ಡಿಸೆಂಬರ್‌ನಲ್ಲಿ ಪ್ರಳಯ ಆಗೋದಿಲ್ಲ : ನಾಸಾ

By Super
|
ಡಿಸೆಂಬರ್‌ನಲ್ಲಿ ಪ್ರಳಯ ಆಗೋದಿಲ್ಲ : ನಾಸಾ

ಕಳೆದ ಕೆಲ ವರ್ಷಗಳಿಂದಲೂ 2012 ರ ಡಿಸೆಂಬರ್‌ ತಿಂಗಳಿನಲ್ಲಿ ಭೂಮಂಡಲ ನಾಶವಾಗುತ್ತದೆ ಎಂಬುದರ ಕುರಿತಾಗಿ ಹಲವು ಚರ್ಚೆ ಹಾಗೂ ಸುದ್ದಿಗಳೂ ನಮ್ಮ ಸುತ್ತಲೂ ಆವರಿಸಿಕೊಂಡಿವೆ. ಇದಕ್ಕೆ ಪುಷ್ಟಿ ನೀಡುವಂತೆ ಹಲವು ಭವಿಷ್ಯಕಾರರುಗಳೂ ಕೂಡಾ 2012 ರ ಡಿಸೆಂಬರ್‌ ತಿಂಗಳಿನಲ್ಲಿ ಭೂಮಿಯು ಅಂತ್ಯ ಕಾಣಲಿದೆ ಎಂದು ಭವಿಷ್ಯವನ್ನೂ ನುಡಿದಿರುವುದು ಇಷ್ಟೇಲ್ಲಾ ಬಿಸಿ ಬಿಸಿ ಚರ್ಚೆ ನಡೆಯುವುದಕ್ಕೆ ಕಾರಣವಾಗಿದೆ. ಆದರೆ ಈ ಕುರಿತಾಗಿ ನೀವು ಗಾಬರಿಗೊಳ್ಳುವ ಅಗತ್ಯವೇ ಇಲ್ಲ ಏಕೆಂದರೆ ನಾಸಾದ ವಿಜ್ಞಾನಿಗಳು ಇಂತಹ ಚರ್ಚೆಗಳನ್ನು ಅಲ್ಲಗಳೆದಿದ್ದು ಈ ಎಲ್ಲಾ ಆತಂಕಗಳಿಗೆ ಮಾಯನ್ ನಾಗರೀಕತೆಯ ಸಂಶೋಧನೆಯಲ್ಲಿ ದೊರೆತಂತಹ ಕ್ಯಾಲೆಂಡರ್‌ ಒಂದರಿಂದ ಶುರುವಾದದ್ದಾಗಿದೆ ಎಂದು ನಾಸಾದ ವಿಜ್ಞಾನಿಗಳು ತಿಳಿಸಿದ್ದಾರೆ. ಈ ಕ್ಯಾಲೆಂಡರ್‌ಲ್ಲಿ 2012 ರ ಡಿಸೆಂಬರ್‌ನಲ್ಲಿ ಭೂಮಿಗೆ ನಿಭಿರೂ ಹೆಸರಿನ ಗ್ರಹ ವೊಂದು ಅಪ್ಪಳಿಸಲಿದೆ ಎಂದು ಅಂದಾಜಿನ ಮೇಲೆ ಹೇಳಲಾಗಿದೆ.

ಹಾಗೂ ಮತ್ತೂ ಕೆಲವರ ಪ್ರಕಾರ ಮಾಯನ್ ಕ್ಯಾಲೆಂಡರ್‌ 2012 ರಂದು ಅಂತ್ಯಗೊಳ್ಳಲಿದ್ದು ನಂತರದ ಯಾವುದೇ ದಿನಗಳು ಉಳಿಯುವುದಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ ವಿಜ್ಞಾನಿಗಳ ಪ್ರಕಾರ 2012 ರ ಡಿಸೆಂಬರ್‌ ವೇಳೆಗೆ ಮಾಯನ್ ಕ್ಯಾಲೆಂಡರ್‌ ಅಂತ್ಯಗೊಳ್ಳುವುದಿಲ್ಲ ಹಾಗೂ ಭೂಮಿಯು ಅಂತ್ಯಗೊಳ್ಳುವುದರ ಕುರಿತಾಗಿ ಯಾವುದೇ ಸುಳಿವು ಕೂಡಾ ಲಭ್ಯವಿಲ್ಲ ಎಂದು ತಿಳಿಸಿದ್ದಾರೆ. ಅಂದಹಾಗೆ ಎಲ್ಲೆಡೆ ಹಬ್ಬಿರುವಂತೆ ಭೂ ಮಂಡಲಕ್ಕೆ ಯಾವುದೇ ಗ್ರಹ ಬಂದು ಅಪ್ಪಳಿಸುವುದಿಲ್ಲ ಈರೀತಿ ನಡೆಯುವುದು ಸಾಧ್ಯವಿಲ್ಲ ಆದ್ದರಿಂದ ಯಾವುದೇ ಅಪಾಯವಿಲ್ಲ ಜನ ಸಾಮಾನ್ಯರು ನಿರ್ಭೀತರಾಗಿರುವಂತೆ ನಾಸಾ ತಿಳಿಸಿದೆ.

ಹಬಲ್‌ ಟೆಲಿಸ್ಕೋಪ್‌ ತೆಗೆದಿರುವ ಅದ್ಭುತ ಚಿತ್ರಗಳು

ಕಲಾವಿದ ಕಲ್ಪನೆಯಲ್ಲಿ 2012 ರ ಪ್ರಳಯದ ಪರಿಕಲ್ಪನೆಯ ಚಿತ್ರಗಳ ಗ್ಯಾಲರಿ...

ಕ್ಷುದ್ರ ಗ್ರಹದ ಅಪ್ಪಳಿಕೆ

ಕ್ಷುದ್ರ ಗ್ರಹದ ಅಪ್ಪಳಿಕೆ

ಕ್ಷುದ್ರ ಗ್ರಹದ ಅಪ್ಪಳಿಕೆ
ಪ್ರಳಯದ ಒಳ ನೋಟ

ಪ್ರಳಯದ ಒಳ ನೋಟ

ಪ್ರಳಯದ ಒಳ ನೋಟ
ಮಯಾನ್‌ ಕ್ಯಾಲೆಂಡರ್‌

ಮಯಾನ್‌ ಕ್ಯಾಲೆಂಡರ್‌

ಮಯಾನ್‌ ಕ್ಯಾಲೆಂಡರ್‌
ವಿನಾಶ ನೋಟ

ವಿನಾಶ ನೋಟ

ವಿನಾಶ ನೋಟ
ಭೂಮಿಯ ಅಂತ್ಯ

ಭೂಮಿಯ ಅಂತ್ಯ

ಭೂಮಿಯ ಅಂತ್ಯ
ಮಹಾ ಪ್ರಳಯ

ಮಹಾ ಪ್ರಳಯ

ಮಹಾ ಪ್ರಳಯ

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X