ಮುಖೇಶ್ ಅಂಬಾನಿ ಇದೀಗ ಏಷ್ಯಾದ ನಂ.1 ಸಿರಿವಂತ!..ಜಿಯೋಯಿಂದ ಇಷ್ಟು ಲಾಸ್ ಆದ್ರೂ!?

Written By:

ಜಿಯೋವಿನಿಂದ ಸ್ವಲ್ಪ ಪ್ರಮಾಣದ ನಷ್ಟವಾದರೂ ಕೂಡ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಈಗ ಏಷ್ಯಾದಲ್ಲಿಯೇ ನಂ.1 ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ!!.. ಹೌದು, ಫೋರ್ಬ್ಸ್‌ ನಿಯತಕಾಲಿಕೆಯ ವರದಿಯಲ್ಲಿ ಅಂಬಾನಿ ಏಷ್ಯಾದ ನಂ.1 ಹಾಗೂ ಪ್ರಪಂಚದ 14ನೇ ಶ್ರೀಮಂತನಾಗಿದ್ದಾರೆ.!!

ರಿಲಯನ್ಸ್ ಇಂಡಸ್ಟ್ರೀಸ್‌ನ ಷೇರು ದರ ಬುಧವಾರ 952 ರೂ.ಗೆ ಏರಿಕೆಯಾಗುವುದರೊಂದಿಗೆ ಒಟ್ಟು ಸಂಪತ್ತು 2.73 ಲಕ್ಷ ಕೋಟಿ ರೂ.ಏಷ್ಯಾದಲ್ಲಿಯೇ ಅತಿ ದೊಡ್ಡ ಸಿರಿವಂತರಾಗಿ ಅಂಬಾನಿ ಹೊರಹೊಮ್ಮಿದ್ದು, ಚೀನಾದ ಉದ್ಯಮಿ ಹುಯಿ ಕಾ ಯಾನ್‌ ಅವರನ್ನು ಏಷ್ಯಾದ ಶ್ರೀಮತ ವ್ಯಕ್ತಿ ಸ್ಥಾನದಿಂದ ಎರಡನೇ ಸ್ಥಾನಕ್ಕೆ ದೂಡಿದ್ದಾರೆ.!!

ಮುಖೇಶ್ ಅಂಬಾನಿ ಇದೀಗ ಏಷ್ಯಾದ ನಂ.1 ಸಿರಿವಂತ!..ಜಿಯೋಯಿಂದ ಇಷ್ಟು ಲಾಸ್ ಆದ್ರೂ!?

ಇನ್ನು ಫೋರ್ಬ್ಸ್‌ ನಿಯತಕಾಲಿಕೆ ಪ್ರಕಟಿಸಿರುವ ಈ ಪಟ್ಟಿಯು ರಿಯಲ್ ಟೈಮ್ ಬಿಲೇನಿಯರ್ ಪಟ್ಟಿಯಾಗಿದ್ದು, ನವೆಂಬರ್ ಒಂದನೇ ತಾರೀಖಿನಂದು ಚೀನಾದ ಉದ್ಯಮಿ ಹುಯಿ ಕಾ ಯಾನ್‌ ಅವರ ಆಸ್ತಿ ಬೆಲೆ 40.1 ಬಿಲಿಯನ್ ಡಾಲರ್ ಆಗಿದ್ದರೆ, ಅಂಬಾನಿ ಆಸ್ತಿ 41.8 ಬಿಲಿಯನ್ ಆಗಿದೆ ಎಂದು ವರದಿ ಮಾಡಿದೆ!!

ಮುಖೇಶ್ ಅಂಬಾನಿ ಇದೀಗ ಏಷ್ಯಾದ ನಂ.1 ಸಿರಿವಂತ!..ಜಿಯೋಯಿಂದ ಇಷ್ಟು ಲಾಸ್ ಆದ್ರೂ!?

2016ರಲ್ಲಿ ಜಿಯೋ ಟೆಲಿಕಾಂ ಕಂಪೆನಿ ಶುರು ಮಾಡಿದ್ದ ಅಂಬಾನಿ, ಪೂರ್ತಿ ಆರು ತಿಂಗಳು ಉಚಿತ ಕರೆ ಮತ್ತು ಡೇಟಾ ನೀಡಿ ಗಮನಸೆಳೆದಿದ್ದರು. ಅತ್ಯಂತ ಕಡಿಮೆ ಅವಧಿಯಲ್ಲಿ 13 ಕೋಟಿಗೂ ಹೆಚ್ಚು ಗ್ರಾಹಕರನ್ನು ಹೊಂದುವ ಸಾಧನೆ ಮಾಡಿದ ಜಿಯೋ ಕೇವಲ 270ಕೋಟಿ ನಿವ್ವಳ ನಷ್ಟ ಅನುಭವಿಸಿರುವುದಾಗಿ ತಿಳಿಸಿದೆ.!!

ಓದಿರಿ: ಮೊಬೈಲ್ ಪ್ರಪಂಚ ನಡುಗಿಸಿದ "ರೆಡ್‌ಮಿ ವೈ1" ಮಾರಾಟ ದಿನಾಂಕ ಫಿಕ್ಸ್!!..ಎಂದು ಗೊತ್ತಾ?Read more about:
English summary
Reliance Industries Chairman Mukesh Ambani on Wednesday became the richest man in Asia.to know more visit to kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot