Home
ಸುದ್ದಿಜಾಲ

MS Dhoni turns 42: ಚಾಟ್ ಜಿಪಿಟಿಯೇ ಉಸಿರುಗಟ್ಟುವ ಪ್ರಶ್ನೆ ಕೇಳಿದ ಧೋನಿ ಅಭಿಮಾನಿ!

ಮಹೇಂದ್ರ ಸಿಂಗ್ ಧೋನಿ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಭಾರತದ ಕ್ರಿಯೆಟ್‌ ಸಾಮ್ರಾಜ್ಯದಲ್ಲಿ ಇದು ಅಚ್ಚಳಿಯದ ಹೆಸರು. ಇವರ ವಿಭಿನ್ನ ತಂತ್ರಗಳು, ವಿಶೇಷ ಕೌಶಲ್ಯ ಕ್ರಿಕೆಟ್‌ ಅಭಿಮಾನಿಗಳ ಮನಸ್ಸನ್ನು ಸೆಳೆಯುವುದರಲ್ಲಿ ಎರಡು ಮಾತಿಲ್ಲ. ಈ ನಡುವೆ ಧೋನಿ 42 ನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.

ಹೌದು, ಚುರುಕಾದ ನಾಯಕತ್ವ, ಗಮನಾರ್ಹವಾದ ಫಿನಿಶಿಂಗ್ ಕೌಶಲ್ಯ ಮತ್ತು ಒತ್ತಡದಲ್ಲಿಯೂ ಶಾಂತ ವರ್ತನೆಗೆ ದೋನಿ ಹೆಸರಾಗಿದ್ದು, ಭಾರತೀಯ ಕ್ರಿಕೆಟ್ ಮೇಲೆ ಹಾಗೂ ಒಟ್ಟಾರೆ ಕ್ರೀಡೆಯ ಮೇಲೆ ಇವರು ಬೀರಿದ ಪ್ರಭಾವ ಅಂತಿಂತಹುದಲ್ಲ. ಈ ನಡುವೆ ಇವರ ಬಗ್ಗೆ ವಿವಿಧ ರೀತಿಯಲ್ಲಿ ವಿವಿಧ ಪ್ಲಾಟ್‌ಫಾರ್ಮ್‌ಗಳಲ್ಲಿ ವಿಶೇಷವಾದ ಚರ್ಚೆಗಳು ನಡೆಯುತ್ತಿವೆ. ಅದರಂತೆ ಚಾಟ್‌ಜಿಪಿಟಿ(ChatGPT) ಸಹ ಇವರ ಬಗ್ಗೆ ತನ್ನದೇ ಆದ ಅಭಿಪ್ರಾಯ ಹೊರಹಾಕಿದೆ. ಹಾಗಿದ್ರೆ, ಧೋನಿ ಬಗ್ಗೆ ಚಾಟ್‌ಜಿಪಿಟಿ ಅಭಿಪ್ರಾಯ ಏನು ಎಂಬುದನ್ನು ನೋಡೋಣ ಬನ್ನಿ.

MS Dhoni turns 42:ಚಾಟ್ ಜಿಪಿಟಿಯೇ ಉಸಿರುಗಟ್ಟುವ ಪ್ರಶ್ನೆ ಕೇಳಿದ ಧೋನಿ ಅಭಿಮಾನಿ

ಜನ್ಮದಿನದ ಸಂಭ್ರಮದಲ್ಲಿ ಧೋನಿ: ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ಈಗಾಗಲೇ ನಿವೃತ್ತಿಯಾಗಿರುವ ಧೋನಿ, ಐಪಿಎಲ್ ಕ್ರಿಕೆಟ್ ಪಂದ್ಯಗಳಲ್ಲಿ ಸಕ್ರಿಯ ಆಗಿದ್ದಾರೆ. ಅದಾಗ್ಯೂ ಇವರ ಪ್ರತಿ ಪಂದ್ಯದ ಕೊನೆಯಲ್ಲಿ ನಿವೃತ್ತಿ ಎಂಬ ಕೂಗು ಹೇಳಿಬರುತ್ತಲೇ ಇರುತ್ತದೆ. ಇದಕ್ಕೆ ಧೋನಿಯವರೂ ಮುಗುಳು ನಗೆಯ ಮೂಲಕ ಉತ್ತರಿಸಿರುವುದು ಉಂಟು. ಇದರೊಂದಿಗೆ 'ಧೋನಿ ನಿವೃತ್ತಿಯಾಗಬೇಕೇ?'; ಎಂದು ಅಭಿಮಾನಿಯೊಬ್ಬರು ಚಾಟ್‌ಜಿಪಿಟಿನ್ನು ಕೇಳಿದ್ದಾರೆ.

