ಮಿಡ್ ರೇಂಜ್‌ನಲ್ಲಿ ಕರ್ವ್ಡ್ ಡಿಸ್‌ಪ್ಲೇ ಸ್ಮಾರ್ಟ್‌ಫೋನ್ ಖರೀದಿಸುವ ಮುನ್ನ ಕಡ್ಡಾಯವಾಗಿ ಈ ಬಗ್ಗೆ ತಿಳಿದುಕೊಳ್ಳಿ!
ಫೋನ್ ಆವಿಷ್ಕಾರ ಆದಾಗಿನಿಂದ ಹೊಸ ಹೊಸ ಶೈಲಿಯಲ್ಲಿ ಸ್ಮಾರ್ಟ್‌ಫೋನ್‌ಗಳು ಬಳಕೆದಾರರಿಗೆ ಲಭ್ಯ ಆಗುತ್ತಿವೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಫೋಲ್ಡಬಲ್ ಫೋನ್‌ಗಳು(foldable phone) ಮಾರುಕಟ್ಟೆಯಲ್ಲಿ ಸುಂಟರಗಾಳಿಯನ್ನೇ ಎಬ್ಬಿಸಿವೆ. ಇದರೊಂದಿಗೆ ಕರ್ವ್ಡ್ ಡಿಸ್ಪ್ಲೇ (Curved display) ಆಯ್ಕೆ ಇರುವ ಸ್ಮಾರ್ಟ್‌ಫೋನ್‌ಗಳಿಗೂ ಸಹ ಬೇಡಿಕೆ ಹೆಚ್ಚಾಗುತ್ತಿದೆ
ಹೌದು, ಇತ್ತೀಚಿನ ದಿನಗಳಲ್ಲಿ ಎಲ್ಲಾ ಪ್ರಮುಖ ಬ್ರ್ಯಾಂಡ್‌ಗಳು ಕರ್ವ್ಡ್ ಡಿಸ್ಪ್ಲೇ ಆಯ್ಕೆ ಇರುವ ಫೋನ್‌ಗಳನ್ನು ಅನಾವರಣ ಮಾಡಿಕೊಂಡು ಬರುತ್ತಿವೆ. ಆದರೆ, ನೀವು ಹೊಸದಾಗಿ ಕರ್ವ್ಡ್ ಡಿಸ್ಪ್ಲೇ ಇರುವ ಸ್ಮಾರ್ಟ್‌ಫೋನ್ ಖರೀದಿ ಮಾಡಬೇಕು ಎಂದುಕೊಂಡಿದ್ದರೆ ಮೊದಲು ಈ ವಿಷಯಗಳನ್ನು ತಿಳಿದುಕೊಳ್ಳಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಕೆಲವು ಸಮಸ್ಯೆ ಎದುರಿಸಬೇಕಾಗುತ್ತದೆ. ಹಾಗಿದ್ರೆ, ಈ ಫೋನ್‌ನಿಂದ ಆಗುವ ಅನುಕೂಲ ಹಾಗೂ ಅನಾನುಕೂಲಗಳೇನು? ಎಂಬ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ ನೋಡಿ.

ಭಾರತದಲ್ಲಿನ ಮೊಬೈಲ್ ಉದ್ಯಮವು 2023 ರಲ್ಲಿ ಆಸಕ್ತಿದಾಯಕ ಬೆಳವಣಿಗೆಗೆ ಸಾಕ್ಷಿಯಾಗುತ್ತಿದೆ. ಇದಕ್ಕೆ ಕಾರಣ ಏನೆಂದರೆ ಕರ್ವ್ಡ್ ಡಿಸ್ಪ್ಲೇ ಇರುವ ಫೋನ್‌ಗಳು. ಮೊದಲು ಸ್ಯಾಮ್‌ಸಂಗ್ ಈ ರೀತಿಯ ಫೋನ್‌ಗಳನ್ನು ಲಾಂಚ್ ಮಾಡಿದ್ದಾಗ ಹೊಸ ಅಲೆಯೇ ಎದ್ದಿತ್ತು. ಆದರೆ, ಇದನ್ನು ಅಂದು ಪ್ರೀಮಿಯಂ ವಿಭಾಗಕ್ಕೆ ಸೇರಿಸಲಾಗಿತ್ತು. ಈಗ ಮಿಡ್‌ರೇಂಜ್‌ನಲ್ಲೂ ಈ ಫೋನ್‌ಗಳು ಲಭ್ಯ ಇವೆ.
ಮಿಡ್‌ರೇಂಜ್‌ನಲ್ಲಿ ಈ ಸ್ಕ್ರೀನ್ ಆಯ್ಕೆಯ ಫೋನ್‌ಗಳು ಲಭ್ಯ ಇರುವುದರಿಂದಾಗಿ ಸಾಕಷ್ಟು ಜನರಿಗೆ ಫೋನ್ ಖರೀದಿ ಮಾಡುವಾಗ ಫ್ಲಾಟ್ ಸ್ಕ್ರೀನ್(Flat screen) ಹೊಂದಿರುವ ಸ್ಮಾರ್ಟ್‌ಫೋನ್ ಅನ್ನು ಖರೀದಿಸಬೇಕೇ ಅಥವಾ ಕರ್ವ್ಡ್ ಡಿಸ್ಪ್ಲೇ ಆಯ್ಕೆ ಇರುವ ಫೋನ್ ಅನ್ನು ಖರೀದಿ ಮಾಡಬೇಕೇ ಎಂಬ ಬಗ್ಗೆ ಬಹಳ ಗೊಂದಲ ನಿರ್ಮಾಣ ಆಗಿದೆ. ಇದಕ್ಕೆ ಇಲ್ಲಿದೆ ನೋಡಿ ಉತ್ತರ.
ಕರ್ವ್ಡ್ ಡಿಸ್‌ಪ್ಲೇ ಅನುಕೂಲ: ಈ ಫೋನ್‌ಗಳು ಕರ್ವ್ಡ್ ಡಿಸ್ಪ್ಲೇ ಆಯ್ಕೆ ಹೊಂದಿರುವುದನ್ನು ಸಾಮಾನ್ಯವಾಗಿ ಸೌಂದರ್ಯಶಾಸ್ತ್ರ ವಿಚಾರ ಎಂದು ಪರಿಗಣಿಸಬಹುದು. ಖಂಡಿತಾ ಇದು ಒಪ್ಪುವ ಮಾತು. ಇತರೆ ಫೋನ್‌ಗಳಿಗೆ ಹೋಲಿಕೆ ಮಾಡಿದರೆ ಈ ರೀತಿಯ ಫೋನ್‌ಗಳು ಹೆಚ್ಚು ಆಕರ್ಷಕವಾಗಿ ಕಾಣಿಸುತ್ತವೆ. ಅದರಲ್ಲೂ ಸ್ವೈಪ್ ಗೆಸ್ಚರ್‌ಗಳಿಂದ ಹಿಡಿದು ಮಲ್ಟಿಮೀಡಿಯಾ ವೀಕ್ಷಣೆಯವರೆಗಿನ ಒಟ್ಟಾರೆ ಯುಐಯ ಅನುಭವವು ಉತ್ತಮವಾಗಿರಲಿದೆ.
ಕರ್ವ್ಡ್ ಡಿಸ್‌ಪ್ಲೇ ಅನಾನುಕೂಲ: ಇನ್ನು ಈ ಫೋನ್‌ಗಳಿಂದ ಆಗುವ ಅನಾನುಕೂಲ ಏನೆಂದು ನೋಡುವುದಾದರೆ ಡಿಸ್‌ಪ್ಲೇ ಆಕಾರವನ್ನು ನೀಡುವ ತಂತ್ರಜ್ಞಾನವಾದ ಥರ್ಮೋಫಾರ್ಮಿಂಗ್ ಅನ್ನು ಬಳಸಿಕೊಂಡು ಕರ್ವ್ಡ್ ಡಿಸ್‌ಪ್ಲೇ ಯನ್ನು ಉತ್ಪಾದಿಸುವ ವೆಚ್ಚವು ಫ್ಲಾಟ್ ಪ್ಯಾನಲ್‌ಗಿಂದ ಹೆಚ್ಚು ದುಬಾರಿಯಾಗಿದೆ. ಈ ಪ್ಯಾನೆಲ್‌ಗಳ ಮತ್ತೊಂದು ತೊಂದರೆ ಏನೆಂದರೆ ನಿರ್ದಿಷ್ಟ ಕೋನದಿಂದ ನೋಡಿದಾಗ ಅಂಚುಗಳ ಮೇಲೆ ಬಣ್ಣ ಸ್ವಿಫ್ಟ್ ಆಗಿ ಕಾಣಿಸಿಕೊಳ್ಳುತ್ತದೆ.
ಇದರೊಂದಿಗೆ ಡಿಸ್‌ಪ್ಲೇ ಬದಿಯಲ್ಲಿ ಉತ್ತಮ ಟಚ್ ಪ್ರತಿಕ್ರಿಯೆ ಲಭ್ಯವಾಗುವುದಿಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ಸುಧಾರಿತ ಫೀಚರ್ಸ್‌ನೊಂದಿಗೆ ಲಾಂಚ್ ಆಗುತ್ತಿರುವ ಫೋನ್‌ಗಳಲ್ಲಿ ಇದನ್ನು ಸರಿಪಡಿಸಲಾಗುತ್ತಿದೆಯಂತೆ. ಇದರೊಂದಿಗೆ ಆಕಸ್ಮಿಕವಾಗಿ ಫೋನ್ ಅನ್ನು ಎಲ್ಲಾದರೂ ಕೆಳಗೆ ಬೀಳಿಸಿದರೆ ಡಿಸ್‌ಪ್ಲೇ ಕಂಡಿತಾ ನುಚ್ಚು ನೂರಾಗುವುದರಲ್ಲಿ ಎರಡು ಮಾತಿಲ್ಲ.

ಹಾಗಿದ್ರೆ ಯಾರೆಲ್ಲಾ ಈ ಡಿಸ್‌ಪ್ಲೇ ಇರುವ ಫೋನ್ ಖರೀದಿ ಮಾಡಬಹುದು?: ಸಾಮಾಜಿಕ ಮಾಧ್ಯಮ ಮತ್ತು ಸಂವಹನದಂತಹ ದೈನಂದಿನ ಕಾರ್ಯಗಳಿಗಾಗಿ ನೀವು ಸ್ಮಾರ್ಟ್‌ಫೋನ್ ಬಳಕೆ ಮಾಡುವವರಾಗಿದ್ದರೆ ಅದರಲ್ಲೂ ಹೆಚ್ಚಾಗಿ ಒಳಾಂಗಣದಲ್ಲಿ ಫೋನ್‌ಗಳನ್ನು ಬಳಕೆ ಮಾಡುವವರಾಗಿದ್ದರೆ ಈ ಫೋನ್ ಸೂಕ್ತ. ಆದರೆ, ನಿಮ್ಮ ಪ್ರಾಥಮಿಕ ಉದ್ದೇಶವು ಗೇಮಿಂಗ್ ಆಗಿದ್ದರೆ, ಈ ಕರ್ವ್ಡ್ ಡಿಸ್ಪ್ಲೇ ಇರುವ ಫೋನ್‌ಗಳನ್ನು ಖರೀದಿ ಮಾಡಲು ಮುಂದಾಗಬೇಡಿ. ಇದರಿಂದ ನಿಮ್ಮ ಗೇಮಿಂಗ್ ಅನುಭವ ಉತ್ತಮವಾಗಿರುವುದಿಲ್ಲ.
ಮಧ್ಯಮ ಶ್ರೇಣಿಯಲ್ಲಿ ಯಾವೆಲ್ಲಾ ಫೋನ್‌ಗಳಿವೆ?: ಅದಾಗ್ಯೂ ಈ ಕರ್ವ್ಡ್ ಡಿಸ್ಪ್ಲೇ ಆಯ್ಕೆ ಇರುವ ಫೋನ್‌ಗಳನ್ನು ಖರೀದಿ ಮಾಡಲು ಇಚ್ಚಿಸಿದರೆ ನಿಮಗೆ ಹಲವಾರು ಆಯ್ಕೆಗಳಿವೆ. ಅದರಲ್ಲಿ ಪ್ರಮುಖವಾಗಿ 30,000 ರೂ.ಗಳಿಗಿಂತ ಕಡಿಮೆ ಬೆಲೆಯಲ್ಲಿ ಲಾಂಚ್ ಆಗಿರುವ ಲಾವಾ ಅಗ್ನಿ 2(Lava agni 2), ರಿಯಲ್‌ಮಿ 11 ಪ್ರೊ (Realme 11 Pro) ಸರಣಿ ಮತ್ತು ನಾರ್ಜೋ 60 ಪ್ರೊ 5G (Narzo 60 Pro 5G), ಮೊಟೊರೊಲಾ ಎಡ್ಜ್ 40 (Motorola Edge 40) ಫೋನ್‌ಗಳಿವೆ. ಇದರೊಂದಿಗೆ ಐಕ್ಯೂ Z7 ಪ್ರೊ 5G (IQ Z7 Pro 5G)ಸಹ ಇನ್ನೇನು ಕೆಲವೇ ದಿನಗಳಲ್ಲಿ ಲಾಂಚ್ ಅಗಲಿದೆ.


Click it and Unblock the Notifications








