Home
ಸುದ್ದಿಜಾಲ

Jio,Airtel ಮತ್ತು Vi ನ ಈ ಯೋಜನೆಯಲ್ಲಿ ನೆಟ್‌ಫ್ಲಿಕ್ಸ್‌, ಹಾಟ್‌ಸ್ಟಾರ್‌ ಫ್ರೀ.. ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್!

ಓಟಿಟಿ ಪ್ಲಾಟ್‌ಫಾರ್ಮ್‌ಗಳ ಕಡೆ ಜನರು ಹಿಂದೆಂದಿಗಿಂತಲೂ ಈಗ ಹೆಚ್ಚು ವಾಲುತ್ತಿದ್ದಾರೆ. ಅದರಂತೆ ಟೆಲಿಕಾಂ ಸಂಸ್ಥೆಗಳು ಸಹ ಈ ಬಗ್ಗೆ ಹೆಚ್ಚಿನ ಗಮನ ಹರಿಸಿದ್ದು, ತಮ್ಮ ವಿಶೇಷ ರೀಚಾರ್ಜ್‌ ಪ್ಲ್ಯಾನ್‌ ಮೂಲಕ ಗ್ರಾಹಕರನ್ನು ಸೆಳೆಯುವ ಪ್ರಯತ್ನ ಮಾಡುತ್ತಿವೆ. ಅದರಲ್ಲೂ ಏರ್‌ಟೆಲ್‌, ಜಿಯೋ ಹಾಗೂ ವಿ ಟೆಲಿಕಾಂ ಗ್ರಾಹಕರು ತಮ್ಮ ರೀಚಾರ್ಜ್‌ ಪ್ಲ್ಯಾನ್‌ಗಳ ಮೇಲೆ ಉಚಿತ ನೆಟ್‌ಫ್ಲಿಕ್ಸ್‌, ಹಾಟ್‌ಸ್ಟಾರ್‌ ಸೌಲಭ್ಯ ನೀಡುತ್ತಿವೆ.

ಹೌದು, ಸಾಮಾನ್ಯವಾಗಿ ಬಳಕೆದಾರರು ಈ ಪ್ಲಾಟ್‌ಫಾರ್ಮ್‌ಗಳಿಗೆ ವಿಶೇಷ ರೀಚಾರ್ಜ್‌ ಪ್ಲ್ಯಾನ್‌ ಮಾಡಿಸಿಕೊಂಡು ಹೆಚ್ಚಿನ ಹಣ ವ್ಯವ ಮಾಡುತ್ತಾರೆ. ಆದರೆ, ಈ ಮೂರು ಟೆಲಿಕಾಂ ಗಳು ತಮ್ಮ ಕೆಲವು ರೀಚಾರ್ಜ್‌ ಪ್ಲ್ಯಾನ್‌ನಲ್ಲಿ ಈ ಓಟಿಟಿ ಪ್ಲಾಟ್‌ಫಾರ್ಮ್‌ಗೆ ಸಂಪೂರ್ಣ ಉಚಿತ ಎಂಟ್ರಿ ನೀಡಲಿದೆ. ಈ ಮೂಲಕ ನಿಮ್ಮಿಷ್ಟದ ವಿಡಿಯೋಗಳನ್ನು ಸ್ಟ್ರೀಮಿಂಗ್‌ ಮಾಡಬಹುದು. ಹಾಗಿದ್ರೆ, ಬನ್ನಿ ಯಾವೆಲ್ಲಾ ಪ್ಲ್ಯಾನ್‌ಗಳಲ್ಲಿ ಹಾಟ್‌ಸ್ಟಾರ್‌ ಹಾಗೂ ನೆಟ್‌ಫ್ಲಿಕ್ಸ್‌ ಉಚಿತ ಎಂದು ನೋಡೋಣ.

Jio,Airtel ಮತ್ತು Vi ನ ಈ ಯೋಜನೆಯಲ್ಲಿ ನೆಟ್‌ಫ್ಲಿಕ್ಸ್‌, ಹಾಟ್‌ಸ್ಟಾರ್‌ ಫ್ರೀ..

ಜಿಯೋ:
ಮೊದಲು ಜಿಯೋದ(Jio) ಯಾವೆಲ್ಲಾ ಪ್ಲ್ಯಾನ್‌ಗಳಲ್ಲಿ ಈ ಸೇವೆ ಉಚಿತ ಎಂದು ನೋಡೋಣ. ಜಿಯೋದ 1,499ರೂ.ಗಳ ಪ್ರಿಪೇಯ್ಡ್‌ ಪ್ಲ್ಯಾನ್‌ನಲ್ಲಿ ಅನಿಯಮಿತ ಡೇಟಾ ಮತ್ತು ವಾಯ್ಸ್‌ ಕರೆ ಜೊತೆಗೆ ಉಚಿತ ನೆಟ್‌ಫ್ಲಿಕ್ಸ್ (ಬೇಸಿಕ್) ಮತ್ತು ಹಾಟ್‌ಸ್ಟಾರ್ ಚಂದಾದಾರಿಕೆಗಳನ್ನು ನೀಡಲಾಗುತ್ತದೆ, ಈ ಪ್ಲ್ಯಾನ್‌ 30 ದಿನಗಳ ಮಾನ್ಯತೆಯನ್ನು ಹೊಂದಿದೆ. ಇದರೊಂದಿಗೆ 999ರೂ.ಗಳ ಪ್ಲ್ಯಾನ್‌ ನಲ್ಲೂ ಸಹ ಈ ಸೌಲಭ್ಯ ಇದ್ದು, ಇದು 30 ದಿನಗಳ ಮಾನ್ಯತೆಯನ್ನು ಹೊಂದಿದೆ.

ಇದರೊಂದಿಗೆ ಜಿಯೋ 2499ರೂ.ಗಳ ಪ್ಲ್ಯಾನ್‌ನಲ್ಲಿ ಅನಿಯಮಿತ ಡೇಟಾ, ವಾಯ್ಸ್‌ ಕಾಲ್‌ ಸೌಲಭ್ಯ ಇರಲಿದ್ದು, ಇದು ಉಚಿತ ನೆಟ್‌ಫ್ಲಿಕ್ಸ್ (ಸ್ಟ್ಯಾಂಡರ್ಡ್) ಮತ್ತು ಹಾಟ್‌ಸ್ಟಾರ್ ಚಂದಾದಾರಿಕೆಗಳ ಜೊತೆಗೆ 30 ದಿನಗಳ ಮಾನ್ಯತೆಯನ್ನು ಹೊಂದಿದೆ. ಹಾಗೆಯೇ 3,999ರೂ.ಗಳ ಪ್ಲ್ಯಾನ್‌ನಲ್ಲಿ ಅನಿಯಮಿತ ಡೇಟಾ ಮತ್ತು ವಾಯ್ಸ್‌ ಕಾಲ್‌ ಜೊತೆಗೆ ಉಚಿತ ನೆಟ್‌ಫ್ಲಿಕ್ಸ್ (ಸ್ಟ್ಯಾಂಡರ್ಡ್) ಮತ್ತು ಹಾಟ್‌ಸ್ಟಾರ್ ಚಂದಾದಾರಿಕೆಗಳನ್ನು 30 ದಿನಗಳ ಮಾನ್ಯತೆಯೊಂದಿಗೆ ನೀಡಲಿದೆ.

8,499ರೂ.ಗಳ ಮತ್ತೊಂದು ದೊಡ್ಡ ಮೊತ್ತದ ಪ್ಲ್ಯಾನ್‌ನಲ್ಲೂ ಸಹ ಈ ಸೌಲಭ್ಯ ಲಭ್ಯ ಇದ್ದು, ಈ ಪ್ಲ್ಯಾನ್‌ನಲ್ಲಿ ಅನಿಯಮಿತ ವಾಯ್ಸ್‌ ಕಾಲ್‌ ಮತ್ತು 6600 GB ಡೇಟಾವನ್ನು ಜೊತೆಗೆ ಉಚಿತ ನೆಟ್‌ಫ್ಲಿಕ್ಸ್‌ (ಪ್ರೀಮಿಯಂ) ಮತ್ತು ಹಾಟ್‌ಸ್ಟಾರ್‌ ಚಂದಾದಾರಿಕೆಗಳನ್ನು ನೀಡುತ್ತದೆ. ಈ ಪ್ಲ್ಯಾನ್‌ 30 ದಿನಗಳ ಮಾನ್ಯತೆಯನ್ನು ಹೊಂದಿದೆ. ಹಾಗೆಯೇ ಪೋಸ್ಟ್ ಪೇಯ್ಡ್ ರೀಚಾರ್ಜ್‌ ವಿಭಾಗದಲ್ಲಿ 599ರೂ.ಗಳ ಪ್ಲ್ಯಾನ್‌ನಲ್ಲಿ ಉಚಿತ ಹಾಟ್‌ಸ್ಟಾರ್ ಚಂದಾದಾರಿಕೆಯ ಜೊತೆಗೆ ಅನಿಯಮಿತ ಡೇಟಾ ಮತ್ತು ಉಚಿತ ವಾಯ್ಸ್‌ ಕಾಲ್‌ ಸೌಲಭ್ಯ ಲಭ್ಯ ಇದೆ.

ಹಾಗೆಯೇ ಪೋಸ್ಟ್ ಪೇಯ್ಡ್ ವಿಭಾಗದ 899ರೂ.ಗಳು, 999 ರೂ.ಗಳು, 1,499ರೂ.ಗಳು, 2,499ರೂ.ಗಳು 3,999 ರೂ,ಗಳು, 8,499ರೂ.ಗಳ ಪ್ಲ್ಯಾನ್‌ನಲ್ಲಿ ಈ ಸೌಲಭ್ಯ ಲಭ್ಯ ಇದೆ.
ಅಂದರೆ ಈ ಜಿಯೋ ಪ್ಲ್ಯಾನ್‌ನಲ್ಲಿ ನೆಟ್‌ಫ್ಲಿಕ್ಸ್ (ಪ್ರೀಮಿಯಂ) ಮತ್ತು ಹಾಟ್‌ಸ್ಟಾರ್ ಚಂದಾದಾರಿಕೆಗಳೊಂದಿಗೆ ಅಗತ್ಯ ಡೇಟಾ ಮತ್ತು ಬಿಲ್ ಸೈಕಲ್‌ಗಾಗಿ ಉಚಿತ ವಾಯ್ಸ್‌ ಕಾಲ್‌ ಸೌಲಭ್ಯ ಇರಲಿದೆ.

ಏರ್‌ಟೆಲ್‌:
ಏರ್‌ಟೆಲ್‌(Airtel) ಪ್ಲ್ಯಾನ್‌ಗಳ ಕಡೆ ಗಮನಹರಿಸುವುದಾದರೆ, ಏರ್‌ಟೆಲ್ ಪ್ರಿಪೇಯ್ಡ್ ಪ್ಲ್ಯಾನ್‌ 499ರೂ.ಗಳ ಪ್ಲ್ಯಾನ್‌ನಲ್ಲಿ ನಿತ್ಯವೂ 3GB ಡೇಟಾ ಮತ್ತು 28 ದಿನಗಳ ಮಾನ್ಯತೆಯ ಜೊತೆಗೆ ಉಚಿತ ಹಾಟ್‌ಸ್ಟಾರ್ ಚಂದಾದಾರಿಕೆಯೊಂದಿಗೆ ಸಿಗಲಿದೆ ಹಾಗೂ 839 ಪ್ಲ್ಯಾನ್‌ನಲ್ಲಿ ಉಚಿತ ಹಾಟ್‌ಸ್ಟಾರ್ ಚಂದಾದಾರಿಕೆಯೊಂದಿಗೆ ದಿನಕ್ಕೆ 2GB ಡೇಟಾ ಮತ್ತು 84 ದಿನಗಳ ಮಾನ್ಯತೆ ಸಿಗಲಿದೆ.

ಹಾಗೆಯೇ 3359ರೂ.ಗಳ ಪ್ಲ್ಯಾನ್‌ನಲ್ಲಿ ಉಚಿತ ಹಾಟ್‌ಸ್ಟಾರ್ ಚಂದಾದಾರಿಕೆಯೊಂದಿಗೆ ಸಿಗಲಿದ್ದು, ಜೊತೆಗೆ ದಿನಕ್ಕೆ 2.5GB ಡೇಟಾ ಮತ್ತು 365 ದಿನಗಳ ಮಾನ್ಯತೆ ಇರಲಿದೆ ಮತ್ತು ಏರ್‌ಟೆಲ್ ಪೋಸ್ಟ್‌ಪೇಯ್ಡ್ 499ರೂ.ಗಳ ಪ್ಲ್ಯಾನ್‌ನಲ್ಲಿ 75GB ಡೇಟಾ ಮತ್ತು ಅನಿಯಮಿತ ಕರೆಗಳ ಜೊತೆಗೆ ಉಚಿತ ಹಾಟ್‌ಸ್ಟಾರ್ ಚಂದಾದಾರಿಕೆಯೊಂದಿಗೆ ಲಭ್ಯವಾಗಲಿದೆ. ಉಳಿದಂತೆ 599ರೂ.ಗಳು, 999ರೂ.ಗಳು, 1,199 ರೂ.ಗಳು, 1,499 ರೂ.ಗಳ ಪ್ಲ್ಯಾನ್‌ನಲ್ಲಿಯೂ ಉಚಿತ ಚಂದಾದಾರಿಕೆ ಲಭ್ಯ.

ವೋಡಾಫೋನ್‌ ಐಡಿಯಾ (ವಿ ಟೆಲಿಕಾಂ)
ವಿ ಟೆಲಿಕಾಂ (Vodafone Idea ,Vi Telecom) ವಿಚಾರಕ್ಕೆ ಬಂದರೆ ಈ ವಿಭಾಗದಲ್ಲಿ ವಿ ಟೆಲಿಕಾಂ ನ 499ರೂ.ಗಳ ಪ್ರಿಪೇಯ್ಡ್ ಪ್ಲ್ಯಾನ್‌ನಲ್ಲಿ ಉಚಿತ ಹಾಟ್‌ಸ್ಟಾರ್ ಚಂದಾದಾರಿಕೆ ಮತ್ತು ದಿನಕ್ಕೆ 3GB ಡೇಟಾವನ್ನು ಹಾಗೂ 28 ದಿನಗಳ ಮಾನ್ಯತೆ ಸಿಗಲಿದೆ. ಇದರೊಂದಿಗೆ 601ರೂ.ಗಳ ಪ್ಲ್ಯಾನ್‌ನಲ್ಲಿ ಉಚಿತ ಹಾಟ್‌ಸ್ಟಾರ್‌ ಚಂದಾದಾರಿಕೆ ಮತ್ತು ದಿನಕ್ಕೆ 3GB ಡೇಟಾ ಹಾಗೂ 28 ದಿನಗಳ ಮಾನ್ಯತೆ ಸಿಗಲಿದೆ.

Jio,Airtel ಮತ್ತು Vi ನ ಈ ಯೋಜನೆಯಲ್ಲಿ ನೆಟ್‌ಫ್ಲಿಕ್ಸ್‌, ಹಾಟ್‌ಸ್ಟಾರ್‌ ಫ್ರೀ..

ಇದರೊಂದಿಗೆ 401 ರೂ.ಗಳ ಪ್ಲ್ಯಾನ್‌ನಲ್ಲಿ 50GB ಡೇಟಾ ಮತ್ತು ಅನಿಯಮಿತ ವಾಯ್ಸ್‌ ಕಾಲ್‌ ಸೌಲಭ್ಯ ಇದ್ದು, ಉಚಿತ ಹಾಟ್‌ಸ್ಟಾರ್‌ ಚಂದಾದಾರಿಕೆ ಸಿಗಲಿದೆ. ಇದರೊಂದಿಗೆ 501ರೂ.ಗಳ ಪೋಸ್ಟ್‌ಪೇಯ್ಡ್‌ ಪ್ಲ್ಯಾನ್‌ನಲ್ಲಿ 90GB ಡೇಟಾ ಮತ್ತು ಅನಿಯಮಿತ ಕರೆಗಳ ಜೊತೆಗೆ ಉಚಿತ ಹಾಟ್‌ಸ್ಟಾರ್‌ ಸೌಲಭ್ಯ ಸಿಗಲಿದ್ದು, 701ರೂ.ಗಳು, 1,101 ರೂ.ಗಳ ಪ್ಲ್ಯಾನ್‌ನಲ್ಲಿ ಬಳಕೆದಾರರು ಈ ಉಚಿತ ಸೇವೆ ಪಡೆದುಕೊಳ್ಳಬಹುದಾಗಿದೆ.

Best Mobiles in India

English summary
Usually users spend more money on hotstar and netflix platforms with special recharge plans. However, Jio, Airtel, Vi Telecom will provide completely free entry to this OTT platform in some of their recharge plans.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+