ಪ್ರೇಮಿಗಳ ದಿನಕ್ಕೆ ಶ್ಯೋಮಿಯ ಎಂಐ 6 ಸ್ಮಾರ್ಟ್‌ಫೋನ್ ಬಿಡುಗಡೆ!!?

Written By:

ಇತ್ತೀಚಿಗಷ್ಟೆ ಬಿಡುಗಡೆಯಾಗಿದ್ದ ಶ್ಯೋಮಿ ಎಂಐ 5 ಸ್ಮಾರ್ಟ್‌ಫೋನ್ ಹವಾ ಇನ್ನು ಮುಗಿದಿಲ್ಲ ಅದಾಗಲೇ ಶ್ಯೋಮಿ ತನ್ನ ಮುಂದಿನ ಸರಣಿ ಸ್ಮಾರ್ಟ್‌ಫೋನ್ ಶ್ಯೋಮಿ ಎಂಐ 6 ಬಿಡುಗಡೆಗೆ ತಯಾರಾಗಿದೆ.! ಶ್ಯೋಮಿ ಎಂಐ 6 ಸ್ಮಾರ್ಟ್‌ಫೋನ್ 2017 ರ ಫೆಬ್ರವರಿ 14 ನೇ ತಾರೀಖು ಬಿಡುಗಡೆಯಾಗಲಿದ್ದು, ಶ್ಯೋಮಿ ಪ್ರೇಮಿಗಳ ದಿನಕ್ಕೆ ಬಹುದೊಡ್ಡ ಉಡುಗೊರೆಯನ್ನು ನೀಡಲಿದೆ ಎನ್ನಲಾಗಿದೆ.!!

ಪ್ರೇಮಿಗಳ ದಿನಕ್ಕೆ ಶ್ಯೋಮಿಯ ಎಂಐ 6 ಸ್ಮಾರ್ಟ್‌ಫೋನ್ ಬಿಡುಗಡೆ!!?

ಬಾಗಲಕೋಟೆಯಲ್ಲಿ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್ ಸ್ಪೋಟ!!..ಏನಿದು ಸ್ಯಾಮ್‌ಸಂಗ್ ಕಥೆ?

ಈ ಬಗ್ಗೆ ಸ್ಮಾರ್ಟ್‌ಫೋನ್ ಮಾಹಿತಿಯನ್ನು ಬಿಡುಗಡೆ ಮಾಡುವ ಚೀನಾದ ಪ್ರತಿಷ್ಟಿತ ವೆಬ್‌ಸೈಟ್ "ವೀಬೊ" ಮಾಹಿತಿಯನ್ನು ಹೊರಹಾಕಿದ್ದು, 2017 ರಲ್ಲಿ ಶ್ಯೋಮಿ ಎಂಐ 6 ಸ್ಮಾರ್ಟ್‌ಫೋನ್ ಬಿಡುಗಡೆಯಾಗಲಿದೆ ಎಂದು ತಿಳಿಸಿದೆ. ಇನ್ನು ಇತರ ಮಾಹಿತಿಗಳ ಪ್ರಕಾರ ಏಪ್ರಿಲ್‌ನಲ್ಲಿ ಎಂಐ 6 ಸ್ಮಾರ್ಟ್‌ಫೋನ್ ಬಿಡುಗಡೆಯಾಗುತ್ತದೆ ಎಂದು ಹೇಳಲಾಗಿದೆ.

ಪ್ರೇಮಿಗಳ ದಿನಕ್ಕೆ ಶ್ಯೋಮಿಯ ಎಂಐ 6 ಸ್ಮಾರ್ಟ್‌ಫೋನ್ ಬಿಡುಗಡೆ!!?

ಇನ್ನು ಶ್ಯೋಮಿ ಎಂಐ 6 ಪ್ರಸ್ತುತದ ಅತ್ಯಾಧುನಿಕ ಸ್ನಾಪ್‌ಡ್ರಾಗನ್ 835 ಎಸ್‌ಒಸಿ ಚಿಪ್‌ಸೆಟ್‌ ಹೊಂದಲಿದ್ದು, ಚಿಪ್‌ಗಳ ಅಸಮರ್ಪಕ ಪೂರೈಕೆಯೇ ಸ್ಮಾರ್ಟ್‌ಫೋನ್ ಬಿಡುಗಡೆಗೆ ಅಡ್ಡಿಯಾಗಿದೆ ಎಂದು "ವೀಬೊ" ಹೇಳಿದೆ. ಸ್ಯಾಮ್‌ಸಂಗ್ ಬಿಡುಗಡೆಮಾಡಲಿರುವ ಸ್ಮಾರ್ಟ್‌ಫೋನ್‌ಗಳಿಗೆ "ಕ್ವಾಲ್ಕಮ್" ಕಂಪೆನಿ ಸ್ನಾಪ್‌ಡ್ರಾಗನ್ 835 ಎಸ್‌ಒಸಿ ಚಿಪ್‌ಸೆಟ್‌ ತಯಾರಿಸಿ ನೀಡುತ್ತಿದ್ದು, ಇದೇ ಚಿಪ್‌ಸೆಟ್‌ಗಳನ್ನು ಶ್ಯೋಮಿಗೂ ನೀಡಬೇಕಿದೆ.!

ಪ್ರೇಮಿಗಳ ದಿನಕ್ಕೆ ಶ್ಯೋಮಿಯ ಎಂಐ 6 ಸ್ಮಾರ್ಟ್‌ಫೋನ್ ಬಿಡುಗಡೆ!!?

ಹಾಗಾಗಿ 2017 ನೇ ಜನವರಿಯಲ್ಲಿ ಸ್ಯಾಮ್‌ಸಂಗ್‌ನ ಮುಂದಿನ ಸರಣಿ ಗ್ಯಾಲಾಕ್ಸಿ 8 ಸಹ ಮಾರುಕಟ್ಟೆಗೆ ಬಿಡುಗಡೆಯಾಗುವ ಅಂದಾಜಿದ್ದು, ಹಾಗಾಗಿ ಸ್ನಾಪ್‌ಡ್ರಾಗನ್ 835 ಎಸ್‌ಒಸಿ ಚಿಪ್‌ಸೆಟ್‌ಗಳ ಕೊರತೆ ಶ್ಯೋಮಿ ಎಂಐ 6 ಬಿಡುಗಡೆಗೆ ಅಡ್ಡಿವಾಗಿದೆ.

English summary
Xiaomi Mi 6 Delay expected due to potential shortage of Snapdragon 835 SoC.to know more visit to kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot