ಸ್ಯಾಮ್ಸಂಗ್ ಗ್ಯಾಲಕ್ಸಿ S3 ಕೈ ಹಿಡಿದ ನರ್ಗಿಸ್ ಫಾಕ್ರಿ

By Varun
|
ಸ್ಯಾಮ್ಸಂಗ್ ಗ್ಯಾಲಕ್ಸಿ S3 ಕೈ ಹಿಡಿದ ನರ್ಗಿಸ್ ಫಾಕ್ರಿ

ಕೊನೆಗೂ ಆ ದಿಂದ ಬಂದೆ ಬಿಟ್ಟಿತು. ರಾಕ್ ಸ್ಟಾರ್ ಚಿತ್ರದ ಮನಮೋಹಕ ಚೆಲುವೆ ನರ್ಗಿಸ್ ಫಾಕ್ರಿ ಕೈಯಿಂದ ಈ ವರ್ಷದ ಅತ್ಯಂತ ನಿರೀಕ್ಷೆಯ ಸ್ಮಾರ್ಟ್ ಫೋನ್ ಸ್ಯಾಮ್ಸಂಗ್ ಗ್ಯಾಲಕ್ಸಿ S3 ಸ್ಮಾರ್ಟ್ ಫೋನ್ ದೆಹಲಿಯಲ್ಲಿ ಬಿಡುಗಡೆಯಾಯಿತು.

ಪ್ರಕೃತಿಯಿಂದ ಪ್ರೇರಣೆಗೊಂಡು ತಯಾರಿಸಲಾಗಿದೆ ಎಂದು ಹೇಳಿಕೊಂಡಿದ್ದ ಸ್ಯಾಮ್ಸಂಗ್, ಇದರ ಮೂಲಕ ಆಪಲ್ ಹೊರತರಲಿದೆ ಎನ್ನಲಾದ ಆಪಲ್ 5 ಸ್ಮಾರ್ಟ್ ಫೋನ್ ಗೆ ಸವಾಲೊಡ್ಡುವ ಎಲ್ಲ ಲಕ್ಷಣಗಳನ್ನು ಹೊಂದಿದೆ. ಕರ್ವಿ ಡಿಸೈನ್ ಹೊಂದಿರುವ ಈ ಫೋನ್, 133 ಗ್ರಾಂ ಇದ್ದು, 8.6 mm ದಪ್ಪ ಇದೆ.

ಇದರ ಪ್ರಮುಖ ಫೀಚರುಗಳು ಈ ರೀತಿ ಇವೆ:

 • 4.6 ಇಂಚ್ HD ಸೂಪರ್ AMOLED ಡಿಸ್ಪ್ಲೇ, ಮಲ್ಟಿ ಟಚ್ ಸ್ಕ್ರೀನ್

 • 1280 x 720 ರೆಸಲ್ಯೂಶನ್

 • ಆಂಡ್ರಾಯ್ಡ್ 4.0.3 ತಂತ್ರಾಂಶ

 • 1.4 GHz ಕ್ವಾಡ್ ಕೋರ್ Exynos 4212 ಪ್ರೋಸೆಸರ್

 • 8 ಮೆಗಾ ಪಿಕ್ಸೆಲ್ ಕ್ಯಾಮರಾ, LED ಫ್ಲಾಶ್, BSI ಸೆನ್ಸರ್

 • 1.9 ಮೆಗಾ ಪಿಕ್ಸೆಲ್ ಮುಂಬದಿಯ ಕ್ಯಾಮರಾ

 • 1080p HD ವೀಡಿಯೋ ರೆಕಾರ್ಡಿಂಗ್

 • 1GB ಆಂತರಿಕ ಮೆಮೊರಿ, 32GB ವರೆಗೂ ವಿಸ್ತರಿಸಬಹುದಾದ ಮೆಮೊರಿ

 • ಮೈಕ್ರೋ SD ಕಾರ್ಡ್ ಸ್ಲಾಟ್

 • GPRS, ಬ್ಲೂ ಟೂತ್ 3.0, GPS

 • ವೀಡಿಯೋ ಪ್ಲೇಯರ್, ಗೇಮ್ಸ್, ಲೌಡ್ ಸ್ಪೀಕರ್ ಹಾಗು 3.5 mm ಆಡಿಯೋ ಜ್ಯಾಕ್

 • NFC, ವೈ-ಫೈ, DLNA, GLONASS, ಮೈಕ್ರೋ USB, HDMI, ಬ್ಲೂಟೂತ್

 • 2100 mAh ಬ್ಯಾಟರಿ

ಇದಷ್ಟೇ ಅಲ್ಲದೆ ಇನ್ನೂ ಹಲವಾರು ವಿಶೇಷಗಳು ಈ ಸ್ಮಾರ್ಟ್ ಫೋನಿನಲ್ಲಿ ಇದ್ದು, ಇದನ್ನು ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

ಜೂನ್ 4 ರಿಂದ ಎಲ್ಲ ರೀಟೈಲ್ ಮಳಿಗೆಗಳಲ್ಲಿ ಹಾಗು ಸ್ಯಾಮ್ಸಂಗ್ ಆನ್ಲೈನ್ ಮಳಿಗೆಗಳಲ್ಲಿ ಲಭ್ಯವಿದೆ ಎಂದು ಸ್ಯಾಮ್ಸಂಗ್ ಇಂಡಿಯಾ ತಿಳಿಸಿದೆ. ಸುಂದರಿಯ ಕೈಯಲ್ಲಿ ಅನಾವರಣಗೊಂಡ ಈ ಫೋನ್ ಅನ್ನು 43,180 ರೂಪಾಯಿಗೆ ನೀವು ಕೊಳ್ಳಬಹುದು.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X