ಇನ್ಫೋಸಿಸ್‌ಗೆ ನಾರಾಯಣ ಮೂರ್ತಿ ಮರು ಆಯ್ಕೆ

Posted By:

ಇನ್ಫೋಸಿಸ್‌ನ ಸಹ ಸ್ಥಾಪಕ ಎನ್ ಆರ್ ನಾರಾಯಣ ಮೂರ್ತಿ ಅವರು ಮತ್ತೊಮ್ಮೆ ಇನ್ಫೋಸಿಸ್ ಬೋರ್ಡ್ ಗೆ ಮರಳಿದ್ದಾರೆ. ಎನ್ ಆರ್ ನಾರಾಯಣ ಮೂರ್ತಿ ಅವರನ್ನು ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಶನಿವಾರ ಬೆಳಗ್ಗೆ ನಡೆದ ಬೋರ್ಡ್ ಸಭೆಯಲ್ಲಿ ಸರ್ವಾನುಮತದಿಂದ ಈ ನಿರ್ಣಯ ಕೈಗೊಳ್ಳಲಾಗಿದ್ದು, ಇನ್ಫೋಸಿಸ್ ನಿಂದ ನಿವೃತ್ತಿ ಹೊಂದಿದ್ದ ನಾರಾಯಣಮೂರ್ತಿ ಅವರನ್ನು ಮತ್ತೆ ಕರೆಸಿಕೊಳ್ಳಲಾಗಿದೆ.

ಜೂನ್.1, 2013ರಿಂದ ಜಾರಿಗೆ ಬರುವಂತೆ ಬೋರ್ಡ್ ಕಾರ್ಯನಿರ್ವಾಹಕ ಅಧ್ಯಕ್ಷ ಹಾಗೂ ಹೆಚ್ಚುವರಿ ನಿರ್ದೇಶಕರಾಗಿ ನೇಮಕ ಮಾಡಲಾಗಿದೆ ಎಂದು ಬಿಎಸ್ಇಗೆ ಇನ್ಪೋಸಿಸ್ ಬೋರ್ಡ್ ಹೇಳಿಕೆ ನೀಡಿದೆ. 2011ರಲ್ಲಿ ಇನ್ಫೋಸಿಸ್ ಬೋರ್ಡ್ ಅಧ್ಯಕ್ಷ ಸ್ಥಾನಕ್ಕೆ ನಾರಾಯಣಮೂರ್ತಿ ಅವರು ರಾಜೀನಾಮೆ ನೀಡಿದ್ದರು.

ಇನ್ಫೋಸಿಸ್‌ಗೆ ನಾರಾಯಣ ಮೂರ್ತಿ ಮರು ಆಯ್ಕೆ

ಕಳೆದ ಹಲವಾರು ತ್ರೈಮಾಸಿಕಗಳಲ್ಲಿ ಇನ್ಫೋಸಿಸ್ ಸಂಸ್ಥೆ ಕಳಪೆ ಸಾಧನೆ ತೋರಿದೆ. ಟಿಸಿಎಸ್ ಹಾಗೂ ಕಾಂಗ್ನಿಜೆಂಟ್ ವಿರುದ್ಧ ಹೋರಾಟ ನಡೆಸಲು ಸಾಧ್ಯವಾಗದೆ ಸೋತಿದೆ. ಹೀಗಾಗಿ ಸಮರ್ಥ ನೇತಾರರ ಅಗತ್ಯವಿರುವ ಹಿನ್ನಲೆಯಲ್ಲಿ ಇನ್ಫೋಸಿಸ್‌ಗೆ ನಾರಾಯಣ ಮೂರ್ತಿಯವರನ್ನು ಮರು ನೇಮಕ ಮಾಡಲಾಗಿದೆ.

ನಾರಾಯಣ ಮೂರ್ತಿ ಅವರ ಮಗ ರೋಹನ್ ಮೂರ್ತಿ ಸಹ ಆಯ್ಕೆಯಾಗಿದ್ದು ,ಅಪ್ಪನಿಗೆ ಕಾರ್ಯಕಾರಿ ಸಹಾಯಕನಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಹಾರ್ವರ್ಡ್, ಕಾರ್ನೆಲ್ ವಿವಿಯಲ್ಲಿ ಓದಿ ಬಂದಿರುವ, ಕಂಪ್ಯೂಟರ್ ಸೈನ್ಸ್ ನಲ್ಲಿ ರೋಹನ್ ಪಿಹೆಚ್‌ಡಿ ಪದವಿ ಗಳಿಸಿದ್ದಾರೆ. ಮೊಬೈಲ್ ಕಂಪ್ಯೂಟಿಂಗ್, ವೈರ್‌ಲೆಸ್‌ ಸೇವೆ ಬಗ್ಗೆ ರೋಹನ್ ಸಂಶೋಧನೆ ನಡೆಸಿದ್ದಾರೆ.

ಇದನ್ನೂ ಓದಿ : ಬೆಂಗಳೂರಿನ ಇನ್ಫೋಸಿಸ್‌ ಕ್ಯಾಂಪಸ್‌
ಇದನ್ನೂ ಓದಿ : ಮೈಸೂರಿನ ಇನ್ಫೋಸಿಸ್‌ ಕ್ಯಾಂಪಸ್‌

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot