ಇಂದು ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ Motorola Razr 50 ಫೋನ್; ಕ್ಯಾಮೆರಾ ಹೇಗಿದೆ?
ಮೊಟೊರೊಲಾ (Motorola) ಕಂಪನಿಯ ಬಹುನಿರೀಕ್ಷಿತ ಮೊಟೊರೊಲಾ ರೇಜರ್ 50 (Motorola Razr 50) ಮೊಬೈಲ್ ಇಂದು (ಸೆಪ್ಟೆಂಬರ್ 09 ರಂದು) ದೇಶಿಯ ಮಾರುಕಟ್ಟೆಗೆ ಅಧಿಕೃತವಾಗಿ ಲಾಂಚ್ ಆಗಲಿದೆ. ಈಗಾಗಲೇ ಲೀಕ್ ಫೀಚರ್ಸ್‌ನಿಂದ ಗ್ರಾಹಕರಲ್ಲಿ ಕುತೂಹಲ ಮೂಡಿಸಿರುವ ಈ ಫೋನ್ ಫೋಲ್ಡೆಬಲ್ ಮಾದರಿಯ ರಚನೆ ಅನ್ನು ಪಡೆದಿದೆ. ಇನ್ನು ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7300X ಚಿಪ್‌ಸೆಟ್ ಪ್ರೊಸೆಸರ್ ಪಡೆದಿರುವುದು ಬಹುತೇಕ ಪಕ್ಕಾ ಆಗಿದೆ.
ಹೌದು, ಮೊಟೊರೊಲಾ ಮೊಬೈಲ್ ಸಂಸ್ಥೆಯ ಮೊಟೊರೊಲಾ ರೇಜರ್ 50 (Motorola Razr 50) ಮೊಬೈಲ್ ಅನ್ನು ಇಂದು ಅಧಿಕೃತವಾಗಿ ದೇಶಿಯ ಮಾರುಕಟ್ಟೆಗೆ ಪರಿಚಿತ ಆಗಲಿದೆ. ಈ ಬಗ್ಗೆ ಜನಪ್ರಿಯ ಇ ಕಾಮರ್ಸ್ ತಾಣ ಅಮೆಜಾನ್ ಮೈಕ್ರೋ ಪೇಜ್ ಕೂಡಾ ಓಪೆನ್ ಮಾಡಿದೆ. ಇನ್ನು ಈ ಫ್ಲಿಪ್ ಫೋನ್ ನೀರಿನ ಪ್ರತಿರೋಧಕ್ಕಾಗಿ IPX8 ರೇಟಿಂಗ್ ಆಯ್ಕೆಗಳನ್ನು ಹೊಂದಿದೆ ಎಂದು ತಿಳಿದುಬಂದಿದೆ. ಹಾಗೆಯೇ ಇದು moto AI ಸೌಲಭ್ಯ ಸಹ ಪಡೆದಿದೆ.

ಲಗ್ಗೆ ಇಡಲಿರುವ ಈ ಫೋನ್ 4,200 mAh ಡ್ಯುಯಲ್ ಸೆಲ್ ಬ್ಯಾಟರಿ ಬ್ಯಾಕ್‌ಅಪ್ ಪಡೆದಿರಲಿದ್ದು, ಇದಕ್ಕೆ ಪೂರಕವಾಗಿ 30W ವೈರ್ಡ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಕೂಡಾ ಹೊಂದಿರಲಿದೆ. ಅಲ್ಲದೇ ಈ ಮೊಬೈಲ್ 50 ಮೆಗಾ ಪಿಕ್ಸಲ್ ಸಾಮರ್ಥ್ಯದ ಮುಖ್ಯ ಕ್ಯಾಮರಾ ಸೌಲಭ್ಯ ಪಡೆದಿರಲಿದೆ ಎಂದು ತಿಳಿದುಬಂದಿದೆ. ಹಾಗಾದರೇ ಮೊಟೊರೊಲಾ ರೇಜರ್ 50 ಫ್ಲಿಪ್ ಫೋನಿನ ನಿರೀಕ್ಷಿತ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಮೊಟೊರೊಲಾ ರೇಜರ್ 50 - ನಿರೀಕ್ಷಿತ ಫೀಚರ್ಸ್
ಮೊಟೊರೊಲಾ ರೇಜರ್ 50 ಮೊಬೈಲ್ 6.9 ಇಂಚಿನ ಪೂರ್ಣ HD+ ಡಿಸ್‌ಪ್ಲೇ ಹೊಂದಿರಲಿದ್ದು, ಇದರ ಡಿಸ್‌ಪ್ಲೇಯು 1,080 x 2,640 ಪಿಕ್ಸೆಲ್ ರೆಸಲ್ಯೂಶನ್ ಸೌಲಭ್ಯದಲ್ಲಿ ಇರಲಿದೆ ಎನ್ನಲಾಗಿದೆ. ಹಾಗೆಯೇ pOLED ಒಳಗಿನ ಡಿಸ್‌ಪ್ಲೇ ಸಾಧ್ಯತೆ. ಇನ್ನು ಇದರ ಕವರ್ ಡಿಸ್‌ಪ್ಲೇಯು 3.6 ಇಂಚಿನ ಪೂರ್ಣ HD+ pOLED ಮಾದರಿಯಲ್ಲಿ ಇರಲಿದ್ದು, ಇದರ ಡಿಸ್‌ಪ್ಲೇಯು 1,080 x 2,640 ಪಿಕ್ಸೆಲ್ ರೆಸಲ್ಯೂಶನ್ ಸೌಲಭ್ಯದಲ್ಲಿ ಇರಲಿದೆ ಕವರ್ ಡಿಸ್‌ಪ್ಲೇ ಪಡೆದಿರಲಿದೆ.
ಮೊಟೊರೊಲಾ ರೇಜರ್ 50 ಮೊಬೈಲ್ ಮೀಡಿಯಾ ಟೆಕ್ ಡೈಮೆನ್ಸಿಟಿ 7300X ಚಿಪ್‌ಸೆಟ್ ಪ್ರೊಸೆಸರ್ ಪವರ್‌ನಲ್ಲಿ ಕೆಲಸ ಮಾಡಲಿದ್ದು, ಇದರೊಂದಿಗೆ 12 GB RAM ಮತ್ತು 512 GB ವರೆಗೆ ಸ್ಟೋರೇಜ್ ವೇರಿಯಂಟ್ ಆಯ್ಕೆಗಳನ್ನು ಪಡೆದಿರಲಿದೆ. ಹಾಗೆಯೇ ಈ ಮೊಬೈಲ್ ಡ್ಯುಯಲ್ ಕ್ಯಾಮೆರಾ ರಚನೆ ಅನ್ನು ಪಡೆದಿರಲಿದ್ದು, ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸೆಲ್ ಸೆನ್ಸಾರ್ ಬಲದಲ್ಲಿ ಇರಲಿದೆ. ಹಾಗೆಯೇ ಇದರ ದ್ವಿತೀಯ ಕ್ಯಾಮೆರಾವು 13 ಮೆಗಾ ಪಿಕ್ಸೆಲ್ ಅಲ್ಟ್ರಾ ವೈಡ್-ಆಂಗಲ್ ಕ್ಯಾಮೆರಾವನ್ನು ಒಳಗೊಂಡಿದೆ.
ಮೊಟೊರೊಲಾ ರೇಜರ್ 50 ಮೊಬೈಲ್ ಮುಂಭಾಗದಲ್ಲಿ ಸೆಲ್ಫಿಗಳು ಮತ್ತು ವೀಡಿಯೊ ಚಾಟ್‌ಗಳಿಗಾಗಿ ಒಳಗಿನ ಸ್ಕ್ರೀನಿನಲ್ಲಿ 32 ಮೆಗಾ ಪಿಕ್ಸೆಲ್ ಸೆನ್ಸಾರ್ ಅನ್ನು ನೀಡಲಾಗುವ ನಿರೀಕ್ಷೆಗಳು ಇವೆ. ಇದು ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಅನ್ನು ಪಡೆದಿದೆ. ಅಲ್ಲದೇ ಇದು 4,200 mAh ಬ್ಯಾಟರಿ ಬ್ಯಾಕ್‌ಅಪ್ ಅನ್ನು ಪಡೆದಿರಲಿದ್ದು, ಇದಕ್ಕೆ ಅನುಗುಣವಾಗಿ 30W ವೈರ್ಡ್ ಮತ್ತು 15W ವೈರ್‌ಲೆಸ್ ಚಾರ್ಜಿಂಗ್ ಸಪೋರ್ಟ್ ಸಹ ಪಡೆದಿರುವುದು ಬಹುತೇಕ ಖಚಿತ ಎನ್ನಲಾಗಿದೆ.
ಹಾಗೆಯೇ ಈ ಮೊಬೈಲ್ ಜೊತೆಗೆ ಸಂಸ್ಥೆಯು ಮೊಟೊ ಬಡ್ಸ್ ಬಾಸ್ (moto buds boss) ಡಿವೈಸ್ ಪರಿಚಯಿಸಲಿದೆ ಎನ್ನಲಾಗಿದೆ. ಇನ್ನು ಮೊಟೊರೊಲಾ ರೇಜರ್ 50 ಫೋನ್ ಲಾಂಚ್ ಬಳಿಕ ಅಮೆಜಾನ್, ಮೊಟೊರೊಲಾ ಇಂಡಿಯಾ ಇ-ಸ್ಟೋರ್ ಮತ್ತು ಪ್ರಮುಖ ರಿಟೇಲ್ ಸ್ಟೋರ್‌ಗಳಲ್ಲಿ ಖರೀದಿಗೆ ಲಭ್ಯ ಆಗಲಿದೆ.


Click it and Unblock the Notifications