Home
ಸುದ್ದಿಜಾಲ

Netflix: ನೆಟ್‌ಫ್ಲಿಕ್ಸ್ ಬಳಕೆದಾರರಿಗೆ ಶಾಕಿಂಗ್‌ ನ್ಯೂಸ್‌... ಚಂದಾದಾರಿಕೆ ಪ್ಲ್ಯಾನ್‌ ಬೆಲೆ ಮತ್ತೆ ಹೆಚ್ಚಳ

ನೆಟ್‌ಫ್ಲಿಕ್ಸ್ (netflix) ಓಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಪ್ರಮುಖ ಎನಿಸಿಕೊಂಡಿದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ನೆಟ್‌ಫ್ಲಿಕ್ಸ್ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ವಿವಿಧ ಬದಲಾವಣೆಗಳನ್ನು ಮಾಡಿಕೊಂಡು ಬಂದಿದ್ದು ಈ ನಡುವೆ ತನ್ನ ಚಂದಾದಾರರಿಗೆ ಶಾಕಿಂಗ್‌ ನ್ಯೂಸ್‌ ನೀಡಿದೆ.

ಹೌದು, ನೆಟ್‌ಫ್ಲಿಕ್ಸ್ ತನ್ನ ಮೂಲ ಮತ್ತು ಪ್ರೀಮಿಯಂ ಪ್ಲ್ಯಾನ್‌ಗಳ ಬೆಲೆಯನ್ನು ಈ ವರ್ಷ ಮೂರನೇ ಬಾರಿಗೆ ಹೆಚ್ಚಿಸುತ್ತಿದೆ ಎಂದು ತಿಳಿದುಬಂದಿದೆ. ಈ ಬೆಲೆ ಏರಿಕೆಯೊಂದಿಗೆ ಅದರ ಕಂಟೆಂಟ್‌ ಲೈಬ್ರರಿಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಹಾಗಿದ್ರೆ, ಯಾವ ಪ್ಲ್ಯಾನ್‌ಗೆ ಎಷ್ಟು ಬೆಲೆ ಹೆಚ್ಚಾಗಲಿದೆ?, ಆರಂಭದಲ್ಲಿ ಯಾವೆಲ್ಲಾ ದೇಶಗಳಲ್ಲಿ ಈ ಪ್ಲ್ಯಾನ್ ಏರಿಕೆ ಬಿಸಿ ತಟ್ಟಲಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

Netflix: ನೆಟ್‌ಫ್ಲಿಕ್ಸ್ ಬಳಕೆದಾರರಿಗೆ ಶಾಕಿಂಗ್‌ ನ್ಯೂಸ್‌...

ನೆಟ್‌ಫ್ಲಿಕ್ಸ್ ಚಂದಾದಾರಿಕೆ ಬೆಲೆ ಏರಿಕೆ: ನೆಟ್‌ಫ್ಲಿಕ್ಸ್ ಇದೀಗ ತನ್ನ ಮೂಲ ಮತ್ತು ಪ್ರೀಮಿಯಂ ಚಂದಾದಾರಿಕೆ ಪ್ಲ್ಯಾನ್‌ಗಳನ್ನು (premium subscription plan) ಹೆಚ್ಚಿಸುತ್ತಿದೆ. ಕಂಟೆಂಟ್‌ ಮತ್ತು ಪಾಲುದಾರಿಕೆಗಳಲ್ಲಿ ಸ್ಟ್ರೀಮಿಂಗ್ ಸೇವೆಯ ಬೆಳವಣಿಗೆಯನ್ನು ಬೆಂಬಲಿಸುವ ಉದ್ದೇಶದಿಂದ ಈ ನಿರ್ಧಾರ ಮಾಡುತ್ತಿದೆ ಎಂದು ತಿಳಿದುಬಂದಿದೆ. ಈ ವೇಳೆ ತನ್ನ ಮೂರನೇ ತ್ರೈಮಾಸಿಕ ಗಳಿಕೆಗಳ ವರದಿಯನ್ನು ಹಂಚಿಕೊಂಡಿದೆ.

ಸ್ಟ್ರೀಮಿಂಗ್ ದೈತ್ಯ ತನ್ನ ಮೂಲ ಯೋಜನೆಯ ಬೆಲೆಯನ್ನು ತಿಂಗಳಿಗೆ $9.99 ರಿಂದ $11.99 ಕ್ಕೆ ಮತ್ತು ಅದರ ಪ್ರೀಮಿಯಂ ಯೋಜನೆಯ ಬೆಲೆಯನ್ನು ತಿಂಗಳಿಗೆ $19.99 ರಿಂದ $22.99 ಕ್ಕೆ ಹೆಚ್ಚಿಸುತ್ತಿದೆ ಎಂದು ಘೋಷಿಸಿದೆ. ನೆಟ್‌ಫ್ಲಿಕ್ಸ್ನ ನ $6.99 ಜಾಹೀರಾತು-ಬೆಂಬಲಿತ ಯೋಜನೆ ಮತ್ತು $15.49 ಸ್ಟ್ಯಾಂಡರ್ಡ್ ಶ್ರೇಣಿಯ ಬೆಲೆಯು ಬದಲಾಗುವುದಿಲ್ಲ ಎಂದು ಈ ವೇಳೆ ಉಲ್ಲೇಖ ಮಾಡಲಾಗಿದೆ.

ಯಾವೆಲ್ಲಾ ದೇಶಗಳಲ್ಲಿ ಹೆಚ್ಚಾಗಲಿದೆ?: ನೆಟ್‌ಫ್ಲಿಕ್ಸ್‌ನ ಇತ್ತೀಚಿನ ಬೆಲೆ ಏರಿಕೆಯ ಬಿಸಿ ಯುಕೆ, ಯುಎಸ್‌ ಹಾಗೂ ಫ್ರಾನ್ಸ್ ಮಾರುಕಟ್ಟೆಗಳ ಮೇಲೆ ಪರಿಣಾಮ ಬೀರಲಿದೆ ಎಂದು ತಿಳಿದುಬಂದಿದೆ. ಈ ಮೂಲಕ ಭಾರತೀಯ ಚಂದಾದಾರರು ನಿಟ್ಟುಸಿರು ಬಿಡುವಂತೆ ಆಗಿದೆ. ಆದರೆ, ಇದು ತಾತ್ಕಾಲಿಕವಾಗಿ ಅಷ್ಟೇ ಎಂಬುದು ನಿಮಗೆ ತಿಳಿದಿರಲಿ. ಯಾಕೆಂದರೆ ಕೆಲವೇ ತಿಂಗಳಲ್ಲಿ ಭಾರತದಲ್ಲೂ ಈ ಏರಿಕೆ ಕ್ರಮ ಜಾರಿಯಾಗಬಹುದು.

ಇನ್ನು ನಾವು ನಮ್ಮ ಸದಸ್ಯರಿಗೆ ಹೆಚ್ಚಿನ ಮೌಲ್ಯವನ್ನು ಒದಗಿಸುವುದರಿಂದ, ನಾವು ಕೆಲವೊಮ್ಮೆ ಸ್ವಲ್ಪ ಹೆಚ್ಚು ಪಾವತಿಸಲು ಕೇಳುತ್ತೇವೆ ಎಂದು ನೆಟ್‌ಫ್ಲಿಕ್ಸ್ ತನ್ನ ಮೂರನೇ ತ್ರೈಮಾಸಿಕ ಮಾಹಿತಿ ನೀಡುವಾಗ ತಿಳಿಸಿದೆ. ನಮ್ಮ ಆರಂಭಿಕ ಬೆಲೆಯು ಇತರ ಸ್ಟ್ರೀಮರ್‌ಗಳೊಂದಿಗೆ ಅತ್ಯಂತ ಸ್ಪರ್ಧಾತ್ಮಕವಾಗಿದೆ ಮತ್ತು ಯುಎಸ್‌ನಲ್ಲಿ ತಿಂಗಳಿಗೆ $6.99 ಇದೆ. ಇದು ಚಲನಚಿತ್ರ ಟಿಕೆಟ್‌ನ ಸರಾಸರಿ ಬೆಲೆಗಿಂತ ಗಮನಾರ್ಹವಾಗಿ ಕಡಿಮೆಯಾಗಿದೆ ಎಂದು ಕಂಪನಿ ಹೇಳಿದೆ.

ಸ್ಟ್ರೀಮಿಂಗ್ ದೈತ್ಯ ತ್ರೈಮಾಸಿಕದಲ್ಲಿ 8.76 ಮಿಲಿಯನ್ ಹೊಸ ಚಂದಾದಾರರನ್ನು ಸೇರಿಸಿದೆ. ಇದು ಜಾಗತಿಕ ಒಟ್ಟು ಮೊತ್ತವನ್ನು 247.15 ಮಿಲಿಯನ್‌ಗೆ ಏರಿಸಿದೆ. ನಮ್ಮ ಮೂರನೇ ತ್ರೈಮಾಸಿಕ ಹಣಕಾಸುಗಳು $ 8.5 ಶತಕೋಟಿ ಆದಾಯ, $ 9 ಮಿಲಿಯನ್ ನಿವ್ವಳ ಸೇರ್ಪಡೆಗಳು ಮತ್ತು 22.4 ಪ್ರತಿಶತದಷ್ಟು ಆಪರೇಟಿಂಗ್ ಮಾರ್ಜಿನ್ ಸೇರಿದಂತೆ ಇತರೆ ಮುನ್ಸೂಚನೆಗಳಿಗೆ ಅನುಗುಣವಾಗಿವೆ ಎಂದು ನೆಟ್‌ಫ್ಲಿಕ್ಸ್ ಮಾಹಿತಿ ನೀಡಿದೆ.

ನಿರೀಕ್ಷೆಗಿಂತ ದೊಡ್ಡದಾದ ಪಾಸ್‌ವರ್ಡ್-ಹಂಚಿಕೆಯ ಕ್ರ್ಯಾಕ್‌ಡೌನ್ ಜೊತೆಗೆ, ನೆಟ್‌ಫ್ಲಿಕ್ಸ್ ತನ್ನ ಜಾಹೀರಾತು-ಬೆಂಬಲಿತ ಪ್ಲ್ಯಾನ್‌ನಲ್ಲಿ ಗಮನಾರ್ಹ ಲಾಭಗಳನ್ನು ಕಂಡಿದೆ ಎಂದು ತಿಳಿಸಿದೆ. ಚಂದಾದಾರಿಕೆಗಳು ತ್ರೈಮಾಸಿಕದಲ್ಲಿ ಸುಮಾರು 70 ಪ್ರತಿಶತದಷ್ಟು ಹೆಚ್ಚುತ್ತಿವೆ ಎಂದು ಹೇಳಿಕೊಂಡಿದ್ದು, ಕಂಪನಿಯು ನಾಲ್ಕನೇ ತ್ರೈಮಾಸಿಕ ಆದಾಯವು 11 ಪ್ರತಿಶತದಷ್ಟು ಅಂದರೆ $ 8.69 ಶತಕೋಟಿಗೆ ಬೆಳೆಯುತ್ತದೆ ಎಂದು ಅಂದಾಜಿಸಲಾಗಿದೆ.

ಮೊದಲೇ ತಿಳಿಸಿದಂತೆ ನೆಟ್‌ಫ್ಲಿಕ್ಸ್ ಬೆಲೆ ಏರಿಕೆಯಿಂದ ಭಾರತ ಸದ್ಯಕ್ಕೆ ಬಚಾವ್‌ ಆಗಿದೆ. ಆದರೆ ಕಂಪನಿಯು ಇನ್ನೂ ಭಾರತದಲ್ಲಿ ತನ್ನ ಬಳಕೆದಾರರ ನೆಲೆಯನ್ನು ಹೆಚ್ಚಿಸುವಲ್ಲಿ ಕೆಲಸ ಮಾಡುತ್ತಿದ್ದು, ತನ್ನ ಬಳಕೆದಾರರ ನೆಲೆಯನ್ನು ವಿಸ್ತರಿಸುವುದನ್ನು ಮುಂದುವರೆಸುತ್ತಿರುವುದರಿಂದ ಬೆಲೆ ಬಗ್ಗೆ ಅಷ್ಟೊಂದು ತಲೆಕೆಡಿಸಿಕೊಂಡಿಲ್ಲ. ಈ ನಡುವೆ ನೆಟ್‌ಫ್ಲಿಕ್ಸ್ ನ ಪಾವತಿಸಿದ ಶೇರ್‌ ಪ್ರೋಗ್ರಾಂ ಬಳಕೆದಾರರಿಗೆ ತಿಂಗಳಿಗೆ ಹೆಚ್ಚುವರಿ ಶುಲ್ಕಕ್ಕಾಗಿ ತಮ್ಮ ಖಾತೆಗೆ ಎರಡು ಹೆಚ್ಚುವರಿ ಸದಸ್ಯರನ್ನು ಸೇರಿಸಲು ಅನುಮತಿಸಿದೆ.

Netflix: ನೆಟ್‌ಫ್ಲಿಕ್ಸ್ ಬಳಕೆದಾರರಿಗೆ ಶಾಕಿಂಗ್‌ ನ್ಯೂಸ್‌...

ಪ್ರತ್ಯೇಕ ಚಂದಾದಾರಿಕೆಗೆ ಪಾವತಿಸುವುದಕ್ಕಿಂತ ಇದು ಹೆಚ್ಚು ಕೈಗೆಟುಕುವ ಆಯ್ಕೆಯಾಗಿದ್ದು, ಬಳಕೆದಾರರು ಇತರರಿಗೆ ತಮ್ಮ ಖಾತೆಯನ್ನು ಶೇರ್‌ ಮಾಡಿಕೊಳ್ಳಲು ಸಹಕಾರಿಯಾಗಲಿದೆ. ಪಾಸ್‌ವರ್ಡ್-ಹಂಚಿಕೆಯ ಕ್ರ್ಯಾಕ್‌ಡೌನ್‌ನ ಪರಿಣಾಮವಾಗಿ ನಿರೀಕ್ಷೆಗಿಂತ ಕಡಿಮೆ ಗ್ರಾಹಕರು ತಮ್ಮ ಸದಸ್ಯತ್ವಗಳನ್ನು ರದ್ದುಗೊಳಿಸಿದ್ದಾರೆ ಎಂದು ನೆಟ್‌ಫ್ಲಿಕ್ಸ್ ಇದೇ ವೇಳೆ ವರದಿ ಮಾಡಿದೆ.

Best Mobiles in India

English summary
Netflix is reportedly increasing the prices of its basic and premium plans for the third time this year. With this price increase it aims to increase its content library.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+