ಬಹುನಿರೀಕ್ಷಿತ 'ಮೊಟೊರೊಲಾ ರೇಜರ್' ಫೋಲ್ಡೆಬಲ್ ಸ್ಮಾರ್ಟ್‌ಫೋನ್ ಬಿಡುಗಡೆ!
ಮೊಟೊರೊಲಾ ಸಂಸ್ಥೆಯು ತನ್ನ ಬಹುನಿರೀಕ್ಷಿತ 'ಮೊಟೊರೊಲಾ ರೇಜರ್' ಫೋಲ್ಡೆಬಲ್ ಸ್ಮಾರ್ಟ್‌ಫೋನ್ ಅನ್ನು ವಿಶ್ವ ಮಾರುಕಟ್ಟೆಯಲ್ಲಿ ಲಾಂಚ್ ಮಾಡಿದೆ. ಈ ಸ್ಮಾರ್ಟ್‌ಫೋನ್ ಫ್ಲೆಕ್ಸಿಬಲ್ ಸ್ಕ್ರೀನ್ ಹೊಂದಿದ್ದು, ಮಡಚುವ ಮಾದರಿಯನ್ನು ಒಳಗೊಂಡಿದೆ. OLED ಹೆಚ್‌ಡಿ ಪ್ಲಸ್, ಸ್ನ್ಯಾಪ್‌ಡ್ರಾಗನ್ 710 ಪ್ರೊಸೆಸರ್ ಸೇರಿದಂತೆ ಹಲವು ಮೀಡ್ ರೇಂಜ್ ಫೀಚರ್ಸ್‌ಗಳನ್ನು ತುಂಬಿಕೊಂಡಿದೆ. ಆದ್ರೆ ಬೆಲೆ ಮಾತ್ರ ದುಬಾರಿ.

ಹೌದು, ಮೊಟೊರೊಲಾ ಸಂಸ್ಥೆಯು ರೇಜರ್ ಫೋಲ್ಡೆಬಲ್ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ್ದು, 6GB RAM ಮತ್ತು 128GB ಸ್ಟೋರೇಜ್ ವೇರಿಯಂಟ್ ಆಯ್ಕೆ ಪಡೆದಿದೆ. ಹಿಂಬದಿಯಲ್ಲಿ ಸಿಂಗಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಹೊಂದಿದ್ದು, ಮೇನ್ ಡಿಸ್‌ಪ್ಲೇ ನಾಚ್‌ನಲ್ಲಿ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ. ಇನ್ನು 15W ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಪಡೆದುಕೊಂಡಿದೆ. ಹಾಗಾದರೇ 'ಮೊಟೊರೊಲಾ ರೇಜರ್' ಫೋಲ್ಡೆಬಲ್ ಸ್ಮಾರ್ಟ್‌ಫೋನ್ ಇತರೆ ಫೀಚರ್ಸ್‌ಗಳೆನು ಮತ್ತು ಬೆಲೆ ಎಷ್ಟು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಡಿಸ್‌ಪ್ಲೇ ಮತ್ತು ಡಿಸೈನ್
ಮೊಟೊರೊಲಾ ರೇಜರ್ ಫೋಲ್ಡೆಬಲ್ ಸ್ಮಾರ್ಟ್‌ಫೋನ್ 876x2142 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.2 ಇಂಚಿನ OLED ಹೆಚ್‌ಡಿ ಪ್ಲಸ್ ಫ್ಲೆಕ್ಸಿಬಲ್ ಸ್ಕ್ರೀನ್ ಹೊಂದಿದೆ. ಡಿಸ್‌ಪ್ಲೇ ಅನುಪಾತವು 21:9 ಆಗಿದ್ದು, ಮಡಚುವ ರಚನೆಯಿದೆ. ಹಾಗೆಯೇ ನೋಟಿಫಿಕೇಶನಗಾಗಿ 2.7 ಇಂಚಿನ ಕಿರು ಡಿಸ್‌ಪ್ಲೇ ಹೊಂದಿದ್ದು, 600x800 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿದೆ. ಬಾಹ್ಯ ನೋಟ್ ಹೆಚ್ಚು ಆಕರ್ಷಕವಾಗಿದೆ.

ಪ್ರೊಸೆಸರ್ ಸಾಮರ್ಥ್ಯ
ಮೊಟೊರೊಲಾ ರೇಜರ್ ಫೋಲ್ಡೆಬಲ್ ಸ್ಮಾರ್ಟ್‌ಫೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 710 ಪ್ರೊಸೆಸರ್ ಸಾಮರ್ಥ್ಯವನ್ನು ಒಳಗೊಂಡಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 9 ಪೈ ಓಎಸ್ ಬೆಂಬಲ ಇದೆ. ಇದರೊಂದಿಗೆ 6GB RAM ಮತ್ತು 128GB ಸ್ಟೋರೇಜ್ ಸ್ಥಳಾವಕಾಶವನ್ನು ಪಡೆದಿದೆ. ಫೋನಿನ ಮಲ್ಟಿಟಾಸ್ಕ್ ಕೆಲಸಗಳಿಗೆ ಪ್ರೊಸೆಸರ್ ಕಾರ್ಯವೈಖರಿ ಸಪೋರ್ಟ್ ನೀಡಲಿದೆ.

ಕ್ಯಾಮೆರಾ
ಮೊಟೊರೊಲಾ ರೇಜರ್ ಫೋಲ್ಡೆಬಲ್ ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಸಿಂಗಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಪಡೆದಿದೆ. ಆ ಕ್ಯಾಮೆರಾವು f/1.7 ಅಪರ್ಚರ್ ನೊಂದಿಗೆ 16ಎಂಪಿ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಹಾಗೆಯೇ ಸೆಲ್ಫಿಗಾಗಿ 5ಎಂಪಿ ಸೆನ್ಸಾರ್ ಕ್ಯಾಮೆರಾ ನೀಡಲಾಗಿದೆ. ಹಾಗೆಯೇ ನೈಟ್ ಮೋಡ್ ಆಯ್ಕೆ ಸೇರಿದಂತೆ ಅಗತ್ಯ ಕ್ಯಾಮೆರಾ ಫೀಚರ್ಸ್‌ಗಳನ್ನು ಒದಗಿಸಲಾಗಿದೆ.

ಬ್ಯಾಟರಿ ಶಕ್ತಿ
ಮೊಟೊರೊಲಾ ರೇಜರ್ ಫೋಲ್ಡೆಬಲ್ ಸ್ಮಾರ್ಟ್‌ಫೋನ್ 2510mAh ಸಾಮರ್ಥ್ಯದ ಬ್ಯಾಟರಿ ಬಾಳಿಕೆಯನ್ನು ಪಡೆದುಕೊಂಡಿದ್ದು, ಇದರೊಂದಿಗೆ 15W ಸಾಮರ್ಥ್ಯ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಹೊಂದಿದೆ. ಇದರೊಂದಿಗೆ ಬ್ಲೂಟೂತ್ 5.0, ವೈ-ಫೈ 802.11, 4G LTE, ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗಿದೆ.

ಬೆಲೆ ಮತ್ತು ಲಭ್ಯತೆ
ಮೊಟೊರೊಲಾ ರೇಜರ್ ಫೋಲ್ಡೆಬಲ್ ಸ್ಮಾರ್ಟ್‌ಫೋನ್ ವಿಶ್ವ ಮಾರುಕಟ್ಟೆಯಲ್ಲಿ ಲಾಂಚ್ ಆಗಿದ್ದು, ಯುಎಸ್‌ನಲ್ಲಿ ಇದರ ಬೆಲೆಯು $1,499.99 ಆಗಿದೆ.(ಭಾರತದಲ್ಲಿ ಅಂದಾಜು 1,07,400ರೂ). ಈ ಸ್ಮಾರ್ಟ್‌ಫೋನ್ ಭಾರತಕ್ಕೆ ಯಾವಾಗ ಎಂಟ್ರಿ ಕೊಡಲಿದೆ ಎನ್ನುವ ಬಗ್ಗೆ ಸ್ಪಷ್ಟ ಮಾಹಿತಿ ಹೊರಹಾಕಿಲ್ಲ.


Click it and Unblock the Notifications








