ಈ ಸ್ಮಾರ್ಟ್‌ವಾಚ್‌ಗಳಿಗೆ ಬ್ರಾಂಡ್ ಅಂಬಾಸಿಡರ್ ಆದ ನೀರಜ್ ಚೋಪ್ರಾ!
ನೀರಜ್ ಚೋಪ್ರಾ (Neeraj Chopra) ಅವರು ಜಾವೆಲಿನ್ ಎಸೆತದಲ್ಲಿ ಪರಿಣತಿ ಹೊಂದಿರುವ ಭಾರತೀಯ ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್. ಇವರು ಜಾವೆಲಿನ್ ಎಸೆತದಲ್ಲಿ ಒಲಿಂಪಿಕ್, ವಿಶ್ವ ಮತ್ತು ಡೈಮಂಡ್ ಲೀಗ್ ಚಾಂಪಿಯನ್ ಆಗಿದ್ದು, 2021ರಲ್ಲಿ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ನಡೆದ ಅಥ್ಲೆಟಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕವನ್ನು ತಂದುಕೊಟ್ಟು ಹೆಸರಾದರು. ಇದಾದ ನಂತರ ದೇಶಾದ್ಯಂತ ಇವರಿಗೆ ಸಾಕಷ್ಟು ಅಭಿಮಾನಿಗಳಿದ್ದಾರೆ.
ಹೌದು, ಚೋಪ್ರಾ ಡಿಸೆಂಬರ್ 24, 1997 ರಂದು ಹರಿಯಾಣದ ಪಾಣಿಪತ್ ಬಳಿಯ ಖಂಡ್ರಾ ಗ್ರಾಮದಲ್ಲಿ ರೈತ ಕುಟುಂಬದಲ್ಲಿ ಜನಿಸಿ ಇಂದು ಇಡೀ ಜಗತ್ತೇ ಗುರುತಿಸುವ ವ್ಯಕ್ತಿಯಾಗಿ ಬೆಳೆದಿದ್ದಾರೆ. ಅದರಂತೆ ಈಗ ಜನಪ್ರಿಯ ಭಾರತೀಯ ಟೆಕ್ ಬ್ರ್ಯಾಂಡ್, ಹಾಲಿ ಜಾವೆಲಿನ್ ವಿಶ್ವ ಚಾಂಪಿಯನ್ ಅವರನ್ನು ತನ್ನ ಸ್ಮಾರ್ಟ್‌ವಾಚ್‌ಗಳ ಬ್ರಾಂಡ್ ಅಂಬಾಸಿಡರ್ ಘೋಷಣೆ ಮಾಡಿದೆ. ಹಾಗಿದ್ರೆ, ಯಾವ ಬ್ರ್ಯಾಂಡ್‌ಗೆ ಇವರು ಅಂಬಾಸಿಡರ್? ಎಂಬ ಮಾಹಿತಿ ಸೇರಿದಂತೆ ಅನೇಕ ಇಂಟ್ರೆಸ್ಟಿಂಗ್ ವಿಷಯ ಈ ಲೇಖನದಲ್ಲಿದೆ ಓದಿರಿ.

ನಾಯ್ಸ್ ಸ್ಮಾರ್ಟ್‌ವಾಚ್‌ಗೆ ಚೋಪ್ರಾ ಅಂಬಾಸಿಡರ್: ಭಾರತದಲ್ಲಿ ಸ್ಮಾರ್ಟ್‌ವಾಚ್‌ಗಳ (Smartwatch) ಮೂಲಕ ಬಹಳ ಸದ್ದು ಮಾಡಿರುವ ನಾಯ್ಸ್‌ನ (Noise) ಸ್ಮಾರ್ಟ್‌ವಾಚ್‌ಗಳಿಗೆ ನೀರಜ್ ಚೋಪ್ರಾ ಅಂಬಾಸಿಡರ್ ಆಗಿದ್ದಾರೆ. ಈ ಸಂಬಂಧ ನಾಯ್ಸ್ ಅಧಿಕೃತ ಹೇಳಿಕೆ ನೀಡಿದೆ. ಇನ್ನು ಅವರು ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ತಾರೆ ತಾಪ್ಸಿ ಪನ್ನು ಅವರ ಸಾಲಿಗೆ ಸೇರಿಕೊಂಡಿದ್ದಾರೆ. ಈ ಮೂಲಕ ನಾಯ್ಸ್‌ನ ಪ್ರಸಿದ್ಧ ಡಿವೈಸ್‌ಗಳ ಮಾರಾಟಕ್ಕೆ ಕಾರಣರಾಗಲಿದ್ದಾರೆ.
ಇನ್ನು ಕಂಪನಿಯು 2020ರಲ್ಲಿ ರೋಹಿತ್ ಶರ್ಮಾ ಅವರನ್ನು ತನ್ನ ಬ್ರಾಂಡ್ ಅಂಬಾಸಿಡರ್ ನಾಯ್ಸ್ ಘೋಷಣೆ ಮಾಡಿತ್ತು. ಹಾಗೆಯೇ ಚೋಪ್ರಾ ತಮ್ಮ ಅಧಿಕಾರಾವಧಿಯಲ್ಲಿ ಎಲ್ಲಾ ಟಚ್‌ಪಾಯಿಂಟ್‌ಗಳಲ್ಲಿ ದೃಢವಾದ ಪ್ರಚಾರದಲ್ಲಿ ತೊಡಗಿಸಿಕೊಳ್ಳುತ್ತಾರೆ ಎಂದು ನಾಯ್ಸ್ ಮಾಹಿತಿ ನೀಡಿದೆ. ಈ ಸಂಬಂಧ ನಾಯ್ಸ್ ಸಹ-ಸಂಸ್ಥಾಪಕ ಗೌರವ್ ಖತ್ರಿ ಈ ವಿಷಯವನ್ನು ಖಾತರಿಪಡಿಸಿದ್ದಾರೆ.
