ಮೂರ್ತಿ‌ ಆಗಮನ: ಇನ್ಫಿ ಸಿಬ್ಬಂದಿ ವೇತನ ಏರಿಕೆ

Posted By:

ಇನ್ಫೋಸಿಸ್‌ಗೆ ನಾರಾಯಣ ಮೂರ್ತಿ‌ ಮರಳಿದ್ದೆ ತಡ ತನ್ನ ಉದ್ಯೋಗಿಗಳಿಗೆ ಗುಡ್‌ ನ್ಯೂಸ್‌ ನೀಡಿದ್ದಾರೆ. ಬಿಎಸ್ ಇ ಗೆ ನೀಡಿರುವ ಹೇಳಿಕೆಯಂತೆ ಇನ್ಫೋಸಿಸ್ ಸಂಸ್ಥೆ ತನ್ನ ಐಟಿ ಉದ್ಯೋಗಿಗಳಿಗೆ ಸರಾಸರಿ ಶೇ 8 ರಷ್ಟು ಸಂಬಳ ಏರಿಕೆ ಮಾಡಿದೆ.

ಸುಮಾರು 1.5 ಲಕ್ಷ ಉದ್ಯೋಗಿಗಳಿಗೆ ಸಂಬಳ ಏರಿಕೆ ಮಾಡಿದ್ದು, ಭಾರತದಲ್ಲಿನ ತನ್ನ ಉದ್ಯೋಗಿಗಳ ವೇತನವನ್ನು ಶೇ.8 ಮತ್ತು ವಿದೇಶದಲ್ಲಿರುವ ಉದ್ಯೋಗಿಗಳ ಶೇ.3ರಷ್ಟು ವೇತನವನ್ನು ಏರಿಕೆ ಮಾಡಿದ್ದೇವೆ ಎಂದು ತನ್ನ ನ್ಯೂಸ್‌ರೂಮ್‌ನಲ್ಲಿ ಪ್ರಕಟಿಸಿದೆ.

ಮೂರ್ತಿ‌ ಆಗಮನ: ಇನ್ಫಿ ಸಿಬ್ಬಂದಿ ವೇತನ ಏರಿಕೆ


ಇನ್ಫೋಸಿಸ್ ಜನವರಿಯಲ್ಲಿ ತನ್ನ ಮೂರನೇ ತ್ರೈಮಾಸಿಕದಲ್ಲಿ ಉತ್ತಮ ಫಲಿತಾಂಶ ಹೊರ ಹಾಕಿತ್ತು. ಹೀಗಾಗಿ ತನ್ನ ಉದ್ಯೋಗಿಗಳಿಗೆ ಬಡ್ತಿ ಯೋಗ ಲಭಿಸಲಿದೆ ಎಂದು ಸಿಇಒ ಶಿಬುಲಾಲ್ ಘೋಷಿಸಿದ್ದರು.

ಕಳೆದ ಹಲವಾರು ತ್ರೈಮಾಸಿಕಗಳಲ್ಲಿ ಇನ್ಫೋಸಿಸ್ ಸಂಸ್ಥೆ ಕಳಪೆ ಸಾಧನೆ ತೋರಿದ ಹಿನ್ನೆಲೆಯಲ್ಲಿ ಇನ್ಫೋಸಿಸ್‌ ಬೋರ್ಡ್‌ ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ಈ ತಿಂಗಳಿನಿಂದ ಜಾರಿಗೆ ಬರುವಂತೆ ನಾರಾಯಣ ಮೂರ್ತಿ‌ಯವರನ್ನ ಮರು ನೇಮಕ ಮಾಡಿತ್ತು .2011ರಲ್ಲಿ ಇನ್ಫೋಸಿಸ್ ಬೋರ್ಡ್ ಅಧ್ಯಕ್ಷ ಸ್ಥಾನಕ್ಕೆ ನಾರಾಯಣಮೂರ್ತಿ ರಾಜೀನಾಮೆ ನೀಡಿದ್ದರು.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot