Home
ಸುದ್ದಿಜಾಲ

MWC 2024: ಇನ್ಮುಂದೆ ಈ ಫೋನ್‌ಗಳದ್ದೇ ಆರ್ಭಟ, ಯಾವ ಕಂಪನಿಯ ಫೋನ್‌ ಇದು?

ಸ್ಮಾರ್ಟ್‌ಫೋನ್‌ಗಳ (smartphones) ವಿಭಾಗದಲ್ಲಿ ಭಿನ್ನ ರೀತಿಯ ಫೋನ್‌ಗಳನ್ನು ನಾವು ನೋಡಿದ್ದೇವೆ. ಅದರಲ್ಲೂ ಡಿಸ್‌ಪ್ಲೇಯನ್ನು ಕೇಂದ್ರೀಕರಿಸಿಕೊಂಡು ವಿವಿಧ ರೀತಿಯ ಸ್ಮಾರ್ಟ್‌ಫೋನ್‌ಗಳನ್ನು ಅನಾವರಣ ಮಾಡಲಾಗಿದೆ. ಆದರೆ, ಈಗ ಎಲ್ಲರೂ ಹುಬ್ಬೇರಿಸು ಸ್ಮಾರ್ಟ್‌ಫೋನ್‌ ಮಾದರಿಯನ್ನು ಪ್ರದರ್ಶಿಸಲಾಗಿದೆ.

ಹೌದು, ಈಗಾಗಲೇ ಮಾರುಕಟ್ಟೆಯಲ್ಲಿ ಫೋಲ್ಡಬಲ್‌, ಫ್ಲಿಪ್, ಕರ್ವ್ಡ ಡಿಸ್‌ಪ್ಲೇ ಸೇರಿದಂತೆ ಅನೇಕ ರೀತಿಯ ಸ್ಮಾರ್ಟ್‌ಫೋನ್‌ಗಳನ್ನು ನೋಡಿರಬಹುದು. ಆದರೆ ಇದೆಲ್ಲವನ್ನೂ ಮೀರಿಸುವ ಮತ್ತೊಂದು ಫೋನ್‌ ಇನ್ನೇನು ಕೆಲವೇ ವರ್ಷಗಳಲ್ಲಿ ಮಾರುಕಟ್ಟೆಗೆ ಎಂಟ್ರಿ ನೀಡಲು ಸಜ್ಜಾಗುತ್ತಿದೆ. ಅದುವೇ ಬೆಂಡಬಲ್‌ ಫೋನ್‌ (Bendable phone). ಹಾಗಿದ್ರೆ, ಈ ಫೋನ್‌ನ ವಿಶೇಷತೆ ಏನು?, ಈ ಫೋನ್‌ ಅನ್ನು ಪ್ರದರ್ಶಿಸಿದ ಕಂಪೆನಿ ಯಾವುದು ಅನ್ನೋ ಮಾಹಿತಿ ಇಲ್ಲಿದೆ ನೋಡಿ.

MWC 2024: ಇನ್ಮುಂದೆ ಈ ಫೋನ್‌ಗಳದ್ದೇ ಆರ್ಭಟ, ಯಾವ ಕಂಪನಿಯ ಫೋನ್‌ ಇದು?

ಬೆಂಡಬಲ್ ಫೋನ್: ಬೆಂಡಬಲ್ ಫೋನ್ ಎಂದಾಕ್ಷಣ ನೀವು ಹೋ.. ಇದು ಮೊಟೊರೊಲಾ ಕಂಪೆನಿಯ ಫೋನ್‌ ಕಂಪೆನಿ ಎಂದುಕೊಳ್ಳಬಹುದು. ಆದರೆ, ಖಂಡಿತಾ ಮೊಟೊರೊಲಾದ ಫೋನ್‌ ಅಲ್ಲ ಬದಲಾಗಿ ಸ್ಮಾರ್ಟ್‌ಫೋನ್‌ ವಿಭಾಗದಲ್ಲಿ ಅಗ್ರ ಸ್ಥಾನ ಪಡೆದಿರುವ ಸ್ಯಾಮ್‌ಸಂಗ್‌ ಫೋನ್‌. ಸ್ಯಾಮ್‌ಸಂಗ್‌ ಸಹ ಈ ಫೋಲ್ಡಬಲ್‌ ಫೋನ್‌ ವಿಭಾಗದಲ್ಲಿ ಕೆಲಸ ಮಾಡುತ್ತಿದೆ.

