ಬಿಡುಗಡೆಗೆ ಸಿದ್ಧವಾದ ಮೊಟೊರೊಲಾ 'ಒನ್‌ ವಿಷನ್'!..48ಎಂಪಿ ಕ್ಯಾಮೆರಾ!

|

ಮೊಟೊ ಖ್ಯಾತಿಯ ಮೊಟೊರೊಲಾ ಕಂಪನಿಯು ಕಳೆದ ತಿಂಗಳು ಬ್ರೆಜಿಲ್‌ನಲ್ಲಿ 'ಮೊಟೊರೊಲಾ ಒನ್‌ ವಿಷನ್'‌ ಸ್ಮಾರ್ಟ್‌ಫೋನ್‌ ಅನ್ನು ಲಾಂಚ್ ಮಾಡಿತ್ತು. ಇದೀಗ ಕಂಪನಿಯು ಆ ಸ್ಮಾರ್ಟ್‌ಫೋನ್‌ ಅನ್ನು ಭಾರತೀಯ ಮಾರುಕಟ್ಟೆಗೂ ಬಿಡುಗಡೆ ಮಾಡುಲು ಸಜ್ಜಾಗುತ್ತಿದೆ. ಸಂಪೂರ್ಣ ಹೈ ಎಂಡ್ ಮಾದರುಯ ಫೀಚರ್ಸ್‌ಗಳಿಂದ ಗಮನ ಸೆಳೆದಿರುವ ಈ ಸ್ಮಾರ್ಟ್‌ಪೋನ್‌ ದೇಶಿಯ ಮಾರುಕಟ್ಟೆಯಲ್ಲಿಯೂ ಸೌಂಡ್‌ ಮಾಡಲಿದೆ.

ಬಿಡುಗಡೆಗೆ ಸಿದ್ಧವಾದ ಮೊಟೊರೊಲಾ 'ಒನ್‌ ವಿಷನ್'!..48ಎಂಪಿ ಕ್ಯಾಮೆರಾ!

ಹೌದು, ಮೊಟೊರೊಲಾ ಕಂಪನಿಯ 'ಒನ್‌ ವಿಷನ್' ಹೆಸರಿನ ಸ್ಮಾರ್ಟ್‌ಫೋನ್‌ ಇದೇ ಜೂನ್‌ 20ರಂದು ದೇಶಿಯ ಮಾರುಕಟ್ಟೆಗೆ ಎಂಟ್ರಿ ಕೊಡಲಿದ್ದು, ಬೆಲೆಯು 25,000ರೂ.ಗಳ ಒಳಗೆ ಇರಲಿದೆ ಎನ್ನಲಾಗುತ್ತಿದೆ. ಈ ಸ್ಮಾರ್ಟ್‌ಫೋನ್‌ 48ಎಂಪಿ ಕ್ಯಾಮೆರಾ, ಸ್ಪೀಡ್‌ ಪ್ರೊಸೆಸರ್, ಬಿಗ್‌ ಬ್ಯಾಟರಿ ಲೈಫ್ ಫೀಚರ್ಸ್‌ಗಳನ್ನು ಹೊಂದಿರಲಿದೆ. ಹಾಗಾದರೇ ಮೊಟೊರೊಲಾ 'ಒನ್‌ ವಿಷನ್'‌ ಸ್ಮಾರ್ಟ್‌ಫೋನ್‌ ಯಾವೆಲ್ಲಾ ವಿಶೇಷ ಫೀಚರ್ಸ್‌ಗಳನ್ನು ಒಳಗೊಂಡಿರಲಿದೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಡಿಸ್‌ಪ್ಲೇ

ಡಿಸ್‌ಪ್ಲೇ

1080 x 2520 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.3 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಹಾಗೆಯೇ ಡಿಸ್‌ಪ್ಲೇ ಅನುಪಾತವು 21:9 ಅನುಪಾತದಲ್ಲಿದ್ದು, ಸುತ್ತಲೂ ಕಡಿಮೆ ಅಂಚನ್ನು ಒಳಗೊಂಡಿದೆ. ಸೋನಿಯ ಸಿನಿಮಾವಿಷನ್‌ ಡಿಸ್‌ಪ್ಲೇ ಮಾದರಿಯ ಡಿಸ್‌ಪ್ಲೇ ಇದಾಗಿದೆ.

ಪ್ರೊಸೆಸರ್

ಪ್ರೊಸೆಸರ್

ಸ್ಯಾಮ್‌ಸಂಗ್‌ Exynos 9609 ಪ್ರೊಸೆಸರ್ ಅನ್ನು ಹೊಂದಿರುವ ಈ ಸ್ಮಾರ್ಟ್‌ಫೋನ್‌ 2.2GHz ಗಿಗಾಹರ್ಡ್ಜ ವೇಗವನ್ನು ಪಡೆದಿದೆ. 4GB RAM ಶಕ್ತಿಯೊಂದಿಗೆ 128GB ಆಂತರಿಕ ಸ್ಟೋರೇಜ್‌ ಸಾಮರ್ಥ್ಯವನ್ನು ಒಳಗೊಂಡಿದೆ. ಹಾಗೆಯೇ ಎಸ್‌ಡಿ ಕಾರ್ಡ್‌ ಮೂಲಕ ಬಾಹ್ಯವಾಗಿ 512GB ವರೆಗೂ ವಿಸ್ತರಿಸುವ ಆಯ್ಕೆಯನ್ನು ಹೊಂದಿದೆ.

ಕ್ಯಾಮೆರಾ

ಕ್ಯಾಮೆರಾ

ಮೊಟೊ ವಿಷನ್ ಸ್ಮಾರ್ಟ್‌ಫೋನ್‌ ಪ್ರಾಥಮಿಕ ಕ್ಯಾಮೆರಾವು 48ಎಂಪಿ ಸಾಮರ್ಥ್ಯದಲ್ಲಿದ್ದು, ಕ್ವಾಡ್‌ ಪಿಕ್ಸಲ್ ಮಾದರಿಯಲ್ಲಿದೆ. ಅದರ ಅಪರ್ಚರ್ f/1.7 ಆಗಿದೆ. ಹಾಗೆಯೇ ಸೆಕೆಂಡರಿ ಕ್ಯಾಮೆರಾವು f/2.2 ಅಪರ್ಚರ್ನೊಂದಿಗೆ 5ಎಂಪಿ ಸಾಮರ್ಥ್ಯದಲ್ಲಿದ್ದು, ಡೆಪ್ತ ಸೆನ್ಸಾರ್‌ ಹೊಂದಿದೆ. 8x ಡಿಜಿಟಲ್‌ ಝೂಮ್‌ ಆಯ್ಕೆ, ಯೂಬ್ಯೂಬ್‌ ಲೈವ್‌ ಮೋಡ್‌, ಸಿನಿಮಾಗ್ರಫ್‌ ಮೋಡ್‌ ಆಯ್ಕೆಗಳಿವೆ.

ಸೆಲ್ಫಿ ಕ್ಯಾಮೆರಾ

ಸೆಲ್ಫಿ ಕ್ಯಾಮೆರಾ

ಸೆಲ್ಫಿಗಾಗಿ ಕ್ವಾಡ್‌ ಪಿಕ್ಸಲ್ ಕ್ಯಾಮೆರಾವನ್ನು ನೀಡಲಾಗಿದ್ದು, ಇದು 25ಎಂಪಿ ಸಾಮರ್ಥ್ಯವನ್ನು ಹೊಂದಿದೆ ಇದರ ಅಪಾರ್ಚರ್‌ f/2.0 ಆಗಿದೆ. 8x ಡಿಜಿಟಲ್‌ ಝೂಮ್‌ ಆಯ್ಕೆ, HDR, ಮ್ಯಾನುವಲ್ ಮೋಡ್‌, ಸಿನಿಮಾಗ್ರಫ್ ಮೋಡ್, ಮತ್ತು ಯೂಬ್ಯೂಬ್‌ ಲೈವ್‌ ಮೋಡ್‌ ಆಯ್ಕೆಗಳನ್ನು ಒಳಗೊಂಡಿದೆ.

ಬ್ಯಾಟರಿ

ಬ್ಯಾಟರಿ

3,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಟರ್ಬೊ ಚಾರ್ಜಿಂಗ್‌ ಸೌಲಭ್ಯವನ್ನು ಒಳಗೊಂಡಿದೆ. ಇದರ ನೆರವಿನಿಂದ ಸ್ಮಾರ್ಟ್‌ಫೋನ್‌ ವೇಗವಾಗಿ ಚಾರ್ಜ್‌ ಪಡೆದುಕೊಳ್ಳಲಿದೆ. 3.5mm ಆಡಿಯೊ ಜಾಕ್‌, USB Type-C ಪೋರ್ಟ್‌, ರೇರ್‌ ಮೌಂಟೆಡ್‌ ಫಿಂಗರ್‌ಪ್ರಿಂಟ್ ಸೆನ್ಸಾರ್‌ ಸೌಲಭ್ಯಗಳನ್ನು ಸಹ ಪಡೆದುಕೊಂಡಿದೆ.

Best Mobiles in India

English summary
Motorola seems to be all set to launch the smartphone in India as Motorola has scheduled a launch event in India on 20th June. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X