ರೂ.499ಕ್ಕೆ LED ಟಿವಿ ಎಂದರೆ ನೀವು ನಂಬಲ್ಲ ಅಲ್ವಾ? ಅಮೆಜಾನ್‌ನಲ್ಲಿ ದೊರೆಯುತ್ತಿದೆ ಎಂದ ಮೇಲೆ ನಂಬಬೇಕು.!
ದಿನೇ ದಿನೇ ಆನ್‌ಲೈನ್ ಶಾಪಿಂಗ್ ತಾಣಗಳು ತಮ್ಮ ಕಡೆಗೆ ಗ್ರಾಹಕರನ್ನು ಸೆಳೆದುಕೊಳ್ಳುವ ತಂತ್ರಕ್ಕೆ ಹಲವಾರು ಹೊಸ ಪ್ರಯತ್ನಗಳನ್ನು ಮಾಡುತ್ತಿವೆ. ಇದೇ ಮಾದರಿಯಲ್ಲಿ ಅಮೆಜಾನ್ ಕೇವಲ ಪ್ರತಿ ತಿಂಗಳಿಗೆ ರೂ. 499ಕ್ಕೆ TVಯನ್ನು (EMI) ಮಾರಾಟ ಮಾಡಲು ಮುಂದಾಗಿದೆ. ಈ ಮೂಲಕ ಹೆಚ್ಚಿನ ಪ್ರಮಾಣದ ಗ್ರಾಹಕರನ್ನು ತನ್ನ ಕಡೆಗೆ ಸೆಳೆಯಲು ಯೋಜನೆ ರೂಪಿಸಿದೆ.

ಓದಿರಿ: ಶಿಯೋಮಿಯ ಮತ್ತೊಂದು ಬಜೆಟ್ ಸೂಪರ್ ಫೋನ್ ಲಾಂಚ್: ಬಿಡುಗಡೆಯಾದ ಟೀಸರ್...!
ಫ್ಲಿಪ್‌ಕಾರ್ಟ್ ಗೃಹೋಪಯೋಗಿ ವಸ್ತುಗಳ ಸೇಲ್ ಆರಂಭಿಸಿದ ಬೆನ್ನಲೇ ಅಮೆಜಾನ್ ಸಹ ಇದೇ ಮಾದರಿಯಲ್ಲಿ TV ಗಳ ಮೇಲೆ ಭರ್ಜರಿ ಆಫರ್ ಅನ್ನು ನೀಡಲು ಮುಂದಾಗಿದೆ. ಈಗಾಗಲೇ ಸ್ಮಾರ್ಟ್‌ಫೋನ್ ಮೇಲೆ ಹಿಡಿತ ಸಾಧಿಸಿದ ಆನ್‌ಲೈನ್ ತಾಣಗಳು ತಮ್ಮ ಹಿಡಿತವನ್ನು TV ಮಾರುಕಟ್ಟೆಯ ಮೇಲೆ ಸಾಧಿಸಲು ಮುಂದಾಗಿವೆ ಎಂದರೆ ತಪ್ಪಾಗುವುದಿಲ್ಲ.

EMI ಆಫರ್:
ಇಂದಿನ ದಿನದಲ್ಲಿ ಪ್ರತಿಯೊಂದು ವಸ್ತುಗಳು EMIನಲ್ಲಿ ದೊರೆಯುತ್ತಿದ್ದು, ಇದೇ ಮಾದರಿಯಲ್ಲಿ ಅಮೆಜಾನ್ ತನ್ನ ತಾಣದಲ್ಲಿ ಖರೀದಿಸುವ TV ಗಳ ಮೇಲೆ EMI ಆಯ್ಕೆಯನ್ನು ನೀಡಿದೆ. ಪ್ರತಿ ತಿಂಗಳಿಗೆ EMI ರೂ.499 ಮಾತ್ರವೇ ಕಟ್ಟುವ ಅವಕಾಶವನ್ನು ಮಾಡಿಕೊಟ್ಟಿದೆ.

ನ.20 ರಿಂದ 26ರ ವರೆಗೆ ಮಾತ್ರವೇ:
ಅಮೆಜಾನ್ ಕೇವಲ ರೂ.499ಕ್ಕೆ ಟಿವಿ ನೀಡುತ್ತಿರುವ ಆಫರ್ ಕೆಲವೇ ದಿನಗಳು ಮಾತ್ರವೇ ಲಭ್ಯವಿರಲಿದ್ದು, ನವೆಂಬರ್ 20 ರಿಂದ 26ರ ವರೆಗೆ ಈ ಆಫರ್ ಜಾರಿಯಲ್ಲಿರಲಿದೆ. ಅದರ ಒಳಗೆ ಖರೀದಿಸಿದವರಿಗೆ ಮಾತ್ರವೇ ಈ ಆಫರ್ ಲಾಭ ದೊರೆಯಲಿದೆ.

ಎಲ್ಲಾ ಕಂಪನಿಗಳ TVಗಳ ಮೇಲೆ ಆಫರ್:
ಅಮೆಜಾನ್ ಈ ಬಾರಿ ಸ್ಯಾಮ್‌ಸಂಗ್. ಸೋನಿ, BPL, TCL, ಸನ್ಯೋ ಸೇರಿದಂತೆ ಎಲ್ಲಾ ಬ್ರಾಂಡ್ ಟಿವಿಗಳ ಮೇಲೆ ಭರ್ಜರಿ ಆಫರ್ ಘೋಷಣೆ ಮಾಡಿದ್ದು, ಗ್ರಾಹಕರಿಗೆ ಹೆಚ್ಚಿನ ಲಾಭವಾಗಲಿದೆ.

ಕ್ಯಾಷ್ ಬ್ಯಾಕ್ ಸಹ ಲಭ್ಯ:
ಇದಲ್ಲದೇ ICICI ಬ್ಯಾಂಕ್ ಕಾರ್ಡ್ ಬಳಕೆದಾರರಿಗೆ ಕ್ಯಾಷ್ ಬ್ಯಾಕ್ ಆಫರ್ ಸಹ ದೊರೆಯಲಿದೆ. ಇದರಿಂದಾಗಿ ಗ್ರಾಹಕರು ವಿವಿಧ ಶ್ರೇಣಿಯ ಟಿವಿಗಳ ಮೇಲೆ ಬಂಪರ್ ಆಫರ್ ಪಡೆಯಬಹುದು.


Click it and Unblock the Notifications








