Home
ಸುದ್ದಿಜಾಲ

ನಾಳೆ Motorola Razr 50 ಲಾಂಚ್; ಹಲವು ಅಚ್ಚರಿ ಫೀಚರ್ಸ್‌ ತುಂಬಿವೆ!?

ಪ್ರಮುಖ ಮೊಬೈಲ್‌ ಸಂಸ್ಥೆ ಎನಿಸಿಕೊಂಡಿರುವ ಮೊಟೊರೊಲಾ (Motorola) ಈಗಾಗಲೇ ತನ್ನ ರೇಜರ್‌ ಸರಣಿಯಲ್ಲಿ ಕೆಲವು ಫ್ಲಿಪ್‌ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಗ್ರಾಹಕರನ್ನು ಸೆಳೆದಿದೆ. ಇನ್ನು ರೇಜರ್‌ (Razr) ಸರಣಿಯ ಮುಂದುವರಿದ ಆವೃತ್ತಿಯಾಗಿ ಮೊಟೊರೊಲಾ ಸಂಸ್ಥೆಯು ಇದೀಗ ನೂತನ ಮೊಟೊರೊಲಾ ರೇಜರ್‌ 50 (Motorola Razr 50) ಮೊಬೈಲ್‌ ಅನ್ನು ದೇಶಿಯ ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಕಲ ತಯಾರಿ ಮಾಡಿಕೊಂಡಿದೆ.

ಹೌದು, ಮೊಟೊರೊಲಾ ಮೊಬೈಲ್‌ ಕಂಪನಿಯು ಬಹುನಿರೀಕ್ಷಿತ ಮೊಟೊರೊಲಾ ರೇಜರ್‌ 50 (Motorola Razr 50) ಮೊಬೈಲ್‌ ಅನ್ನು ನಾಳೆ (ಸೆಪ್ಟೆಂಬರ್ 9 ರಂದು) ಅಧಿಕೃತವಾಗಿ ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಈ ಬಗ್ಗೆ ದಿಗ್ಗಜ ಇ ಕಾಮರ್ಸ್‌ ಅಮೆಜಾನ್‌ ಮೈಕ್ರೋ ಪೇಜ್‌ ಕೂಡಾ ತೆರೆದಿದೆ. ಇನ್ನು ಈ ಫ್ಲಿಪ್‌ ಫೋನ್ ನೀರಿನ ಪ್ರತಿರೋಧಕ್ಕಾಗಿ IPX8 ರೇಟಿಂಗ್ ಆಯ್ಕೆಗಳನ್ನು ಪಡೆದಿದೆ ಎಂದು ತಿಳಿದುಬಂದಿದೆ.

ನಾಳೆ Motorola Razr 50 ಲಾಂಚ್; ಹಲವು ಅಚ್ಚರಿ ಫೀಚರ್ಸ್‌ ತುಂಬಿವೆ!?

ಬರಲಿರುವ ಈ ಮೊಬೈಲ್‌ 4,200 mAh ಡ್ಯುಯಲ್ ಸೆಲ್ ಬ್ಯಾಟರಿ ಬ್ಯಾಕ್‌ಅಪ್‌ ಒಳಗೊಂಡಿರಲಿದ್ದು, ಇದಕ್ಕೆ ಪೂರಕವಾಗಿ 30W ವೈರ್ಡ್‌ ಫಾಸ್ಟ್‌ ಚಾರ್ಜಿಂಗ್‌ ಸೌಲಭ್ಯ ಕೂಡಾ ಹೊಂದಿರಲಿದೆ. ಅಲ್ಲದೇ ಈ ಫೋನ್‌ 50 ಮೆಗಾ ಪಿಕ್ಸಲ್‌ ಸಾಮರ್ಥ್ಯದ ಮುಖ್ಯ ಕ್ಯಾಮರಾ ಸೌಲಭ್ಯ ಪಡೆದಿರಲಿದೆ ಎಂದು ಹೇಳಲಾಗಿದೆ. ಅಲ್ಲದೇ ಇದು moto AI ಸೌಲಭ್ಯ ಸಹ ಪಡೆದಿದೆ. ಹಾಗಾದರೇ ಮೊಟೊರೊಲಾ ರೇಜರ್‌ 50 ಫ್ಲಿಪ್‌ ಫೋನಿನ ನಿರೀಕ್ಷಿತ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಮೊಟೊರೊಲಾ ರೇಜರ್‌ 50 - ನಿರೀಕ್ಷಿತ ಫೀಚರ್ಸ್‌

