ಭಾರತೀಯ ಸಂಸ್ಕೃತಿಯ ಕುರಿತು ಗೇಮ್‌ಗಳನ್ನು ಕ್ರಿಯೇಟ್ ಮಾಡುವ ಅಗತ್ಯವಿದೆ: ಮೋದಿ
ಭಾರತೀಯ ನಾಗರಿಕತೆ ಮತ್ತು ಸಂಸ್ಕೃತಿಯ ಕುರಿತು ವಿಡಿಯೋ ಗೇಮ್‌ಗಳನ್ನು (Video game) ಕ್ರಿಯೇಟ್ ಮಾಡುವ ಅಗತ್ಯವಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಅಲ್ಲದೆ ಹವಾಮಾನ ಬದಲಾವಣೆಯಂತಹ ಜಾಗತಿಕ ಸಮಸ್ಯೆಗಳ ಕುರಿತು ಗೇಮ್‌ಗಳನ್ನು ಅಭಿವೃದ್ಧಿಪಡಿಸಲು ಗೇಮ್ ಕ್ರಿಯೇಟರ್ಸ್‌ಗಳಿಗೆ ಪಿಎಂ ಮೋದಿ ಒತ್ತಾಯ ಮಾಡಿದ್ದಾರೆ.
ಹೌದು, ಅನಿಮೇಶ್ ಅಗರ್ವಾಲ್, ಮಿಥಿಲೇಶ್ ಪಾಟಂಕರ್, ಪಾಯಲ್ ಧಾರೆ, ನಮನ್ ಮಾಥುರ್ ಮತ್ತು ಅಂಶು ಬಿಶ್ತ್ ಸೇರಿದಂತೆ ಪ್ರಮುಖ ಭಾರತೀಯ ಆಟಗಾರರೊಂದಿಗಿನ ಸಂವಾದದ ವೇಳೆ ಪಾಶ್ಚಿಮಾತ್ಯ ಜಗತ್ತಿನಲ್ಲಿ ಪ್ರಚಲಿತದಲ್ಲಿರುವ ಶೂಟಿಂಗ್ ಗೇಮ್‌ಗಳಿಗಿಂತ ಭಿನ್ನವಾಗಿ ನೈಜ-ಪ್ರಪಂಚದ ಸಮಸ್ಯೆಗಳನ್ನು ನಿಭಾಯಿಸಲು ಭಾರತೀಯ ಗೇಮ್‌ಗಳ ಅಗತ್ಯವನ್ನು ಒತ್ತಿ ಹೇಳಿದ್ದಾರೆ. ಹಾಗಿದ್ರೆ, ಮೋದಿ ನೀಡಿದ ಇತರೆ ಸಲಹೆ ಏನು?, ಈ ಸಭೆಯಲ್ಲಿ ಏನೆಲ್ಲಾ ಚರ್ಚೆ ನಡೆದಿದೆ ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಪ್ರಧಾನಿ ನರೇಂದ್ರ ಮೋದಿ ಅವರು ನಮನ್ ಮಾಥುರ್, ಅನಿಮೇಶ್ ಅಗರ್ವಾಲ್, ಮಿಥಿಲೇಶ್ ಪಾಟಂಕರ್, ಪಾಯಲ್ ಧಾರೆ, ಅಂಶು ಬಿಶ್ತ್, ತೀರ್ಥ ಮೆಹ್ತಾ ಮತ್ತು ಗಣೇಶ್ ಗಂಗಾಧರ್ ಎಂಬ ಏಳು ಆನ್‌ಲೈನ್ ಗೇಮರ್‌ಗಳನ್ನು ಭೇಟಿ ಮಾಡಿದ್ದು, ಈ ಗೇಮರ್‌ಗಳು ಯೂಟ್ಯೂಬ್ ಸೇರಿದಂತೆ ಸಾಮಾಜಿಕ ಮಾಧ್ಯಮದಲ್ಲಿ ಲಕ್ಷಾಂತರ ಅನುಯಾಯಿಗಳನ್ನು ಹೊಂದಿದ್ದಾರೆ. ಈ ಸಭೆಯ ವಿಡಿಯೋವನ್ನು ನರೇಂದ್ರ ಮೋದಿ ಯೂಟ್ಯೂಬ್ ಚಾನೆಲ್‌ನಲ್ಲಿಯೂ ಅಪ್‌ಲೋಡ್ ಮಾಡಲಾಗಿದ್ದು, ಈ ವಿಡಿಯೋ ಇದೀಗ ಭಾರೀ ವೀಕ್ಷಣೆಗೆ ಒಳಗಾಗುತ್ತಿದೆ
