Home
ಸುದ್ದಿಜಾಲ

MWC 2024: ಟೆಕ್ನೋದ ಈ ಎರಡು ಅಚ್ಚರಿಯ ಡಿವೈಸ್‌ಗೆ ಹುಬ್ಬೇರಿಸಿದ ಗ್ರಾಹಕರು!

ಬಾರ್ಸಿಲೋನಾದಲ್ಲಿ ನಡೆಯುತ್ತಿರುವ ಮೊಬೈಲ್ ವರ್ಲ್ಡ್ ಕಾಂಗ್ರೆಸ್ (MWC) 2024 ರಲ್ಲಿ ಈ ಬಾರಿಯು ಅಚ್ಚರಿ ಟೆಕ್‌ ಉತ್ಪನ್ನಗಳು ಅನಾವರಣ ಆಗಿವೆ. ಕೆಲವು ಮೊಬೈಲ್‌ ಬ್ರ್ಯಾಂಡ್‌ಗಳು ಹೊಸ ಆವಿಸ್ಕಾರದ ಸ್ಮಾರ್ಟ್‌ ಗ್ಯಾಡ್ಜೆಟ್‌ಗಳನ್ನು ಪರಿಚಯಿಸಿ ಟೆಕ್‌ ವಲಯದಲ್ಲಿ ಅಚ್ಚರಿ ಮೂಡಿಸಿವೆ. ಆ ಪೈಕಿ ಟೆಕ್ನೋ ಸಂಸ್ಥೆಯು ಕೂಡಾ ಕೆಲವು ಸ್ಮಾರ್ಟ್‌ ಉತ್ಪನ್ನಗಳನ್ನು ಪರಿಚಯಿಸಿದೆ.

ಹೌದು, ಮೊಬೈಲ್ ವರ್ಲ್ಡ್ ಕಾಂಗ್ರೆಸ್ (MWC) 2024 ರಲ್ಲಿ ಟೆಕ್ನೋ ಸಂಸ್ಥೆಯು AR ಗ್ಲಾಸ್‌ ಸೆಟ್‌, ಜರ್ಮನ್ ಶೆಫರ್ಡ್ ಮಾದರಿಯ ರೋಬೋಟ್ ಡಾಗ್‌ ಉತ್ಪನ್ನಗಳನ್ನು ಅನಾವರಣ ಮಾಡಿದೆ. ಈ ನೂತನ ಉತ್ಪನ್ನಗಳು ಅವುಗಳ ವಿಶೇ‍ಷ ರಚನೆ ಹಾಗೂ ಫೀಚರ್ಸ್‌ಗಳಿಂದ ಮಾರುಕಟ್ಟೆಯ ಗಮನ ಸೆಳೆದಿವೆ.

MWC 2024: ಟೆಕ್ನೋದ ಈ ಎರಡು ಅಚ್ಚರಿಯ ಡಿವೈಸ್‌ಗೆ ಹುಬ್ಬೇರಿಸಿದ ಗ್ರಾಹಕರು!

ಟೆಕ್ನೋ ಪಾಕೆಟ್ ಗೋ ಎಂದು ಕರೆಯಲ್ಪಡುವ AR ಗೇಮಿಂಗ್ ಸೆಟ್ ಅನ್ನು ವಿಶ್ವದ ಮೊದಲ ವಿಂಡೋಸ್ ಆಧಾರಿತ AR ಗೇಮಿಂಗ್ ಕಿಟ್ ಎಂದು ಹೇಳಲಾಗಿದೆ. ಅಲ್ಲದೇ 6D ತಲ್ಲೀನಗೊಳಿಸುವ ಗೇಮಿಂಗ್ ಅನುಭವವನ್ನು ಇದು ಒದಗಿಸಲಿದೆ ಎನ್ನಲಾಗಿದೆ. ಹಾಗೆಯೇ ರೋಬೋಟ್ ಡಾಗ್‌ ಸಾಧನವನ್ನು 'ಡೈನಾಮಿಕ್ 1' ಎಂದು ಕರೆಯಲಾಗಿದ್ದು, ಇದು AI ಸಪೋರ್ಟ್‌ನ ಬಯೋಮಾರ್ಫಿಕ್ ಡಾಗ್‌ ಆಗಿದೆ.

ಇನ್ನು ಟೆಕ್ನೋ ಪಾಕೆಟ್ ಗೋ ಎಆರ್‌ ಗ್ಲಾಸ್‌ ಸಾಧನವು AMD Ryzen 7 8840HS ಪ್ರೊಸೆಸರ್‌ನಿಂದ ಕೆಲಸ ನಿರ್ವಹಿಸಲಿದೆ. ಇದು 16GB RAM ಮತ್ತು 1TB PCle 4.0 SSD ಸ್ಟೋರೇಜ್‌ ಸೌಲಭ್ಯದ ಆಯ್ಕೆ ಒಳಗೊಂಡಿರುತ್ತದೆ. ಇನ್ನು ಈ ಸಾಧನವು 50Wh ಬದಲಾಯಿಸಬಹುದಾದ ಬ್ಯಾಟರಿ ಸೌಲಭ್ಯದೊಂದಿಗೆ ಲಭ್ಯ ಎನ್ನಲಾಗಿದೆ.

MWC 2024: ಟೆಕ್ನೋದ ಈ ಎರಡು ಅಚ್ಚರಿಯ ಡಿವೈಸ್‌ಗೆ ಹುಬ್ಬೇರಿಸಿದ ಗ್ರಾಹಕರು!

ಟೆಕ್ನೋ ಪಾಕೆಟ್ ಗೋ ಡಿವೈಸ್‌ ಪಿಸಿ-ಮಟ್ಟದ ದೊಡ್ಡ ಕೂಲಿಂಗ್ ಫ್ಯಾನ್ ಅನ್ನು ಹೊಂದಿದೆ ಎನ್ನಲಾಗಿದ್ದರೂ, ವೈರ್‌ಲೆಸ್ ಕನ್ಸೋಲ್ ಇತರ ವಿಂಡೋಸ್ ಗೇಮಿಂಗ್ ಹ್ಯಾಂಡ್‌ಹೆಲ್ಡ್ ಕನ್ಸೋಲ್‌ಗಳಿಗಿಂತ 50 ಪ್ರತಿಶತ ಚಿಕ್ಕದಾಗಿದೆ. ಅಲ್ಲದೇ ಇದು 30 ಪ್ರತಿಶತ ಹಗುರವಾಗಿದೆ ಎಂದು ವರದಿಯಾಗಿದೆ.

ಇನ್ನು ಟೆಕ್ನೋ ಪಾಕೆಟ್ ಗೋ ಕನ್ಸೋಲ್ ಅನ್ನು AR ಪಾಕೆಟ್ ವಿಷನ್ ಎಂಬ AR ಹೆಡ್‌ಸೆಟ್‌ನೊಂದಿಗೆ ಕನೆಕ್ಟ್‌ ಮಾಡಲು ಉದ್ದೇಶಿಸಲಾಗಿದೆ. ಇನ್ನು ಇದರ ಗ್ಲಾಸ್‌ಗಳು 0.71 ಇಂಚಿನ ಮೈಕ್ರೋ-OLED ಸ್ಕ್ರೀನ್‌ ಅನ್ನು ಸಹ ಒಳಗೊಂಡಿರುತ್ತವೆ. ಹಾಗೆಯೇ 6 ಮೀಟರ್ ದೂರದಿಂದ 215 ಇಂಚಿನ ದೂರದರ್ಶನಕ್ಕೆ ಸಮಾನವಾದ ದೃಷ್ಟಿ ಬೆಂಬಲವನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ. ಇದು 600 ಡಿಗ್ರಿಗಳವರೆಗಿನ ಅನುಕೂಲಕ್ಕೆ ಸೆಟ್‌ ಮಾಡಬಹುದಾದ ಡಯೋಪ್ಟರ್ ಸೆಟ್ಟಿಂಗ್‌ಗಳನ್ನು ಸಹ ಪಡೆದುಕೊಂಡಿದೆ.

ಅಂದಹಾಗೆ ಟೆಕ್ನೋ ಪಾಕೆಟ್ ಗೋ ಟೆಕ್ನೋ ಸ್ಮಾರ್ಟ್ ಬಾಕ್ಸ್‌ನೊಂದಿಗೆ ಲಗ್ಗೆ ಇಡಲಿದೆ. ಇದು ಗೇಮ್‌ಗಳು ಮತ್ತು ಸೆಟ್ಟಿಂಗ್‌ಗಳನ್ನು ನಿಯಂತ್ರಿಸಲು ಕೇಂದ್ರ ಕನ್ಸೋಲ್ ಆಗಿ ಕೆಲಸ ನಿರ್ವಹಿಸುತ್ತದೆ. ಇದು AR ಪಾಕೆಟ್ ವಿಷನ್ ಮತ್ತು ಪಾಕೆಟ್ ಗೋ ವೈರ್‌ಲೆಸ್ ನಿಯಂತ್ರಕವನ್ನು ಇತರ ಟೆಕ್ನೋ ಡಿವೈಸ್‌ಗಳೊಂದಿಗೆ ಕನೆಕ್ಟ್‌ ಮಾಡಲು ಮತ್ತು ಪೋರ್ಟಬಲ್ ವರ್ಕ್‌ಸ್ಟೇಷನ್‌ನಂತೆ ಕೆಲಸ ನಿರ್ವಹಿಸಲು ಸಕ್ರಿಯಗೊಳಿಸುತ್ತದೆ.

ಇನ್ನು ಟೆಕ್ನೋ AI ಬೆಂಬಲಿತ ರೋಬೋಟಿಕ್ ಡಾಗ್‌ ಡೈನಾಮಿಕ್ 1 ಡಿವೈಸ್‌ 15,000mAh ಬ್ಯಾಟರಿ ಸೌಲಭ್ಯವನ್ನು ಪಡೆದಿದೆ. ಇದು ಸ್ಮಾರ್ಟ್‌ಫೋನ್‌ಗಳು, ರಿಮೋಟ್ ಕಂಟ್ರೋಲ್‌ಗಳು ಮತ್ತು ವಾಯ್ಸ್ ಕಮಾಂಡ್‌ಗಳು ಸೇರಿದಂತೆ ಇತರೆ ನಿಯಂತ್ರಣಗಳ ಆಯ್ಕೆ ಅನ್ನು ಸಪೋರ್ಟ್‌ ಮಾಡಲಿದೆ ಎಂದು ಹೇಳಲಾಗುತ್ತದೆ. ಈ ಸಾಧನ ಆಕ್ಟಾ-ಕೋರ್ ಚಿಪ್‌ಸೆಟ್‌ನಿಂದ ಚಾಲಿತವಾಗಿದ್ದು, ಇಂಟೆಲ್‌ನ ರಿಯಲ್‌ಸೆನ್ಸ್ D430 ಕ್ಯಾಮೆರಾ ಜೊತೆಗೆ ಬೈನಾಕ್ಯುಲರ್ ಮತ್ತು ಇನ್ಫ್ರಾರೆಡ್‌ ಸೆನ್ಸಾರ್‌ಗಳನ್ನು ಪಡೆದುಕೊಂಡಿದೆ.

ಹಾಗೆಯೇ ಡೈನಾಮಿಕ್ 1 ಡಿವೈಸ್‌ 45 Nm/kg ಟಾರ್ಕ್ ಉತ್ಪಾದನೆಯೊಂದಿಗೆ, ಈ ಸಾಧನವು ಮೆಟ್ಟಿಲುಗಳ ಮೇಲೆ ಮತ್ತು ಕೆಳಗೆ ಹೋಗುವುದು, ಜಿಗಿಯುವುದು, ಕೈ ಕುಲುಕುವುದು ಮತ್ತು ಹ್ಯಾಂಡ್‌ಸ್ಟ್ಯಾಂಡ್‌ಗಳಂತಹ ಹಲವಾರು ಭೌತಿಕ ಕಾರ್ಯಗಳನ್ನು ನಿರ್ವಹಿಸುವ ಸೌಲಭ್ಯ ಪಡೆದಿದೆ.

Best Mobiles in India

English summary
MWC 2024: Tecno announces Dynamic 1 Robot Dog and AR Glasses. check all details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+