ಐಫೋನ್ ‍X ಹವಾ: ಐಫೋನ್ ‍X ಖರೀದಿಸಲು ಮುಂಬೈ ನಿವಾಸಿ ಮಾಡಿದ್ದೇನು ಗೊತ್ತಾ..?

Written By:

ಭಾರತದಲ್ಲಿ ಐಫೋನ್ ‍X ಹವಾ ಜೋರಾಗಿದೆ ಎಂದರೆ ತಪ್ಪಾಗುವುದಿಲ್ಲ. ವಿಶ್ವ ಮಾರುಕಟ್ಟೆಯಲ್ಲಿ ಗ್ರಾಹಕರು ಐಫೋನ್ X ಖರೀದಿಸಲು ಮುಂದಾಗಿರುವ ಸಂದರ್ಭದಲ್ಲಿ ಭಾರತದಲ್ಲಿಯೂ ಅಭಿಮಾನಿಗಳು ಕ್ಯೂನಲ್ಲಿ ನಿಂತು ದುಬಾರಿ ಬೆಲೆಯ ಫೋನ್ ಅನ್ನು ಕೊಳ್ಳಲು ಮುಂದಾಗಿದ್ದಾರೆ.

ಐಫೋನ್ ‍X ಹವಾ: ಐಫೋನ್ ‍X ಖರೀದಿಸಲು ಮುಂಬೈ ನಿವಾಸಿ ಮಾಡಿದ್ದೇನು ಗೊತ್ತಾ..?

ಓದಿರಿ: ಜಿಯೋ DTH ಸೇವೆಗೆ ಟ್ವಿಸ್ಟ್: Tv ನೋಡಲು ಡಿಶ್ ಬೇಕಾಗಿಲ್ಲ..!

ದುಬಾರಿ ಬೆಲೆಯ ಫೋನ್ ಅನ್ನು ಕೊಳ್ಳುವವರು ಯಾರು ಎನ್ನುವ ಮಾತು ಸುಳ್ಳಾಗಿದ್ದು, ಈಗಾಗಲೇ ಮಾರುಕಟ್ಟೆಯಲ್ಲಿ ಈ ಫೋನ್ ಖರೀಸಲು ತುದಿಗಾಲಿನಲ್ಲಿ ನಿಂತಿರುವವರ ಸಂಖ್ಯೆಯೂ ಹೆಚ್ಚಾಗಿದೆ. ಇದೇ ಮಾದರಿಯಲ್ಲಿ ಮುಂಬೈನ ನಿವಾಸಿಯೊಬ್ಬ ಈ ಫೋನ್ ಖರೀದಿಸಲು ಬ್ಯಾಂಡ್ ಜೊತೆಗೆ ಕುದುರೆ ಮೇಲೆ ಮೆರವಣಿಗೆಯಲ್ಲಿ ಬಂದು ಸುದ್ದಿಯಾಗಿದ್ದಾನೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಐ ಲವ್ ಐಫೋನ್ X:

ಐ ಲವ್ ಐಫೋನ್ X:

ಐ ಲವ್ ಐಫೋನ್ X ಎಂಬ ಬ್ಯಾನರ್ ನೊಂದಿಗೆ ಮೆರೆಣಿಗೆಯಲ್ಲಿ ಪ್ರೀ ಬುಕ್ ಮಾಡಿದ್ದ ಐ ಫೋನ್ ಖರೀದಿಸಲು ಬಂದು ಎಲ್ಲಾರ ಗಮನವನ್ನು ಸೆಳೆದಿದ್ದಾನೆ. ಮಹೇಶ್ ಎನ್ನುವ ಮುಂಬೈ ನಿವಾಸಿ ಸದ್ದು ಕುದುರೆಯ ಮೇಲೆ ಬಂದು ಸದ್ದು ಮಾಡಿದ್ದಾನೆ ಎನ್ನಲಾಗಿದೆ.

ಐಫೋನ್ X ವಿಶೇಷತೆ:

ಐಫೋನ್ X ವಿಶೇಷತೆ:

ಈ ಐಫೋನ್ X ಅನ್ನು ಅಲ್ಯೂಮಿನಿಯಮ್ ನಿಂದ ಮಾಡಲಾಗಿದ್ದು, ಹಿಂಭಾಗದ ಮತ್ತು ಮುಂಭಾಗ ಎರಡು ಕಡೆಗಳಲ್ಲೂ ಗ್ಲಾಸ್ ಫಿನಿಷಿಂಗ್ ಹೊಂದಿದೆ. ಸ್ಪೇಸ್ ಗ್ರೇ ಮತ್ತು ಸಿಲ್ವರ್ ಬಣ್ಣದಲ್ಲಿ ಮಾತ್ರವೇ ಲಾಂಚ್ ಆಗಿದೆ. ಈ ಫೋನಿನಲ್ಲಿ ನಾವು ಸೂಪರ್ ರೆಟೀನಾ ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ.

ಎರಡು ಆವೃತ್ತಿ;

ಎರಡು ಆವೃತ್ತಿ;

ಐಫೋನ್ X ಭಾರತೀಯ ಮಾರುಕಟ್ಟೆಯಲ್ಲಿ ಎರಡು ಆವೃತ್ತಿಯಲ್ಲಿ ದೊರೆಯಲಿದೆ ಎನ್ನಲಾಗಿದೆ. 64GB ಐಫೋನ್ X ಬೆಲೆ ರೂ. 89,000 ಆಗಲಿದ್ದು, ಇದೇ ಮಾದರಿಯಲ್ಲಿ 256GB ಆವೃತ್ತಿಯ ಬೆಲೆ ರೂ. 102,000ಕ್ಕೆ ದೊರೆಯಲಿದೆ.

ಡ್ಯುಯಲ್ ಕ್ಯಾಮೆರಾ ಇದೆ:

ಡ್ಯುಯಲ್ ಕ್ಯಾಮೆರಾ ಇದೆ:

ಐಫೋನ್ X ನಲ್ಲಿ 12 MP ಡ್ಯುಯಲ್ ಕ್ಯಾಮೆರಾವನ್ನು ಕಾಣಬಹುದಾಗಿದೆ. ಇದರಲ್ಲಿ ವೈಡ್ ಆಂಗಲ್ ಲೈನ್ಸ್ f/1.8 ಅಪರ್ಚರ್ ಹೊಂದಿದ್ದು, ಟೆಲಿ ಲೈನ್ಸ್ f/2.4 ಅಪರ್ಚರ್ ನಲ್ಲಿ ಫೋಟೊವನ್ನು ಕ್ಲಿಕ್ ಮಾಡಲಿದೆ. ಇದಲ್ಲದೇ ಡ್ಯುಯಲ್ ಟೊನ್ LED ಫ್ಲಾಷ್ ಸಹ ಇದರಲ್ಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Mumbai man brings a band, rides horse to store. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot