ವಾಹನ ಸವಾರರೇ ಎಚ್ಚರ!..ಇನ್ನು ಸಂಚಾರ ನಿಯಮ ಉಲ್ಲಂಘಿಸಿದರೇ, ದಂಡ ತಪ್ಪಿದ್ದಲ್ಲ!
ಸಂಚಾರ ನಿಯಮ ಉಲ್ಲಂಘನೆ ಮಾಡುವ ವಾಹನ ಸವಾರರ ಮೇಲೆ ಹದ್ದಿನ ಕಣ್ಣಿಡಲು ಹಾಗೂ ಅಪರಾಧ ಕೃತ್ಯ ಮಾಡುವವರನ್ನು ಪತ್ತೆ ಮಾಡಲು ಬೆಂಗಳೂರು ನಗರ ಪೊಲೀಸ್ ನಗರದ ಪ್ರಮುಖ ಸರ್ಕಲ್ ಗಳಲ್ಲಿ ನೇತ್ರ AI ಕ್ಯಾಮೆರಾ ಅಳವಡಿಸಿದ್ದಾರೆ. ಇನ್ನು ಟ್ರಾಫಿಕ್ ರೂಲ್ಸ್ ಉಲ್ಲಂಘನೆ ಮಾಡಿದರೆ ಹಾಗೂ ಅಪರಾಧ ಕೃತ್ಯಗಳನ್ನು ಎಸಗಿಸದರೆ, ನೇತ್ರ AI ಕ್ಯಾಮೆರಾದಲ್ಲಿ ಎಲ್ಲವೂ ಸೆರೆಯಾಗಲಿದೆ.
ಹೌದು, ಜನಸಂಖ್ಯೆ ಹಾಗೂ ವಾಹನ ಸಂಖ್ಯೆ ಹೆಚ್ಚಿರುವ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ದೊಡ್ಡ ಸಮಸ್ಯೆ. ಸಂಚಾರ ನಿಯಮಗಳನ್ನು ಪಾಲನೆ ಮಾಡದೇ ವಾಹನ ಓಡಿಸುವ ಸವಾರರನ್ನು ಗುರುತಿಸಲು ನೇತ್ರಾ AI ಕ್ಯಾಮೆರಾ ಕೆಲಸ ಮಾಡಲಿದೆ. ಅಲ್ಲದೇ ಅಪರಾಧ ಕೃತ್ಯಗಳನ್ನು ಎಸಗುವವರ ಮೇಲೆಯೂ ನೇತ್ರಾ ಕ್ಯಾಮೆರಾ ಕಣ್ಣಿಡಲಿದೆ. ಹೀಗಾಗಿ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡುವವರು ತಪ್ಪಿಸಿಕೊಳ್ಳುವುದು ಸುಲಭವಲ್ಲ.

ಪ್ರಮುಖ ಸರ್ಕಲ್‌ಗಳಲ್ಲಿ ಕ್ಯಾಮೆರಾ ಕಣ್ಣು
ಬೆಂಗಳೂರಿನಲ್ಲಿ ಪ್ರಮುಖವಾಗಿ 435 ಸರ್ಕಲ್‌ಗಳು ಇವೆ. ಇದೆ ವರ್ಷದ ಮೇ ತಿಂಗಳಿಂದ ಪ್ರಾರಂಭವಾದ ಬಿಎಟಿಸಿಎಸ್ ಯೋಜನೆಯಡಿ 136 ನರ್ಕಲ್‌ಗಳನ್ನು ನೇತ್ರಾ AI ಕ್ಯಾಮೆರಾಗಳಿಂದ ಅಪ್‌ಡೇಟ್ ಮಾಡಲಾಗಿದೆ. ನಗರದ ಒಟ್ಟು 165 ಟ್ರಾಫಿಕ್ ಸಿಗ್ನಲ್ ಗಳನ್ನು ಒಳಗೊಂಡಿದೆ. ಯೋಜನೆಯ ಮೊದಲ ಹಂತದಲ್ಲಿ ಬಿಎಟಿಸಿಎಸ್ (BATCS) ಯೋಜನೆಯನ್ನು ಬೆಂಗಳೂರಿನ ಬಸವನಗುಡಿ, ಜಯನಗರ, ಜೆಪಿ ನಗರ ಮತ್ತು ಹಡ್ಸನ್ ವೃತ್ತ ಒಳಗೊಂಡಂತೆ ನಗರದ ಪ್ರಮುಖವಾದ 60 ಸರ್ಕಲ್ ಗಳಲ್ಲಿ ಎಐ ಕ್ಯಾಮೆರಾ ಇನ್‌ಸ್ಟಾಲ್ ಮಾಡಲಾಗಿದೆ.
ಹೆಲ್ಮೆಟ್ ಧರಿಸದೇ ಬೈಕ್ ಓಡಿಸುವವರ, ಎಲ್ಲೆಂದರಲ್ಲಿ ಕಸ ಎಸೆಯುವವರ, ನಗರದಲ್ಲಿ ಅಪರಾಧಿತ ಕೃತ್ಯದಲ್ಲಿ ಭಾಗಿಯಾಗುವವರ, ಅಲ್ಲದೇ ಸೀಟ್ ಬೆಲ್ಟ್ ಹಾಕದೇ ಕಾರು ಚಾಲನೆ ಮಾಡವವರ ದೃಶ್ಯಗಳನ್ನು ನೇತ್ರಾ ಕ್ಯಾಮೆರಾ ಸೆರೆಹಿಡಿಯಲಿದೆ. ಟ್ರಾಫಿಕ್ ಸಿಗ್ನಲ್ ಅಪ್ಟೇ ಅಲ್ಲದೇ, ಪ್ರಮುಖ ರೆಸಿಡೆನ್ಸಿಯಲ್ ಏರಿಯಾಗಳಲ್ಲಿಯೂ ಕೂಡಾ ನೇತ್ರಾ AI ಕ್ಯಾಮೆರಾ ಇನ್‌ಸ್ಟಾಲ್ ಮಾಡಲಾಗಿದೆ.
ಕಳೆದ ವರ್ಷ ಬೆಂಗಳೂರಿನ ಟ್ರಾಫಿಕ್ ಪೊಲೀಸರು, ಸಂಚಾರ ನಿಯಮ ಉಲ್ಲಂಘನೆ ಮಾಡುವ ವಾಹನ ಸವಾರರನ್ನು ಟ್ರ್ಯಾಕ್ ಮಾಡಲು ಆಟೋಮ್ಯಾಟಿಕ್ ನಂಬರ್ ಪ್ಲೇಟ್ ರೆಕಗ್ನಿಷನ್ ( ANPR ) ಕ್ಯಾಮೆರಾಗಳನ್ನ ಅಳವಡಿಕೆ ಮಾಡಿದ್ದರು. ಈ ನೂತನ ವ್ಯವಸ್ಥೆಯಡಿ ದಂಡ ಬಾಕಿ ಉಳಿಸಿಕೊಂಡಿರುವ ವಾಹನಗಳನ್ನು ಪತ್ತೆ ಮಾಡುವ ಯೋಜನೆ ಮಾಡಲಾಗಿತ್ತು. ಅಂದಹಾಗೆ ಇದು ದಿನದ 24 ಗಂಟೆಯೂ ಮತ್ತು ವರ್ಷದ 365 ದಿನವೂ ಈ ಕ್ಯಾಮೆರಾಗಳ ನೋಟ ಸಂಚಾರಿ ನಿಯಮ ಉಲ್ಲಂಘಿಸುವವರ ಮೇಲೆ ಇರುತ್ತದೆ ಎಂದು ವರದಿಯಾಗಿತ್ತು.
ಬೆಂಗಳೂರು ನಗರ ಸಂಚಾರ ಪೊಲೀಸರ ದಂಡದ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ಚೆಕ್ ಮಾಡಲು ಈ ಕ್ರಮ ಅನುಸರಿಸಿ:
ಹಂತ 1: https://echallan.parivahan.gov.in/ ವೆಬ್‌ಸೈಟ್ ಗೆ ಭೇಟಿ ನೀಡಿರಿ
ಹಂತ 2: ಮೇನ್ ಪೇಜ್‌ನಲ್ಲಿ 'ಚೆಕ್ ಚಲನ್ ಸ್ಟೇಟಸ್' ಟ್ಯಾಬ್ ಮೇಲೆ ಕ್ಲಿಕ್ ಮಾಡಿರಿ
ಹಂತ 3: ಆ ನಂತರ ನಿಮ್ಮ DL ಸಂಖ್ಯೆ ಅಥವಾ ವಾಹನದ ಸಂಖ್ಯೆಯನ್ನು ನಮೂದಿಸಬೇಕಾದಲ್ಲಿ ಹೊಸ ಪೇಜ್ ತೆರೆಯುವುದು
ಹಂತ 4: ಬಳಿಕ ನಿಮ್ಮ ವಿರುದ್ಧ ಯಾವುದೇ ದಂಡ ಮತ್ತು ಇ-ಚಲನ್ ಇಲ್ಲದಿದ್ದರೆ, ಚಲನ್ ಕಂಡುಬಂದಿಲ್ಲ ಎಂಬ ಡೈಲಾಗ್ ಬಾಕ್ಸ್ ಕಾಣಿಸುತ್ತದೆ
ಹಂತ 5: ನಿಮ್ಮ ಹೆಸರಿನ ವಿರುದ್ಧ ದಂಡ ಅಥವಾ ಇ-ಚಲನ್ ಬಾಕಿ ಇದ್ದರೆ, ನಂತರದ ಪೇಜ್ ತೆರೆಯುವುದು. ಅಲ್ಲಿ ನಿಮಗೆ ಚಲನ್ ಕುರಿತು ಎಲ್ಲಾ ವಿವರಗಳು ಕಾಣಿಸುತ್ತವೆ.


Click it and Unblock the Notifications








