ಏಪ್ರಿಲ್‌ 6ರಿಂದ 3ಡಿಯಲ್ಲಿ ನರೇಂದ್ರ ಮೋದಿ ಪ್ರಚಾರ

By Ashwath
|

ಲೋಕಸಭಾ ಚುನಾವಣೆಯಲ್ಲೂ ನರೇಂದ್ರ ಮೋದಿ 3ಡಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಗುಜರಾತ್‌ 2012ರ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ಗಿನ್ನೀಸ್‌ ದಾಖಲೆ ನಿರ್ಮಿಸಿದ 3ಡಿ ತಂತ್ರಜ್ಞಾನ ಪ್ರಚಾರವನ್ನು ಮೋದಿ ಲೋಕಸಭಾ ಚುನಾವಣೆಯಲ್ಲೂ ಮುಂದಿನ ವಾರದಿಂದ ಆರಂಭಿಸಲಿದ್ದಾರೆ. ಏಪ್ರಿಲ್‌ 6ರಂದು ಸಂಜೆ 6ರಿಂದ 7ಗಂಟೆಯವರೆಗೆ 3ಡಿ ಯಲ್ಲಿ ಭಾಷಣ ಮಾಡಲಿದ್ದಾರೆ ಎಂದು ಇಂಡಿಯಾ 272 ವೆಬ್‌ಸೈಟ್‌ ಹೇಳಿದೆ.

ಮೋದಿ 3ಡಿ ತಂತ್ರಜ್ಞಾನದಲ್ಲಿ ಭಾಷಣ ಮಾಡುತ್ತಿರುವ ಹಿನ್ನೆಲೆಯಲ್ಲಿ ಈ ತಂತ್ರಜ್ಞಾನದ ಕುರಿತ ಮತ್ತಷ್ಟು ಮಾಹಿತಿಗಳನ್ನು ಮುಂದಿನ ಪುಟದಲ್ಲಿ ನೀಡಲಾಗಿದೆ.

ಇದನ್ನೂ ಓದಿ: ಗುಜರಾತ್‌ನಲ್ಲಿದೆ ಏಷ್ಯಾದ ಅತೀ ದೊಡ್ಡ ಸೋಲಾರ್‌ ಪಾರ್ಕ್

1


ಹೊಚ್ಚ ಹೊಸ ತಂತ್ರಜ್ಞಾನ ಪ್ರಚಾರ ಇದಾಗಿದ್ದು ಹೆಚ್ಚು ಕಡಿಮೆ ಟಿವಿ ವಾಹಿನಿಗಳ ನೇರಪ್ರಸಾರಕ್ಕೆ ಬಳಸುವ ತಂತ್ರಜ್ಞಾನವನ್ನೇ ಇಲ್ಲೂ ಬಳಸಲಾಗುತ್ತದೆ.ಈ 3ಡಿ ಪ್ರಚಾರ ಪ್ರಕ್ರಿಯೆಯಲ್ಲಿ ಎರಡು ಹಂತಗಳಿವೆ. ಮೊದಲನೇ ಹಂತವಾಗಿ 3ಡಿ ಪ್ರಚಾರಕ್ಕಾಗಿ ಸ್ಟುಡಿಯೋದೊಳಗಡೆ ಕ್ಯಾಮೆರಾದ ಮೂಲಕ ದೃಶ್ಯವನ್ನುಸೆರೆಹಿಡಿದು ಉಪಗ್ರಹ ತರಂಗಗಳಿಗೆ ಕಳುಹಿಸಲಾಗುತ್ತದೆ. ಕಳುಹಿಸಿದ ಸಿಗ್ನಲ್‌ಗಳನ್ನು ಪ್ರದರ್ಶನ ಆಯೋಜನೆಗೊಂಡ ಸ್ಥಳದಲ್ಲಿ ಡೌನ್‌ಲಿಂಕ್‌ ಮಾಡಿಕೊಂಡು ಆ ದೃಶ್ಯವನ್ನು ಮೂಡಿಸಲಾಗುತ್ತದೆ.

2

2


3ಡಿ ಸಿನಿಮಾದಲ್ಲಿ ಹೇಗೆ ವೀಕ್ಷಕರ ಹತ್ತಿರವೇ ದೃಶ್ಯಗಳು ಬರುತ್ತವೋ ಅದೇ ರೀತಿಯಾಗಿ ಇಲ್ಲೂ ಭಾಷಣ ಮಾಡುವ ವ್ಯಕ್ತಿ ತಮ್ಮ ಹತ್ತಿರವೇ ನಿಂತು ಭಾಷಣ ಮಾಡಿದ ಅನುಭವ ವೀಕ್ಷಕರಿಗೆ ಆಗುತ್ತದೆ.

3

3


ಬೆಂಗಳೂರಿನಲ್ಲಿರುವ nchant3d ಕಂಪೆನಿ ಹೊಸ ರೀತಿಯ ಪ್ರಚಾರ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಿದೆ.

4

4


ಕಳೆದ ಗುಜರಾತ್‌ ವಿಧಾನಸಭಾ ಚುನಾವಣೆ ವೇಳೆ 126 ಸ್ಥಳಗಳಲ್ಲಿ ಮೋದಿ 3ಡಿ ಭಾಷಣ ಪ್ರದರ್ಶನಗೊಂಡಿತ್ತು.

5

5


2012ರ ವಿಧಾನಸಭಾ ಚುನಾವಣೆ ವೇಳೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಮಾಡಿದ್ದ 3ಡಿ ಭಾಷಣ ಗಿನ್ನಿಸ್ ದಾಖಲೆಯಲ್ಲಿ ಸೇರ್ಪಡೆಯಾಗಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X