Home
ಸುದ್ದಿಜಾಲ

Secret Codes: ಈ ಸಪ್ತ ರಹಸ್ಯ ಕೋಡ್‌ಗಳು ನಿಮ್ಮ ಸ್ಮಾರ್ಟ್‌ಫೋನ್‌ ಅನ್ನು ರಕ್ಷಿಸುತ್ತವೆ! ಈಗಲೇ ಪ್ರಯತ್ನಿಸಿ

ಸ್ಮಾರ್ಟ್‌ಫೋನ್‌ (Smartphone) ಎಂದಾಕ್ಷಣ ಅದು ಕೇವಲ ಕರೆ ಮಾಡಲು ಮೆಸೆಜ್ ಮಾಡಲು ಅಥವಾ ವಿಡಿಯೋ ಹಾಗೂ ಗೇಮಿಂಗ್ ಆಡಲು ಅಷ್ಟೇ ಬಳಕೆ ಮಾಡುವುದಿಲ್ಲ. ಇತ್ತೀಚಿನ ಸ್ಮಾರ್ಟ್‌ಫೋನ್‌ಗಳನ್ನು ಎಲ್ಲಾ ರೀತಿಯಲ್ಲಿ ಬಳಕೆ ಮಾಡಲಾಗುತ್ತದೆ. ಇದಕ್ಕೆ ಆಪ್‌ಗಳು ತಮ್ಮದೇ ಆದ ರೀತಿಯಲ್ಲಿ ಬೆಂಬಲ ನೀಡುತ್ತವೆ. ಈ ನಡುವೆ ರಾಷ್ಟ್ರೀಯ ಅಪರಾಧ ತನಿಖಾ ಬ್ಯೂರೋ (NCIB) ಸ್ಮಾರ್ಟ್‌ಫೋನ್‌ ಸಂಬಂಧ ಮಾಹಿತಿಯೊಂದನ್ನು ಹಂಚಿಕೊಂಡಿದೆ.

ಹೌದು, ರಾಷ್ಟ್ರೀಯ ಅಪರಾಧ ತನಿಖಾ ಬ್ಯೂರೋ (National Bureau of Criminal Investigation) ಎಕ್ಸ್‌ ನಲ್ಲಿ 7 ರಹಸ್ಯ ಕೋಡ್‌ಗಳ ಲಿಸ್ಟ್‌ (7 secret codes) ಅನ್ನು ಶೇರ್‌ ಮಾಡಿಕೊಂಡಿದೆ. ಡಿಜಿಟಲ್ ಯುಗದಲ್ಲಿ ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಸುರಕ್ಷಿತಗೊಳಿಸುವುದು ಅತ್ಯಗತ್ಯ. ರಹಸ್ಯ ಸಂಕೇತಗಳನ್ನು ಬಳಸುವುದರಿಂದ ಅದರ ಸುರಕ್ಷತೆಯನ್ನು ಗಣನೀಯವಾಗಿ ಹೆಚ್ಚಿಸಬಹುದು ಮತ್ತು ಸ್ಕ್ಯಾಮರ್‌ಗಳಿಂದ ನಿಮ್ಮ ಫೋನ್‌ ಅನ್ನು ಸೇಫ್‌ ಆಗಿ ಇರಿಸಿಕೊಳ್ಳಬಹುದು ಎಂದು ತಿಳಿಸಲಾಗಿದೆ. ಹಾಗಿದ್ರೆ, ಯಾವುದು ಆ ರಹಸ್ಯ ಕೋಡ್‌ಗಳು?, ಅವುಗಳಿಂದಾಗುವ ಪ್ರಯೋಜನಗಳೇನು ಎಂಬ ಮಾಹಿತಿ ಉಲ್ಲಿದೆ ನೋಡಿ.

ಈ ಸಪ್ತ ರಹಸ್ಯ ಕೋಡ್‌ಗಳು ನಿಮ್ಮ ಸ್ಮಾರ್ಟ್‌ಫೋನ್‌ ಅನ್ನು ರಕ್ಷಿಸುತ್ತವೆ!

*#21#: ಈ ರಹಸ್ಯ ಕೋಡ್‌ ಬಳಕೆ ಮಾಡಿಕೊಂಡು ಯಾವುದೇ ಫೋನ್ ಬಳಕೆದಾರರು ಕರೆ, ಡೇಟಾ ಅಥವಾ ಸಂಖ್ಯೆಯನ್ನು ಬೇರೆ ಯಾವುದೇ ಸಂಖ್ಯೆಗೆ ಫಾರ್ವರ್ಡ್ ಮಾಡಲಾಗಿದೆಯೇ ಎಂದು ತಿಳಿದುಕೊಳ್ಳಬಹುದಾಗಿದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ನಿಮಗೆ ಅರಿವಿಲ್ಲದಂತೆ ಒಟಿಪಿ ಅಥವಾ ಇನ್ನಿತರೆ ಮಾರ್ಗದ ಮೂಲಕ ಕರೆಯನ್ನು ಫಾರ್ವರ್ಡ್ ಮಾಡುವ ಮೂಲಕ ವಂಚನೆ ಮಾಡಲಾಗುತ್ತಿದೆ.

#0#: ಈ ರಹಸ್ಯ ಕೋಡ್‌ ಬಳಕೆ ಮಾಡುವ ಮೂಲಕ ನಿಮ್ಮ ಫೋನ್‌ನ ಡಿಸ್‌ಪ್ಲೇ, ಸ್ಪೀಕರ್, ಕ್ಯಾಮೆರಾ, ಸೆನ್ಸಾರ್‌ಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿದೆಯೇ ಅಥವಾ ಇಲ್ಲವೇ ಎಂಬುದನ್ನು ನೀವು ಕಂಡುಹಿಡಿಯಬಹುದು. ಇದರಲ್ಲಿ ಏನಾದರೂ ಸಮಸ್ಯೆ ಕಾಣಿಸಿದರೆ ತಕ್ಷಣವೇ ನಿಮ್ಮ ಸ್ಮಾರ್ಟ್‌ಫೋನ್‌ ಅನ್ನು ರಿಪೇರಿ ಮಾಡಿಸಿಕೊಂಡು ಮತ್ತೆ ಬಳಕೆ ಮಾಡಬಹುದಾಗಿದೆ.

*#07#: ಈ ರಹಸ್ಯ ಕೋಡ್ ನಿಮ್ಮ ಫೋನ್‌ನ SAR ಮೌಲ್ಯದ ಬಗ್ಗೆ ಮಾಹಿತಿ ನೀಡುತ್ತದೆ. ಅಂದರೆ ಇದರ ಸಹಾಯದಿಂದ ನೀವು ಫೋನ್‌ನಿಂದ ಹೊರಹೊಮ್ಮುವ ವಿಕಿರಣದ ಬಗ್ಗೆ ನಿಖರ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಈ SAR ಯಾವುದೇ ಸ್ಮಾರ್ಟ್‌ಫೋನ್‌ನಲ್ಲಿ ಯಾವಾಗಲೂ 1.6 ಕ್ಕಿಂತ ಕಡಿಮೆಯಿರಬೇಕು. ಇದಕ್ಕಿಂತ ಹೆಚ್ಚಾಗಿದ್ದರೆ ಖಂಡಿತಾ ಫೋನ್‌ ಸಮಸ್ಯೆಯಲ್ಲಿದೆ ಎಂದರ್ಥ.

ಈ ಸಪ್ತ ರಹಸ್ಯ ಕೋಡ್‌ಗಳು ನಿಮ್ಮ ಸ್ಮಾರ್ಟ್‌ಫೋನ್‌ ಅನ್ನು ರಕ್ಷಿಸುತ್ತವೆ!

*#06 #: ಈ ಕೋಡ್‌ ಸಹಾಯದಿಂದ ನೀವು ನಿಮ್ಮ IMEI ಸಂಖ್ಯೆಯನ್ನು ಕಂಡುಕೊಳ್ಳಬಹುದು. ಸಾಮಾನ್ಯವಾಗಿ IMEI ನಂಬರ್‌ ಯಾವುದಕ್ಕೆಲ್ಲಾ ಬಳಕೆಯಾಗುತ್ತದೆ ಎಂಬುದು ತಿಳಿದೇ ಇದೆ. ಅಂದರೆ ನಿಮ್ಮ ಸ್ಮಾರ್ಟ್‌ಫೋನ್‌ ಅನ್ನು ಬೇರೆಯವರು ಕದ್ದಾಗ ಅಥವಾ ಇನ್ನಿತರೆ ಯಾವುದೇ ಕಾನೂನು ಹಾಗೂ ಭದ್ರತಾ ವಿಚಾರಗಳಿಗೆ IMEI ನಂಬರ್‌ ಅತ್ಯಾವಶ್ಯಕವಾಗಿದೆ.

## 4636##: ಈ ರಹಸ್ಯ ಕೋಡ್‌ನೊಂದಿಗೆ ನಿಮ್ಮ ಸ್ಮಾರ್ಟ್‌ಫೋನ್‌ನ ಬ್ಯಾಟರಿ, ಇಂಟರ್ನೆಟ್ ಮತ್ತು ವೈ-ಫೈ ಗೆ ಸಂಬಂಧಿಸಿದ ಮಾಹಿತಿಯನ್ನು ಪಡೆಯಬಹುದಾಗಿದೆ. ಅಂದರೆ ನಿಮ್ಮ ಸ್ಮಾರ್ಟ್‌ಫೋನ್‌ನ ಬ್ಯಾಟರಿ ಸ್ಟೇಟಸ್‌ ಹಾಗೂ ಇಂಟರ್ನೆಟ್‌ ಸ್ಟೇಟಸ್‌ ಅನ್ನು ಈ ಮೂಲಕ ತಿಳಿದುಕೊಂಡು ಸಮಸ್ಯೆಗಳು ಏನಾದರೂ ಕಂಡುಬಂದಿವೆ ಎನಿಸಿದರೆ ಅದನ್ನು ಸರಿಪಡಿಸಿಕೊಳ್ಳುವ ಕೆಲಸ ಮಾಡಬಹುದು.

## 34971539##: ಈ ರಹಸ್ಯ ಕೋಡ್‌ನಿಂದ ನಿಮ್ಮ ಸ್ಮಾರ್ಟ್‌ಫೋನ್‌ನ ಕ್ಯಾಮೆರಾ ಮಾಹಿತಿಯನ್ನು ನೀವು ತಿಳಿದುಕೊಳ್ಳಬಹುದು. ಸಾಮಾನ್ಯವಾಗಿ ಭಾರತದಲ್ಲಿ ಕ್ಯಾಮೆರಾ ಉದ್ದೇಶಕ್ಕಾಗಿಯೇ ಫೋನ್‌ಗಳನ್ನು ಖರೀದಿ ಮಾಡುವ ಅದೆಷ್ಟೋ ಮಂದಿ ನಮ್ಮ ನಡುವೆ ಇದ್ದಾರೆ. ಈ ವೇಳೆ ಫೋನ್‌ನ ಕ್ಯಾಮೆರಾ ಸರಿಯಾಗಿ ಕಾರ್ಯನಿರ್ವಹಿಸುತ್ತಿದೆಯೇ ಅಥವಾ ಇಲ್ಲವೇ ಎಂದು ತಿಳಿಯಲು ಅವರು ಈ ಕೋಡ್‌ ಬಳಕೆ ಮಾಡಬಹುದಾಗಿದೆ.

ಈ ಸಪ್ತ ರಹಸ್ಯ ಕೋಡ್‌ಗಳು ನಿಮ್ಮ ಸ್ಮಾರ್ಟ್‌ಫೋನ್‌ ಅನ್ನು ರಕ್ಷಿಸುತ್ತವೆ!

2767*3855#: ಈ ಕೋಡ್‌ ಅನ್ನು ನಿಮ್ಮ ಫೋನ್‌ನಲ್ಲಿ ಡಯಲ್‌ ಮಾಡಿದ್ರೆ ನಿಮ್ಮ ಫೋನ್‌ ಅನ್ನು ಸಂಪೂರ್ಣವಾಗಿ ಮರು ಹೊಂದಿಸುತ್ತದೆ. ಈ ವೇಳೆ ನೀವು ಗಮನಿಸಬೇಕಾದ ವಿಚಾರ ಏನೆಂದರೆ ಈ ರೀತಿ ಮಾಡಿದಾಗ ನಿಮ್ಮ ಫೋನ್‌ನಲ್ಲಿ ಇದ್ದ ಎಲ್ಲಾ ಡೇಟಾ ನಾಶವಾಗುತ್ತವೆ ಎಂಬುದು ನಿಮಗೆ ತಿಳಿದಿರಲಿ. ಪರಿಣಾಮ ಎಲ್ಲಾ ಡೇಟಾವನ್ನು ಎಲ್ಲಾದರೂ ಮೊದಲೇ ಸೇವ್‌ ಮಾಡಿ ಇಟ್ಟುಕೊಂಡು ನಂತರ ಡಯಲ್‌ ಮಾಡಿ.

Best Mobiles in India

English summary
National Bureau of Criminal Investigation has shared a list of 7 secret Codes on X. Securing your smartphone is essential in the digital age.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+