ಸ್ಯಾಮ್ಸಂಗ್ ಗ್ಯಾಲಕ್ಸಿ S3 ಕೊಳ್ಳಲು 7 ಕಾರಣಗಳು

By Varun
|

ಸ್ಯಾಮ್ಸಂಗ್ ಗ್ಯಾಲಕ್ಸಿ S3 ಕೊಳ್ಳಲು 7 ಕಾರಣಗಳು
ಈ ವರ್ಷದ ಸ್ಮಾರ್ಟ್ ಫೋನುಗಳಲ್ಲೇ ಅತೀ ಹೆಚ್ಚು ನಿರೀಕ್ಷೆ ಇದ್ದದ್ದು ಸ್ಯಾಮ್ಸಂಗ್ ಗ್ಯಾಲಕ್ಸಿ S3 ಮೇಲೆ. ಜೂನ್ 10ಕ್ಕೆ ಭಾರತದಲ್ಲಿ ಬಿಡುಗಡೆಯಾಗಲಿರುವ ಈ ಮೊಬೈಲ್ ಈಗಾಗಲೇ ಫೆವರಿಟ್ ಎನಿಸಿದೆ. ಮೂಲಗಳ ಪ್ರಕಾರ 42,500 ರೂಪಾಯಿ ಬೆಲೆಗೆ ಸ್ಯಾಮ್ಸಂಗ್ ಈ ಫೋನನ್ನು ಗ್ರಾಹಕರಿಗೆ ಮಾರಲಿದ್ದು, ಆಪಲ್ ನ ಐ ಫೋನ್ 4S ಗಿಂತಾ ಹಲವು ರೀತಿಯಲ್ಲಿ ಚೆನ್ನಾಗಿದೆ. ನೀವು ಯಾಕೆ ಈ ಫೋನನ್ನು ಕೊಳ್ಳಬಹುದು ಎಂದು ತಿಳಿಸುವ 7 ಕಾರಣಗಳನ್ನು ಇಲ್ಲಿ ಕೊಡಲಾಗಿದೆ.

1. ದೊಡ್ಡ ಡಿಸ್ಪ್ಲೇ- ಈ ಸ್ಮಾರ್ಟ್ ಫೋನ್ 4.8 ಇಂಚ್ Super AMOLED ಡಿಸ್ಪ್ಲೇ ಹೊಂದಿದ್ದು, 1280 x 720 ಪಿಕ್ಸೆಲ್ ರೆಸಲ್ಯೂಶನ್ ಇರಲಿದೆ. ಇದರಿಂದಾಗಿ ಅತ್ಯುತ್ತಮವಾದ ಗ್ರಾಫಿಕ್ಸ್ ನೋಡಬಹುದಾಗಿದೆ.

2. ಡೈರೆಕ್ಟ್ ಕಾಲ್- ನಿಮಗೆ ಯಾವುದೋ ಪ್ರಮುಖವಾದ ಮೆಸೇಜ್ ಬಂದು, ಆ ವ್ಯಕ್ತಿಗೆ ಮೆಸೇಜ್ ಮೂಲಕ ರಿಪ್ಲೈ ಮಾಡುವ ಬದಲು ಕರೆ ಮಾಡಬೇಕು ಎನಿಸಿದರೆ, ನೀವು ಕರೆ ಬಟನ್ ಒತ್ತದೆ, ಕೇವಲ ಫೋನ್ ಅನ್ನು ಕಿವಿಯ ಹತ್ತಿರ ಹಿಡಿದರೆ ಸಾಕು, ಅದೇ ಅರ್ಥ ಮಾಡಿಕೊಂಡು ಆ ವ್ಯಕ್ತಿಗೆ ಕರೆ ಮಾಡುತ್ತದೆ.

3. ಸ್ಮಾರ್ಟ್ ಸ್ಟೇ ಕಣ್ಣಿನಿಂದ ಟ್ರ್ಯಾಕ್ ಮಾಡುವ ವ್ಯವಸ್ಥೆ - ನೀವು ಈ ಮೊಬೈಲ್ ಅನ್ನು ನೋಡುತ್ತಿರುವವರೆಗೂ ಫೋನ್ ಚಾಲೂ ಇರುವ ಹಾಗೆ ಟ್ರ್ಯಾಕಿಂಗ್ ವ್ಯವಸ್ಥೆ ಇದೆ (ಮುಂಬದಿಯ ಕ್ಯಾಮರಾದ ಸೆನ್ಸರ್ ಈ ಕೆಲಸ ಮಾಡುತ್ತದೆ)

4. S ವಾಯ್ಸ್- ಆಪಲ್ ನ ಐಫೋನಿನಲ್ಲಿ ಇರುವ "ಸಿರಿ" ವಾಯ್ಸ್ ರೆಕಗ್ನಿಶನ್ ತಂತ್ರಾಂಶದ ರೀತಿಯ S ವಾಯ್ಸ್ ಎಂಬ ತಂತ್ರಾಂಶ ಇದರಲ್ಲಿ ಅಡಕವಾಗಿದ್ದು, S ವಾಯ್ಸ್ ಮೂಲಕ ಕರೆ ಮಾಡಬಹುದು, ಫೋಟೋ ಕ್ಲಿಕ್ಕಿಸಬಹುದು, ಅಲಾರ್ಮ್ ಇಡಬಹುದು ಹಾಗು ಡೆಮೋ ವೀಡಿಯೋ ಕೂಡ ನೋಡಬಹುದು.

5. ಆಲ್ ಶೇರ್ ಕಾಸ್ಟ್- ಈ ಫೀಚರ್ ನಿಂದಾಗಿ ನೀವು ಈ ಸ್ಮಾರ್ಟ್ ಫೋನ್ ಅನ್ನು HDMI ಪೋರ್ಟ್ ಇಲ್ಲದೆಯೂ ಕೂಡ TV ಗೆ ಕನೆಕ್ಟ್ ಮಾಡಬಹುದು.(ವೈಫೈ ಮೂಲಕ).

6. S ಬೀಮ್ - ಇದನ್ನು ಉಪಯೋಗಿಸಿಕೊಂಡು ಒಂದು S3 ಸಾಧನದಿಂದ ಇನ್ನೊಂದು S3 ಸಾಧನಕ್ಕೆ 10-15 MB ಸೈಜ್ ನ ಫೈಲುಗಳನ್ನು ಸುಲಭವಾಗಿ ಕಳುಹಿಸಬಹುದು.

7. ಕ್ಯಾಮರಾ ಶಾರ್ಟ್ ಕಟ್- ಮೊಬೈಲಿನ ಸ್ಕ್ರೀನ್ ಮೇಲೆ ಒತ್ತಿ ಮೊಬೈಲನ್ನು ಲ್ಯಾಂಡ್ ಸ್ಕೇಪ್ ರೀತಿಯಲ್ಲಿ ತಿರುಗಿಸಿದರೆ ಸಾಕು, ಕ್ಯಾಮರಾ ಚಾಲೂ ಆಗುತ್ತದೆ.

ಇಷ್ಟೆಲ್ಲಾ ವಿಶೇಷ ಫೀಚರುಗಳು ಈ ಸ್ಮಾರ್ಟ್ ಫೋನಿನಲ್ಲಿ ಇರುವುದರಿಂದ ನೀವು ಹೈ ಎಂಡ್ ಸ್ಮಾರ್ಟ್ ಫೋನು ಕೊಳ್ಳುವ ಯೋಚನೆ ಏನಾದರೂ ನಿಮ್ಮಲ್ಲಿದ್ದರೆ, ಈ ಫೋನ್ ಒಂದು ಅತ್ಯುತ್ತಮ ಆಯ್ಕೆ ಆಗಬಲ್ಲದು.

Best Mobiles in India

Read more about:

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X