Home
ಸುದ್ದಿಜಾಲ

MWC 2024: ಮೊಬೈಲ್ ವರ್ಲ್ಡ್ ಕಾಂಗ್ರೆಸ್‌ನಲ್ಲಿ ಏನೆಲ್ಲಾ ಘೋಷಣೆ ಆಗಲಿವೆ? ಎಐನಿಂದ 5G ವರೆಗೆ..

ವಾರ್ಷಿಕ ಮೊಬೈಲ್ ವರ್ಲ್ಡ್ ಕಾಂಗ್ರೆಸ್ (MWC) ಗಾಗಿ ಈಗಾಗಲೇ ಸಾಕಷ್ಟು ಕಂಪೆನಿಗಳು ಸೇರಿದಂತೆ ಗ್ರಾಹಕರು ಕಾದು ಕುಳಿತಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ಸಹ ವಿಶೇಷ ಹಾಗೂ ಹುಬ್ಬೇರಿಸುವ ಸ್ಮಾರ್ಟ್‌ ಡಿವೈಸ್‌ಗಳು ಹಾಗೂ ತಂತ್ರಜ್ಞಾನವನ್ನು ಘೋಷಣೆ ಮಾಡಲಾಗುತ್ತದೆ ಎಂದು ನಿರೀಕ್ಷೆ ಮಾಡಲಾಗಿದೆ.

ಹೌದು, ಬಾರ್ಸಿಲೋನಾದಲ್ಲಿ ಫೆಬ್ರವರಿ 26 ರಿಂದ ಮಾರ್ಚ್ 2 ರವರೆಗೆ ಈ ವಿಶೇಷ ಕಾರ್ಯಕ್ರಮ ಜರುಗಲಿದ್ದು, ಮೊಬೈಲ್ ತಂತ್ರಜ್ಞಾನದ ವಿಷಯಕ್ಕೆ ಸಂಬಂಧಿಸಿದಂತೆ ವಿಶೇಷ ಭರವಸೆ ನೀಡಲಾಗುತ್ತದೆ. ಈ ಬಾರಿ ಎಐ ಆಪ್‌ಗಳು, 5G-ಸುಧಾರಿತ ಸೇವೆಗಳ ರೋಲ್‌ಔಟ್ ಮತ್ತು ಭವಿಷ್ಯಕ್ಕೆ ಸಂಬಂಧಿಸಿದ ತಂತ್ರಜ್ಞಾನದ ವಿಷಯಗಳನ್ನು ಘೋಷಣೆ ಮಾಡಲಾಗುತ್ತದೆ. ಹಾಗಿದ್ರೆ ಈ ವಿಶೇಷ ಕಾರ್ಯಕ್ರಮದಲ್ಲಿ ನಿರೀಕ್ಷೆ ಮಾಡಬಹುದಾದ ಡಿವೈಸ್‌ಗಳು ಯಾವುವು ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಮೊಬೈಲ್ ವರ್ಲ್ಡ್ ಕಾಂಗ್ರೆಸ್‌ನಲ್ಲಿ ಏನೆಲ್ಲಾ ಘೋಷಣೆ ಆಗಲಿವೆ? ಎಐನಿಂದ 5G ವರೆಗೆ..

ವಾರ್ಷಿಕ ಮೊಬೈಲ್ ವರ್ಲ್ಡ್ ಕಾಂಗ್ರೆಸ್ 2024: ಈ ಸಮಾರಂಭದಲ್ಲಿ ಪ್ರಮುಖ ಸ್ಮಾರ್ಟ್‌ಫೋನ್‌ ಬ್ರ್ಯಾಂಡ್‌ಗಳು ಸುಧಾರಿತ ಫೀಚರ್ಸ್‌ ಇರುವ ಫೋನ್‌ಗಳನ್ನು ಅನಾವರಣ ಮಾಡಲಿವೆ ಎನ್ನಲಾಗಿದೆ. ಅದರಲ್ಲೂ ಶಿಯೋಮಿ 14 ಸರಣಿಯನ್ನು (Xiaomi 14 series) ಜಾಗತಿಕವಾಗಿ ಅನಾವರಣಗೊಳಿಸುವ ನಿರೀಕ್ಷೆಯಿದ್ದು, ಇದರಲ್ಲಿ ಎಐ ಚಾಲಿತ ಶಿಯೋಮಿ 14 ಅಲ್ಟ್ರಾ (Xiaomi 14 Ultra) ಉನ್ನತ-ಶ್ರೇಣಿಯ ವಿಶೇಷತೆಗಳೊಂದಿಗೆ ಕಾಣಿಸಿಕೊಳ್ಳಲಿದೆ ಎಂದು ತಿಳಿದುಬಂದಿದೆ.

