ಕೇವಲ 5 ರೂ.ಗೆ ಒಂದು ತಿಂಗಳು 'ನೆಟ್‌ಫ್ಲಿಕ್ಸ್' ಸೇವೆ!

|

ಪ್ರಸ್ತುತ ಇಂಟರ್ನೆಟ್ ಬಳಸಿ ವಿಡಿಯೊ ಕಂಟೆಂಟ್ ಅಥವಾ ವಿಡಿಯೊ ಸ್ಟ್ರೀಮಿಂಗ್ ಕಾರ್ಯಕ್ರಮಗಳನ್ನು ವೀಕ್ಷಿಸುವು ಪರಂಪರೇ ಟ್ರೆಂಡಿಂಗ್‌ನಲ್ಲಿದೆ. ಅದಕ್ಕೆ ಭದ್ರ ಅಡಿಪಾಯ ಹಾಕುವಲ್ಲಿ ನೆಟ್‌ಫ್ಲಿಕ್ಸ್‌ ವಿಡಿಯೊ ಸ್ಟ್ರೀಮಿಂಗ್ ತಾಣವು ಒಂದಾಗಿದೆ. ಸದ್ಯ ನೆಟ್‌ಫ್ಲಿಕ್ಸ್‌ ಭಾರತದಲ್ಲಿ ಭಾರಿ ಬೇಡಿಕೆ ಪಡೆಯುತ್ತಿದ್ದು, ಇಲ್ಲಿಯೂ ತನ್ನ ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳವತ್ತ ದಾಪುಗಾಲು ಇಟ್ಟಿದೆ. ಆ ನಿಟ್ಟಿನಲ್ಲಿ ನಡೆದಿರುವ ನೆಟ್‌ಫ್ಲಿಕ್ಸ್‌ ಇದೀಗ ಗ್ರಾಹಕರಿಗೆ ಸಿಹಿಸುದ್ದಿ ನೀಡಿದೆ.

ವಿಡಿಯೊ ಕಂಟೆಂಟ್

ಹೌದು, ಜನಪ್ರಿಯ ವಿಡಿಯೊ ಕಂಟೆಂಟ್ ತಾಣ ನೆಟ್‌ಫ್ಲಿಕ್ಸ್‌ ಇದೀಗ ಭರ್ಜರಿ ಆಫರ್ ಘೋಷಿಸಿದೆ. ಬಳಕೆದಾರರಿಗೆ ಕೇವಲ 5 ರೂ.ಗೆ ಒಂದು ತಿಂಗಳ ಚಂದಾದಾರಿಕೆಯನ್ನು ಒದಗಿಸುವುದಾಗಿ ಹೇಳಿದೆ. ಮೊದಲ ಬಾರಿ ನೆಟ್‌ಫ್ಲಿಕ್ಸ್‌ ರೀಚಾರ್ಜ್ ಮಾಡುವ ಚಂದಾದಾರರಿಗೆ ಈ ಆಫರ್ ಲಭ್ಯವಾಗಲಿದೆ. ಭಿನ್ನ ವಿಡಿಯೊ ಕಂಟೆಂಟ್‌ ಮತ್ತು ವೆಬ್ ಸಿರೀಸ್‌ ಕಾರ್ಯಕ್ರಮಗಳಿಂದ ಗ್ರಾಹಕರನ್ನು ಸೆಳೆದಿರುವ ನೆಟ್‌ಫ್ಲಿಕ್ಸ್ ಇನ್ನಷ್ಟು ಜನಪ್ರಿಯತೆ ಗಳಿಸಲು ಈಗ ಹೊಸ ದಾರಿ ಕಂಡುಕೊಂಡಿದೆ.

ನೆಟ್‌ಫ್ಲಿಕ್ಸ್‌ಗೆ ಸದಸ್ಯತ್ವ

ಭಾರತದಲ್ಲಿ ಮೊದಲ ಬಾರಿಗೆ ನೆಟ್‌ಫ್ಲಿಕ್ಸ್‌ಗೆ ಸದಸ್ಯತ್ವ/ಬಳಕೆದಾರರಿಗೆ ಪಡೆಯುವ ಗ್ರಾಹಕರಿಗೆ 5 ರೂ.ಗೆ ಒಂದು ತಿಂಗಳ ಚಂದಾದಾರಿಕೆ ಸಿಗಲಿದೆ. ಆ ನಂತರದಿಂದ ಈ ಶುಲ್ಕ ಮುಂದುವರೆಯುವುದಿಲ್ಲ. ಕಳೆದ ಡಿಸೆಂಬರ್‌ನಲ್ಲಿ ಭಾರತ ಮತ್ತು ಇತರ ಮಾರುಕಟ್ಟೆಗಳಲ್ಲಿ ಕಂಪನಿಯು ತನ್ನ ಒಂದು ತಿಂಗಳ ಉಚಿತ ಪ್ರಯೋಗ ಪ್ರಸ್ತಾಪವನ್ನು ಹಿಂತೆಗೆದುಕೊಂಡಿದ್ದರಿಂದ ನೆಟ್‌ಫ್ಲಿಕ್ಸ್‌ನ ಹೊಸ ಕೊಡುಗೆ ಆಶ್ಚರ್ಯಕರವಲ್ಲ. ಈಗಾಗಲೇ ನೆಟ್‌ಫ್ಲಿಕ್ಸ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಹಲವು ವೈವಿಧ್ಯಮಯ ಕಾರ್ಯಕ್ರಮಗಳ ಸರಣಿಗಳನ್ನು ಪ್ರಸಾರ ಮಾಡಿದೆ. ಕೆಲವೊಂದು ಕಾರ್ಯಕ್ರಮಗಳ ಮಿಂಚಿನ ವೇಗದಲ್ಲಿ ಮುನ್ನುಗುತ್ತಿವೆ.

ವಿಶೇಷ ಆಫರ್

ನೆಟ್‌ಫ್ಲಿಕ್ಸ್ ಈ ವಿಶೇಷ ಆಫರ್ ಬಳಕೆದಾರರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ಒಂದು ಕ್ರಮವಾಗಿದೆ ಹಾಗೂ ಬಳಕೆದಾರರನ್ನು ಸೆಳೆಯುವ ಮಾರುಕಟ್ಟೆಯ ಹೊಸ ತಂತ್ರವಾಗಿದೆ. ಹಾಗೆಯೇ ಸಂಸ್ಥೆಯ ಈ ಕೊಡುಗೆಯಿಂದ ಬಹಳಷ್ಟು ಬಳಕೆದಾರರಿಗೆ ಅನುಕೂಲ ಸಹ ಆಗಲಿದೆ. ಈ ಯೋಜನೆಯ ಯಶಸ್ಸಿನ ನಂತರ ಮತ್ತಷ್ಟು ಆಕರ್ಷಕ ಯೋಜನೆಯನ್ನು ಅನುಷ್ಠಾನ ಮಾಡುವ ಯೋಜನೆಗಳು ಇವೆ ಎಂದು ನೆಟ್‌ಫ್ಲಿಕ್ಸ್‌ ವಕ್ತಾರರು ಹೇಳಿದ್ದಾರೆ.

ಕೇವಲ ರೂ 5.

ನೆಟ್‌ಫ್ಲಿಕ್ಸ್‌ ಹೊಸ ಬಳಕೆದಾರರಿಗೆ ಕೇವಲ ರೂ 5.ಗೆ ಒಂದು ತಿಂಗಳ ಚಂದಾದಾರಿಕೆ ಯೋಜನೆ ಸಿಗಲಿದೆ. ಹಾಗೆಯೇ ನೆಟ್‌ಫ್ಲಿಕ್ಸ್‌ನ ಇತರೆ ಯೋಜನೆಗಳ ಭಿನ್ನ ಬೆಲೆಯಲ್ಲಿವೆ. 199 ರೂ. ರೀಚಾರ್ಜ್ ಪ್ಲ್ಯಾನ್ ಮೊಬೈಲ್ ಯೋಜನೆ ಆಗಿದೆ. ಹಾಗೆಯೆ 499 ರೂ. ಯೋಜನೆಯ ಆಯ್ಕೆ ಇದೆ. 649 ರೂ.ಗೆ ಸ್ಟ್ಯಾಂಡರ್ಡ್ ಯೋಜನೆ ಆಯ್ಕೆ ಇದೆ ಮತ್ತು 799 ರೂ.ಗೆ ಪ್ರೀಮಿಯಂ ಯೋಜನೆ ಆಯ್ಕೆ ಇದೆ.

Most Read Articles
Best Mobiles in India

English summary
Netflix is running a test where it’s offering the first month at just Rs 5 for all subscription plans available in India.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X