ಇದಕ್ಕೆ ಚಾಟ್‌ಜಿಪಿಟಿ ವಿಶೇಷವಾದ ಉತ್ತರವನ್ನು ನೀಡಿದ್ದು, ಇದನ್ನು ಓದುವ ಯಾರೇ ಆದರೂ ಥ್ರಿಲ್‌ ಆಗದೇ ಇರಲಾರರು. ಯಾಕೆಂದರೆ ಚಾಟ್‌ಜಿಪಿಟಿ ಹೇಳಿದಂತೆ 'ಎಂಎಸ್ ಧೋನಿ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಮತ್ತು ಅನುಭವಿ ಕ್ರಿಕೆಟಿಗರಲ್ಲಿ ಒಬ್ಬರಾಗಿದ್ದಾರೆ. 2008 ರಲ್ಲಿ ಲೀಗ್ ಪ್ರಾರಂಭವಾದಾಗಿನಿಂದ ಅವರು ಸಿಎಸ್‌ಕೆ ಎಂದು ಕರೆಯಲ್ಪಡುವ ಚೆನ್ನೈ ಸೂಪರ್ ಕಿಂಗ್ಸ್‌ನ ನಾಯಕರಾಗಿ ಆಟ ಮಾಡುತ್ತಿದ್ದಾರೆ'.

'ಇತ್ತೀಚಿನ ವರ್ಷಗಳಲ್ಲಿ, ಐಪಿಎಲ್ ಪಂದ್ಯಗಳಲ್ಲಿ ಧೋನಿ ಅವರ ಫಾರ್ಮ್ ಕೆಲವು ಅಭಿಮಾನಿಗಳ ಆತಂಕದ ವಿಷಯವಾಗಿದೆ. ಯಾಕೆಂದರೆ 2020ರ ಐಪಿಎಲ್ ಋತುವಿನಲ್ಲಿ ಅವರು 14ಪಂದ್ಯಗಳಲ್ಲಿ ಕೇವಲ 200ರನ್ ಮಾತ್ರ ಗಳಿಸಿದರು. ನಂತರ 2021ರ ಋತುವಿನಲ್ಲಿ, ಅವರು 7ಪಂದ್ಯಗಳಲ್ಲಿ ಕೇವಲ 84 ರನ್ ಗಳಿಸಿದರು. ಫಾರ್ಮ್ ಕೊರತೆಯ ಹೊರತಾಗಿಯೂ, ಅವರು ಬ್ಯಾಟ್ಸ್‌ಮನ್ ಮಾತ್ರವಲ್ಲದೆ ಉತ್ತಮ ನಾಯಕ ಮತ್ತು ಅತ್ಯುತ್ತಮ ವಿಕೆಟ್ ಕೀಪರ್ ಕೂಡ ಆಗಿದ್ದಾರೆ. ಅವರ ಅನುಭವ ಮತ್ತು ಆಟ ಬಗ್ಗೆ ಇರುವ ತಂತ್ರದ ಕುಶಾಗ್ರಮತಿ ಸಿಎಸ್‌ಕೆ ಗೆ ದೊಡ್ಡ ಆಸ್ತಿಯಾಗಿದೆ'.

