ಭಾರೀ ದೊಡ್ಡ ಶಬ್ದಕ್ಕೆ ಬೆಂಗಳೂರು ಗಢಗಢ!

|

ಬೆಂಗಳೂರು ನಗರದ ಹಲವೆಡೆ ಇಂದು ಮಧ್ಯಾಹ್ನ 1.25ರ ಸುಮಾರಿಗೆ ಭಾರೀ ದೊಡ್ಡ ಪ್ರಮಾಣದಲ್ಲಿ ಶಬ್ಧವೊಂದು ಕೇಳಿಬಂದಿದ್ದು, ಬೆಂಗಳೂರಿಗರಲ್ಲಿ ಭಾರೀ ಗಾಬರಿ ಉಂಟುಮಾಡಿದೆ. ಬೆಂಗಳೂರಿನಲ್ಲಿ ಕೇಳಿಸಿರುವ ಈ ಭಾರೀ ದೊಡ್ಡ ಶಬ್ಧದಿಂದಾಗಿ ಜನರು ಅಚ್ಚರಿಗೊಂಡಿದ್ದು, ಆದರೆ ಯಾವುದೇ ಹಾನಿ ಸಂಭವಿಸಿಲ್ಲ.

ವೈಟ್‌ಫೀಲ್ಡ್‌, ಸರ್ಜಾಪುರ

ಬೆಂಗಳೂರಿನ ಇಂಟರ್ನ್ಯಾಷನಲ್ ಏರ್‌ಪೋರ್ಟ್‌, ವೈಟ್‌ಫೀಲ್ಡ್‌, ಸರ್ಜಾಪುರ, ಎಲೆಕ್ಟ್ರಾನಿಕ್‌ ಸಿಟಿ, ಟಿನ್‌ಫ್ಯಾಕ್ಟರಿ, ಹೆಬ್ಬಗೋಡಿ, ಕಲ್ಯಾಣ ನಗರ, ಎಂ.ಜಿ.ರೋಡ್‌, ಮಾರತ್‌ಹಳ್ಳಿ, ಜೆ.ಪಿ ನಗರ, ಬನ್ನೇರುಘಟ್ಟ ರಸ್ತೆ, ಸೇರಿದಂತೆ ಹಲವು ಭಾಗಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಶಬ್ಧ ಕೇಳಿ ಬಂದಿರುವ ಬಗ್ಗೆ ವರದಿಗಳಾಗಿವೆ.

 ರಿಕ್ಟರ್‌ ಮಾಪಕ

ಬೆಂಗಳೂರಿಗರಲ್ಲಿ ಆತಂಕ ಸೃಷ್ಠಿಸಿರುವ ಆ ಶಬ್ಧ ಎಲ್ಲಿಂದ ಬಂತು ಎಂಬುದುಕ್ಕೆ ಇನ್ನು ಸ್ಪಷ್ಟತೆಯಿಲ್ಲ. ಆದರೆ ರಿಕ್ಟರ್‌ ಮಾಪಕದಲ್ಲಿ ಭೂಕಂಪನದ ಬಗ್ಗೆ ಯಾವುದೇ ಮಾಹಿತಿ ದಾಖಲಾಗಿಲ್ಲ. ಹೀಗಾಗಿ ಜನರು ಆತಂಕಪಡುವ ಅಗತ್ಯವಿಲ್ಲ. ಆಂಫಾನ್‌ ಚಂಡಮಾರುತದಿಂದ ಈ ರೀತಿಯ ಸದ್ದು ಕೇಳಿರಬಹುದು ಎಂದು ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಪ್ರಾಧಿಕಾರದ ನಿರ್ದೇಶಕರಾದ ಶ್ರೀನಿವಾಸ ರೆಡ್ಡಿ ಪ್ರತಿಕ್ರಿಯಿಸಿದ್ದರು.

ಟ್ವಿಟ್ಟರ್

ಇನ್ನು ಈ ಅಚ್ಚರಿ ಸೌಂಡ್ ಬಗ್ಗೆ ಟ್ವಿಟ್ಟರ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಜನರು ಪ್ರತಿಕ್ರಿಯಿಸುತ್ತಿದ್ದಾರೆ. ಜೆಟ್‌ ವಿಮಾನದ ಶಬ್ಧ ಇರಬಹುದು ಅಂತಾ ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಈ ಶಬ್ಧ ಹೆಚ್‌ಎಎಲ್‌ಗೆ ಸಂಬಂಧಿಸಿದ್ದಲ್ಲ ಎಂದು ಸ್ಪಷ್ಟಪಡಿಸಿದೆ. ಈ ಶಬ್ಧ ಕೇಳಿ ಇನ್ನು ಕೆಲವರು ಭೂಕಂಪದ ಅನುಭವ ಅಂದಿದ್ದಾರೆ, ಚಂಡಮಾರುತದ ಪರಿಣಾಮದಿಂದ ಹೀಗಾಗಿದೆ ಎಂದಿದ್ದಾರೆ.

ಭಾರಿ ಸದ್ದಿಗೆ ನಿಖರ ಕಾರಣ ಬಯಲು

ಭಾರಿ ಸದ್ದಿಗೆ ನಿಖರ ಕಾರಣ ಬಯಲು

ಭಾರಿ ಶಬ್ದದ ಕುರಿತು ಮಾಹಿತಿ ನೀಡಿರುವ ಹೆಚ್ಎಎಲ್ ಸಂಸ್ಥೆ, ಸುಖೋಯ್-30 ಯುದ್ಧ ವಿಮಾನದ ಹೆಚ್ ಎಎಲ್ ರನ್ ವೇ ನಲ್ಲಿ ಟೇಕಾಫ್ ಆಗಿತ್ತು. ಸುಖೋಯ್-30 ಯುದ್ಧ ವಿಮಾನ 90 ಡಿಗ್ರಿ ಟೇಕಾಫ್ ಮಾಡಿದಾಗ ಇಂತಹ ಶಬ್ದ ಉಂಟಾಗುತ್ತದೆ. ಸುಮಾರು ಕಿಲೋಮೀಟರ್ ವರೆಗೆ ಈ ಶಬ್ದ ವ್ಯಾಪಿಸುತ್ತದೆ. ಈ ಕಾರಣದಿಂದಾಗಿ ಬೆಂಗಳೂರಿನ ಅನೇಕ ಕಡೆಯಲ್ಲಿ ಭಾರಿ ಶಬ್ದ ಉಂಟಾಗಿದೆ ಎಂಬುದಾಗಿ ಸ್ಪಷ್ಟ ಪಡಿಸಿದೆ. ಈ ಮೂಲಕ ದೊಡ್ಡ ಸದ್ದಿನ ಅಚ್ಚರಿಗೆ ಪೂರ್ಣವಿರಾಮ ಹಾಕಿದೆ.

Best Mobiles in India

English summary
Mysterious Loud Boom Heard In Bengaluru

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X