ಈ ವೇಳೆ ಭಾರತೀಯ ಹವಾಮಾನ ಬದಲಾವಣೆ ಮತ್ತು ಸ್ವಚ್ಛತೆಯಂತಹ ಜಾಗತಿಕ ಸಮಸ್ಯೆಗಳನ್ನು ಪರಿಹರಿಸುವ ಗೇಮ್‌ಗಳನ್ನು ಕ್ರಿಯೇಟ್ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಅಲ್ಲದೆ ವಿಶ್ವ ನಾಯಕರು ಜಾಗತಿಕ ತಾಪಮಾನ ಮತ್ತು ಹವಾಮಾನ ಬದಲಾವಣೆಯ ಬಗ್ಗೆ ಮಾತನಾಡುತ್ತಾರೆ ಮತ್ತು ಅವುಗಳನ್ನು ಎದುರಿಸಲು ವಿವಿಧ ವಿಧಾನಗಳನ್ನು ಪ್ರಯತ್ನಿಸುತ್ತಿದ್ದಾರೆ. ನಾನು 'ಮಿಷನ್ ಲೈಫ್: ಲೈಫ್ ಸ್ಟೈಲ್ ಫಾರ್ ಎನ್ವಿರಾನ್‌ಮೆಂಟ್' ಎಂಬ ಪರ್ಯಾಯ ವಿಧಾನವನ್ನು ರೂಪಿಸಿದ್ದೇನೆ ಎಂದು ಮೋದಿ ತಿಳಿಸಿದ್ದಾರೆ.

ಕಾರ್ಯಕ್ರಮದ ಆರಂಭದಲ್ಲಿ ಮೋದಿ ಅವರು ಎಲ್ಲಾ ಗೇಮರ್‌ಗಳು ಮತ್ತು ಕಂಟೆಂಟ್ ಕ್ರಿಯೇಟರ್‌ಗಳನ್ನು ಪರಿಚಯಿಸಿದರು. ಇದಾದ ನಂತರ ಇದನ್ನು ವೃತ್ತಿಯಾಗಿ ನೋಡಬಹುದೇ ಎಂಬ ಚರ್ಚೆ ಶುರುವಾಯಿತು. ಇದರ ಮೇಲೆ, ಗೇಮರುಗಳಿಗಾಗಿ ಮತ್ತು ಕಂಟೆಂಟ್ ಕ್ರಿಯೇಟರ್ಸ್ ನೀವು ಈ ಉದ್ಯಮದಲ್ಲಿ ಎರಡು ರೀತಿಯಲ್ಲಿ ವೃತ್ತಿಯನ್ನು ಮಾಡಬಹುದು ಎಂದು ಚರ್ಚೆ ಮಾಡಲಾಗಿದೆ.
ಅಲ್ಲದೆ ನೀವು ಬಯಸಿದರೆ, ನೀವು ವೃತ್ತಿಪರ ಇ-ಸ್ಪೋರ್ಟ್ಸ್ ಅಥ್ಲೀಟ್ ಆಗಬಹುದು ಅಥವಾ ಗೇಮಿಂಗ್ ಕಂಟೆಟ್ ಕ್ರಿಯೇಟರ್ಸ್ ಆಗಿ ಗುರುತಿಸಿಕೊಳ್ಳಬಹುದು. ಇದಲ್ಲದೇ ಈ ಕುರಿತು ಸಮಾಜದಲ್ಲಿ ಯಾವ ರೀತಿಯ ಸವಾಲುಗಳು ಎದುರಾಗುತ್ತಿವೆ ಎಂಬುದರ ಬಗ್ಗೆಯೂ ಪ್ರಧಾನಿ ಮೋದಿ ಚರ್ಚೆ ನಡೆಸಿದ್ದು, ಈ ವೇಳೆ ಮೋದಿ ಅವರು ಕೆಲವು ಗೇಮ್‌ಗಳನ್ನೂ ಸಹ ಪ್ರಯತ್ನಿಸಿದರು.