'ಈ ಕಾರಣಕ್ಕೆ ಧೋನಿ ಐಪಿಎಲ್ ಪಂದ್ಯಗಳಿಂದ ನಿವೃತ್ತಿ ಹೊಂದುತ್ತಾರೋ ಇಲ್ಲವೋ ಎಂಬುದು ಅವರ ಫಿಟ್ನೆಸ್,ಫಾರ್ಮ್ ಮತ್ತು ತಂಡದ ಅವಶ್ಯಕತೆಗಳು ಸೇರಿದಂತೆ ಹಲವು ಅಂಶಗಳನ್ನು ಅವಲಂಬಿಸಿರುತ್ತದೆ. ಧೋನಿ ಅವರು ಫಿಟ್ ಆಗಿದ್ದಾರೆ ಮತ್ತು ತಂಡದ ಯಶಸ್ಸಿಗೆ ಕೊಡುಗೆ ನೀಡಬಹುದು ಎಂದು ನಂಬಿದರೆ ಅವರು ಐಪಿಎಲ್‌ನಲ್ಲಿ ಆಡುವುದನ್ನು ಮುಂದುವರಿಸಬೇಕು. ಆದಾಗ್ಯೂ,ಅವರು ತಮ್ಮ ಸಮಯ ಮುಗಿದಿದೆ ಎಂದು ಭಾವಿಸಿದರೆ ಅಥವಾ ಇನ್ಮುಂದೆ ಪ್ರದರ್ಶನ ನೀಡಲು ಸಾಧ್ಯವಿಲ್ಲ ಎಂದು ಸಿಎಸ್‌ಕೆ ತಂಡದ ಮ್ಯಾನೇಜ್‌ಮೆಂಟ್ ಹೇಳಿದರೆ ಐಪಿಎಲ್‌ನಿಂದ ನಿವೃತ್ತರಾಗುವ ಬಗ್ಗೆ ಅವರು ಯೋಚಿಸಬಹುದು' ಎಂದು ತಿಳಿಸಿದೆ.

MS Dhoni turns 42:ಚಾಟ್ ಜಿಪಿಟಿಯೇ ಉಸಿರುಗಟ್ಟುವ ಪ್ರಶ್ನೆ ಕೇಳಿದ ಧೋನಿ ಅಭಿಮಾನಿ

ಈ ಉತ್ತರವನ್ನು ನೀಡುವ ಮೊದಲೇ ಈ ಚಾಟ್‌ಜಿಪಿಟಿಯು, ತಾನು ಯಾವುದೇ ವೈಯಕ್ತಿಕ ಅಭಿಪ್ರಾಯ ಅಥವಾ ಆದ್ಯತೆಯನ್ನು ಹೊಂದಿಲ್ಲ. ಆದರೆ, ವಿಷಯದ ಕುರಿತು ಮಾಹಿತಿ ಮತ್ತು ಒಳನೋಟಗಳನ್ನಷ್ಟೇ ನೀಡಬಲ್ಲೆ ಎಂದು ಉಲ್ಲೇಖಿಸಿದ್ದು, ಈ ಮೂಲಕ ಚಾಟ್‌ಜಿಪಿಟಿ ಬರಹಕ್ಕೆ ಕೆಲವರಂತೂ ತುಂಬಾ ಖುಷಿಪಟ್ಟಿದ್ದಾರೆ. ಇನ್ನು ಈ ಚಾಟ್‌ಜಿಪಿಟಿ ಬಳಕೆ ಆದಾಗಲಿಂದ ಕೆಲವರು ಉದ್ಯೋಗ ಕಳೆದುಕೊಳ್ಳುತ್ತಿದ್ದರೆ ಇನ್ನೂ ಕೆಲವರು ಇದನ್ನೇ ಉದ್ಯೋಗದ ಟೂಲ್ಸ್‌ ಆಗಿ ಮಾಡಿಕೊಂಡಿದ್ದಾರೆ.

ಎಂಎಸ್ ಧೋನಿ ಭಾರತೀಯ ಕ್ರಿಕೆಟ್‌ನಲ್ಲಿ ದೊಡ್ಡ ಹೆಸರಾಗಿದ್ದು, 2020 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ನಂತರವೂ ಅವರು ಜನಪ್ರಿಯತೆ ಕಡಿಮೆ ಆಗಿಲ್ಲ. ನ್ಯೂಜಿಲೆಂಡ್ ವಿರುದ್ಧ ಭಾರತದ 2019 ರ ODI ವಿಶ್ವಕಪ್ ಸೆಮಿಫೈನಲ್ ಅವರ ಕೊನೆಯ ಅಂತರಾಷ್ಟ್ರೀಯ ಪಂದ್ಯವಾಗಿದ್ದು, ಇದಾದ ನಂತರದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ತಮ್ಮ ಚತುರತೆ ಮುಂದುವರೆಸಿಕೊಂಡು ಬರುತ್ತಿದ್ದಾರೆ. ಆದರೆ, ಉತ್ತಮ ಪ್ರದರ್ಶನ ನೀಡುವಲ್ಲಿ ಹಿನ್ನಡೆ ಅನುಭವಿಸುತ್ತಿದ್ದಾರೆ.

Best Mobiles in India

English summary
Dhoni is known for his sharp leadership, remarkable finishing skills and calm demeanor under pressure, meanwhile a fan on chatgpt has asked about Dhoni's retirement.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+