Home
ಸುದ್ದಿಜಾಲ

ಭಾರತದಲ್ಲಿ Motorola Razr 50 ಬಿಡುಗಡೆ; ಸಖತ್ ಸ್ಟೈಲಿಶ್‌ ಲುಕ್‌.. ಬೆಲೆ ಎಷ್ಟು?

ಮೊಟೊರೊಲಾ (Motorola) ಸಂಸ್ಥೆಯ ಬಹುನಿರೀಕ್ಷಿತ ಮೊಟೊರೊಲಾ ರೇಜರ್‌ 50 (Motorola Razr 50) ಮೊಬೈಲ್‌ ಇಂದು ದೇಶಿಯ ಮಾರುಕಟ್ಟೆಗೆ ಅಧಿಕೃತವಾಗಿ ಬಿಡುಗಡೆ ಆಗಿದೆ. ಇದು ಫ್ಲಿಪ್‌ (Flip) ಮಾದರಿಯ ಫೋನ್‌ ಆಗಿದ್ದು, ಬಾಹ್ಯ ಕವರ್‌ ಸ್ಕ್ರೀನ್‌ 3.6 ಇಂಚಿನ ರಚನೆ ಪಡೆದಿದೆ. ಹಾಗೆಯೇ ಈ ಫೋನ್‌ ಮೀಡಿಯಾ ಟೆಕ್‌ ಡೈಮೆನ್ಸಿಟಿ 7300X ಚಿಪ್‌ಸೆಟ್ ಪ್ರೊಸೆಸರ್‌ ಪವರ್‌ ಒಳಗೊಂಡಿರುವುದು ಹೈಲೈಟ್‌ ಅಂಶಗಳಲ್ಲಿ ಒಂದಾಗಿದೆ.

ಹೌದು, ಮೊಟೊರೊಲಾ ಮೊಬೈಲ್‌ ಸಂಸ್ಥೆಯ ಮೊಟೊರೊಲಾ ರೇಜರ್‌ 50 (Motorola Razr 50) ಫ್ಲಿಪ್‌ ಮೊಬೈಲ್‌ ದೇಶಿಯ ಮಾರುಕಟ್ಟೆಗೆ ಲಾಂಚ್ ಆಗಿದೆ. ಈ ಫೋನ್ IPX8 ಅಂಡರ್ ವಾಟರ್‌ ರೇಟಿಂಗ್ ಆಯ್ಕೆಗಳನ್ನು ಹೊಂದಿದ್ದು, moto AI ಸೌಲಭ್ಯ ಸಹ ಪಡೆದಿದೆ. ಜೊತೆಗೆ ಈ ಫೊನಿನ ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸೌಲಭ್ಯದಲ್ಲಿ ಇದೆ. ಇನ್ನು ಇದರ ಸೆಲ್ಫಿ ಕ್ಯಾಮೆರಾವು 32 ಮೆಗಾ ಪಿಕ್ಸಲ್‌ ಆಗಿದೆ.

ಭಾರತದಲ್ಲಿ Motorola Razr 50 ಬಿಡುಗಡೆ; ಸಖತ್ ಸ್ಟೈಲಿಶ್‌ ಲುಕ್‌.. ಬೆಲೆ ಎಷ್ಟು?

ಈ ನೂತನ ಫೋನ್‌ 4,200 mAh ಡ್ಯುಯಲ್ ಸೆಲ್ ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿದ್ದು, ಇದಕ್ಕೆ ಪೂರಕವಾಗಿ 33W ವೈರ್ಡ್‌ ಫಾಸ್ಟ್‌ ಚಾರ್ಜಿಂಗ್‌ ಸೌಲಭ್ಯ ಕೂಡಾ ಹೊಂದಿದೆ. ಅಲ್ಲದೇ ಈ ಹೊಸ ಫೋನ್‌ ಕೋಲಾ ಗ್ರೇ, ಬೀಚ್ ಸ್ಯಾಂಡ್ ಮತ್ತು ಸ್ಪ್ರಿಟ್ಜ್ ಆರೆಂಜ್‌ ಕಲರ್‌ ಆಯ್ಕೆಗಳನ್ನು ಪಡೆದಿದೆ. ಹಾಗಾದರೇ ಮೊಟೊರೊಲಾ ರೇಜರ್‌ 50 ಮೊಬೈಲ್‌ನ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಮೊಟೊರೊಲಾ ರೇಜರ್‌ 50 - ಫೀಚರ್ಸ್‌

ಮೊಟೊರೊಲಾ ರೇಜರ್‌ 50 ಮೊಬೈಲ್‌ 6.9 ಇಂಚಿನ ಪೂರ್ಣ HD+ ಡಿಸ್‌ಪ್ಲೇ ಹೊಂದಿದ್ದು pOLED ಮಾದರಿಯಲ್ಲಿ ಇದೆ. ಇನ್ನು ಇದರ ಡಿಸ್‌ಪ್ಲೇಯು 1,080 x 2,640 ಪಿಕ್ಸೆಲ್‌ ರೆಸಲ್ಯೂಶನ್ ಸೌಲಭ್ಯದಲ್ಲಿ ಇದೆ. ಹಾಗೆಯೇ ಇದರ ಕವರ್‌ ಡಿಸ್‌ಪ್ಲೇಯು 3.6 ಇಂಚಿನ ಪೂರ್ಣ HD+ pOLED ಮಾದರಿಯಲ್ಲಿ ಇದ್ದು, ಇದರ ಡಿಸ್‌ಪ್ಲೇಯು 1,080 x 2,640 ಪಿಕ್ಸೆಲ್‌ ರೆಸಲ್ಯೂಶನ್ ಸೌಲಭ್ಯದಲ್ಲಿ ಇದೆ.

ಮೊಟೊರೊಲಾ ರೇಜರ್‌ 50 ಮೊಬೈಲ್‌ ಮೀಡಿಯಾ ಟೆಕ್‌ ಡೈಮೆನ್ಸಿಟಿ 7300X ಚಿಪ್‌ಸೆಟ್ ಪ್ರೊಸೆಸರ್‌ ಪವರ್‌ನಲ್ಲಿ ಕೆಲಸ ಮಾಡಲಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 14 ಓಎಸ್‌ ಸಪೋರ್ಟ್‌ ಕೂಡಾ ಪಡೆದಿದೆ. ಅಲ್ಲದೇ ಇದು 8GB RAM + 256GB ಸ್ಟೋರೇಜ್‌ ಸಿಂಗಲ್ ವೇರಿಯಂಟ್‌ ಆಯ್ಕೆ ಅನ್ನು ಪಡೆದಿದೆ.

ಮೊಟೊರೊಲಾ ರೇಜರ್‌ 50 ಮೊಬೈಲ್‌ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸೆಲ್ ಸೆನ್ಸಾರ್‌ ಬಲದಲ್ಲಿ ಇದೆ. ಹಾಗೆಯೇ ಇದರ ಎರಡನೇ ಕ್ಯಾಮೆರಾವು 13 ಮೆಗಾ ಪಿಕ್ಸೆಲ್ ಕ್ಯಾಮೆರಾವನ್ನು ಒಳಗೊಂಡಿದೆ. ಇನ್ನು ಇದರ ಮುಂಭಾಗದಲ್ಲಿ 32 ಮೆಗಾಪಿಕ್ಸಲ್‌ ಸೆನ್ಸಾರ್‌ ಸೆಲ್ಫಿ ಕ್ಯಾಮೆರಾ ರಚನೆ ಕೂಡಾ ಇದೆ.

ಮೊಟೊರೊಲಾ ರೇಜರ್‌ 50 ಮೊಬೈಲ್‌ 4,200 mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದಿದ್ದು, ಇದಕ್ಕೆ ಅನುಗುಣವಾಗಿ 33W ವೈರ್ಡ್ ಮತ್ತು 15W ವೈರ್‌ಲೆಸ್ ಚಾರ್ಜಿಂಗ್ ಸಪೋರ್ಟ್‌ ಸಹ ಪಡೆದಿದೆ. ಇದರೊಂದಿಗೆ IPX8 ನೀರು ಮತ್ತು ಧೂಳಿನ ಪ್ರತಿರೋಧ, ಡಾಲ್ಬಿ ಅಟ್ಮಾಸ್‌ನೊಂದಿಗೆ ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳು, ಬ್ಲೂಟೂತ್ 5.4, ಸೈಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಆಯ್ಕೆಗಳನ್ನು ಕೂಡಾ ಪಡೆದಿದೆ.

ಬೆಲೆ ಹಾಗೂ ಲಭ್ಯತೆ

ಮೊಟೊರೊಲಾ ರೇಜರ್‌ 50 ಮೊಬೈಲ್‌ 8GB RAM + 256GB ಸ್ಟೋರೇಜ್‌ ಸಿಂಗಲ್ ವೇರಿಯಂಟ್‌ ಆಯ್ಕೆ ಹೊಂದಿದ್ದು, ಇದರ ಬೆಲೆಯು 64,999ರೂ. ಗಳು ಆಗಿದೆ. ಇನ್ನು ಈ ಫೋನ್‌ ಸೆಪ್ಟೆಂಬರ್ 20 ರಂದು ಖರೀದಿಗೆ ಲಭ್ಯ ಇರಲಿದ್ದು, ಅಮೆಜಾನ್, ಮೊಟೊರೊಲಾ ಇಂಡಿಯಾದ ವೆಬ್‌ಸೈಟ್ ಹಾಗೂ ಪ್ರಮುಖ ರೀಟೆಲ್ ಸ್ಟೋರ್‌ಗಳಿಂದ ಖರೀದಿಸಲು ಲಭ್ಯ ಇರುತ್ತದೆ. ಇದು ಕೋಲಾ ಗ್ರೇ, ಬೀಚ್ ಸ್ಯಾಂಡ್ ಮತ್ತು ಸ್ಪ್ರಿಟ್ಜ್ ಆರೆಂಜ್‌ ಕಲರ್‌ ಆಯ್ಕೆಗಳನ್ನು ಹೊಂದಿದೆ.

Best Mobiles in India

English summary
Motorola Razr 50 with MediaTek Dimensity 7300X SoC Launched in India. Check Price, specifications and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+