 5G ಮೀಡಿಯಾ ಟೆಕ್ ಚಿಪ್ ನಲ್ಲಿ ಕೆಲಸ ಮಾಡಲಿದೆ ಎನ್ನಲಾಗಿದ್ದು, ರೇಜರ್‌ 50 ಅಲ್ಟ್ರಾ 5G ಸ್ನಾಪ್‌ಡ್ರಾಗನ್ ಫ್ಲ್ಯಾಗ್‌ಶಿಪ್ ಚಿಪ್ ನಲ್ಲಿ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ. ಹಾಗಿದ್ರೆ, ಈ ಎರಡೂ ಫೋನ್‌ಗಳು ಏನೆಲ್ಲಾ ನಿರೀಕ್ಷಿತ ಫೀಚರ್ಸ್‌ ಹೊಂದಿರಲಿವೆ ಅನ್ನೋದನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಮೊಟೊರೊಲಾ ರೇಜರ್‌ 50 5G, ರೇಜರ್‌ 50 ಅಲ್ಟ್ರಾ 5G ವಿನ್ಯಾಸ, ಫೀಚರ್ಸ್‌ ಲೀಕ್‌!

ಮೊಟೊರೊಲಾ ರೇಜರ್‌ 50 ಸರಣಿ: ಮೊಟೊರೊಲಾ ರೇಜರ್‌ 50 ಸರಣಿ ಶೀಘ್ರದಲ್ಲೇ ಬಿಡುಗಡೆಯಾಗುವ ನಿರೀಕ್ಷೆಯಿದ್ದು, 91ಮೊಬೈಲ್ಸ್‌ ಎರಡೂ ಡಿವೈಸ್‌ಗಳ ರೆಂಡರ್‌ಗಳನ್ನು ಮಾಹಿತಿ ನೀಡಿದೆ. ಲೀಕರ್ ಸುಧಾಂಶು ಅಂಬೋರ್ ಅವರು ಶೇರ್‌ ಮಾಡಿರುವ ಲೀಕ್‌ ಮಾಹಿತಿಯನ್ನು 91ಮೊಬೈಲ್ಸ್‌ ಉಲ್ಲೇಖ ಮಾಡಿದೆ. ಅದರ ಪ್ರಕಾರ ರೇಜರ್ 50 5G ಬೂದು ಮತ್ತು ಖಾಕಿ ಬಣ್ಣದಲ್ಲಿ ಕಾಣಿಸಿಕೊಳ್ಳಲಿದೆ ಎನ್ನಲಾಗಿದೆ. ರೇಜರ್‌ 50 ಅಲ್ಟ್ರಾ ಪೀಚ್ ಫಜ್, ಹಸಿರು ಮತ್ತು ನೀಲಿ ಬಣ್ಣಗಳಲ್ಲಿ ಬರಬಹುದು ಎಂದು ಉಲ್ಲೇಖ ಮಾಡಲಾಗಿದೆ.

ಎರಡೂ ಫೋನ್‌ಗಳ ಕವರ್ ಸ್ಕ್ರೀನ್ ಕ್ಯಾಮೆರಾ ಲೆನ್ಸ್‌ಗಳಿಗೆ ಪ್ರತ್ಯೇಕ ಕಟೌಟ್‌ಗಳನ್ನು ಹೊಂದಿರುವಂತೆ ತೋರುತ್ತಿದೆ. ಅಲ್ಲದೆ ಅಲ್ಟ್ರಾ ಮಾದರಿಯಲ್ಲಿ ಕವರ್ ಡಿಸ್‌ಪ್ಲೇಯು ದೊಡ್ಡದಾಗಿದೆ. ಇದು ಸ್ಲಿಮ್ಮರ್ ಬೆಜೆಲ್‌ಗಳನ್ನು ಸಹ ಹೊಂದಿರುವಂತೆ ತೋರುತ್ತಿದೆ. ಇದು ಟೆಂಟ್ ಮೋಡ್‌ನಲ್ಲಿರುವಾಗ, ರೇಜರ್‌ 50 ರ ಕವರ್ ಡಿಸ್‌ಪ್ಲೇಯು ಅದರ ಮೇಲೆ ದಪ್ಪವಾದ ಬ್ಯಾಂಡ್ ಅನ್ನು ಹೊಂದಿರುತ್ತದೆ ಎನ್ನಲಾಗಿದೆ. ಗಮನಾರ್ಹವಾಗಿ ರೇಜರ್‌ 50 ಮುಖ್ಯ ಡಿಸ್‌ಪ್ಲೇ ಕಿರಿದಾದ ಬೆಜೆಲ್‌ ಅನ್ನು ಹೊಂದಿರಲಿದೆ ಎನ್ನಲಾಗಿದೆ.

ಮೊಟೊರೊಲಾ ರೇಜರ್‌ 50 5G ನಿರೀಕ್ಷಿತ ಫೀಚರ್ಸ್‌: ಈ ಸ್ಮಾರ್ಟ್‌ಫೋನ್ 6.9 ಇಂಚಿನ POLED ಡಿಸ್‌ಪ್ಲೇ ಹೊಂದಿರಲಿದೆ ಎನ್ನಲಾಗಿದ್ದು, 1080 x 2640 ಪಿಕ್ಸೆಲ್‌ ಸ್ಕ್ರೀನ್ ರೆಸಲ್ಯೂಶನ್, 120Hz ರಿಫ್ರೆಶ್ ರೇಟ್, SGS ಲೋ ಬ್ಲೂ ಲೈಟ್ ಪ್ರಮಾಣೀಕೃತ, SGS ಲೋ ಮೋಷನ್ ಬ್ಲರ್ ಪ್ರಮಾಣೀಕೃತ ಪಡೆದಿರಲಿದೆ ಎನ್ನಲಾಗಿದೆ. ಇದರ ಜೊತೆಗೆ ಕವರ್ ಡಿಸ್‌ಪ್ಲೇ 3.63 ಇಂಚಿನ POLED ಡಿಸ್‌ಪ್ಲೇ ಹೊಂದಿರಲಿದೆ ಎಂದು ಹೇಳಲಾಗಿದೆ.

ಮೊಟೊರೊಲಾ ರೇಜರ್‌ 50 5G, ರೇಜರ್‌ 50 ಅಲ್ಟ್ರಾ 5G ವಿನ್ಯಾಸ, ಫೀಚರ್ಸ್‌ ಲೀಕ್‌!

ಇದರ ಜೊತೆಗೆ ಕವರ್ ಸ್ಕ್ರೀನ್ ನಲ್ಲಿ 50MP + 13MP ಕ್ಯಾಮೆರಾ ಸೆನ್ಸರ್‌ ಕಾಣಬಹುದಾಗಿದ್ದು, ಮುಖ್ಯ ಡಿಸ್‌ಪ್ಲೇ 32MP ಕ್ಯಾಮೆರಾ ಆಯ್ಕೆ ಪಡೆದಿರಲಿದೆ ಎಂದು ತಿಳಿದುಬಂದಿದೆ. ಇದರ ಜೊತೆಗೆ ಆಂಡ್ರಾಯ್ಡ್ 14 ಓಎಸ್‌ನಲ್ಲಿ ಈ ಫೋನ್‌ ರನ್‌ ಆಗಲಿದೆ ಎನ್ನಲಾಗಿದ್ದು, ಮೀಡಿಯಾ ಟೆಕ್ ಡೈಮೆನ್ಸಿಟಿ 7300X SoC (2.5 GHz) ಪ್ರೊಸೆಸರ್‌ ಬಲ ಪಡೆದಿರಲಿದೆ ಎಂದು ತಿಳಿದುಬಂದಿದೆ. ಉಳಿದಂತೆ 8GB RAM+ 256GB ಇಂಟರ್‌ ಸ್ಟೋರೇಜ್‌ ಆಯ್ಕೆ ಪಡೆದಿರಲಿದೆ ಎನ್ನಲಾಗಿದ್ದು, 4,200mAh ಸಾಮರ್ಥ್ಯದ ಬ್ಯಾಟರಿ ಹೊಂದಿರಲಿದೆ.

ಮೊಟೊರೊಲಾ ರೇಜರ್ ಅಲ್ಟ್ರಾ 5G ನಿರೀಕ್ಷಿತ ಫೀಚರ್ಸ್‌: ಈ ಸ್ಮಾರ್ಟ್‌ಫೋನ್ 6.9 ಇಂಚಿನ POLED, 1080 x 2640 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯ ಪಡೆದಿದ್ದು, 165Hz ರಿಫ್ರೆಶ್ ರೇಟ್, SGS ಲೋ ಬ್ಲೂ ಲೈಟ್ ಪ್ರಮಾಣೀಕೃತ, SGS ಲೋ ಮೋಷನ್ ಬ್ಲರ್ ಪ್ರಮಾಣೀಕೃತ ದೊಂದಿಗೆ ಬರಲಿದೆ ಎನ್ನಲಾಗಿದೆ. ಜೊತೆಗೆ ಕವರ್‌ ಡಿಸ್‌ಪ್ಲೇ 4.0 ಇಂಚಿನ POLED ಡಿಸ್‌ಪ್ಲೇ ಹೊಂದಿರಲಿದೆ ಎಂದು ಹೇಳಲಾಗಿದೆ.

ಇದರ ಜೊತೆಗೆ ಕವರ್ ಸ್ಕ್ರೀನ್ನಲ್ಲಿ 50MP + 50MP ಕ್ಯಾಮೆರಾ ಆಯ್ಕೆ ನೀಡಲಾಗುತ್ತದೆ ಎನ್ನಲಾಗಿದ್ದು, ಮುಖ್ಯ ಡಿಸ್‌ಪ್ಲೇನಲ್ಲಿ 32MP ಕ್ಯಾಮೆರಾ ಆಯ್ಕೆ ಇರಲಿದೆ ಎನ್ನಲಾಗಿದೆ. ಇದರ ಜೊತೆಗೆ ಆಂಡ್ರಾಯ್ಡ್ 14 ಓಎಸ್ ಅನ್ನು ಈ ಫೋನ್‌ ರನ್‌ ಮಾಡಲಿದೆ ಎನ್ನಲಾಗಿದ್ದು, ಸ್ನಾಪ್‌ಡ್ರಾಗನ್ 8s ಜನ್ 3 ಪ್ರೊಸೆಸರ್‌ ಬಲದಲ್ಲಿ ಕಾರ್ಯನಿರ್ವಹಿಸಲಿದೆ ಎಂದು ನಿರೀಕ್ಷೆ ಮಾಡಲಾಗಿದೆ.

ಹಾಗೆಯೇ ಈ ಫೋನ್ 12GB RAM+ 512GB ಸ್ಟೋರೇಜ್‌ ಆಯ್ಕೆಯಲ್ಲಿ ಲಭ್ಯ ಇರಲಿದೆ ಎನ್ನಲಾಗಿದ್ದು, 4,000mAh ಸಾಮರ್ಥ್ಯದ ಬ್ಯಾಟರಿ ಹಾಗೂ 45W ಚಾರ್ಜಿಂಗ್ ಬೆಂಬಲ ಪಡೆದಿರಲಿದೆ ಎನ್ನಲಾಗಿದೆ. ಇದರ ಜೊತೆಗೆ ಡ್ಯುಯಲ್ ಸಿಮ್, ಬ್ಲೂಟೂತ್ 5.4, ಎನ್‌ಎಫ್‌ಸಿ ಸೇರಿದಂತೆ ಇತರೆ ಆಕರ್ಷಕ ಕನೆಕ್ಟಿವಿಟಿ ಫೀಚರ್ಸ್‌ ಆಯ್ಕೆ ಪಡೆದಿರಲಿದೆ ಎನ್ನಲಾಗಿದೆ. ಸಾಮಾನ್ಯ ರೇಜರ್‌ 50 5G ಗೆ ಹೋಲಿಸಿದರೆ ಸ್ವಲ್ಪ ಚಿಕ್ಕ ಬ್ಯಾಟರಿಯಿಂದಾಗಿ ರೇಜರ್‌ 50 ಅಲ್ಟ್ರಾ 5G ಹಗುರವಾಗಿರಬಹುದು. ಇದು ಹೆಚ್ಚು ಸ್ಟೋರೇಜ್‌ ಮತ್ತು ದೊಡ್ಡ ರೆಸಲ್ಯೂಶನ್ ಸೆಕೆಂಡರಿ ರಿಯರ್‌ ಕ್ಯಾಮೆರಾವನ್ನು ಹೊಂದಿರಲಿದೆ.

Best Mobiles in India

English summary
Motorola Razr 50 5G, Razr 50 Ultra 5G smartphones are going to create a big wave in the market in the coming days. The Motorola Razr 50 5G is said to be powered by a MediaTek chip, while the Razer 50 Ultra 5G is said to be powered by a Snapdragon flagship chip.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+