ಪೇಪರ್ ತುಂಡಿನಿಂದ ಹೊಸ ಫೋನ್ ಬ್ಯಾಟರಿ

By Shwetha
|

ವಿಜ್ಞಾನಿಗಳ ತಂಡವೊಂದು ಪೇಪರ್ ಬಳಸಿ ಶಕ್ತಿಯನ್ನು ಸಂಗ್ರಹಿಸುವ ಹೊಸ ವಿಧಾನವನ್ನು ಕಂಡುಹುಡುಕಿದ್ದಾರೆ. ಸ್ವೀಡನ್‌ನ ಪರಿಣಿತರು ತೆಳುವಾದ ವಸ್ತುವನ್ನು ಅನ್ವೇಷಿಸಿದ್ದು ಶಕ್ತಿಯನ್ನು ಸ್ಟೋರ್ ಮಾಡುವ ಸಾಮರ್ಥ್ಯವನ್ನು ಇದು ಪಡೆದುಕೊಂಡಿದೆ.

ಪೇಪರ್ ತುಂಡಿನಿಂದ ಹೊಸ ಫೋನ್ ಬ್ಯಾಟರಿ

ಪವರ್ ಪೇಪರ್ ಎಂಬ ಹೆಸರನ್ನು ಇದು ಪಡೆದುಕೊಂಡಿದ್ದು 15 ಸೆಂಟಿಮೀಟರ್‌ಗಳಷ್ಟು ವ್ಯಾಸವನ್ನು 0.5 ಮಿಲಿಮೀಟರ್ ದಪ್ಪವನ್ನು ಇದು ಹೊಂದಿದೆ. ಈ ಪೇಪರ್ ಅನ್ನು ಇತರ ಡಿವೈಸ್‌ಗಳಿಗೂ ಬಳಸಬಹುದಾಗಿದೆ. ದಪ್ಪನೆಯ ಶೀಟ್‌ಗಳನ್ನು ಉತ್ಪಾದಿಸಿ ಅವುಗಳ ಮೂಲಕ ಶಕ್ತಿಯನ್ನು ಸೆರೆಹಿಡಿಯುವ ಕಾರ್ಯವನ್ನು ಈ ವಿಜ್ಞಾನಿಗಳು ನಡೆಸಲಿದ್ದಾರೆ. ಪ್ಲಾಸ್ಟಿಕ್ ಮುಟ್ಟಿದಂತಹ ಅನುಭವವನ್ನು ಇದು ನೀಡಲಿದೆ.

ಓದಿರಿ: ದಿನವಿಡೀ ಫೋನ್ ಚಾರ್ಜ್ ಮಾಡಿ ನಿಶ್ಚಿಂತೆಯಿಂದಿರಿ

ಮೊಬೈಲ್‌ ಫೋನ್‌ಗಳಂತಹ ಸಣ್ಣ ಡಿವೈಸ್‌ಗಳಲ್ಲಿ ಚಾರ್ಜ್ ಅನ್ನು ನಾವು ಹೇಗೆ ಸಂಗ್ರಹಿಸಿಡುತ್ತೇವೆ ಎಂಬುದರ ಮೇಲೆ ಪವರ್ ಪೇಪರ್ ಪರಿಣಾಮವನ್ನು ಬೀರುತ್ತದೆ. ಪೇಪರ್ ಹಗುರವಾಗಿದ್ದು, ಯಾವುದೇ ರಾಸಾಯನಿಕ ಕೆಮಿಕಲ್‌ಗಳು ಅಥವಾ ಭಾರವಾದ ಲೋಹಗಳು ಅಗತ್ಯವಿಲ್ಲ ಮತ್ತು ಇದು ವಾಟರ್ ಪ್ರೂಫ್ ಆಗಿದೆ.

ಚಾರ್ಜರ್ ಸಂಪರ್ಕ

ಚಾರ್ಜರ್ ಸಂಪರ್ಕ

ರಾತ್ರಿ ಪೂರ್ತಿ ಚಾರ್ಜ್ ಮಾಡಿ ನಿಮ್ಮ ಫೋನ್ ಅನ್ನು ರಾತ್ರಿ ಪೂರ್ತಿ ಚಾರ್ಜರ್ ಸಂಪರ್ಕದಲ್ಲಿಟ್ಟರೆ ಏನೂ ಸಂಭವಿಸುವುದಿಲ್ಲ ಎಂಬುದು ಇತ್ತೀಚಿನ ಸಂಶೋಧನೆಗಳಿಂದ ತಿಳಿದು ಬಂದಿರುವ ಅಂಶವಾಗಿದೆ. ಅಂದರೆ ರಾತ್ರಿ ಪೂರ್ತಿ ಫೋನ್ ಯಾ ಲ್ಯಾಪ್‌ಟಾಪ್ ಅನ್ನು ಚಾರ್ಜ್‌ನಲ್ಲಿಟ್ಟುಕೊಂಡೇ ನಿಮಗೆ ಆರಾಮ ನಿದ್ದೆ ಮಾಡಬಹುದು.

ಲಿಥಿಯಮ್ ಬ್ಯಾಟರಿ

ಲಿಥಿಯಮ್ ಬ್ಯಾಟರಿ

ಲಿಥಿಯಮ್ ಬ್ಯಾಟರಿಗಳನ್ನು ನೀವು ಆಗಾಗ್ಗೆ ಚಾರ್ಜ್ ಮಾಡಬೇಕಾಗುತ್ತದೆ. ಆದ್ದರಿಂದ ನಿಮ್ಮ ಫೋನ್‌ಗೆ ಆಗಾಗ್ಗೆ ಚಾರ್ಜ್ ಮಾಡುವುದರಿಂದ ಏನೂ ಮಾರಕವಿಲ್ಲ.

ಲ್ಯಾಪ್‌ಟಾಪ್‌ಗೆ ದಿನಪೂರ್ತಿ ನೀವು ಚಾರ್ಜ್ ಮಾಡುತ್ತೀರಿ

ಲ್ಯಾಪ್‌ಟಾಪ್‌ಗೆ ದಿನಪೂರ್ತಿ ನೀವು ಚಾರ್ಜ್ ಮಾಡುತ್ತೀರಿ

ನಿಮ್ಮ ಲ್ಯಾಪ್‌ಟಾಪ್‌ಗೆ ದಿನಪೂರ್ತಿ ನೀವು ಚಾರ್ಜ್ ಮಾಡುತ್ತೀರಿ ಎಂದಾದಲ್ಲಿ ಚಿಂತಿಸದಿರಿ. ಈ ನೀತಿ ನಿಮ್ಮ ಫೋನ್‌ಗಳಿಗೂ ಅನ್ವಯಿಸುತ್ತದೆ ಎಂಬುದು ನೆನಪಿರಲಿ.

ಚಾರ್ಜಿಂಗ್ ಸಮಸ್ಯೆ

ಚಾರ್ಜಿಂಗ್ ಸಮಸ್ಯೆ

ಇನ್ನು ನಿಮ್ಮ ಫೋನ್ ಲ್ಯಾಪ್‌ಟಾಪ್ ಇಲ್ಲವೇ ಟ್ಯಾಬ್ಲೆಟ್‌ನಲ್ಲಿ ಚಾರ್ಜಿಂಗ್ ಸಮಸ್ಯೆ ಕಂಡುಬಂದಿದೆ ಎಂದಾದಲ್ಲಿ ಅದು ಹೆಚ್ಚು ಚಾರ್ಜ್ ಮಾಡುವುದರಿಂದ ಅಲ್ಲ ಬದಲಿಗೆ ಡಿವೈಸ್ ಬಿಸಿಯಾಗುವುದರಿಂದ ಆಗಿದೆ. ನಿಮ್ಮ ಬ್ಯಾಟರಿ ತೀವ್ರ ಮಟ್ಟದಲ್ಲಿ ಬಿಸಿಯಾಗುತ್ತಿದೆ ಎಂದಾದಲ್ಲಿ ಬ್ಯಾಟರಿ ಬದಲಾಯಿಸಿ.

ವೈರ್‌ಲೆಸ್ ಚಾರ್ಜಿಂಗ್

ವೈರ್‌ಲೆಸ್ ಚಾರ್ಜಿಂಗ್

ಆದಷ್ಟು ನಿಮ್ಮ ಡಿವೈಸ್‌ಗಳನ್ನು ಶೀತಲ ಸ್ಥಳದಲ್ಲಿ ಅಂದರೆ ಹೆಚ್ಚು ಬಿಸಿ ಇಲ್ಲದ ಸ್ಥಳದಲ್ಲಿ ಇರಿಸಿ. ವೈರ್‌ಲೆಸ್ ಚಾರ್ಜಿಂಗ್ ಆದಷ್ಟು ಮಾಡದಿರಿ.

ಸ್ವಲ್ಪ ಚಾರ್ಜ್

ಸ್ವಲ್ಪ ಚಾರ್ಜ್

ನೀವು ಬ್ಯಾಟರಿಗಳನ್ನು ಸಂಗ್ರಹಿಸಿಟ್ಟುಕೊಳ್ಳುತ್ತೀರಿ ಎಂದಾದಲ್ಲಿ, ಮೊದಲಿಗೆ ಸ್ವಲ್ಪ ಚಾರ್ಜ್ ಮಾಡಿಕೊಳ್ಳಿ.

ಬದಲಿ ಬ್ಯಾಟರಿ

ಬದಲಿ ಬ್ಯಾಟರಿ

ತೀರಾ ಆವಶ್ಯಕತೆ ಇದ್ದಾಗ ಮಾತ್ರವೇ ಬ್ಯಾಟರಿಯನ್ನು ಸ್ಥಾನಾಂತರಿಸಿ. ನಿಮ್ಮ ಡಿವೈಸ್ ವೇಗವಾಗಿ ಚಾರ್ಜ್ ಮಾಡುತ್ತಿಲ್ಲ ಎಂದಾದಲ್ಲಿ ಬದಲಿ ಬ್ಯಾಟರಿ ವ್ಯವಸ್ಥೆಯನ್ನು ಮಾಡಿಕೊಳ್ಳಿ.

ಫೋನ್ ಚಾರ್ಜಿಂಗ್

ಫೋನ್ ಚಾರ್ಜಿಂಗ್

ನಿಮ್ಮ ಫೋನ್‌ಗೆ ಆಗಾಗ್ಗೆ ಚಾರ್ಜ್ ಮಾಡುವುದರಿಂದ ಫೋನ್ ಚಾರ್ಜಿಂಗ್ ಅನ್ನೇ ನುಂಗುತ್ತಿರುತ್ತದೆ ಎಂಬುದು ನೆನಪಿರಲಿ. ಆದ್ದರಿಂದ ಆಗಾಗ್ಗೆ ಫೋನ್‌ಗೆ ಚಾರ್ಜ್ ಮಾಡುವುದೇ ಮುಖ್ಯ ಜೀವಾಳ ಎಂದು ಭಾವಿಸದಿರಿ.

ಡಿವೈಸ್ ಅಮೋಲೆಡ್ ಸ್ಕ್ರೀನ್

ಡಿವೈಸ್ ಅಮೋಲೆಡ್ ಸ್ಕ್ರೀನ್

ನಿಮ್ಮ ಡಿವೈಸ್ ಅಮೋಲೆಡ್ ಸ್ಕ್ರೀನ್ ಅನ್ನು ಹೊಂದಿದೆ ಎಂದಾದಲ್ಲಿ ನಿಮ್ಮ ಹೋಮ್ ಸ್ಕ್ರೀನ್‌ಗೆ ಕಪ್ಪು ಹಿನ್ನಲೆಯನ್ನು ಅಳವಡಿಸಿ. ಏಕೆಂದರೆ ಕಪ್ಪು ಡಿಸ್‌ಪ್ಲೇಯನ್ನು ಗೋಚರಿಸಲು ಅಮೋಲೆಡ್ ಸ್ಕ್ರೀನ್ಸ್ ಕಡಿಮೆ ಪವರ್ ಅನ್ನು ಬಳಸುತ್ತದೆ.

ಬ್ಲ್ಯೂಟೂತ್ ಆಕ್ಸಸರೀಸ್

ಬ್ಲ್ಯೂಟೂತ್ ಆಕ್ಸಸರೀಸ್

ನಿಮ್ಮ ಫೋನ್‌ನೊಂದಿಗೆ ಯಾವುದೇ ಬ್ಲ್ಯೂಟೂತ್ ಆಕ್ಸಸರೀಸ್ ಅನ್ನು ಬಳಸುತ್ತಿಲ್ಲ ಎಂದಾದಲ್ಲಿ ಬ್ಲ್ಯೂಟೂತ್ ಆಫ್ ಮಾಡಿ.

Best Mobiles in India

English summary
In this article we can find out some tricks to charge your battery along some scientists revealed good idea to store device battery by using piece of paper.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X