ಮೊಟೊರೊಲಾ ರೇಜರ್‌ 50 ಮೊಬೈಲ್‌ 6.9 ಇಂಚಿನ ಪೂರ್ಣ HD+ ಡಿಸ್‌ಪ್ಲೇ ಪಡೆದಿರಲಿದ್ದು, ಇದರ ಡಿಸ್‌ಪ್ಲೇಯು 1,080 x 2,640 ಪಿಕ್ಸೆಲ್‌ ರೆಸಲ್ಯೂಶನ್ ಸೌಲಭ್ಯದಲ್ಲಿ ಇರಲಿದೆ ಎನ್ನಲಾಗಿದೆ. ಹಾಗೆಯೇ pOLED ಒಳಗಿನ ಡಿಸ್‌ಪ್ಲೇ ಇರಲಿದೆ. ಇನ್ನು ಇದರ ಕವರ್‌ ಡಿಸ್‌ಪ್ಲೇಯು 3.6 ಇಂಚಿನ ಪೂರ್ಣ HD+ pOLED ಮಾದರಿಯಲ್ಲಿ ಇರಲಿದ್ದು, ಇದರ ಡಿಸ್‌ಪ್ಲೇಯು 1,080 x 2,640 ಪಿಕ್ಸೆಲ್‌ ರೆಸಲ್ಯೂಶನ್ ಸೌಲಭ್ಯದಲ್ಲಿ ಇರಲಿದೆ ಕವರ್ ಡಿಸ್‌ಪ್ಲೇ ಹೊಂದಿದೆ.

ಮೊಟೊರೊಲಾ ರೇಜರ್‌ 50 ಮೊಬೈಲ್‌ ಮೀಡಿಯಾ ಟೆಕ್‌ ಡೈಮೆನ್ಸಿಟಿ 7300X ಚಿಪ್‌ಸೆಟ್ ಪ್ರೊಸೆಸರ್‌ ಪವರ್‌ನಲ್ಲಿ ಕೆಲಸ ಮಾಡಲಿದ್ದು, ಇದರೊಂದಿಗೆ 12 GB RAM ಮತ್ತು 512 GB ವರೆಗೆ ಸ್ಟೋರೇಜ್‌ ವೇರಿಯಂಟ್‌ ಆಯ್ಕೆಗಳನ್ನು ಪಡೆದಿರಲಿದೆ. ಹಾಗೆಯೇ ಈ ಫೋನ್‌ ಡ್ಯುಯಲ್ ಕ್ಯಾಮೆರಾ ರಚನೆ ಅನ್ನು ಪಡೆದಿರಲಿದ್ದು, ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸೆಲ್ ಸೆನ್ಸಾರ್‌ ಬಲದಲ್ಲಿ ಇರಲಿದೆ. ಹಾಗೆಯೇ ಇದರ ಎರಡನೇ ಕ್ಯಾಮೆರಾವು 13 ಮೆಗಾ ಪಿಕ್ಸೆಲ್ ಅಲ್ಟ್ರಾ ವೈಡ್-ಆಂಗಲ್ ಕ್ಯಾಮೆರಾವನ್ನು ಒಳಗೊಂಡಿದೆ.

ಮೊಟೊರೊಲಾ ರೇಜರ್‌ 50 ಮೊಬೈಲ್‌ ಮುಂಭಾಗದಲ್ಲಿ ಸೆಲ್ಫಿಗಳು ಮತ್ತು ವೀಡಿಯೊ ಚಾಟ್‌ಗಳಿಗಾಗಿ ಒಳಗಿನ ಸ್ಕ್ರೀನಿನಲ್ಲಿ 32 ಮೆಗಾ ಪಿಕ್ಸೆಲ್ ಸೆನ್ಸಾರ್‌ ಅನ್ನು ನೀಡಲಾಗುವ ನಿರೀಕ್ಷೆಗಳು ಇವೆ. ಇದು ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್‌ ಅನ್ನು ಪಡೆದಿದೆ. ಅಲ್ಲದೇ ಇದು 4,200 mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಹೊಂದಿದ್ದು, ಇದಕ್ಕೆ ಅನುಗುಣವಾಗಿ 30W ವೈರ್ಡ್ ಮತ್ತು 15W ವೈರ್‌ಲೆಸ್ ಚಾರ್ಜಿಂಗ್ ಸಪೋರ್ಟ್‌ ಸಹ ಪಡೆದಿರುವುದು ಬಹುತೇಕ ಖಚಿತ ಎನ್ನಲಾಗಿದೆ.

ಹಾಗೆಯೇ ಈ ಫೋನ್‌ ಜೊತೆಗೆ ಸಂಸ್ಥೆಯು ಮೊಟೊ ಬಡ್ಸ್‌ ಬಾಸ್‌ (moto buds boss) ಡಿವೈಸ್‌ ಪರಿಚಯಿಸಲಿದೆ ಎನ್ನಲಾಗಿದೆ. ಇನ್ನು ಮೊಟೊರೊಲಾ ರೇಜರ್‌ 50 ಫೋನ್‌ ಬಿಡುಗಡೆ ಬಳಿಕ ಅಮೆಜಾನ್, ಮೊಟೊರೊಲಾ ಇಂಡಿಯಾ ಇ-ಸ್ಟೋರ್ ಮತ್ತು ಪ್ರಮುಖ ರಿಟೇಲ್‌ ಸ್ಟೋರ್‌ಗಳಲ್ಲಿ ಖರೀದಿಗೆ ಲಭ್ಯವಿರುತ್ತದೆ.

Best Mobiles in India

English summary
motorola razr 50 is set to launch in india on tomorrow. expected specifications and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+