ಮಂಗಳಕ್ಕೆ ನಾಸಾ ಕೊಡುತ್ತಿದೆ ಫ್ರೀ ಟಿಕೆಟ್!..ಮಿಸ್ ಮಾಡದೇ ಪಡೆಯಿರಿ!

|

ಭೂಮಿಯ ಮೇಲಿಂದಲೇ ನಿಮ್ಮ ಹೆಸರನ್ನು ಮಂಗಳ ಗ್ರಹದ ಮೇಲೆ ಬರೆಯಯಬೇಕೆ?. ಹಾಗಾದರೆ, ಬಾಹ್ಯಾಕಾಶ ಪ್ರಪಂಚದ ದಿಗ್ಗಜ ಸಂಸ್ಥೆಯಾಗಿರುವ ಅಮೆರಿಕಾದ ಸಾಸಾ ನಿಮಗೊಂದು ಸುವರ್ಣಾವಕಾಶ ನೀಡಿದೆ. 2020ರಲ್ಲಿ ನಾಸಾ ರೋವರ್ ಒಂದನ್ನು ಮಂಗಳ ಗ್ರಹಕ್ಕೆ ಕಳುಹಿಸುವ ಯೋಜನೆಯಲ್ಲಿದ್ದು, ಇದರಲ್ಲಿ ನಿಮ್ಮ ಹೆಸರನ್ನು ಸಹ ಮಂಗಳ ಗ್ರಹಕ್ಕೆ ಕಳುಹಿಸಬಹುದು.

ಹೌದು, 2020ರ ಜುಲೈನಲ್ಲಿ ನಾಸಾ ಯೋಜಿಸಿಕೊಂಡಿರುವ ಮಂಗಳ ಮಿಷನ್‌ನಲ್ಲಿ ಸಾರ್ವಜನಿಕರೂ ಕೂಡ ತಮ್ಮ ಹೆಸರನ್ನು ಮಂಗಳ ಗ್ರಹಕ್ಕೆ ಕಳುಹಿಸಿಕೊಡುವ ವಿಶೇಷ ಅವಕಾಶವನ್ನು ಮಾಡಿಕೊಡಲಾಗಿದೆ. ರೋವರ್‌ನಲ್ಲಿ ಆಳವಡಿಸಲಾಗುವ ವಿಶೇಷ ಚಿಪ್ ಒಂದರಲ್ಲಿ ಸಾರ್ವಜನಿಕರ ಹೆಸರನ್ನು ಕೆತ್ತಿ ಮಂಗಳನಲ್ಲಿಗೆ ರವಾನೆ ಮಾಡಲಾಗುತ್ತದೆ ಎಂದು ನಾಸಾ ಸಂಸ್ಥೆ ತಿಳಿಸಿದೆ.

ಮಂಗಳಕ್ಕೆ ನಾಸಾ ಕೊಡುತ್ತಿದೆ ಫ್ರೀ ಟಿಕೆಟ್!..ಮಿಸ್ ಮಾಡದೇ ಪಡೆಯಿರಿ!

ನೀವು ಕೂಡ ಮಂಗಳಕ್ಕೆ ನಿಮ್ಮ ಹೆಸರನ್ನು ಕಳುಹಿಸಲು ನೊಂದಾಯಿಸಿಕೊಳ್ಳಬಹುದಾಗಿದ್ದು, ಇದಕ್ಕಾಗಿ ನಾಸಾದ ಅಧಿಕೃತ ವೆಬ್‌ಸೈಟ್‌ ತೆರೆದು (https://mars.nasa.gov/participate/send-your-name) ರಿಜಿಸ್ಟರ್ ಮಾಡಿಕೊಳ್ಳಬೇಕಾಗುತ್ತದೆ. ನಿಮ್ಮ ಹೆಸರು ಮತ್ತು ದೇಶವನ್ನು ಆ ವೆಬ್‌ಸೈಟ್‌ನಲ್ಲಿ ನೊಂದಾಯಿಸಿದರೆ ಮಂಗಳನಲ್ಲಿ ನಿಮ್ಮ ಹೆಸರಿನಲ್ಲಿ ಒಂದು ಟಿಕೆಟ್ ಬುಕ್ ಆಗಲಿದೆ.

ಈ ಅವಕಾಶವನ್ನು ನೀಡಿದ ನಂತರ, 'ನಾವು ಐತಿಹಾಸಿಕ ಮಂಗಳ ಕಾರ್ಯಾಚರಣೆಯನ್ನು ಪ್ರಾರಂಭಿಸಲು ಸಿದ್ಧರಾಗಿರುವಾಗ, ಸಾರ್ವಜನಿಕರೆಲ್ಲರೂ ಈ ಪರಿಶೋಧನೆಯ ಪ್ರಯಾಣದಲ್ಲಿ ಪಾಲ್ಗೊಳ್ಳಬೇಕೆಂದು ಬಯಸುತ್ತೇವೆ ಎಂದು ನಾಸಾನ ಸೈನ್ಸ್ ಮಿಶನ್ ಡೈರೆಕ್ಟರೇಟ್ (SMD) ವಾಷಿಂಗ್ಟನ್ನಲ್ಲಿ ಅಸೋಸಿಯೇಟ್ ಅಡ್ಮಿನಿಸ್ಟ್ರೇಟರ್ ಥಾಮಸ್ ಝರ್ಬುಚೆನ್ ಅವರು ಹೇಳಿದ್ದಾರೆ.

ಮಂಗಳಕ್ಕೆ ನಾಸಾ ಕೊಡುತ್ತಿದೆ ಫ್ರೀ ಟಿಕೆಟ್!..ಮಿಸ್ ಮಾಡದೇ ಪಡೆಯಿರಿ!

ಆ ಪುಟ್ಟ ಚಿಪ್‌ನಲ್ಲಿ ಎರಡು ಮಿಲಿಯನ್ ಹೆಸರುಗಳನ್ನು ಕೆತ್ತುವ ಅವಕಾಶವಿದ್ದು, ಮೊದಲು ನೊಂದಾಯಿಸಲ್ಪಡುವ ಹೆಸರುಗಳಿಗೆ ಅವಕಾಶ ನೀಡಲಾಗಿದೆ. 2020ರಲ್ಲಿ ಉಡಾವಣೆಗೊಳ್ಳುವ ಈ ರೋವರನ್ನು ಮಾನವನ ಹೆಜ್ಜೆಯ ಮೊದಲಿನ ಪಯಣವೆಂದೇ ಹೇಳಲಾಗುತ್ತಿದ್ದು, ಈಗಲೇ ನೀವು ನಿಮ್ಮ ಹೆಸರನ್ನು ನೊಂದಾಯಿಸಿಕೊಳ್ಳಿ. ಮಂಗಳದ ಮೇಲೆ ನಿಮ್ಮ ಹೆಸರನ್ನೂ ಸಹ ಬರೆಯಿರಿ.

ಓದಿರಿ: ಮಕ್ಕಳಿಗೆ ಮೊಬೈಲ್ ಕೊಡುವ ಪೋಷಕರನ್ನೇ ಬೆಚ್ಚಿಬೀಳಿಸಿದ ಆ ಒಂದು ಪತ್ರ!

Best Mobiles in India

English summary
Send Your Name to Mars. NASA's Mars 2020 Rover is heading to the red planet. Submit your name by Sept. 30, 2019. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X