ಆಕಾಶದಲ್ಲಿ ಕಂಡ ಚಲಿಸುವ ಬೆಳಕಿನ ಸರಮಾಲೆಗೆ ಅಚ್ಚರಿಯ ಕಾರಣ ಏನು ಗೊತ್ತಾ?
ನೆನ್ನೆ ಸಂಜೆ 7 ರ ಸುಮಾರಿಗೆ ರಾಜ್ಯದ ಕೆಲವು ಪ್ರದೇಶಗಳಲ್ಲಿ ಆಗಸದಲ್ಲಿ ಅಚ್ಚರಿಯ ಮೂಡಿಸುವಂತಹ ಸನ್ನಿವೇಶ ಕಂಡು ಬಂದಿದೆ. ಆಕಾಶದಲ್ಲಿ ಸಾಗುತ್ತಿರುವ ಬೆಳಕಿನ ಸರಮಾಲೆ ಕಂಡು ಬಂದಿದ್ದು, ಇದನ್ನು ಕಂಡ ಜನರು ಆಶ್ಚರ್ಯಗೊಂಡಿದ್ದರು. ನೋಡಲು ಅವು ನಕ್ಷತ್ರಗಳಂತೆ ಕಂಡು ಬಂದಿದ್ದು, ರೈಲಿನಂತೆ ಚಲಿಸಿದ್ದು ಜನರಲ್ಲಿ ಅಚ್ಚರಿ ಮೂಡಿಸಿದ್ದವು. ಆದರೆ ಅದರ ಅಸಲಿ ಕಾರಣ ಏನು ಎನ್ನುವುದು ಈಗ ಬಹಿರಂಗ ಆಗಿದೆ.

ಆಗಸದಲ್ಲಿ ಕಂಡ ಬೆಳಕಿನ ಸರಮಾಲೆಗೆ ಕಾರಣ ವಿಶ್ವದ ಶ್ರೀಮಂತ ಉದ್ಯಮಿ ಆಗಿ ಗುರುತಿಸಿಕೊಂಡಿರುವ ಎಲಾನ್ ಮಸ್ಕ್ (Elon Musk). ಹೌದು, ಸ್ಯಾಟ್‌ಲೈಟ್‌ಗಳ ಮೂಲಕ ವಿಶ್ವದ ಮೂಲೆ ಮೂಲೆಗೂ ಅಂತರ್ಜಾಲ / ಇಂಟರ್ನೆಟ್ ಸೇವೆಯನ್ನು ಒದಗಿಸುವ ಗುರಿಯನ್ನು ಹಾಕಿಕೊಂಡಿರುವ ಎಲಾನ್ ಮಸ್ಕ್ ಮಾಲೀಕತ್ವದ ಸ್ಪೇಸ್ ಎಕ್ಸ್ (SpaceX) ಸಂಸ್ಥೆಯು ಉಡಾವಣೆ ಮಾಡಿರುವ ಸರಣಿ ಉಪಗ್ರಹಗಳ ಸರಮಾಲೆಯೇ ಆಕಾಶದಲ್ಲಿ ಆ ರೀತಿ ಕಂಡು ಬಂದಿವೆ.
ಅಮೆರಿಕಾದ ಸ್ಪೇಸ್ ಎಕ್ಸ್ (SpaceX) ಕ್ಯಾಲಿಫೋರ್ನಿಯಾ ಸನಿಹದ ಉಡಾವಣೆ ಕೇಂದ್ರದಿಂದ 52 ಸ್ಟಾರ್‌ಲಿಂಕ್ (Starlink) ಸ್ಯಾಟ್‌ಲೈಟ್‌ಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಸಂಸ್ಥೆಯು ಈಗಾಗಲೇ ಸುಮಾರು 1,800ಕ್ಕೂ ಅಧಿಕ ಉಪಗ್ರಹಗಳನ್ನು ಉಡಾವಣೆ ಮಾಡಿದ್ದು, ಆ ಪೈಕಿ 1,732 ಉಪಗ್ರಹಗಳು ತಮ್ಮ ನಿಗದಿತ ಕಕ್ಷೆಯಲ್ಲಿ ಭೂಮಿಯನ್ನು ಸುತ್ತುತ್ತಿವೆ ಎನ್ನಲಾಗಿದೆ. ಸಂಸ್ಥೆಯು ತನ್ನ ಸ್ಟಾರ್‌ಲಿಂಕ್ ಯೋಜನೆಯಲ್ಲಿ ವಿವಿಧ ಹಂತಗಳಲ್ಲಿ ಉಪಗ್ರಹಗಳನ್ನು ಉಡಾವಣೆ ಮಾಡಲಾಗುತ್ತಿದೆ. ಆ ಪೈಕಿ ಒಂದು ಗುಂಪಿನ ಉಪಗ್ರಹಗಳು ಸಾಗುತ್ತಿರುವುದು ಆಕಾಶದಲ್ಲಿ ಗೋಚರಿಸಿದೆ.

ಸ್ಪೇಸ್ ಎಕ್ಸ್ ಸಂಸ್ಥೆಯು ಉಡಾವಣೆ ಮಾಡಿರುವ ಉಪಗ್ರಹಗಳು ಭೂಮಿಯಿಂದ ಬಹಳ ಎತ್ತರದ ಕಕ್ಷೆಯಲ್ಲಿಲ್ಲ. ಹಾಗಾಗಿ ಅವುಗಳು ಬರಿಗಣ್ಣಿಗೆ ಎಲ್‌ಇಡಿ ಬಲ್ಬ್‌ನ ಸರದಂತೆ ಗೋಚರಿಸುತ್ತವೆ. ಕತ್ತಲೆಯಲ್ಲಿ ಈ ಉಪಗ್ರಹಗಳ ಹೊರಮೈ ಸೂರ್ಯನ ಬೆಳಕನ್ನು ಪ್ರತಿಫಲಿಸುತ್ತಾ ಸಾಗುತ್ತವೆ. ಹೀಗಾಗಿ ಚಲಿಸುವಾಗ ನಕ್ಷತ್ರಗಳು ಚಲಿಸಿದಂತೆ ಕಾಣಿಸುತ್ತವೆ.
ಸಂಸ್ಥೆಯು ಉಪಗ್ರಹ ಆಧರಿತ ಇಂಟರ್ನೆಟ್ ವ್ಯವಸ್ಥೆಯನ್ನು ಹಳ್ಳಿ ಹಳ್ಳಿಗೂ ತರುವ ಯೋಜನೆಯನ್ನು ಹಾಕಿಕೊಂಡಿದೆ. ವಿಶ್ವದ ಇಂಟರ್ನೆಟ್ ರಹಿತ ಪ್ರದೇಶಗಳಿಗೂ ಸ್ಪೇಸ್ ಎಕ್ಸ್ (SpaceX) ಇಂಟರ್ನೆಟ್ ಸೌಲಭ್ಯ ಕಲ್ಪಿಸಲು ಮುಂದಾಗುತ್ತಿದೆ. ಎಲಾನ್ ಮಸ್ಕ್ (Elon Musk) ಅವರ 'ಸ್ಟಾರ್ ಲಿಂಕ್' (Starlink) ಎಂಬ ಸುಮಾರು 12 ಸಾವಿರ ಕೃತಕ ಉಪಗ್ರಹಗಳನ್ನು ಆಕಾಶಕ್ಕೆ ಹಾರಿ ಬಿಡುವ ಭಾರಿ ಯೋಜನೆಯೊಂದನ್ನು ಸದ್ಯ ಹಾಕಿಕೊಂಡಿದ್ದಾರೆ. ಭವಿಷ್ಯದಲ್ಲಿ ಈ ಉಪಗ್ರಹಗಳ ಸಂಖ್ಯೆ 42 ಸಾವಿರ ದಾಟುವ ಸಾಧ್ಯತೆಯೂ ಇದೆ. ಉಪಗ್ರಹಗಳು ಭೂಮಿಯ ಸುತ್ತ ಸುತ್ತುತ್ತಾ ವಿಶ್ವದ ಮೂಲೆ ಮೂಲೆಗೂ ವಾಯರ್‌ಲೆಸ್ ಅಂತರ್ಜಾಲ ಸೇವೆಯನ್ನು ಒದಗಿಸಲಿವೆ.
2022 ರಿಂದ ಸ್ಪೇಸ್ ಎಕ್ಸ್‌ನಿಂದ ಭಾರತದಲ್ಲಿ ಬ್ರಾಡ್‌ಬ್ಯಾಂಡ್ ಸೇವೆ ಆರಂಭ!
ವಿಶ್ವದ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಒಡೆತನದ ಸ್ಪೇಸ್ ಎಕ್ಸ್ ಅಧೀನ ಸಂಸ್ಥೆ ಸ್ಟಾರ್‌ಲಿಂಕ್ ಭಾರತದಲ್ಲಿ 2022ರ ರಿಂದ ಉಪಗ್ರಹ ಆಧರಿತ ಬ್ರಾಡ್‌ಬ್ಯಾಂಡ್ ಸೇವೆ ಆರಂಭಿಸಲಿದೆ ಎಂದು ವರದಿಯಾಗಿದೆ. ಈಗಾಗಲೇ ಸ್ಪೇಸ್ ಎಕ್ಸ್ ಮಾಲೀಕತ್ವದ ಅಧೀನ ಸಂಸ್ಥೆ ಸ್ಟಾರ್‌ಲಿಂಕ್ ಸ್ಯಾಟಲೈಟ್ ಕಮ್ಯುನಿಕೇಷನ್ ಪ್ರೈ.ಲಿ ಭಾರತದಲ್ಲಿ ಇತ್ತೀಚಿಗೆ ತನ್ನ ಕಚೇರಿಯನ್ನು ಆರಂಭಿಸಿದೆ.
ಡಿಸೆಂಬರ್ 20 ರ ಸಂಜೆ ಕಾರವಾರದ ಕೆಲವು ಭಾಗಗಳಲ್ಲಿ ಕಾಣಿಸಿಕೊಂಡ ಸ್ಟಾರ್‌ಲಿಂಕ್ ಉಪಗ್ರಹಗಳ ಸಮೂಹವನ್ನು ಜನರಲ್ಲಿ ಅಚ್ಚರಿ ಮೂಡಿಸಿತ್ತು. ಈ ಎಲೋನ್ ಮಸ್ಕ್ ಅವರ ಸ್ಟಾರ್‌ಲಿಂಕ್ ಉಪಗ್ರಹಗಳ ಸಾಗುವುದನ್ನು 26 ವರ್ಷದ ನಿಹಾಲ್ ಅಮೀನ್, ರಾತ್ರಿ 7:15 ರ ಸುಮಾರಿಗೆ ಉಡುಪಿಯ ಪಡುಕೆರೆ ಬೀಚ್‌ನಲ್ಲಿ ಅವರನ್ನು ಸೆರೆಹಿಡಿದಿದ್ದಾರೆ. ಇವರು ಮ್ಯಾನೇಜ್‌ಮೆಂಟ್ ಕನ್ಸಲ್ಟೆಂಟ್ ಆಗಿದ್ದು, ಜೊತೆಗೆ ಖಗೋಳ ಛಾಯಾಗ್ರಹಣದ ಹವ್ಯಾಸವನ್ನು ಹೊಂದಿದ್ದಾರೆ.


Click it and Unblock the Notifications