ಇದರ ಜೊತೆಗೆ ಹಾನರ್ ತನ್ನ ಪ್ರಮುಖ ಮ್ಯಾಜಿಕ್ V2 ಮತ್ತು ಮ್ಯಾಜಿಕ್ 6 ಪ್ರೊಗಾಗಿ (Honor Magic V2 and Magic 6 Pro) ಹೊಸ ಫೋಲ್ಡಿಂಗ್ ಡಿಸ್‌ಪ್ಲೇಗಳನ್ನು ಮತ್ತು ವರ್ಧಿತ ರಿಯಾಲಿಟಿ ಫೀಚರ್ಸ್‌ಗಳನ್ನು ಘೋಷಣೆ ಮಾಡಲಿದೆ ಎಂದು ತಿಳಿದುಬಂದಿದೆ. ಇದರ ಜೊತೆಗೆ ನೋಕಿಯಾದಿಂದ ಬೇರ್ಪಟ್ಟ ನಂತರ ಹೆಚ್‌ಎಮ್‌ಡಿ ಗ್ಲೋಬಲ್ (HMD Global) ತನ್ನ ಮೊದಲ ಸ್ವಯಂ ಬ್ರ್ಯಾಂಡ್‌ ಫೋನ್‌ಗಳ ಕುರಿತು ವಿಶೇಷ ಮಾಹಿತಿಯನ್ನು ಬಹಿರಂಗಪಡಿಸಲಿದೆ.

ಎಐ ಫೀಚರ್ಸ್‌: ಹೊಸ ಡಿವೈಸ್‌ಗಳ ಲಾಂಚ್ ನೊಂದಿಗೆ ಮತ್ತು ನೆಟ್‌ವರ್ಕ್ ಅಪ್‌ಗ್ರೇಡ್‌ಗಳಾದ್ಯಂತ ಎಐ ಸಂಬಂಧ ಹೆಚ್ಚು ವಿಷಯಗಳನ್ನು ಇಲ್ಲಿ ನಿರೀಕ್ಷಿಸಲಾಗಿದೆ. ಗೂಗಲ್ ಮತ್ತು ಸ್ಯಾಮ್‌ಸಂಗ್ ತಮ್ಮ ಫೋನ್‌ಗಳಲ್ಲಿ ಎಐ ಅನ್ನು ಅಳವಡಿಸಿಕೊಂಡಿರುವುದರಿಂದ, ಉಳಿದ ಸ್ಮಾರ್ಟ್‌ಗ್ಯಾಜೆಟ್‌ ತಯಾರಕರು ತಮ್ಮ ಎಐ ಸಾಮರ್ಥ್ಯಗಳನ್ನೂ ಸಹ ಪ್ರದರ್ಶಿಸುತ್ತಾರೆ ಎಂದು ನಿರೀಕ್ಷಿಸಲಾಗಿದೆ. ವೆರಿಝೋನ್ ಮತ್ತು ಎರಿಕ್ಸನ್ (Verizon and Ericsson) ನಂತಹ ಆಪರೇಟರ್ಸ್‌ 5G ವಿಭಾಗದಲ್ಲಿ ಎಐ ಆಪ್ಟಿಮೈಸೇಶನ್ ಅನ್ನು ಸಹ ಪ್ರದರ್ಶಿಸುತ್ತಾರೆ ಎಂದು ತಿಳಿದುಬಂದಿದೆ.

ಮೊಬೈಲ್ ವರ್ಲ್ಡ್ ಕಾಂಗ್ರೆಸ್‌ನಲ್ಲಿ ಏನೆಲ್ಲಾ ಘೋಷಣೆ ಆಗಲಿವೆ? ಎಐನಿಂದ 5G ವರೆಗೆ..

5G ವಿಭಾಗದಲ್ಲಿ ಏನನ್ನ ನಿರೀಕ್ಷೆ ಮಾಡಬಹುದು?: ಇದೀಗ 5G ಪಕ್ವವಾಗುತ್ತಿದೆ. ಇದರೊಂದಿಗೆ ಮಾರಾಟಗಾರರು ತಮ್ಮ ಇತ್ತೀಚಿನ 5G ಸುಧಾರಿತ ಗೇರ್ ಅನ್ನು ಸಹ ಪ್ರಚಾರ ಮಾಡುವ ಕೆಲಸ ಮಾಡುತ್ತಿದ್ದಾರೆ. ಬಹು-ಗಿಗಾಬಿಟ್ ವೇಗ, ಆಪರೇಟರ್‌ಗಳ ನಡುವೆ ಡೈನಾಮಿಕ್ ಶೇರ್‌ ಮತ್ತು ತಡೆರಹಿತ ಉಪಗ್ರಹ ಏಕೀಕರಣವನ್ನು ಭರವಸೆ ನೀಡುವ ಹೊಸ ಮೂಲಸೌಕರ್ಯ ಮಾನದಂಡಗಳ ಆಧಾರದ ಮೇಲೆ 5G ಇನ್ನಷ್ಟು ವಿಶೇಷ ಸೌಲಭ್ಯ ಕಲ್ಪಿಸಿಕೊಡಲಿದೆ ಎಂದು ತಿಳಿದುಬಂದಿದೆ.

ಮೊಬೈಲ್ ವರ್ಲ್ಡ್ ಕಾಂಗ್ರೆಸ್‌ನಲ್ಲಿ ಏನೆಲ್ಲಾ ಘೋಷಣೆ ಆಗಲಿವೆ? ಎಐನಿಂದ 5G ವರೆಗೆ..

ಉಳಿದಂತೆ ಕೆಲವು ವೈಲ್ಡ್ ಕಾನ್ಸೆಪ್ಟ್ ಗ್ಯಾಜೆಟ್‌ಗಳನ್ನು ಪ್ರದರ್ಶಿಸಲಾಗುತ್ತದೆ ಎನ್ನಲಾಗಿದ್ದು, ರೋಲ್ ಮಾಡಬಹುದಾದ ಡಿಸ್ಪ್ಲೇಗಳು ಮತ್ತು ಟ್ರಾನ್ಫರೆಂಟ್‌ ಡಿಸ್ಪ್ಲೇಗಳನ್ನೂ (Rollable Display and transparent Display) ಸಹ ಈ ವೇಳೆ ಘೋಷಣೆ ಮಾಡುವ ಸಾಧ್ಯತೆ ಇದೆ. ಈ ನಡುವೆ ಲೆನೊವೊ (Lenovo) ರೋಲ್ ಮಾಡಬಹುದಾದ ಲ್ಯಾಪ್‌ಟಾಪ್ ಮಾದರಿಯನ್ನು ಅನುಸರಿಸುವ ಜೊತೆಗೆ ಟ್ರಾನ್ಫರೆಂಟ್‌ ನೋಟ್‌ಬುಕ್ ಅನ್ನು ಅನಾವರಣಗೊಳಿಸಬಹುದು ಎನ್ನಲಾಗಿದೆ. MWC 2024 ಸಮಾರಂಭದಲ್ಲಿ ಎಐ ಸಾಮರ್ಥ್ಯ, ನವೀಕರಿಸಿದ 5G ಮತ್ತು ಹೊಸ ಫೋನ್‌ಗಳ ವಿಶೇಷ ಪೂರ್ವವೀಕ್ಷಣೆಯನ್ನು ಇಲ್ಲಿ ಭಾಗಿಯಾದವರು ನೋಡಬಹುದಾಗಿದೆ.

Best Mobiles in India

English summary
At the annual Mobile World Congress 2024 (MWC 2024) event, major smartphone brands are said to be unveiling phones with advanced features.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+