ಮೊಬೈಲ್ ವರ್ಲ್ಡ್ ಕಾಂಗ್ರೆಸ್ 2024 (MWC 2024) ರಲ್ಲಿ ಸ್ಯಾಮ್‌ಸಂಗ್ ತನ್ನದೇ ಆದ ಈ ವಿಶೇಷ ಮಾದರಿಯ ಫೋನ್ ಅನ್ನು ಪ್ರದರ್ಶಿಸಿದೆ. ಈ ಫೋನ್‌ ಅನ್ನು ಬಳಕೆದಾರರು ಮಣಿಕಟ್ಟಿನ ಮೇಲೆ ಸ್ಮಾರ್ಟ್‌ವಾಚ್‌ ರೀತಿ ಧರಿಸಬಹುದಾಗಿದೆ. ಇದಕ್ಕೆ OLED ಕ್ಲಿಂಗ್ ಬ್ಯಾಂಡ್ (OLED cling band) ಎಂದು ಹೆಸರು ನೀಡಲಾಗಿದ್ದು, ಮೊಟೊರೊಲಾದ ಬೆಂಡೆಬಲ್ ಫೋನ್‌ನಂತೆಯೇ 6.9 ಇಂಚಿನ ಡಿಸ್‌ಪ್ಲೇನ್ನು ಹೊಂದಿದೆ.

MWC 2024: ಇನ್ಮುಂದೆ ಈ ಫೋನ್‌ಗಳದ್ದೇ ಆರ್ಭಟ, ಯಾವ ಕಂಪನಿಯ ಫೋನ್‌ ಇದು?

ವಿಶೇಷ ಏನೆಂದರೆ ಬಳಕೆದಾರರು ಮ್ಯಾಗ್ನೆಟಿಕ್ ಬ್ಯಾಂಡ್ ಅನ್ನು ಧರಿಸುವ ಅಗತ್ಯವಿಲ್ಲ. ಜೊತೆಗೆ ಎರಡರ ನಡುವಿನ ಮತ್ತೊಂದು ಹೋಲಿಕೆ ಏನೆಂದರೆ, ಫೋನ್‌ ಅನ್ನು ಎಷ್ಟು ಬಾಗಿಸಿದರೂ ಸಹ ಅದಕ್ಕೆ ತಕ್ಕ ಇಂಟರ್ಫೇಸ್ ಅನ್ನು ಆಟೋಮ್ಯಾಟಿಕ್‌ ಆಗಿ ಸರಿಹೊಂದಿಸುತ್ತದೆ. ನೀವು ಅದನ್ನು ಯಾವ ರೀತಿಯಲ್ಲೂ ಫೋಲ್ಡ ಮಾಡಿದರೂ ಸಹ ಸಂಪೂರ್ಣ ಯುಐಗೆ ನೀವು ಪ್ರವೇಶ ಪಡೆಯಬಹುದಾಗಿದೆ.

ಮೊಟೊರೊಲಾದ ಪರಿಕಲ್ಪನೆಗಿಂತ ಈ ಫೋನ್‌ ಭಿನ್ನವಾಗಿದೆ. OLED ಕ್ಲಿಂಗ್ ಬ್ಯಾಂಡ್ ರಿಯರ್‌ನಲ್ಲಿ ಕ್ಯಾಮೆರಾ ಆಯ್ಕೆ ನೀಡಲಾಗಿದ್ದು, ಕೆಳಭಾಗದಲ್ಲಿ ಸ್ಪೀಕರ್ ಮತ್ತು ಯುಎಸ್‌ಬಿ ಟೈಪ್-ಸಿ ಪೋರ್ಟ್ ಅನ್ನು ಹೊಂದಿದೆ. ನೀವು ಫೋನ್ ಅನ್ನು ಪೋಲ್ಡ್ ಮಾಡಿ ಅದನ್ನು ನಿಮ್ಮ ಮಣಿಕಟ್ಟಿನ ಮೇಲೆ ಧರಿಸಿದಾಗ, ಹೃದಯ ಬಡಿತ ಸೆನ್ಸರ್‌ ಕೆಲಸ ಮಾಡಲು ಶುರು ಮಾಡುತ್ತದೆ. ಈ ಮೂಲಕ ಫಿಟ್‌ನೆಸ್ ಬ್ಯಾಂಡ್‌ನಂತೆ ಕೆಲಸ ಮಾಡುತ್ತದೆ.

