ಬಳಕೆದಾರರಿಗೆ ಟೈಮರ್‌ ಫೀಚರ್ಸ್‌ ಪರಿಚಯಿಸಿದ ನೆಟ್‌ಫ್ಲಿಕ್ಸ್‌!

|

ನೆಟ್‌ಫ್ಲಿಕ್ಸ್‌ ವಿಡಿಯೋ ಸ್ಟ್ರೀಮಿಂಗ್‌ ಸೇವೆ ಭಾರತದಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಈಗಾಗಲೇ ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ಹಲವು ಫೀಚರ್ಸ್‌ಗಳನ್ನು ಪರಿಚಯಿಸಿದೆ. ಸದ್ಯ ಇದೀಗ ನೆಟ್‌ಫ್ಲಿಕ್ಸ್‌ ತನ್ನ ಹೊಸ ಫೀಚರ್ಸ್‌ ಅನ್ನು ಪರೀಕ್ಷಿಸಲು ಪ್ರಾರಂಭಿಸಿದೆ. ಇದು ವೀಕ್ಷಕರಿಗೆ ತಮ್ಮ ನೆಚ್ಚಿನ ಪ್ರದರ್ಶನ ಅಥವಾ ಚಲನಚಿತ್ರಕ್ಕಾಗಿ ಟೈಮರ್ ಅನ್ನು ಹೊಂದಿಸಲು ಅನುವು ಮಾಡಿಕೊಡುತ್ತದೆ. ಈ ಫೀಚರ್ಸ್‌ ಪ್ರಸ್ತುತ ಜಾಗತಿಕವಾಗಿ ಆಂಡ್ರಾಯ್ಡ್ ಡಿವೈಸ್‌ಗಳಲ್ಲಿ ಆಯ್ದ ನೆಟ್‌ಫ್ಲಿಕ್ಸ್ ಚಂದಾದಾರರಿಗಾಗಿ ಲೈವ್ ಆಗಿದೆ.

ನೆಟ್‌ಫ್ಲಿಕ್ಸ್‌

ಹೌದು, ಜನಪ್ರಿಯ ವಿಡಿಯೋ ಸ್ಟ್ರೀಮಿಂಗ್‌ ಸೇವೆ ನೆಟ್‌ಫ್ಲಿಕ್ಸ್‌ ಟೈಮರ್‌ ಫೀಚರ್ಸ್‌ ಅನ್ನು ಪರಿಚಯಿಸಿದೆ. ತನ್ನ ಬಳಕೆದಾರರ ವೀಕ್ಷಣೆಯ ಅನುಭವವನ್ನು ಹೆಚ್ಚಿಸಲು ಇದು ಮತ್ತೊಂದು ಕ್ರಮವಾಗಿದೆ. ನೆಟ್‌ಫ್ಲಿಕ್ಸ್ ವಯಸ್ಕ ಪ್ರೊಫೈಲ್‌ಗಳಿಗಾಗಿ ಟೈಮರ್ ಫೀಚರ್ಸ್‌ ಅನ್ನು ಪರೀಕ್ಷಿಸುತ್ತಿದೆ. ಆದರೂ ಇದನ್ನು ಕಾಲಕ್ರಮೇಣ ಮಕ್ಕಳ ವೀಕ್ಷಕರಿಗೆ ಸಹ ವಿಸ್ತರಿಸಬಹುದಾಗಿದೆ. ಇನ್ನುಳಿದಂತೆ ಈ ಫೀಚರ್ಸ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ನೆಟ್‌ಫ್ಲಿಕ್ಸ್

ನೆಟ್‌ಫ್ಲಿಕ್ಸ್ ಮೊಬೈಲ್ ಅನುಭವವನ್ನು ಸುಧಾರಿಸಲು ಹೊಸ ಮಾರ್ಗಗಳನ್ನು ಹುಡುಕುತ್ತಿದ್ದೇವೆ ನೆಟ್‌ಫ್ಲಿಕ್ಸ್‌ ಸಂಸ್ಥೆ ಹೇಳಿಕೊಂಡಿದೆ. ಟೈಮರ್‌ ಫೀಚರ್ಸ್‌ ಬಳಕೆದಾರರ ವೀಕ್ಷಣೆಯ ಅನುಭವದ ಮೇಲೆ ಹೆಚ್ಚಿನ ನಿಯಂತ್ರಣವನ್ನು ನೀಡಲಿದೆ. ಇನ್ನು ಈ ಹೊಸ ಟೈಮರ್ ತಮ್ಮ ನೆಚ್ಚಿನ ಪ್ರದರ್ಶನ ಅಥವಾ ಚಲನಚಿತ್ರವನ್ನು ಆರಿಸಿಕೊಳ್ಳುವುದಕ್ಕೆ ಮತ್ತು ಅದು ಮುಗಿಯುವ ಮೊದಲು ಅದನ್ನು ವಿರಾಮಗೊಳಿಸುವುದರ ಬಗ್ಗೆ ಚಿಂತಿಸದೆ ಟೈಮರ್ ಅನ್ನು ಸೆಟ್‌ ಮಾಡುವುದಕ್ಕೆ ಇದು ಅವಕಾಶವನ್ನು ನೀಡಲಿದೆ.

ಫೀಚರ್ಸ್‌

ಇನ್ನು ಟೈಮರ್‌ ಫೀಚರ್ಸ್‌ ಪ್ರಸ್ತುತ ವಯಸ್ಕರ ಪ್ರೊಫೈಲ್‌ಗಳಿಗೆ ಸೀಮಿತವಾಗಿದೆ. ಇದು ಅಪ್ಲಿಕೇಶನ್‌ನಲ್ಲಿ ಪ್ರದರ್ಶನ ಅಥವಾ ಚಲನಚಿತ್ರವನ್ನು ನೋಡುವಾಗ ನೆಟ್‌ಫ್ಲಿಕ್ಸ್ ಚಂದಾದಾರರು ನಿದ್ರಿಸಿದಾಗ ಆಂಡ್ರಾಯ್ಡ್ ಸಾಧನಗಳಲ್ಲಿ ಬ್ಯಾಟರಿ ಅವಧಿಯನ್ನು ಉಳಿಸಲು ಸಹಾಯ ಮಾಡುವ ಗುರಿಯನ್ನು ಹೊಂದಿದೆ. ಆಂಡ್ರಾಯ್ಡ್ ಡಿವೈಸ್‌ಗಳನ್ನು ಮೀರಿ ನೆಟ್‌ಫ್ಲಿಕ್ಸ್ ಟೈಮರ್ ಫೀಚರ್ಸ್‌ ಅನ್ನು ಬೇರೆ ಡಿವೈಸ್‌ಗಳಿಗೆ ವಿಸ್ತರಿಸುತ್ತದೆಯೇ ಎಂಬ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ.

ನೆಟ್‌ಫ್ಲಿಕ್ಸ್

ಇತ್ತೀಚಿನ ದಿನಗಳಲ್ಲಿ, ನೆಟ್‌ಫ್ಲಿಕ್ಸ್ ಸ್ಮಾರ್ಟ್‌ಫೋನ್ ಬಳಕೆದಾರರನ್ನು ಆಕರ್ಷಿಸಲು ಪ್ರಯತ್ನಿಸುತ್ತಿದೆ. ಇದರ ವಿಷಯವನ್ನು ತಮ್ಮ ಟಿವಿಗಳಲ್ಲಿ ಮತ್ತು ಅದರ ವೆಬ್ ಉಪಸ್ಥಿತಿಯ ಮೂಲಕ ವೀಕ್ಷಿಸುವ ಜನರೊಂದಿಗೆ. ಕಂಪನಿಯು ಇತ್ತೀಚೆಗೆ ಆಂಡ್ರಾಯ್ಡ್ ಬಳಕೆದಾರರಿಗಾಗಿ ನಿರ್ದಿಷ್ಟವಾಗಿ ಅದರ ಕೆಲವು ಪ್ರಮುಖ ಕೊಡುಗೆಗಳಾಗಿ xHE-AAC ಕೊಡೆಕ್ ಮತ್ತು ಆಡಿಯೊ-ಓನ್ಲಿ ಮೋಡ್ ಅನ್ನು ಬಳಸಿಕೊಂಡು ಉತ್ತಮ ಆಡಿಯೊವನ್ನು ಅಭಿವೃದ್ಧಿಪಡಿಸಿದೆ. ಅನುಭವವನ್ನು ಹೆಚ್ಚಿಸಲು ಏರ್‌ಪಾಡ್ಸ್ ಪ್ರೊ ಮತ್ತು ಏರ್‌ಪಾಡ್ಸ್ ಮ್ಯಾಕ್ಸ್‌ಗಾಗಿ ಪ್ರಾದೇಶಿಕ ಆಡಿಯೊ ಬೆಂಬಲವನ್ನು ಪರೀಕ್ಷಿಸಲು ಪ್ರಾರಂಭಿಸಿದೆ ಎಂದು ವರದಿಯಾಗಿದೆ.

Best Mobiles in India

Read more about:
English summary
Netflix Starts Testing Timer Feature to Stop Streaming Content After a Certain Period.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X