Home
ಸುದ್ದಿಜಾಲ

Electric Air Taxi: ಇನ್ಮುಂದೆ ಆಗಸದಲ್ಲಿ ಟ್ರಾಫಿಕ್ ಜಾಮ್ ಆಗಲಿದೆಯೋನೋ!.. ಮೊದಲ ಏರ್ ಟ್ಯಾಕ್ಸಿ ರೆಡಿ

ಹೊಸ ಹೊಸ ಅನ್ವೇಷಣೆಗಳು ಆಯಾ ದೇಶವನ್ನು ಪ್ರಗತಿಯತ್ತ ಮುನ್ನಡೆಸುವುದು ಸಾಮಾನ್ಯ ವಿಷಯ. ಅದರಂತೆ ಈಗ ನಾವು ನೀವೆಲ್ಲಾ ಹುಬ್ಬೇರಿಸುವ ಸೌಲಭ್ಯವೊಂದು ಇನ್ನೇನು ಕೆಲವೇ ವರ್ಷಗಳಲ್ಲಿ ಬಳಕೆಗೆ ಬರಲಿದೆ. ಈ ಮೂಲಕ ಆಕಾಶದಲ್ಲೂ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇದೆ.

ಹೌದು, ಯುನೈಟೆಡ್ ಸ್ಟೇಟ್ಸ್ ಏರ್ ಫೋರ್ಸ್ (United States Air Force) ತನ್ನ ಮೊದಲ ಏರ್ ಟ್ಯಾಕ್ಸಿ (Air taxi) ವಿಮಾನವನ್ನು ಪರಿಚಯಿಸಿದೆ. ಜೊತೆಗೆ ನಾಸಾ ಈ ಮೊದಲ ಏರ್ ಟ್ಯಾಕ್ಸಿ ವಾಹನವನ್ನು ಪರೀಕ್ಷಿಸಲಿದೆ ಎಂಬ ವರದಿಗಳೂ ಇದ್ದು, ಈ ಹೊಸ ಏರ್ ಟ್ಯಾಕ್ಸಿ ವಾಹನವು ಸಂಪೂರ್ಣವಾಗಿ ಎಲೆಕ್ಟ್ರಿಕ್ ಆಗಿರುವುದು ವಿಶೇಷವಾದ ಸಂಗತಿಯಾಗಿದೆ. ಹಾಗಿದ್ರೆ, ಏನಿದು ಏರ್‌ ಟ್ಯಾಕ್ಸಿ?, ಇದು ಹೇಗೆ ಕೆಲಸ ಮಾಡಲಿದೆ? ಎಂಬ ಮಾಹಿತಿಯನ್ನು ತಿಳಿಸಿಕೊಡಲಾಗಿದೆ ಓದಿರಿ.

ಇನ್ಮುಂದೆ ಆಗಸದಲ್ಲಿ ಟ್ರಾಫಿಕ್ ಜಾಮ್ ಆಗಲಿದೆಯೋನೋ!.. ಮೊದಲ ಏರ್ ಟ್ಯಾಕ್ಸಿ ರೆಡಿ

ಏರ್ ಟ್ಯಾಕ್ಸಿ : ಈ ಹೊಸ ಏರ್ ಟ್ಯಾಕ್ಸಿ ಅನ್ನು ಜೋಬಿ ಏರ್ ಏವಿಯೇಷನ್ (Jobi Air Aviation) ​​ಅಭಿವೃದ್ಧಿಪಡಿಸಿದೆ. ಈ ಏರ್ ಟ್ಯಾಕ್ಸಿ ವಾಹನವು ಲಂಬವಾದ ಟೇಕ್ ಆಫ್ ಮತ್ತು ಲ್ಯಾಂಡಿಂಗ್ ಸೌಲಭ್ಯವನ್ನು ಹೊದಿದ್ದು, ಇದು ವಿಮಾನವಾಗಿದ್ದರೂ ಸಹ ಟ್ಯಾಕ್ಸಿಯಾಗಿ ಬಳಕೆ ಮಾಡಬಹುದಾಗಿದೆ ಎನ್ನಲಾಗಿದೆ. ಅದರಲ್ಲೂ ದೇಶದ ವಾಯುಯಾನ ವ್ಯವಸ್ಥೆಗಳಿಗೆ ಇದು ಹೇಗೆ ಹೊಂದಿಕೊಳ್ಳುತ್ತದೆಯೇ ಎಂಬುದನ್ನು ಪರೀಕ್ಷಿಸಲು ನಾಸಾ ಯೋಜಿಸುತ್ತಿದೆ ಎಂದು ತಿಳಿದುಬಂದಿದೆ.

ಕ್ಯಾಲಿಫೋರ್ನಿಯಾ ಮೂಲದ ಜಾಬಿ ಏರೋಸ್ಪೇಸ್ ಸೋಮವಾರ ಯುನೈಟೆಡ್ ಸ್ಟೇಟ್ಸ್ ಏರ್ ಫೋರ್ಸ್‌ಗೆ ಮೊದಲ ಏರ್ ಟ್ಯಾಕ್ಸಿ ವಿತರಿಸಿದ್ದು, ಈಗ ಎಲ್ಲೆಡೆ ಇದರದೇ ಸುದ್ದಿಯಾಗಿದೆ. ಎಲೆಕ್ಟ್ರಿಕ್ ವಾಹನವಾಗಿ, ರಾಷ್ಟ್ರೀಯ ಏರೋನಾಟಿಕ್ಸ್ ಮತ್ತು ಸ್ಪೇಸ್ ಅಡ್ಮಿನಿಸ್ಟ್ರೇಷನ್ (NASA) ಅಂತಹ ವಾಹನಗಳು ರಾಷ್ಟ್ರದ ವಾಯುಪ್ರದೇಶಕ್ಕೆ ಹೇಗೆ ಹೊಂದಿಕೊಳ್ಳುತ್ತವೆ ಎಂಬುದನ್ನು ಪರೀಕ್ಷಿಸಲು ವಾಯುಪಡೆಯ AFWERX ಕಾರ್ಯಕ್ರಮದೊಂದಿಗೆ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಇನ್ನು ಈ AFWERX ಯುಸ್‌ ಏರ್ ಫೋರ್ಸ್ ರಿಸರ್ಚ್ ಲ್ಯಾಬೊರೇಟರಿನ ತಂತ್ರಜ್ಞಾನ ನಿರ್ದೇಶನಾಲಯವಾಗಿದ್ದು, ರಾಷ್ಟ್ರದ ವಾಯುಪಡೆಯ ನಾವೀನ್ಯತೆ ವಿಭಾಗವಾಗಿದೆ.

ನಾಸಾ ಮತ್ತು AFWERX ಸುಧಾರಿತ ವಾಯು ಚಲನಶೀಲತೆಯ ಮೇಲೆ ಸಕ್ರಿಯ ಸಹಯೋಗವನ್ನು ಹೊಂದಿದ್ದು, ಈ ಸಹಯೋಗವು ಈ ಉದ್ಯಮದ ಭವಿಷ್ಯವನ್ನು ವೇಗಗೊಳಿಸಲು ಇತ್ತೀಚಿನ ಸಂಪನ್ಮೂಲಗಳೊಂದಿಗೆ ಅತ್ಯುತ್ತಮ ಪ್ರತಿಭೆಯನ್ನು ಒಟ್ಟುಗೂಡಿಸುತ್ತದೆ ಎಂದು ನಾಸಾದ ಅಡ್ವಾನ್ಸ್ಡ್ ಏರ್ ಮೊಬಿಲಿಟಿ ಮಿಷನ್‌ನ ಸಮನ್ವಯ ವ್ಯವಸ್ಥಾಪಕ ಪರಿಮಲ್ ಗೋಬರ್ಟೆಕರ್ ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ.

ಹಾಗೆಯೇ ನಾಸಾ ಪೈಲಟ್‌ಗಳು ಮತ್ತು ಸಂಶೋಧಕರು ಜಾಬಿ ವಿಮಾನವನ್ನು ಪರೀಕ್ಷಿಸುವ ಕೆಲಸ ಮಾಡುತ್ತಿದ್ದಾರಂತೆ. ಏರ್ ಟ್ರಾಫಿಕ್ ನಿರ್ವಹಣೆ, ಹಾರಾಟದ ಕಾರ್ಯವಿಧಾನಗಳು ಮತ್ತು ನೆಲ-ಆಧಾರಿತ ಮೂಲಸೌಕರ್ಯಗಳ ಮೇಲೆ ಕೇಂದ್ರೀಕರಿಸುವುದು ಇದರ ಭಾಗವಾಗಿದೆ. ಜೊತೆಗೆ ಬಾಹ್ಯಾಕಾಶ ಸಂಸ್ಥೆಯು ತನ್ನ ಪೈಲಟ್‌ಗಳನ್ನು ಮತ್ತು ಅದರ ಮೊಬೈಲ್ ಆಪರೇಟಿಂಗ್ ಸೌಲಭ್ಯದಂತಹ ಸುಧಾರಿತ ಹಾರ್ಡ್‌ವೇರ್ ಅನ್ನು ಒಂದು ರೀತಿಯ ಸಂಶೋಧನೆಗಾಗಿ ನಿಯೋಜಿಸುತ್ತದೆ ಎಂದು ಹೇಳಲಾಗಿದೆ.

ಈ ನಡುವೆ ಭವಿಷ್ಯದ ವಿವಿಧ ವಾಯುಯಾನ ವ್ಯವಸ್ಥೆಗಳು ಹೇಗೆ ಒಟ್ಟಿಗೆ ಹೊಂದಿಕೊಳ್ಳುತ್ತವೆ ಎಂಬುದರ ನೀಲನಕ್ಷೆಯನ್ನು ರಚಿಸುವುದು ಸಂಸ್ಥೆಗೆ ಅಂತಿಮ ಗುರಿಯಾಗಿದೆ. ಈ eVTOL ವಿಮಾನಗಳನ್ನು ಅತ್ಯಂತ ತಕ್ಷಣದ ಕೆಲಸಗಳಿಗೆ ಬಳಕೆ ಮಾಡಲಾಗುತ್ತದೆ ಎಂದು ತಿಳಿದುಬಂದಿದ್ದು, ಕಾಳ್ಗಿಚ್ಚುಗಳ ವಿರುದ್ಧ ಹೋರಾಡುವುದು ಮತ್ತು ವೈದ್ಯಕೀಯ ಸರಬರಾಜುಗಳನ್ನು ಮಾಡುವ ಕೆಲಸ ಇದರಿಂದ ಆಗಲಿದೆ ಎಂದು ವರದಿಗಳಿಂದ ತಿಳಿದುಬಂದಿದೆ.

ಇನ್ಮುಂದೆ ಆಗಸದಲ್ಲಿ ಟ್ರಾಫಿಕ್ ಜಾಮ್ ಆಗಲಿದೆಯೋನೋ!.. ಮೊದಲ ಏರ್ ಟ್ಯಾಕ್ಸಿ ರೆಡಿ

ಇದರೊಂದಿಗೆ ಇಡೀ ಏರ್ ಟ್ಯಾಕ್ಸಿ ಮತ್ತು ಡ್ರೋನ್ ಉದ್ಯಮವನ್ನು ಮುಂದಕ್ಕೆ ಸಾಗಿಸಲು ನಾಸಾ ಈ ತಂತ್ರಜ್ಞಾನಗಳಲ್ಲಿ ಕೆಲಸ ಮಾಡಲು ಮತ್ತು ಅವುಗಳನ್ನು ತ್ವರಿತವಾಗಿ ಸುಧಾರಿಸಲು ಮುಂದಾಗಿದೆ. ಮೊದಲೇ ತಿಳಿಸಿದಂತೆ ಆಹಾರ ವಿತರಣೆ ಮತ್ತು ವೈದ್ಯಕೀಯ ತುರ್ತು ಪರಿಸ್ಥಿತಿಗಳಿಗೆ ಆರಂಭದಲ್ಲಿ ಈ ಏರ್ ಟ್ಯಾಕ್ಸಿ ವಾಹನಗಳನ್ನು ಬಳಕೆ ಮಾಡಲು ನಾಸಾ ಮುಂದಾಗಿದೆ. ಈ ಮೂಲಕ ಜಗತ್ತಿನಲ್ಲಿ ಈ ಸಾಧನೆ ಮಾಡಿದ ಕೀರ್ತಿಯನ್ನು ತನ್ನದಾಗಿಸಿಕೊಳ್ಳಲಿದೆ.

Best Mobiles in India

English summary
The United States Air Force has introduced its first Air Taxi aircraft. Also, NASA will test this first air taxi vehicle.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+