ಗಮನಿಸಬೇಕಾದ ವಿಷಯ ಏನೆಂದರೆ ನೀವು ಎಲ್ಲಾ ಸಮಯದಲ್ಲೂ ನಿಮ್ಮ ಮಣಿಕಟ್ಟಿನ ಮೇಲೆ ಫೋನ್ ಧರಿಸಲು ಸಾಧ್ಯವಿಲ್ಲ. ಆದರೂ ಡಿವೈಸ್‌ ಭಾಗಶಃ ಆರೋಗ್ಯದ ಮೆಟ್ರಿಕ್‌ಗಳನ್ನು ಮಾತ್ರ ರೆಕಾರ್ಡ್ ಮಾಡಲು ಅನುಕೂಲ ಮಾಡಿಕೊಡುತ್ತದೆ ಎನ್ನಲಾಗಿದೆ. ಅಲ್ಲದೆ, ಮಣಿಕಟ್ಟಿನ ಮೇಲೆ ದೊಡ್ಡ ಸ್ಮಾರ್ಟ್‌ಫೋನ್‌ ಇರಿಸಿಕೊಂಡು ಮಲಗಲು ಯಾರೂ ತಾನೆ ಇಷ್ಟ ಪಡುತ್ತಾರೆ ಹೇಳಿ. ಈ ಕಾರಣಕ್ಕೆ ಹೇಳಿದ್ದು, ಖಂಡಿತಾ ಇದನ್ನು ಯಾವಾಗಲೂ ವಾಚ್‌ನಂತೆ ಬಳಕೆ ಮಾಡಲು ಆಗುವುದಿಲ್ಲ ಎಂದು.

MWC 2024: ಇನ್ಮುಂದೆ ಈ ಫೋನ್‌ಗಳದ್ದೇ ಆರ್ಭಟ, ಯಾವ ಕಂಪನಿಯ ಫೋನ್‌ ಇದು?

ಈ ರೀತಿಯ ಫೋನ್‌ಗಳು ಇನ್ನೂ ಬಳಕೆದಾರರಿಗೆ ಲಭ್ಯವಾಗಿಲ್ಲವಾದರೂ ಸಹ ಫೋನ್ ಅನ್ನು ಪದೇ ಪದೇ ಫೋಲ್ಡ್ ಮಾಡಿದ್ರೆ ಸಣ್ಣ ಬಿರುಕುಗಳಿಗೆ ಕಾರಣವಾಗಬಹುದು ಎಂಬ ಕಲ್ಪನೆ ಸಹ ಇದೆ. ಜೊತೆಗೆ ಮಣಿಕಟ್ಟಿನ ಮೇಲೆ ಫೋನ್ ಧರಿಸುವುದು ದೀರ್ಘಾವಧಿಯಲ್ಲಿ ಅಹಿತಕರವಾಗಿರುತ್ತದೆ, ಏಕೆಂದರೆ ಇದು ಸ್ಮಾರ್ಟ್‌ವಾಚ್‌ಗಳಿಗಿಂತ ಭಾರವಾಗಿರುತ್ತದೆ. ಏನೇ ಆದರೂ ಈಗಂತೂ ಈ ಫೋನ್‌ಗಳು ಮಾರುಕಟ್ಟೆಯಲ್ಲಿ ಲಭ್ಯ ಇರುವುದಿಲ್ಲ. ಇವು ಲಾಂಚ್‌ ಆಗಲು ಇನ್ನೂ ಹಲವಾರು ವರ್ಷಗಳು ಕಾಯಬೇಕಿದೆ.

Best Mobiles in India

English summary
At the Mobile World Congress 2024 (MWC 2024), Samsung has showcased its own special model of the phone. It is called OLED cling band and has a 6.9 inch display similar to Motorola's bendable phone.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+