ಫ್ಯಾಶನ್ ಮಾಡಲು "ಎಂಡ್ ಆಫ್ ರೀಸನ್"! ಮೈಂತ್ರಾದಿಂದ 80 ಪರ್ಸೆಂಟ್ ವರೆಗೂ ಡಿಸ್ಕೌಂಟ್!!

Written By:

2017 ನೇ ವರ್ಷದ ಆರಂಭವನ್ನು ಯೂತ್ ಫ್ಯಾಶನ್‌ ಕ್ರೇಜ್ಃಗೆ ಮೀಸಲಿಡಲು ಫ್ಯಾಶನ್ ಶಾಪಿಂಗ್ ಜಾಲತಾಣ ಮೈಂತ್ರಾ "ಎಂಡ್ ಆಫ್ ರೀಸನ್" ಸೇಲ್ ಆಫರ್‌ ನೀಡಿದೆ.!! ಈ ಮೂಲಕ ತನ್ನ ವ್ಯಾಪಾರವನ್ನು 25 ಪಟ್ಟು ಹೆಚ್ಚುಮಾಡಿಕೊಳ್ಳಲು ಈ ಆಫರ್ ನೀಡಿದ್ದಾಗಿ ಮೈಂತ್ರಾ ಹೇಳಿಕೊಂಡಿದ್ದು, 2017 ಜನವರಿ 3 ರಿಂದ 5 ನೇ ತಾರೀಖಿನವರೆಗೂ ಈ ಆಫರ್ ಇರಲಿದೆ.

ಫ್ಯಾಶನ್ ಮಾಡಲು

ಹಣ ನಿಷೇಧದ ನಂತರ ಫ್ಲಿಪ್‌ಕಾರ್ಟ್‌ ಒಡೆತನದ ಫ್ಯಾಶನ್ ಶಾಪಿಂಗ್ ಜಾಲತಾಣದ ಮೈಂತ್ರಾದಲ್ಲಿ ಶೇಕಡ 50 ಪರ್ಸೆಂಟ್‌ಗಿಂತ ಹೆಚ್ಚು ವ್ಯವಹಾರ ಕಡಿಮೆಯಾಗಿತ್ತು ಎನ್ನಲಾಗಿದೆ. ಹಾಗಾಗಿ, ಮೈಂತ್ರಾದ ಈ ಆಫರ್ ಮೇಲೆ ಬಹುದೊಡ್ಡ ಡಿಸ್ಕೌಂಟ್ಸ್‌ಗಳನ್ನು ನೀಡಿದ್ದು, ಈ ಆಫರ್‌ನಿಂದಾಗಿ ತನ್ನ ವ್ಯಾಪಾರವನ್ನು 25 ಪಟ್ಟು ಹೆಚ್ಚುಮಾಡಿಕೊಳ್ಳಲು ತವಕಿಸುತ್ತಿದೆ.

ಫ್ಯಾಶನ್ ಮಾಡಲು

ಪ್ರೇಮಿಗಳ ದಿನಕ್ಕೆ ಶ್ಯೋಮಿಯ ಎಂಐ 6 ಸ್ಮಾರ್ಟ್‌ಫೋನ್ ಬಿಡುಗಡೆ!!?

ಈ ಬಗ್ಗೆ ಮೈಂತ್ರಾ ಸಿಇಓ ಅನಂತ್ ನಾರಾಯಣ್ ಅವರು ಮಾತನಾಡಿ, ಮೈಂತ್ರಾದ ಬಿಗ್ "ಎಂಡ್ ಆಫ್ ರೀಸನ್" ಆಫರ್ ಮೂಲಕ ಎಲ್ಲಾ ಫ್ಯಾಷನ್ ವಸ್ತುಗಳ ಮೇಲೆ ಶೇಕಡ 50 ರಿಂದ 80 ಪರ್ಸೆಂಟ್ ಡಿಸ್ಕೌಂಟ್ ನೀಡಲಾಗಿದೆ. ಇನ್ನು ಈ ಆಫರ್‌ನಿಂದಾಗಿ ನಾವು 5 ರಿಂದ 6 ಲಕ್ಷದವರೆಗೆ ಗ್ರಾಹಕರನ್ನು ಸೆಳೆಯುವುದಾಗಿ ಅವರು ತಿಳಿಸಿದ್ದಾರೆ.

ಫ್ಯಾಶನ್ ಮಾಡಲು

ಇನ್ನು, ಮೈಂತ್ರಾ 1800 ಬ್ರಾಂಡ್‌ಗಳ ಮೇಲೆ ಶೇಕಡ 50 ರಿಂದ 80 ಪರ್ಸೆಂಟ್ ಡಿಸ್ಕೌಂಟ್ಸ್ ನಿಡಿದ್ದು, ಚಳಿಗಾಲದ ಉಡುಪುಗಳ ಮೇಲೆ ಹೆಚ್ಚು ಡಿಸ್ಕೌಂಟ್ ನೀಡುವುದಾಗಿ ಹೇಳಿದೆ. 2017 ನೇ ವರ್ಷದಲ್ಲಿ ಆನ್‌ಲೈನ್ ವ್ಯವಹಾರವನ್ನು ಪ್ರಸ್ತುತ ಇರುವುದಕ್ಕಿಂತ ಎರಡು ಪಟ್ಟು ಹೆಚ್ಚಿಸುವ ಗುರಿಯನ್ನು ಮೈಂತ್ರಾ ಹೊಂದಿದ್ದು, "ಎಂಡ್ ಆಫ್ ರೀಸನ್" ಸೇಲ್ ಫ್ಯಾಶನ್ ಪ್ರಿಯರಿಗೊಂದು ಸುಗ್ಗಿ ಎಂದು ಹೇಳಬಹುದು.Read more about:
English summary
Fashion e-commerce platform Myntra expects its sales to grow 25 times during its 'End of Reason' sale (EORS) to be held between January 3-5, 2017. to know more this visit to kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot