'ನೆಟ್‌ಫ್ಲೆಕ್ಸ್' ತಿಂಗಳ ಚಂದಾಶುಲ್ಕ ಈಗ ತುಂಬಾ ಕಡಿಮೆ!

|

ಪ್ರಸ್ತುತ ಸ್ಮಾರ್ಟ್‌ಫೋನ್‌ ಮನರಂಜನೆಯ ಸಾಧನವಾಗಿಯೂ ಬಳಕೆಯಾಗುತ್ತಿದೆ. ಸ್ಮಾರ್ಟ್‌ಫೋನಿನಲ್ಲೇ ಸಿನಿಮಾ, ಟಿವಿ ಶೋ, ಸೇರಿದಂತೆ ವೆಬ್‌ಸಿರೀಸ್‌ ಕಾರ್ಯಕ್ರಮಗಳನ್ನು ವೀಕ್ಷಿಸಲು ಹಲವು ವಿಡಿಯೊ ಸ್ಟ್ರಿಮಿಂಗ್ ಅಪ್ಲಿಕೇಶನ್‌ಗಳು ಲಭ್ಯ ಇವೆ. ಈ ನಿಟ್ಟಿನಲ್ಲಿ ನೆಟ್‌ಫ್ಲೆಕ್ಸ್‌ ಆಪ್‌ ಭಾರಿ ಜನಪ್ರಿಯತೆಗಳಿಸಿದ್ದು, ಈ ಆಪ್‌ ಸ್ಮಾರ್ಟ್‌ಟಿವಿ ಮತ್ತು ಸ್ಮಾರ್ಟ್‌ಫೋನ್‌ಗಳೆರಡರಲ್ಲೂ ದೊರೆಯುತ್ತದೆ.

'ನೆಟ್‌ಫ್ಲೆಕ್ಸ್' ತಿಂಗಳ ಚಂದಾಶುಲ್ಕ ಈಗ ತುಂಬಾ ಕಡಿಮೆ!

ಹೌದು, ಜನಪ್ರಿಯ ವಿಡಿಯೊ ಸ್ಟ್ರಿಮಿಂಗ್ ಆಪ್‌ ನೆಟ್‌ಫ್ಲೆಕ್ಸ್‌ ಇತ್ತೀಚಿಗೆ 'ಮೊಬೈಲ್‌ ಓನ್ಲಿ ಪ್ಲಾನ್'‌ ಮೂಲಕ 250ರೂ.ಗಳಿಗೆ ಚಂದಾದಾರಿಕೆ ನೀಡುವುದಾಗಿ ಹೇಳಿತ್ತು. ಆದ್ರೆ ಈಗ ಮತ್ತಷ್ಟು ಗ್ರಾಹಕ ಸ್ನೇಹಿ ಹೆಜ್ಜೆ ಇಟ್ಟಿದ್ದು, ಹೊಸದಾಗಿ ಹಲವು ವೀಕ್ಲಿ ಪ್ಯಾಕ್‌ಗಳನ್ನು ಅಗ್ಗದ ದರದ ಪ್ಲ್ಯಾನ್‌ಗಳನ್ನು ಪರಿಚಯಿಸಲು ಮುಂದಾಗಿದೆ. ಅವುಗಳು ಕ್ರಮವಾಗಿ 65ರೂ, 125ರೂ, 165ರೂ ಮತ್ತು 200ರೂ. ಬೆಲೆಯನ್ನು ಹೊಂದಿವೆ.

'ನೆಟ್‌ಫ್ಲೆಕ್ಸ್' ತಿಂಗಳ ಚಂದಾಶುಲ್ಕ ಈಗ ತುಂಬಾ ಕಡಿಮೆ!

ವಿಡಿಯೊ ಸ್ಟ್ರಿಮಿಂಗ್ ಆಪ್‌ಗಳ ಸಂಖ್ಯೆ ಸಹ ಹೆಚ್ಚುತ್ತಿದ್ದು, ಈ ದಿಸೆಯಲ್ಲಿ ನೆಟ್‌ಫ್ಲೆಕ್ಸ್‌ ತನ್ನ ಚಂದಾದಾರರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಕಡಿಮೆ ಬೆಲೆಯಲ್ಲಿ ವಿವಿಧ ಪ್ಲ್ಯಾನ್‌ಗಳನ್ನು ಪರಿಚಯಿಸುತ್ತಿದೆ. ಅಮೆಜಾನ್ ಪ್ರೈಮ್, ಹಾಟ್‌ಸ್ಟಾರ್‌, ಸನ್‌ನೆಕ್ಸ್ಟ್‌, ಜೀ5 ವಿಡಿಯೊ ಸ್ಟ್ರಿಮಿಂಗ್ ಆಪ್ಸ್‌ಗಳು ಸಹ ಸ್ಪರ್ಧಿಗಳಾಗಿದ್ದಾರೆ. ಹಾಗಾದರೇ ನೆಟ್‌ಫ್ಲೆಕ್ಸ್‌ ವಿಡಿಯೊ ಸ್ಟ್ರಿಮಿಂಗ್ ಆಪ್‌ನ ಚಂದಾದಾರಿಕೆಯ ಪ್ಲ್ಯಾನ್‌ಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಓದಿರಿ : ಗೂಗಲ್‌ ಮ್ಯಾಪ್‌ ಸೇರಿದ 'ಪಬ್ಲಿಕ್ ಟಾಯ್ಲೆಟ್‌' ಲೊಕೇಶನ್! ಓದಿರಿ : ಗೂಗಲ್‌ ಮ್ಯಾಪ್‌ ಸೇರಿದ 'ಪಬ್ಲಿಕ್ ಟಾಯ್ಲೆಟ್‌' ಲೊಕೇಶನ್!

ಮೊಬೈಲ್‌ ಓನ್ಲಿ ಪ್ಲಾನ್

ಮೊಬೈಲ್‌ ಓನ್ಲಿ ಪ್ಲಾನ್

ನೆಟ್‌ಫ್ಲೆಕ್ಸ್‌ ವಿಡಿಯೊ ಸ್ಟ್ರಿಮಿಂಗ್ 250ರೂ.ಗಳಿಗೆ ಚಂದಾದಾರಿಕೆಯ ನೀಡುವ ಪ್ರಯತ್ನವೇ 'ಮೊಬೈಲ್ ಓನ್ಲಿ ಪ್ಲಾನ್' ಆಗಿದ್ದು, ಸದ್ಯ ಪ್ರಾಯೋಗಿಕವಾಗಿ ಟೆಸ್ಟ್‌ ಮಾಡುತ್ತಿದೆ. ಈ ಪ್ಲ್ಯಾನ್ ಸಿಂಗಲ್‌ ಸ್ಕ್ರೀನ್‌ನಲ್ಲಿ (ಒಂದು ಫೋನಿಗೆ) ಮಾತ್ರ ವಿಡಿಯೊ ವೀಕ್ಷಿಸಲು ಲಭ್ಯವಾಗಲಿದೆ. ನೆಟ್‌ಫ್ಲೆಕ್ಸ್‌ನಲ್ಲಿ ಲಭ್ಯವಿರುವ ವಿಡಿಯೊ ಕಂಟೆಂಟ್ಸ್‌ಗಳನ್ನು ವೀಕ್ಷಿಸುವ ಅವಕಾಶ ಸೀಗಲಿದೆ.

ವಾರದ ಪ್ಲ್ಯಾನ್‌ಗಳು

ವಾರದ ಪ್ಲ್ಯಾನ್‌ಗಳು

ಚಂದಾದಾರರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ವಾರದ ಅವಧಿಯ ಪ್ಲ್ಯಾನ್‌ಗಳನ್ನು ನೆಟ್‌ಫ್ಲೆಕ್ಸ್‌ ಪರಿಚಯಿಸಲು ಸಜ್ಜಾಗಿದ್ದು, ಮೊಬೈಲ್ ಗ್ರಾಹಕರಿಗೆ ಇದು ಅನುಕೂಲವಾಗಲಿದೆ. 65ರೂ, 125ರೂ, 165ರೂ ಮತ್ತು 200ರೂ. ಬೆಲೆಯ ನಾಲ್ಕು ವೀಕ್ಲಿ ಚಂದಾದಾರತ್ವದ ಪ್ಲ್ಯಾನ್‌ಗಳನ್ನು ಮಾಡಲಾಗಿದ್ದು, 65ರೂ. ಬೆಲೆಯ ಆರಂಭಿಕ ಪ್ಲ್ಯಾನ್ ಹೆಚ್ಚಿನ ಗ್ರಾಹಕರನ್ನು ಸೆಳೆಯಲಿದೆ.

ಓದಿರಿ : 'ಟಿಸಿಎಲ್'ನ ಹೊಸ 55 ಇಂಚಿನ 4K ಆಂಡ್ರಾಯ್ಡ್ ಸ್ಮಾರ್ಟ್‌ಟಿವಿ ಬಿಡುಗಡೆ!ಓದಿರಿ : 'ಟಿಸಿಎಲ್'ನ ಹೊಸ 55 ಇಂಚಿನ 4K ಆಂಡ್ರಾಯ್ಡ್ ಸ್ಮಾರ್ಟ್‌ಟಿವಿ ಬಿಡುಗಡೆ!

ವಿಡಿಯೊ ಸ್ಟ್ರಿಮಿಂಗ್ ಆಪ್ಸ್‌ಗಳ ಸ್ಪರ್ಧೆ

ವಿಡಿಯೊ ಸ್ಟ್ರಿಮಿಂಗ್ ಆಪ್ಸ್‌ಗಳ ಸ್ಪರ್ಧೆ

ಪ್ರಸ್ತುತ ವಿಡಿಯೊ ಸ್ಟ್ರಿಮಿಂಗ್ ಅಪ್ಲಿಕೇಶನ್‌ಗಳ ಹೆಚ್ಚುತ್ತಲೆ ಸಾಗಿದ್ದು, ಅವುಗಳ ನಡುವೆ ಪೈಪೋಟಿ ಕಾವು ಸಹ ಹೆಚ್ಚಾಗುತ್ತಲಿದೆ. ಅವುಗಳಲ್ಲಿ ಅಮೆಜಾನ್ ಪ್ರೈಮ್, ಹಾಟ್‌ಸ್ಟಾರ್‌, ಸನ್‌ನೆಕ್ಸ್ಟ್‌, ಜೀ5, ಎಎಲ್‌ಟಿ ಬಾಲಾಜಿ, ವಿಡಿಯೊ ಸ್ಟ್ರಿಮಿಂಗ್ ಆಪ್ಸ್‌ಗಳು ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದು, ಇವುಗಳಿಗೆ ಪ್ರಬಲ ಪ್ರತಿಸ್ಪರ್ಧಿಯಾಗಿ ನೆಟ್‌ಫ್ಲೆಕ್ಸ್‌ ನಡೆಯುತ್ತಿದೆ.

ಬೆಲೆ ಎಷ್ಟಿವೆ

ಬೆಲೆ ಎಷ್ಟಿವೆ

ಅಮೆಜಾನ್ ಪ್ರೈಮ್ ವಿಡಿಯೊ ಸ್ಟ್ರಿಮಂಗ್ ಚಂದಾದಾರತ್ವದ ಶುಲ್ಕವು 999ರೂ.ಗಳಾಗಿದ್ದು, ವಾರ್ಷಿಕ ಅವಧಿಯ ವ್ಯಾಲಿಡಿಟಿಯನ್ನು ಹೊಂದಿದೆ. ಹಾಗೆಯೇ 500-800ರೂ.ಗಳ ಪ್ರೈಸ್‌ಗಳ ಅಂತರದಲ್ಲಿ ನೆಟ್‌ಫ್ಲೆಕ್ಸ್ ಆಪ್‌ನ ತಿಂಗಳ ಚಂದಾದಾರಿಕೆ ದೊರೆಯಲಿದೆ. ಆದರೆ ಸದ್ಯ ಮೊಬೈಲ್ ಗ್ರಾಹಕರ ಮೇಲೆ ಕಣ್ಣಿಟ್ಟಿರುವ ಸಂಸ್ಥೆಯು ಅಗ್ಗದ ಪ್ಲ್ಯಾನ್‌ಗಳನ್ನು ಲಾಂಚ್‌ ಮಾಡಲಿದೆ.

ಓದಿರಿ : ಶಿಯೋಮಿಯ 'ನೆಕ್‌ಬ್ಯಾಂಡ್ ಇಯರ್‌ಫೋನ್‌' ಲಾಂಚ್!.ಇದೇ ಜುಲೈ 23 ಸೇಲ್! ಓದಿರಿ : ಶಿಯೋಮಿಯ 'ನೆಕ್‌ಬ್ಯಾಂಡ್ ಇಯರ್‌ಫೋನ್‌' ಲಾಂಚ್!.ಇದೇ ಜುಲೈ 23 ಸೇಲ್!

Best Mobiles in India

English summary
Netflix is already testing a Rs 250 mobile-only plan in India alongside four weekly plans. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X