ಗುಜರಾತ್‌ನಲ್ಲಿದೆ ಏಷ್ಯಾದ ಅತೀ ದೊಡ್ಡ ಸೋಲಾರ್‌ ಪಾರ್ಕ್

Posted By:

ಸದ್ಯಕ್ಕೆ ನಮ್ಮ ದೇಶದಲ್ಲಿ ಸೋಲಾರ್‌ ವಿದ್ಯುತ್‌ ಎನ್ನುವ ವಿಷಯ ಪ್ರಸ್ತಾಪವಾದಾಗ ಬಹಳಷ್ಟು ಜನ ಗುಜರಾತ್‌ ಸೋಲಾರ್‌ ಪಾರ್ಕ್‌ ಬಗ್ಗೆ ಮಾತನಾಡುತ್ತಾರೆ. ಈ ಸೋಲಾರ್‌ ಪಾರ್ಕ್ ಯೋಜನೆಯ ಸಕ್ಸಸ್‌ನಿಂದಾಗಿ ದೇಶದಲ್ಲಿ ಸೌರ ವಿದ್ಯುತ್‌ನಲ್ಲಿ ಕ್ರಾಂತಿ ಮಾಡಿದ ರಾಜ್ಯ ಎಂಬ ಪಟ್ಟ ಗುಜರಾತ್‌ಗೆ ಒಲಿದಿದೆ. ಏಷ್ಯಾದ ಅತೀ ದೊಡ್ಡ ಸೋಲಾರ್‌ ವಿದ್ಯುತ್‌ ತಯಾರಕ ಪಾರ್ಕ್‌ ಅಂತಾನೆ ಚರಂಕ ಪಾರ್ಕ್‌ ಈಗ ಫೇಮಸ್ಸಾಗಿದೆ.

ಹೀಗಾಗಿ ಇಲ್ಲಿ ಗುಜರಾತ್‌ ಮುಖ್ಯಮಂತ್ರಿ ನರೇಂದ್ರ ಮೋದಿಗೆ ಅಪಾರ ಜನಪ್ರಿಯತೆ ತಂದು ಕೊಟ್ಟ ಈ ಯೋಜನೆಗೆ ಸಂಬಂಧಿಸಿದ ಕೆಲವು ಮಾಹಿತಿಗಳಿವೆ. ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಓದಿಕೊಂಡು ಹೋಗಿ.

ಇದನ್ನೂ ಓದಿ : ಸೋಲಾರ್‌ ಶರ್ಟ್‌ ಹಾಕಿ. ಕೂಲ್‌ ಕೂಲ್‌ ಆಗಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಏನಿದು ಗುಜರಾತ್‌ ಸೋಲಾರ್‌ ಪಾರ್ಕ್‌ ಯೋಜನೆ ?

ಏಷ್ಯಾದ ಅತೀ ದೊಡ್ಡ ಸೋಲಾರ್‌ ಪಾರ್ಕ್

ರಾಜ್ಯದಲ್ಲಿ ಸೌರ ವಿದ್ಯುತ್‌ ಉತ್ಪಾದನೆ ಮಾಡಲು ಗುಜರಾತ್‌ ಸರ್ಕಾರ ವಿವಿಧ ಸೋಲಾರ್‌ ವಿದ್ಯುತ್‌ ತಯಾರಿಸುವ ಕಂಪೆನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದು,ಈ ಸೋಲಾರ್‌ ಕಂಪೆನಿಗಳು ರಾಜ್ಯದ ವಿವಿಧೆಡೆ ತಮ್ಮ ಪಾರ್ಕ್‌ನ್ನು ಸ್ಥಾಪಿಸಿ ವಿದ್ಯುತ್‌ ತಯಾರಿಸುತ್ತಿವೆ. ಒಟ್ಟು 84 ಕಂಪೆನಿಗಳು ಈ ಯೋಜನೆಯಲ್ಲಿ ರಾಜ್ಯ ಸರ್ಕಾರದೊಂದಿಗೆ ಸಹಿ ಹಾಕಿವೆ.

ಚರಂಕ ಸೋಲಾರ್‌ ಪಾರ್ಕ್‌

ಏಷ್ಯಾದ ಅತೀ ದೊಡ್ಡ ಸೋಲಾರ್‌ ಪಾರ್ಕ್

ಸೋಲಾರ್‌ ಪಾರ್ಕ್‌ ಯೋಜನೆಯಲ್ಲಿ ಅತೀ ವಿಸ್ತಾರವಾದ ಪಾರ್ಕ್‌ ಪಾಟನ್ ಜಿಲ್ಲೆಯ ಸಂತಾಲ್ಪುರ ತಾಲ್ಲೂಕಿನ ಚರಂಕ ಸೋಲಾರ್‌ ಪಾರ್ಕ್‌. ಈಗ 2965 ಎಕರೆ ಸ್ಥಳದಲ್ಲಿ ಈ ಸೌರ ವಿದ್ಯುತ್‌ ಸ್ಥಾವರವನ್ನು ಈ ಗ್ರಾಮದಲ್ಲಿ ನಿರ್ಮಿ‌ಸಿದ್ದು, 17 ಖಾಸಗಿ ಮತ್ತು ಸರಕಾರಿ ಕಂಪೆನಿಗಳು ಒಟ್ಟು 9,000 ಕೋ. ರೂ. ಹೂಡಿಕೆ ಮಾಡಿ ಸೋಲಾರ್‌ ವಿದ್ಯುತ್‌ನ್ನು ಉತ್ಪಾದಿಸುತ್ತಿವೆ.

ಏಷ್ಯಾದ ಅತೀ ದೊಡ್ಡ ಸೋಲಾರ್‌ ಪಾರ್ಕ್

ಏಷ್ಯಾದ ಅತೀ ದೊಡ್ಡ ಸೋಲಾರ್‌ ಪಾರ್ಕ್

ಈಗಾಗಲೇ ಚರಂಕ ಪಾರ್ಕ್‌ 500 ಮೆ.ವಾ. ವಿದ್ಯುತ್‌ನ್ನು ಉತ್ಪಾದನೆಯಾಗುತ್ತಿದೆ. ಮೂರು ವರ್ಷಗಳ ಹಿಂದೆ ನೀರು, ರಸ್ತೆ ಸೇರಿದಂತೆ ಯಾವುದೇ ಮೂಲಸೌಕರ್ಯಗಳು ಇಲ್ಲದೆ ಮರು ಭೂಮಿಯಂತಿದ್ದ ಈ ಭಾಗವು ಈಗ ಪ್ರಮುಖ ಕೈಗಾರಿಕಾ ಪ್ರದೇಶವಾಗಿಬದಲಾಗಿದೆ.

ಏಷ್ಯಾದ ಅತೀ ದೊಡ್ಡ ಸೋಲಾರ್‌ ಪಾರ್ಕ್

ಏಷ್ಯಾದ ಅತೀ ದೊಡ್ಡ ಸೋಲಾರ್‌ ಪಾರ್ಕ್

ಈ ಪಾರ್ಕ್‌ನಿಂದಾಗಿ ಸೌರ ವಿದ್ಯುತ್‌ ಉತ್ಪಾದನೆಯಲ್ಲಿ ಗುಜರಾತ್‌ ಚೀನಾವನ್ನು ಹಿಂದಿಕ್ಕಿದೆ. ಈ ಹಿಂದೆ ಏಷ್ಯಾದ ದೊಡ್ಡ ಸೋಲಾರ್‍ ಪಾರ್ಕ್‌ ಎಂದು ಹೆಸರಾಗಿದ್ದ ಚೀನಾದ ಗೊಲ್ಮಂಡ್‌ ಸೋಲಾರ್‌ ಪಾರ್ಕ್‌ ದಿನಕ್ಕೆ 200 ಮೆ. ವಾ ವಿದ್ಯುತ್ ಉತ್ಪಾದನೆ ಮಾಡುತ್ತಿದೆ. ಆದರೆ ಈ ಸೋಲಾರ್‍ ಪಾರ್ಕ್‌ ದಿನಕ್ಕೆ 500 ಮೆ.ವಾ. ವಿದ್ಯುತ್‌ನ್ನು ಉತ್ಪಾದಿಸುತ್ತದೆ.

ಏಷ್ಯಾದ ಅತೀ ದೊಡ್ಡ ಸೋಲಾರ್‌ ಪಾರ್ಕ್

ಏಷ್ಯಾದ ಅತೀ ದೊಡ್ಡ ಸೋಲಾರ್‌ ಪಾರ್ಕ್

ಚರಂಕ ಪಾರ್ಕ್‌ ಸೌರ ವಿದ್ಯುತ್ ಪಾರ್ಕ್‌ಗೆ ಬೇಕಾದ ಮೂಲಸೌಕರ್ಯಗಳನ್ನು ಕಲ್ಪಿಸಿಕೊಡಲು ಸರ್ಕಾರ 300 ಕೋಟಿ ರೂಪಾಯಿ ಬಂಡವಾಳ ಹೂಡಿದೆ. ಅಲ್ಲದೆ ಪ್ರಸರಣ ಜಾಲವನ್ನು ಬಲಪಡಿಸಲು ಗುಜರಾತ್ ವಿದ್ಯುತ್ ಪ್ರಸರಣ ನಿಗಮ 650 ಕೋಟಿ ರೂಪಾಯಿ ವೆಚ್ಚಮಾಡಿದೆ.

ಏಷ್ಯಾದ ಅತೀ ದೊಡ್ಡ ಸೋಲಾರ್‌ ಪಾರ್ಕ್

ಏಷ್ಯಾದ ಅತೀ ದೊಡ್ಡ ಸೋಲಾರ್‌ ಪಾರ್ಕ್

ಸೋಲಾರ್‌ ಪಾರ್ಕ್‌ ಯೋಜನೆ ಸಂಬಂಧ ಗುಜರಾತ್‌ ವಿದ್ಯುಚ್ಛಕ್ತಿ ನಿಗಮ ನಿಯಮಿತದೊಂದಿಗೆ ವಿದ್ಯುತ್ ಖರೀದಿಗಾಗಿ 25 ವರ್ಷದ ಒಪ್ಪಂದವಾಗಿದ್ದು, ಮೊದಲ 12 ವರ್ಷದವರೆಗೆ ಪ್ರತಿ ಯೂನಿಟ್ ವಿದ್ಯುತ್ ಅನ್ನು ರೂ 15 ಹಾಗೂ ಆ ನಂತರದ 13 ವರ್ಷ ರೂ 5ರ ದರದಲ್ಲಿ ಖರೀದಿ ಮಾಡಲಾಗುತ್ತದೆ.

ಏಷ್ಯಾದ ಅತೀ ದೊಡ್ಡ ಸೋಲಾರ್‌ ಪಾರ್ಕ್

ಏಷ್ಯಾದ ಅತೀ ದೊಡ್ಡ ಸೋಲಾರ್‌ ಪಾರ್ಕ್

ರಾಷ್ಟ್ರೀಯ ಸೌರ ವಿದ್ಯುತ್‌ ಕಾರ್ಯಕ್ರಮವನ್ನು ಪ್ರಾರಂಭಿಸುವ ಮೊದಲೇ ಗುಜರಾತ್‌ ರಾಜ್ಯ ಸೌರ ವಿದ್ಯುತ್‌ ನೀತಿಯನ್ನು ರೂಪಿಸಿತ್ತು. ಹೀಗಾಗಿ ಈ ರಾಜ್ಯ ಕ್ಷಿಪ್ರವಾಗಿ ಸೌರ ವಿದ್ಯುತ್‌ ಉತ್ಪಾದನೆಯಲ್ಲಿ ಭಾರೀ ಪ್ರಗತಿಯನ್ನು ಸಾಧಿಸಿದೆ.

ಏಷ್ಯಾದ ಅತೀ ದೊಡ್ಡ ಸೋಲಾರ್‌ ಪಾರ್ಕ್

ಏಷ್ಯಾದ ಅತೀ ದೊಡ್ಡ ಸೋಲಾರ್‌ ಪಾರ್ಕ್

ಸೋಲಾರ್‌ ವಿದ್ಯುತ್‌ ಉತ್ಪಾದನೆ ಮಾಡುವ ರಾಜ್ಯಗಳಲ್ಲಿ ಗುಜರಾತ್‌ ದೇಶದಲ್ಲೇ ನಂ .1 ರಾಜ್ಯವಾಗಿದ್ದು, ದೇಶದ ಒಟ್ಟು ಶೇ.66 ರಷ್ಟುಸೋಲಾರ್‌ ವಿದ್ಯುತ್‌ ಗುಜರಾತ್‌ ಒಂದೇ ರಾಜ್ಯದಲ್ಲಿ ತಯಾರಾಗುತ್ತದೆ.

ಏಷ್ಯಾದ ಅತೀ ದೊಡ್ಡ ಸೋಲಾರ್‌ ಪಾರ್ಕ್

ಏಷ್ಯಾದ ಅತೀ ದೊಡ್ಡ ಸೋಲಾರ್‌ ಪಾರ್ಕ್

ಗುಜರಾತ್‌ ಸೋಲಾರ್‌ ಪಾರ್ಕ್‌ ಯೋಜನೆಯಲ್ಲಿ 84 ಕಂಪೆನಿಗಳು ಸದ್ಯ 856.81 ಮೆಗಾವಾಟ್ ಸೌರವಿದ್ಯುತ್ ಉತ್ಪಾದನೆ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಉತ್ಪಾದನಾ ಸಾಮರ್ಥ್ಯ 968.5 ಮೆಗಾವಾಟ್‌ಗೆ ಏರಲಿದೆ.

ಏಷ್ಯಾದ ಅತೀ ದೊಡ್ಡ ಸೋಲಾರ್‌ ಪಾರ್ಕ್

ಏಷ್ಯಾದ ಅತೀ ದೊಡ್ಡ ಸೋಲಾರ್‌ ಪಾರ್ಕ್

ಸೌರವಿದ್ಯುತ್ ಕ್ಷೇತ್ರದಲ್ಲಿ 900 ಕೋಟಿ ರೂಪಾಯಿ ಬಂಡವಾಳ ಹೂಡಿಕೆಯಾಗಿದ್ದು, 30,000 ಜನರಿಗೆ ಉದ್ಯೋಗ ಅವಕಾಶ ಕಲ್ಪಿಸಿಕೊಟ್ಟಿದೆ.

ಏಷ್ಯಾದ ಅತೀ ದೊಡ್ಡ ಸೋಲಾರ್‌ ಪಾರ್ಕ್

ಏಷ್ಯಾದ ಅತೀ ದೊಡ್ಡ ಸೋಲಾರ್‌ ಪಾರ್ಕ್

ಸೋಲಾರ್‌ ಪಾರ್ಕ್‌ ಕೇವಲ ಸೋಲಾರ್‌ ವಿದ್ಯುತ್‌ನ್ನು ಮಾತ್ರ ಉತ್ಪಾದಿಸದೇ, ಸೋಲಾರ್‌ ವಿದ್ಯುತ್‌ ತಯಾರಿಸಲು ಬೇಕಾಗಿರುವ ಪ್ಯಾನೆಲ್‌ಗಳನ್ನು ತಯಾರಿಸುತ್ತಿದೆ. ಸ್ಥಳೀಯ ಜನರಿಗೆ ಈ ಪ್ಯಾನೆಲ್‌ಗಳ ನಿರ್ಮಾ‌ಣ ಘಟಕದಲ್ಲಿ ಉದ್ಯೋಗ ನೀಡಲಾಗಿದೆ.

 ಕಾಲುವೆಯಿಂದ ವಿದ್ಯುತ್‌ ತಯಾರಿಸುವ ಯೋಜನೆ

ಕಾಲುವೆಯಿಂದ ವಿದ್ಯುತ್‌ ತಯಾರಿಸುವ ಯೋಜನೆ

ಈ ಸೋಲಾರ್‌ ಪಾರ್ಕ್‌ಗಳ ಜೊತೆಗೆ ವಿಶ್ವದ ಮೊದಲ ಕಾಲುವೆಯಿಂದ ವಿದ್ಯುತ್‌ ತಯಾರಿಸುವ ಯೋಜನೆ ಗುಜರಾತ್‌ನಲ್ಲಿದೆ.ಚಂದ್ರಾಸನ ಎಂಬ ಗ್ರಾಮದಲ್ಲಿ ಸರ್ದಾರ್‌ ಸರೋವರ ನರ್ಮದಾ ನಿಗಮ ಲಿಮಿಟೆಡ್‌ನ‌ ಹಾದು ಹೋಗುವ ಉಪ ಕಾಲುವೆಯೊಂದರ ಮೇಲೆ 750 ಮೀಟರ್‌ ಉದ್ದಕ್ಕೆ ಈ ಸ್ಥಾವರ ನಿರ್ಮಾ‌ಣವಾಗಿದೆ. ಒಂದು ವರ್ಷ‌ಕ್ಕೆ1.6 ದಶಲಕ್ಷ ವಿದ್ಯುತ್‌ ಈ ಸ್ಥಾವರದಲ್ಲಿ ತಯಾರಾಗುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot