ನವರಾತ್ರಿ ಆಫರ್: ಏರ್‌ಟೆಲ್‌ ಗ್ರಾಹಕರು 1GB 4G ಉಚಿತ ಡಾಟಾಗಾಗಿ ಮಿಸ್‌ ಕಾಲ್‌ ನೀಡಿ!

By Suneel
|

ರಿಲಾಯನ್ಸ್ ಜಿಯೋ 4G ಸಿಮ್ ಖರೀದಿಯಿಂದ ಉಚಿತ ಇಂಟರ್ನೆಟ್ ಡಾಟಾ ಅನುಕೂಲ ಸಿಕ್ತು ಎನ್ನುವುದಕ್ಕಿಂತ, ಇಂದು ಜಿಯೋ ಲಾಂಚ್‌ ಎಫೆಕ್ಟ್‌ನಿಂದ ಇತರೆ ಟೆಲಿಕಾಂಗಳು ಸಹ ಜಿಯೋಗಿಂತ ಉತ್ತಮ ಇಂಟರ್ನೆಟ್ ಮತ್ತು ಟ್ಯಾರಿಫ್ ಪ್ಲಾನ್‌ ನೀಡಲು ಆರಂಭಿಸಿವೆ. ಆದರೆ ಜಿಯೋ ಹಿಂದಿಕ್ಕುವ ರೇಸ್‌ನಲ್ಲಿ ಏರ್‌ಟೆಲ್‌ ಮುಂಚೂಣಿಯಲ್ಲಿದೆ.

ಜಿಯೋ ಸಿಮ್ ಬಳಕೆದಾರರ ರೀತಿ ಏರ್‌ಟೆಲ್‌ ಬಳಕೆದಾರರು 4G ಇಂಟರ್ನೆಟ್‌ ಅನ್ನು ಉಚಿತವಾಗಿ ಪಡೆಯುವ ಟ್ರಿಕ್‌ ಒಂದನ್ನು ಗಿಜ್‌ಬಾಟ್‌ ಇಂದು ತಿಳಿಸುತ್ತಿದೆ. ಏರ್‌ಟೆಲ್‌ ಬಳಕೆದಾರರು ಜಸ್ಟ್ ಹಾಗೆ ಒಮ್ಮೆ ಒಂದು ಮಿಸ್‌ ಕಾಲ್‌ ನೀಡುವುದರ ಮುಖಾಂತರ 1GB 4G ಡಾಟಾವನ್ನು ಉಚಿತವಾಗಿ ಪಡೆಯಬಹುದು. ಅದು ಹೇಗೆ ಎಂದು ಕಂಪ್ಲೀಟ್‌ ಮಾಹಿತಿಯನ್ನು ಲೇಖನದ ಸ್ಲೈಡರ್‌ನಲ್ಲಿ ಓದಿ ತಿಳಿಯಿರಿ.

ಟೆಲಿಕಾಮ್ ಪೈಪೋಟಿ, ಜಿಯೋಗೆ ಸೋಲು ಕಟ್ಟಿಟ್ಟ ಬುತ್ತಿಯೇ?

ನೀವು ಪ್ರಿಪೇಡ್ ಗ್ರಾಹಕರಾಗಿರಬೇಕು

ನೀವು ಪ್ರಿಪೇಡ್ ಗ್ರಾಹಕರಾಗಿರಬೇಕು

ಅಂದಹಾಗೆ ನಾವು ಇಂದು ತಿಳಿಸುತ್ತಿರುವ ಆಫರ್‌ ಅನ್ನು ಏರ್‌ಟೆಲ್‌ ಪ್ರಿಪೇಡ್‌ ಗ್ರಾಹಕರಿಗೆ ಮಾತ್ರ ಆಫರ್‌ ಮಾಡುತ್ತಿದೆ. ಪೋಸ್ಟ್‌ಪೇಡ್‌ ಗ್ರಾಹಕರು ಪ್ರಯತ್ನಿಸಿದರು ಪ್ರಿಪೇಡ್‌ ಗ್ರಾಹಕರಿಗೆ ಮಾತ್ರ ಈ ಆಫರ್‌ ಎಂದು ನೋಟಿಫಿಕೇಶನ್ ಬರುತ್ತದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಿಮ್ಮ ಸಿಮ್‌ ಕಾರ್ಡ್‌ 4G ಸಪೋರ್ಟ್ ಮಾಡಬೇಕು

ನಿಮ್ಮ ಸಿಮ್‌ ಕಾರ್ಡ್‌ 4G ಸಪೋರ್ಟ್ ಮಾಡಬೇಕು

ಈ ಆಫರ್ ಪಡೆಯಲು ನಿಮ್ಮ ಏರ್‌ಟೆಲ್‌ ಸಿಮ್ 4G ಸಪೋರ್ಟ್‌ ಅನ್ನು ಕಡ್ಡಾಯವಾಗಿ ಮಾಡಬೇಕು. ಪ್ರಸ್ತುತ ಸಿಮ್ ಸಪೋರ್ಟ್‌ ಮಾಡದಿದ್ದಲ್ಲಿ, 4G ಏರ್‌ಟೆಲ್‌ ಸಿಮ್ ಅನ್ನು ಹತ್ತಿರದ ಸ್ಟೊರ್‌ಗಳಲ್ಲಿ ಪಡೆಯಿರಿ.

 '52122' ಗೆ ಡಯಲ್‌ ಮಾಡಿ

'52122' ಗೆ ಡಯಲ್‌ ಮಾಡಿ

ಮೇಲಿನ ಎರಡು ಅಗತ್ಯ ಅಂಶಗಳು ಇದ್ದಲ್ಲಿ, ನಂತರ '52122' ಗೆ ನಿಮ್ಮ ಏರ್‌ಟೆಲ್‌ 4G ಸಿಮ್‌ನಿಂದ ಕರೆ ಮಾಡಿ. ಕರೆ ಸ್ವಯಂಕೃತವಾಗಿ ಡಿಸ್‌ಕನೆಕ್ಟ್ ಆಗುತ್ತದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 1GB ಡಾಟಾ ಆಕ್ಟಿವೇಟ್‌ ಆಗುತ್ತದೆ

1GB ಡಾಟಾ ಆಕ್ಟಿವೇಟ್‌ ಆಗುತ್ತದೆ

ಕರೆ ಡಿಸ್‌ಕನೆಕ್ಟ್ ಅದ ನಂತರ ಸ್ವಲ್ಪ ಸಮಯ ಕಾಯಿರಿ. ನಂತರ ನೀವು 'your Airtel account has been credited with 1GB of 4G data' ಎಂಬ ಮೆಸೇಜ್‌ ಸ್ವೀಕರಿಸಿರುತ್ತೀರಿ.

 1GB ಉಚಿತ ಡಾಟಾ 90 ದಿನಗಳ ವ್ಯಾಲಿಡಿಟಿ

1GB ಉಚಿತ ಡಾಟಾ 90 ದಿನಗಳ ವ್ಯಾಲಿಡಿಟಿ

ನಿಮ್ಮ ಏರ್‌ಟೆಲ್‌ ನಂಬರ್‌ಗೆ ಕ್ರೆಡಿಟ್‌ ಆಗುವ 1GB 4G ಡಾಟಾ 90 ದಿನಗಳ ವ್ಯಾಲಿಡಿಟಿ ಹೊಂದಿದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Navratri Offer: How to Get 1GB of Airtel 4G Data for Free by Just Giving a Missed Call! To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X