Home
ಸುದ್ದಿಜಾಲ

Xiaomi: ಜಾಗತಿಕವಾಗಿ ಲಾಂಚ್‌ ಆದ ಶಿಯೋಮಿ 14 ಮತ್ತು ಶಿಯೋಮಿ 14 ಅಲ್ಟ್ರಾ: ವಿಶೇಷತೆ ಏನು?, ಬೆಲೆ ಎಷ್ಟು?

ಶಿಯೋಮಿ (Xiaomi) ಆಗಾಗ್ಗೆ ವಿಶೇಷ ಸ್ಮಾರ್ಟ್‌ಫೋನ್‌ಗಳ ಮೂಲಕ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಇತರೆ ಸ್ಮಾರ್ಟ್‌ಫೋನ್‌ ತಯಾರಿಕಾ ಕಂಪೆನಿಗಳಿಗೆ ನಡುಕ ಹುಟ್ಟಿಸುತ್ತಲೇ ಬರುತ್ತಿದೆ. ಅದರಂತೆ ಈಗ ಜಾಗತಿಕವಾಗಿ ಶಿಯೋಮಿ 14 ಮತ್ತು ಶಿಯೋಮಿ 14 ಅಲ್ಟ್ರಾ ಸ್ಮಾರ್ಟ್‌ಫೋನ್‌ (Xiaomi 14 and Xiaomi 14 Ultra smartphones) ಅನ್ನು ಲಾಂಚ್‌ ಮಾಡಿದೆ.

ಹೌದು, ಶಿಯೋಮಿ 14 ಮತ್ತು ಶಿಯೋಮಿ 14 ಅಲ್ಟ್ರಾ ಸ್ಮಾರ್ಟ್‌ಫೋನ್‌ಗಳು ಲಾಂಚ್‌ ಆಗುವ ಮುನ್ನವೇ ಈ ಫೋನ್‌ಗಳ ಬಗ್ಗೆ ಸಾಕಷ್ಟು ಫೀಚರ್ಸ್ ಗಳನ್ನು ವರದಿ ಮಾಡಲಾಗಿತ್ತು ಅಲ್ಲದೆ ಅಲ್ಟ್ರಾ ಮಾದರಿ ಈಗಾಗಲೇ ಲಾಂಚ್‌ ಸಹ ಆಗಿದ್ದು, ಈ ಎರಡೂ ಫೋನ್‌ಗಳು ಸ್ನಾಪ್‌ಡ್ರಾಗನ್ 8 ಜನ್ 3 ಪ್ರೊಸೆಸರ್‌ ಬಲ ಪಡದಿದೆ. ಹಾಗಿದ್ರೆ ಈ ಸ್ಮಾರ್ಟ್‌ಫೋನ್‌ಗಳ ಫೀಚರ್ಸ್‌ ಹಾಗೂ ಬೆಲೆ ವಿವರ ಗಮನಿಸೊಣ ಬನ್ನಿ.

ಜಾಗತಿಕವಾಗಿ ಲಾಂಚ್‌ ಆದ ಶಿಯೋಮಿ 14 ಮತ್ತು ಶಿಯೋಮಿ 14 ಅಲ್ಟ್ರಾ: ವಿಶೇಷತೆ ಏನು?..

ಶಿಯೋಮಿ 14 ಮತ್ತು ಶಿಯೋಮಿ 14 ಅಲ್ಟ್ರಾ : ಶಿಯೋಮಿ 14 ಮತ್ತು ಶಿಯೋಮಿ 14 ಅಲ್ಟ್ರಾ ಸ್ಮಾರ್ಟ್‌ಫೋನ್‌ ಅನ್ನು ಸ್ಪೇನ್‌ನ ಬಾರ್ಸಿಲೋನಾದಲ್ಲಿ ಆಯೋಜನೆ ಮಾಡಲಾಗಿದ್ದ MWC 2024 ರ ಕಾರ್ಯಕ್ರಮದಲ್ಲಿ ಲಾಂಚ್ ಮಾಡಲಾಗಿದೆ. ಇದೇ ವೇಳೆ ಶಿಯೋಮಿಯ ಅಪ್‌ಗ್ರೇಡ್ ಮಾಡಿದ ಸ್ಮಾರ್ಟ್ ಇಕೋಸಿಸ್ಟಮ್ 'ಹ್ಯೂಮನ್ ಎಕ್ಸ್ ಕಾರ್ ಎಕ್ಸ್ ಹೋಮ್' (Human X Car X Home) ಅನ್ನು ಸಹ ಹೈಲೈಟ್ ಮಾಡಲಾಗಿದೆ. ಇದನ್ನು ಶಿಯೋಮಿ ಇಂಟರ್ನ್ಯಾಷನಲ್ ಬಿಸಿನೆಸ್ ವಿಭಾಗದ ಅಧ್ಯಕ್ಷ ವಿಲಿಯಂ ಲು ಪ್ರಸ್ತುತಪಡಿಸಿದ್ದಾರೆ.

ಶಿಯೋಮಿ 14 ಮತ್ತು ಶಿಯೋಮಿ 14 ಅಲ್ಟ್ರಾ ಅಷ್ಟೇ ಅಲ್ಲದೆ ಶಿಯೋಮಿ ಪ್ಯಾಡ್‌ 6S ಪ್ರೊ 12.4, ಶಿಯೋಮಿ ವಾಚ್‌ S3, ಶಿಯೋಮಿ ಸ್ಮಾರ್ಟ್‌ ಬ್ಯಾಂಡ್ 8 ಪ್ರೊ, ಮತ್ತು ಶಿಯೋಮಿ ವಾಚ್ 2 ಅನ್ನೂ ಸಹ ಘೋಷಣೆ ಮಾಡಲಾಗಿದೆ. ಈ ಮೂಲಕ ಗ್ರಾಹಕರಿಗೆ ಬಂಡಲ್‌ಗಟ್ಟಲೆ ಹೊಡ ಡಿವೈಸ್‌ಗಳ ಆಯ್ಕೆ ನೀಡಿದೆ. ಹಾಗಿದ್ರೆ, ಬನ್ನಿ ಜಾಗತಿಕವಾಗಿ ಘೋಷಣೆ ಆದ ಶಿಯೋಮಿ ಫೋನ್‌ಗಳ ಫೀಚರ್ಸ್‌ ಬಗ್ಗೆ ತಿಳಿಯೋಣ.

ಜಾಗತಿಕವಾಗಿ ಲಾಂಚ್‌ ಆದ ಶಿಯೋಮಿ 14 ಮತ್ತು ಶಿಯೋಮಿ 14 ಅಲ್ಟ್ರಾ: ವಿಶೇಷತೆ ಏನು?..

ಶಿಯೋಮಿ 14 ಸ್ಮಾರ್ಟ್‌ಫೋನ್‌: ಶಿಯೋಮಿ 14 ಸ್ಮಾರ್ಟ್‌ಫೋನ್‌ ಕರ್ವ್ಡ್ ರಿಯರ್‌ ಪ್ಯಾನಲ್‌ ಆಯ್ಕೆ ಪಡೆದಿದ್ದು, ಸ್ಪೀಕರ್ ಅನ್ನು ಡಿಸ್‌ಪ್ಲೇ ವಿಭಾಗಕ್ಕೆ ಸ್ಥಳಾಂತರಿಸಲಾಗಿದ್ದು, ಇನ್ಫ್ರಾರೆಡ್ ಪೋರ್ಟ್ ಅನ್ನು ಕ್ಯಾಮೆರಾ ಡೆಕೊಗೆ ವರ್ಗಾಯಿಸಲಾಗಿದೆ. ಇದು ಮೇಲ್ಭಾಗ ಮತ್ತು ಸೈಡ್‌ನಲ್ಲಿ ಉತ್ತಮ ವೀಕ್ಷಣಾ ಅನುಭವ ಉಂಟು ಮಾಡುತ್ತದೆ. ಉಳಿದಂತೆ ಈ ಫೋನ್ ಫೋನ್ 6.36 ಇಂಚಿನ ಕ್ರಿಸ್ಟಲ್ ರೆಸ್ ಅಮೋಲೆಡ್‌ ಡಿಸ್‌ಪ್ಲೇ ಮತ್ತು ತುಂಬಾ ಹಗುರವಾದ ಬೆಜೆಲ್‌ಗಳೊಂದಿಗೆ ಕಾಣಿಸಿಕೊಂಡಿದೆ.

