ಗ್ರಾಹಕರಿಗೆ ಸಿಹಿಸುದ್ದಿ : NEFT ವಹಿವಾಟು ಇನ್ನು 24x7.!
ಒಂದು ಬ್ಯಾಂಕ್ ಖಾತೆಯಿಂದ ಇನ್ನೊಂದು ಬ್ಯಾಂಕ್ ಖಾತೆಗೆ ಡಿಜಿಟಲ್ ಹಣ ವರ್ಗಾವಣೆ ಮಾಡುವ ಗ್ರಾಹಕರಿಗೆ ಇದೀಗ RBI ಭಾರಿ ಖುಷಿಯ ಸಮಾಚಾರ ನೀಡಿದೆ. ಇದೇ ಡಿಸೆಂಬರ್ 16 ರಿಂದ NEFT- National Electronic Funds Transfer ಹಣ ವರ್ಗಾವಣೆ ವ್ಯವಸ್ಥೆಯು 24x7 ಗ್ರಾಹಕರಿಗೆ ಲಭ್ಯವಾಗಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಇದೇ ಶುಕ್ರವಾರ ಪ್ರಕಟಿಸಿದೆ.

ಹೌದು, ದೇಶದಲ್ಲಿ ಡಿಜಿಟಲ್ ಹಣ ವರ್ಗಾವಣೆ ವ್ಯವಸ್ಥೆಯನ್ನು ಉತ್ತೇಜಿಸುವ ಸಲುವಾಗಿ ಆರ್‌ಬಿಐ ಈ ನಿರ್ಧಾರವನ್ನು ಕೈಗೊಂಡಿದೆ. ಹೀಗಾಗಿ ಇದೇ ಡಿ16 ರಿಂದ NEFT ಮೂಲಕ ಹಣ ವರ್ಗಾವಣೆ ಮಾಡಲು ಯಾವುದೇ ನಿಗದಿತ ಸಮಯ ಇರುವುದಿಲ್ಲ. ಹಾಗೂ ಎಲ್ಲ ರಜಾ ದಿನಗಳಲ್ಲಿಯೂ ಸಹ ಹಣ ವರ್ಗಾವಣೆ ಪ್ರಕ್ರಿಯೇ ನಡೆಯುತ್ತದೆ ಎಂದು ಆರ್‌ಬಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ನ್ಯಾಷನಲ್ ಎಲೆಕ್ಟ್ರಾನಿಕ್ ಫಂಡ್ಸ್ ಟ್ರಾನ್ಸ್‌ಫರ್ (ಎನ್‌ಇಎಫ್‌ಟಿ) ವ್ಯವಸ್ಥೆಯಲ್ಲಿ ಹಣ ವರ್ಗಾವಣೆ ಪ್ರಕ್ರಿಯೇ ನಡೆಸಲಿವೆ. ಹಾಗೂ ಬ್ಯಾಂಕುಗಳ ಸಾಮಾನ್ಯ ಬ್ಯಾಂಕಿಂಗ್ ಸಮಯದ ನಂತರದ NEFT ವಹಿವಾಟುಗಳನ್ನು ನಡೆಸಲು ಬ್ಯಾಂಕುಗಳು ''ಸ್ಟ್ರೈಟ್ ಥ್ರೂ ಪ್ರೊಸೆಸಿಂಗ್ (ಎಸ್‌ಟಿಪಿ)'' ವಿಧಾನಗಳನ್ನು ಬಳಸಿಕೊಂಡು ಸ್ವಯಂಚಾಲಿತ ವಹಿವಾಟುಗಳನ್ನು ಪ್ರಾರಂಭಿಸುವ ನಿರೀಕ್ಷೆಯಿದೆ.

ಪ್ರಸ್ತುತ ಬ್ಯಾಂಕ್‌ಗಳ ಕೆಲಸದ ಸಮಯದಲ್ಲಿ NEFT ಹಣ ವರ್ಗಾವಣೆಗೆ ಅವಕಾಶ ಇದೆ. ಸೋಮವಾರದಿಂದ ಶುಕ್ರವಾರದವರೆಗೂ ಬೆಳಿಗ್ಗೆ 8 ರಿಂದ ಸಂಜೆ 7 ಗಂಟೆಯ ವರೆಗೂ NEFT ಹಣ ವರ್ಗಾವಣೆಗೆ ಪ್ರಕ್ರಿಯೇ ನಡೆಯುತ್ತವೆ. ಹಾಗೂ ತಿಂಗಳ ಮೊದಲ ಮತ್ತು ಮೂರನೇ ಶನಿವಾರ ಬೆಳಿಗ್ಗೆ 8 ರಿಂದ ಮಧ್ಯಾಹ್ನ 1 ಗಂಟರಯವರೆಗೂ NEFT ಹಣ ವರ್ಗಾವಣೆ ನಡೆಸಲು ಅವಕಾಶವಿದೆ.

ಆರ್‌ಬಿಐ ತನ್ನ ಮೆಂಬರ್ ಬ್ಯಾಂಕ್‌ಗಳಿಗೆ NEFT ವಹಿವಾಟು ಸಮಯ ಹೆಚ್ಚಿಸಿಕೊಳ್ಳಲು ಸೂಚನೆ ನೀಡಿದೆ. ಉಳಿದಂತೆ ಪ್ರಸ್ತುತ NEFT ವಹಿವಾಟು ನಿಯಮಗಳು ಮುಂದುವರೆಯಲಿವೆ. ಫಲಾನುಭವಿಯ ಖಾತೆಗೆ ಜಮಾ ಅಥವಾ ಅಸ್ತಿತ್ವದಲ್ಲಿರುವ ಸ್ಲಾಟ್ ಅನ್ನು ಇತ್ಯರ್ಥಪಡಿಸಿದ 2 ಗಂಟೆಗಳ ಒಳಗೆ ವಹಿವಾಟನ್ನು ಮೂಲ ಬ್ಯಾಂಕಿಗೆ ಹಿಂದಿರುಗಿಸುವ ಅಸ್ತಿತ್ವದಲ್ಲಿರುವ ತತ್ವವು ಮುಂದುವರಿಯುತ್ತದೆ.


Click it and Unblock the Notifications