ಭಾರತದಲ್ಲಿ ಗೇಮಿಂಗ್ ಸಂಬಂಧ ಕಾನೂನು ನಿರ್ಬಂಧ ಬರಲಿದೆಯೇ?: ಈ ಸಭೆಯಲ್ಲಿ ಆನ್‌ಲೈನ್ ಗೇಮಿಂಗ್ ಅನ್ನು ನಿಯಂತ್ರಿಸುವ ಅಗತ್ಯವಿದೆಯೇ ಎಂದು ಆಟಗಾರರು ಮೋದಿ ಅವರನ್ನು ಹೇಳಿದಾಗ, ಇಲ್ಲ, ಗೇಮಿಂಗ್‌ಗೆ ಯಾವುದೇ ನಿರ್ಬಂಧಗಳ ಅಗತ್ಯವಿಲ್ಲ ಎಂದು ಪ್ರಧಾನಿ ಮೋದಿ ಉತ್ತರಿಸಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಅದನ್ನು ನಿಯಂತ್ರಿತ ಎಂದು ಕರೆಯುವುದು ಸೂಕ್ತವಲ್ಲ. ಗೇಮಿಂಗ್ ಮುಕ್ತವಾಗಿರಲು ಅನುಮತಿಸಬೇಕು ಆಗ ಮಾತ್ರ ಅದು ಅಭಿವೃದ್ಧಿಗೊಳ್ಳುತ್ತದೆ ಎಂದಿದ್ದಾರೆ.
ಆದರೆ ಇದಕ್ಕಾಗಿ ಮಾರ್ಗಸೂಚಿಯನ್ನು ತಯಾರಿಸಬಹುದು ಮತ್ತು ಅದನ್ನು ಪರಿಗಣಿಸಲಾಗುವುದು ಎಂದು ಮೋದಿ ಹೇಳಿದ್ದು, ಗೇಮಿಂಗ್ ಮತ್ತು ಜೂಜಾಟದ ಪ್ರಶ್ನೆಗೆ, ಅವುಗಳನ್ನು ಪ್ರತ್ಯೇಕಿಸುವ ಅವಶ್ಯಕತೆಯಿದೆ ಮತ್ತು ಇವೆರಡರ ನಡುವಿನ ವ್ಯತ್ಯಾಸವನ್ನು ಮಕ್ಕಳಿಗೆ ವಿವರಿಸುವ ಜವಾಬ್ದಾರಿ ಗೇಮರುಗಳ ಮೇಲಿದೆ ಎಂದು ಒತ್ತಿ ಹೇಳಿದ್ದಾರೆ.
ಭಾರತೀಯ ನಾಗರಿಕತೆಯ ಮೇಲೆ ವಿಡಿಯೋ ಗೇಮ್‌ಗಳನ್ನು ಕ್ರಿಯೇಟ್ ಮಾಡಬೇಕು: ಈ ನಡುವೆ ಭಾರತೀಯ ನಾಗರಿಕತೆ ಮತ್ತು ಸಂಸ್ಕೃತಿಯ ಕುರಿತು ವಿಡಿಯೋ ಗೇಮ್‌ಗಳನ್ನು ಕ್ರಿಯೇಟ್ ಮಾಡುವ ಅಗತ್ಯವಿದೆ ಎಂದು ಪ್ರಧಾನಿ ಮೋದಿ ಮತ್ತು ಆಟಗಾರರು ಒಂದೇ ಧ್ವನಿಯಲ್ಲಿ ಹೇಳಿದ್ದಾರೆ. ಇದರಿಂದ ಸಮಾಜದಲ್ಲಿ ಜಾಗೃತಿ ಮೂಡುತ್ತದೆ ಮತ್ತು ಮಕ್ಕಳು ತಮ್ಮ ನಾಗರಿಕತೆ ಮತ್ತು ಸಂಸ್ಕೃತಿಯ ಬಗ್ಗೆಯೂ ಕಲಿಯುತ್ತಾರೆ ಎಂದಿದ್ದಾರೆ.


Click it and Unblock the Notifications