ಈ ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್‌ ಕ್ಯಾಮೆರಾ ರಚನೆ ಪಡೆದಿದೆ. ಉತ್ತಮ ಫೋಟೋಗ್ರಫಿಗಾಗಿ ಮುಖ್ಯ ಕ್ಯಾಮೆರಾ ಲೈಕಾ ಸಮ್ಮಿಲಕ್ಸ್ ಆಪ್ಟಿಕ್ಸ್, ಅಪ್‌ಗ್ರೇಡ್ ಮಾಡಿದ Æ'/1.6 ಅಪರ್ಚರ್, ಮತ್ತು 13.5 EV ಡೈನಾಮಿಕ್ ರೇಂಜ್‌ನೊಂದಿಗೆ ಲೈಟ್ ಫ್ಯೂಷನ್ 900 ಇಮೇಜ್ ಸೆನ್ಸಾರ್ ಆಯ್ಕೆ ಪಡೆದಿದೆ. ಇದರೊಂದಿಗೆ ಲೈಕಾ 14 ಎಂಎಂ ಅಲ್ಟ್ರಾ ವೈಡ್ ಕ್ಯಾಮೆರಾ 50 ಮೆಗಾಪಿಕ್ಸೆಲ್ ರೆಸಲ್ಯೂಶನ್ ಅನ್ನು ಹೊಂದಿದ್ದು, ಲೈಕಾ 75 ಎಂಎಂ ಟೆಲಿಫೋಟೋ ಲೆನ್ಸ್ ಕನಿಷ್ಠ 10 ಸೆಂಟಿಮೀಟರ್ ಫೋಕಸ್ ಸೌಲಭ್ಯ ಕಲ್ಪಿಸಿಕೊಡಲಿದೆ.

ಇದರೊಂದಿಗೆ ಈ ವಿಶೇಷ ಸ್ಮಾರ್ಟ್‌ಫೋನ್‌ ಸ್ನಾಪ್‌ಡ್ರಾಗನ್ 8 ಜನ್ 3 ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದ್ದು, ಶಿಯೋಮಿ ಹೈಪರ್‌ ಓಎಸ್‌ ನಲ್ಲಿ ರನ್‌ ಆಗಲಿದೆ. ಇದರ ಜೊತೆಗೆ ಈ ಫೋನ್ 90W ಹೈಪರ್‌ಚಾರ್ಜ್ ಮತ್ತು 50W ವೈರ್‌ಲೆಸ್ ಹೈಪರ್‌ಚಾರ್ಜ್‌ನಿಂದ ಬೆಂಬಲದೊಂದಿಗೆ 4610mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ.

ಶಿಯೋಮಿ 14 ಅಲ್ಟ್ರಾ ಫೋನ್‌ ಪ್ರಮುಖ ಫೀಚರ್ಸ್‌: ಇದು ಗಟ್ಟಿಮುಟ್ಟಾದ ಗಾರ್ಡಿಯನ್ ರಚನೆಯನ್ನು ಹೊಂದಿದೆ. ಇದರಲ್ಲಿನ ಅಲ್ಯೂಮಿನಿಯಂ ಫ್ರೇಮ್ ಈ ಫೋನ್‌ಗೆ ಹೆಚ್ಚಿನ ಆಕರ್ಷಣೆ ನೀಡಿದ್ದು, ನ್ಯಾನೊ-ಟೆಕ್ ವೆಜನ್‌ ಲೆದರ್‌ ಮತ್ತು ಶೀಲ್ಡ್ ಗ್ಲಾಸ್ ಅನ್ನು ಒಳಗೊಂಡಿದೆ. ಇದರೊಂದಿಗೆ 6.73 ಇಂಚಿನ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದ್ದು, ಇದು 3200 x 1440 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯ ಪಡೆದುಕೊಂಡಿದೆ. ಜೊತೆಗೆ 522 ppi ಪಿಕ್ಸೆಲ್ ಸಾಂದ್ರತೆ ಮತ್ತು ವೇರಿಯಬಲ್ 1-120Hz ರಿಫ್ರೆಶ್ ರೇಟ್‌ ಮತ್ತು 3000 ನಿಟ್ಸ್‌ ನ ಗರಿಷ್ಠ ಬ್ರೈಟ್‌ನೆಸ್‌ ಆಯ್ಕೆ ಬೆಂಬಲಿತವಾಗಿದೆ.

ಜಾಗತಿಕವಾಗಿ ಲಾಂಚ್‌ ಆದ ಶಿಯೋಮಿ 14 ಮತ್ತು ಶಿಯೋಮಿ 14 ಅಲ್ಟ್ರಾ: ವಿಶೇಷತೆ ಏನು?..

ಕ್ವಾಡ್-ಕ್ಯಾಮೆರಾ ರಚನೆ ಪಡೆದಿದ್ದು, ಇದರ ಮುಖ್ಯ ಕ್ಯಾಮರಾ, Æ'/1.63-Æ'/4.0 ಸ್ಟೆಪ್‌ಲೆಸ್ ವೇರಿಯಬಲ್ ಅಪರ್ಚರ್‌ನೊಂದಿಗೆ ಸಜ್ಜುಗೊಂಡಿದೆ. ಹಾಗೆಯೇ ಕ್ವಾಡ್-ಕ್ಯಾಮೆರಾ ರಚನೆಯನ್ನು ಪೂರ್ಣಗೊಳಿಸುವುದು ಲೈಕಾ 75 ಎಂಎಂ ಫ್ಲೋಟಿಂಗ್ ಟೆಲಿಫೋಟೋ ಕ್ಯಾಮೆರಾ. ಇದರೊಂದಿಗೆ ಲೈಕಾ 120 ಎಂಎಂ ಪೆರಿಸ್ಕೋಪ್ ಕ್ಯಾಮೆರಾ ಮತ್ತು ಲೈಕಾ 12 ಎಂಎಂ ಅಲ್ಟ್ರಾ-ವೈಡ್ ಕ್ಯಾಮೆರಾವನ್ನು ಈ ಫೋನ್‌ನಲ್ಲಿ ಕಾಣಬಹುದಾಗಿದೆ. ಈ ಅಲ್ಟ್ರಾ ವೇರಿಯಂಟ್‌ ಸಹ ಸ್ನಾಪ್‌ಡ್ರಾಗನ್ 8 ಜನ್ 3 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, 5000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಕಾಣಿಸಿಕೊಂಡಿದೆ.

ಶಿಯೋಮಿ 14 ಮತ್ತು ಶಿಯೋಮಿ 14 ಅಲ್ಟ್ರಾ ಬೆಲೆ ಮತ್ತು ಲಭ್ಯತೆ: ಜೊತೆಗೆ ಶಿಯೋಮಿ 14 ಎರಡು ಸ್ಟೋರೇಜ್‌ ವೇರಿಯಂಟ್‌ನಲ್ಲಿ ಲಭ್ಯ ಇದ್ದುಲ EUR 999 ರಿಂದ ಪ್ರಾರಂಭವಾಗುತ್ತದೆ. ಶಿಯೋಮಿ 14 ಅಲ್ಟ್ರಾ ಸ್ಮಾರ್ಟ್‌ಫೋನ್ ಬೆಲೆ EUR 1499 ರಿಂದ ಆರಂಭ ಆಗಲಿದ್ದು, ಇದು ಒಂದೇ ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಪಡೆದುಕೊಂಡಿದೆ.

ಶಿಯೋಮಿ 14 ಕಪ್ಪು, ಬಿಳಿ ಮತ್ತು ಜೇಡ್ ಗ್ರೀನ್ ಎಂಬ ಮೂರು ಬಣ್ಣಗಳಲ್ಲಿ ಕಾಣಿಸಿಕೊಂಡರೆ ಶಿಯೋಮಿ 14 ಅಲ್ಟ್ರಾ ಕಪ್ಪು ಮತ್ತು ಬಿಳಿಯ ಎರಡು ಬಣ್ಣದಲ್ಲಿ ಕಾಣಿಸಿಕೊಂಡಿದೆ.
ಈ ವೇಳೆ ನೀವೇನಾದರೂ ಉತ್ತಮ ಫೋಟೋಗ್ರಫಿ ಅನುಭವ ಪಡೆಯಬೇಕು ಎಂದರೆ ಅಲ್ಟ್ರಾ ಸ್ಮಾರ್ಟ್‌ಫೋನ್‌ಗಾಗಿ EUR 199 ರಿಂದ ಪ್ರಾರಂಭವಾಗುವ ಕಿಟ್ ಅನ್ನು ಪ್ರತ್ಯೇಕವಾಗಿ ಖರೀದಿ ಮಾಡಬಹುದಾಗಿದೆ.

Best Mobiles in India

English summary
Xiaomi 14 and Xiaomi 14 Ultra smartphones were launched at the MWC 2024 event in Barcelona, Spain.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+