ವಿಶ್ವ ಚಾಂಪಿಯನ್ ಮತ್ತು ಅತ್ಯಂತ ಸ್ಪೂರ್ತಿದಾಯಕ ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಅವರನ್ನು ನಾಯ್ಸ್ ಕುಟುಂಬಕ್ಕೆ ಸ್ವಾಗತಿಸಲು ನಾವು ಉತ್ಸುಕರಾಗಿದ್ದೇವೆ. ಹಾಗೆಯೇ ಸ್ಮಾರ್ಟ್ ವಾಚ್‌ಗಳ ಕ್ಷೇತ್ರದಲ್ಲಿ ನಮ್ಮ ಪ್ರಮುಖ ಸ್ಥಾನವು ನೀರಜ್ ರಾಷ್ಟ್ರೀಯ ಹೆಮ್ಮೆಯ ಮೂಲವಾಗಿ ನಿಲ್ಲಲು ಪ್ರಾರಂಭಿಸಿದ ದಾರಿಯೊಂದಿಗೆ ಸಾಮರಸ್ಯದಿಂದ ಅನುರಣಿಸುತ್ತದೆ ಎಂದಿದ್ದಾರೆ.
ನೀರಜ್‌ರಂತೆಯೇ ನಮ್ಮ ಒಳಗಿನ ಡ್ರೈವ್‌ಗೆ ಹೊಂದಿಕೊಳ್ಳಲು ನಾವು ನಿರಂತರವಾಗಿ ನಮ್ಮ ಉತ್ಸಾಹವನ್ನು ತೋರಿಸುತ್ತೇವೆ. ಈ ಪಾಲುದಾರಿಕೆಯು ದೇಶದ ಯುವಕರೊಂದಿಗೆ ನಮ್ಮ ಬಲವಾದ ಬಂಧವನ್ನು ಇನ್ನಷ್ಟು ಬಲಪಡಿಸಲು ಸಹಾಯ ಮಾಡುತ್ತದೆ ಎಂದು ನಾವು ನಂಬಿದ್ದೇವೆ ಎಂದು ತಿಳಿಸಿದ್ದಾರೆ. ಈ ಮೂಲಕ ನಾಯ್ಸ್‌ನ ಎಲ್ಲಾ ಜಾಹೀರಾತು ವಿಭಾಗದಲ್ಲಿ ಇನ್ಮುಂದೆ ಚೋಪ್ರಾ ಮೋಡಿ ಮಾಡಲಿದ್ದಾರೆ.
ಈ ಸಂಬಂಧ ಚೋಪ್ರಾ ಸಹ ಸಂತಸ ವ್ಯಕ್ತಪಡಿಸಿದ್ದಾರೆ. ಹೊಸತನದ ಮೇಲೆ ಕೇಂದ್ರೀಕರಿಸುವ ಬ್ರ್ಯಾಂಡ್ ನಾಯ್ಸ್‌ನೊಂದಿಗೆ ಸಹಕರಿಸಲು ನಾನು ರೋಮಾಂಚನಗೊಂಡಿದ್ದೇನೆ. ಅವರು ತಮ್ಮ ಕ್ಷೇತ್ರದಲ್ಲಿನ ಗಡಿಗಳನ್ನು ದಾಟಲು ನಿರ್ಧರಿಸಿದ್ದಾರೆ. ಅವರು ಯುವಕರನ್ನು ಪ್ರೇರೇಪಿಸಲು ಬಯಸುತ್ತಾರೆ ಎಂಬ ಅನಿಸಿಕೆ ನನಗಿದೆ. ಇದು ನನಗೆ ನಿಕಟವಾಗಿ ಸಂಬಂಧಿಸಿದ ವಿಷಯವಾಗಿದೆ ಎಂದಿದ್ದಾರೆ.
ಈ ಬೆಳವಣಿಗೆ ನಡುವೆ ನಾಯ್ಸ್ ಹೊಸ ಸ್ಮಾರ್ಟ್‌ವಾಚ್ ಅನ್ನು ಅನಾವರಣ ಮಾಡಿದೆ. ನಾಯ್ಸ್‌ಫಿಟ್ ಮೆಟಾಲಿಕ್ಸ್ ಸ್ಮಾರ್ಟ್‌ವಾಚ್ ಅನ್ನು ಅನಾವರಣ ಮಾಡಿದ್ದು, ಈ ವಾಚ್ 1.4 ಇಂಚಿನ ಹೆಚ್‌ಡಿ ಡಿಸ್ಪ್ಲೇಯೊಂದಿಗೆ ಕಾಣಿಸಿಕೊಂಡಿದೆ. ಇದು ರೌಂಡ್ ಡಯಲ್ ಮತ್ತು ಮೆಟಾಲಿಕ್ ಫಿನಿಶ್ ಹೊಂದಿದ್ದು, 100 ಕ್ಕೂ ಹೆಚ್ಚು ಸ್ಪೋರ್ಟ್ ಮೋಡ್‌ಗಳು, ಜಲನಿರೋಧಕ ಮತ್ತು ಇನ್ನೂ ಹೆಚ್ಚಿನ ಆಕರ್ಷಕ ಫೀಚರ್ಸ್ ಹೊಂದಿದೆ.



Click it and Unblock the Notifications








